HOME » NEWS » National-international » BRITISH PM THERESA MAY RESIGNS AMID MUTINY IN CABINET PARTY OVER HER BREXIT PLAN

ಬ್ರೆಕ್ಸಿಟ್​ ಒಪ್ಪಂದ ಒಪ್ಪದ ಸಂಸದರಿಂದ ಗದ್ದಲ; ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ

ರಾಜೀನಾಮೆ ಘೋಷಣೆ ವೇಳೆ ಮಾತನಾಡಿದ ಅವರು, ಬ್ರೆಕ್ಸಿಟ್​ ಒಪ್ಪಂದ ಸಂಬಂಧ ಬೆಂಬಲ ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ಸಾಕಷ್ಟು ವಿಷಾದವಿದೆ ಎಂದು ಹೇಳಿ ಗದ್ಗದಿತರಾದರು.

HR Ramesh | news18
Updated:June 29, 2020, 5:31 PM IST
ಬ್ರೆಕ್ಸಿಟ್​ ಒಪ್ಪಂದ ಒಪ್ಪದ ಸಂಸದರಿಂದ ಗದ್ದಲ; ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ
ಥೆರೆಸಾ ಮೇ
  • News18
  • Last Updated: June 29, 2020, 5:31 PM IST
  • Share this:
ಲಂಡನ್​: ಬ್ರೆಕ್ಸಿಟ್​ ಒಪ್ಪಂದವನ್ನು ಪಕ್ಷದ ಸಂಸದರು ಬೆಂಬಲಿಸದ ಕಾರಣಕ್ಕೆ ಕನ್ಸವೇಟಿವ್​ ಪಕ್ಷದ ನಾಯಕತ್ವಕ್ಕೆ ಜೂನ್​ 7ರ ಶುಕ್ರವಾರದಂದು ರಾಜೀನಾಮೆ ನೀಡುವುದಾಗಿ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಘೋಷಿಸಿದರು. ಈ ಘೋಷಣೆ ವೇಳೆ ಥೆರೆಸಾ ಕಣ್ಣೀರು ಹಾಕಿ ಗದ್ಗದಿತರಾದರು.

ರಾಜೀನಾಮೆ ಘೋಷಣೆ ವೇಳೆ ಮಾತನಾಡಿದ ಅವರು, ಬ್ರೆಕ್ಸಿಟ್​ ಒಪ್ಪಂದ ಸಂಬಂಧ ಬೆಂಬಲ ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ಸಾಕಷ್ಟು ವಿಷಾದವಿದೆ. ಪ್ರಧಾನಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಸಿಗುವವರೆಗೂ ಜೂನ್​ 7ರವರೆಗೆ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮುಂದುವರೆಯುವುದಾಗಿ ಥೆರೆಸಾ ಹೇಳಿದರು.

ಕನ್ಸರ್ವೆಟಿವ್​ ಆ್ಯಂಡ್​ ಯುನಿನಿಸ್ಟ್​ ಪಕ್ಷಕ್ಕೆ ಜೂನ್​ 7ರಂದು ರಾಜೀನಾಮೆ ನೀಡುವುದಾಗಿ ಅವರು ಇದೇ ವೇಳೆ ತಿಳಿಸಿದರು. ಮುಂದಿನ ನಾಯಕತ್ವ ಆಯ್ಕೆ ಪ್ರಕ್ರಿಯೆ ವಾರದೊಳಗೆ ನಡೆಯಲಿದೆ ಎಂದರು. ಆದರೆ, ಮುಂದಿನ ನಾಯಕತ್ವ ಆಯ್ಕೆಗೆ ಹಲವು ವಾರಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ.
First published: May 24, 2019, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories