Bumper Crop: ಯುನೈಟೆಡ್ ಕಿಂಗ್ಡಂ ತೋಟಗಾರರೊಬ್ಬರು ಒಂದೇ ಕಾಂಡದಿಂದ 839 ಟೊಮ್ಯಾಟೋಗಳನ್ನು (Tomato) ಕೊಯ್ಲು ಮಾಡಿದ್ದಾರೆ. ಆ ಮೂಲಕ ಗಿನ್ನೆಸ್ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇಂಗ್ಲೆಂಡಿನ ಸ್ಟಾನ್ ಸ್ಟೆಡ್ ಅಬೋಟ್ಸ್ ನ 43 ವರ್ಷದ ಡೌಗ್ಲಾಸ್ ಸ್ಮಿತ್ ಹಿಂದಿನ ದಾಖಲೆಗಳನ್ನು (Record) ಮುರಿಯಲು ಸಿದ್ಧರಾಗಿದ್ದಾರೆ. ಜೊತೆಗೆ ಟೊಮ್ಯಾಟೊ ಉತ್ಪಾದನೆಗೆ ಹಿಂದಿನ ಗಿನ್ನೆಸ್ ದಾಖಲೆಯ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದಾರೆ. ಸ್ಮಿತ್ 2010ರಲ್ಲಿ ರೆಕಾರ್ಡ್ ಮಾಡಿದ್ದ ಶ್ರೋಪ್ಶೈರ್ನ ಗ್ರಹಾಂ ಟ್ರಾಂಟರ್ ದಾಖಲೆಗೆ ಸಡ್ಡು ಹೊಡೆಯಲು ತಯಾರಾಗಿದ್ದಾರೆ. ಆ ಮೂಲಕ ಗ್ರಹಾಂ ಒಂದೇ ಕಾಂಡದಿಂದ 488 ಟೊಮ್ಯಾಟೋಗಳನ್ನು ಕಟಾವು ಮಾಡಿದ ಹಿಂದಿನ ದಾಖಲೆಯನ್ನು ಮುರಿಯಲು ಸ್ಮಿತ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರ್ಚ್ನಲ್ಲಿ ಟೊಮ್ಯಾಟೋ ಬೀಜಗಳನ್ನು ಬಿತ್ತಿ ಸೆಪ್ಟೆಂಬರ್ನಲ್ಲಿ ಒಂದೇ ಕಾಂಡದಿಂದ ಇಷ್ಟು ದೊಡ್ಡ ಮೊತ್ತದ ಟೊಮ್ಯಾಟೋಗಳನ್ನು ಕೊಯ್ಲು (Harvest) ಮಾಡಿದ್ದಾರೆ.
ಟೊಮ್ಯಾಟೋ ಬೆಳೆಯಲು ಸ್ಮಿತ್ ವಾರದಲ್ಲಿ 3-4 ಗಂಟೆಗಳ ಕಾಲ ತಮ್ಮ ಟ್ರಸ್ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಯ ಹಿತ್ತಲಲ್ಲಿ 88 ಅಡಿ ಹಸಿರುಮನೆಯಲ್ಲಿ
ಟೊಮ್ಯಾಟೋ ಬೀಜ ನೆಟ್ಟು ಈ ಬೆಳೆ ತೆಗೆದಿದ್ದಾರೆ. ಇನ್ನು ಕಳೆದ ವರ್ಷ ವಿಶ್ವದ ಅತಿ ದೊಡ್ಡ ಟೊಮ್ಯಾಟೋ ಸಸ್ಯ ಬೆಳೆಸುವ ಮೂಲಕ ಸುದ್ದಿಯಾಗಿದ್ದು ವಿಶೇಷ. ಈ ಬಾರಿ ತಮ್ಮ ಹವ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಸ್ವಲ್ಪ ಹೆಚ್ಚು ಪ್ರಯತ್ನ ಮಾಡುವ ಮೂಲಕ ಒಂದೇ ಕಾಂಡದಿಂದ ಹೆಚ್ಚು ಟೊಮ್ಯಾಟೋಗಳನ್ನು ಸಂಗ್ರಹಿಸಿದ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ. ಎಸ್ಡಬ್ಲ್ಯೂಎನ್ಎಸ್ ಸುದ್ದಿ ಸಂಸ್ಥೆಯ ಪ್ರಕಾರ, ಅವರು ಸರಿ ಸುಮಾರು 4.24 ಕೆಜಿ ತೂಕದ 839 ಟೊಮ್ಯಾಟೋ ಕಟಾವು ಮಾಡಿದ್ದಾರೆ.
ಇದನ್ನೂ ಓದಿ: ತುಮಕೂರು: ಟೊಮೊಟೋ ಬೆಳೆದು 20 ಲಕ್ಷ ರೂ. ಗಳಿಸಿದ ಈ ಯುವಕ ಎಲ್ಲರಿಗೂ ಮಾದರಿ
ಕಳೆದ ಚಳಿಗಾಲದಲ್ಲಿ, ಸ್ಮಿತ್ ಬಹಳಷ್ಟು ವೈಜ್ಞಾನಿಕ ಪತ್ರಿಕೆಗಳನ್ನು ಓದುವ ಮೂಲಕ
ಟೊಮ್ಯಾಟೋ ಬೆಳೆಯುವ ಕೌಶಲ್ಯ ಹೆಚ್ಚಿಸಿಕೊಂಡಿದ್ದರು ಎನ್ನುವ ಮಹತ್ವದ ಅಂಶವನ್ನು ತಿಳಿಸಿದ್ದಾರೆ.
ಸ್ಮಿತ್ ಮಾಹಿತಿ ತಂತ್ರಜ್ಞಾನ ವ್ಯವಸ್ಥಾಪಕರಾಗಿ (IT employee) ಕೆಲಸ ಮಾಡುತ್ತಿದ್ದಾರೆ. ಇನ್ನು
ಟೊಮ್ಯಾಟೋ ಸಂಖ್ಯೆಗಳ ಎಣಿಕೆಗೆ ಸಾಕ್ಷಿಯಾಗಿ, ದೃಢೀಕರಿಸಲು ಸ್ಥಳೀಯ ಪಾದ್ರಿ ಮತ್ತು ಪೋಲೀಸರ ಸಹಾಯವನ್ನು ಪಡೆದಿದ್ದಾರೆ. ಆ ಮೂಲಕ ಗಿನ್ನೆಸ್ ದಾಖಲೆಗಳನ್ನು ಮೌಲ್ಯೀಕರಿಸಲು ಟೊಮ್ಯಾಟೋ ತುಂಬಿದ ಕಾಂಡಗಳಿಂದ ಟೂಮ್ಯಾಟೋ ಕಿತ್ತುಕೊಳ್ಳುವುದನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ ಸ್ಮಿತ್.
ದಾಖಲೆಯ ಬೆಳೆಗಳ ಒಡೆಯ
ಸ್ಮಿತ್ ಪ್ರಯತ್ನಗಳನ್ನು ಈಗ ಗಿನ್ನೆಸ್ ವಿಶ್ವ ದಾಖಲೆ (Guinness World Record) ತಜ್ಞರು ಮೌಲ್ಯಮಾಪನ ಮಾಡಲಿದ್ದಾರೆ. ಅವರ ಈ ಪ್ರಯತ್ನವನ್ನು ದಾಖಲೆ-ಕೀಪಿಂಗ್ ಸಂಸ್ಥೆಗೆ ಅಧಿಕೃತ ಅಂಗೀಕಾರಕ್ಕಾಗಿ ಸಲ್ಲಿಸಲಾಗುವುದು.
ಸ್ಮಿತ್ 2020ರ ಆರಂಭದಲ್ಲಿ ಯುಕೆಯ ಅತಿ ಎತ್ತರದ ಸೂರ್ಯಕಾಂತಿ ಬೆಳೆಸಿದ ದಾಖಲೆ ನಿರ್ಮಿಸಿದರು. ಇದು 20 ಅಡಿ ಎತ್ತರದಲ್ಲಿ ಅರಳಿ ನಿಂತಿದೆ. ಅಲ್ಲದೇ ಯುಕೆಯಲ್ಲಿ ಅತಿ ಹೆಚ್ಚು ಟೊಮ್ಯಾಟೋ ಬೆಳೆಯುವ ದಾಖಲೆಯನ್ನು ಹೊಂದಿದ್ದಾರೆ. ಕಳೆದ ಆಗಸ್ಟ್ನಲ್ಲಿ ಸ್ಮಿತ್ 27.5 ಇಂಚು ಸುತ್ತಳತೆಯೊಂದಿಗೆ 3 ಕೆಜಿ
ಟೊಮ್ಯಾಟೋ ಸಂಗ್ರಹಿಸಿದ್ದರು. ಆ ಮೂಲಕ ತಮ್ಮ ವೃತ್ತಿ ಜೊತೆಗೆ ಕೃಷಿಯನ್ನು ಪ್ರೀತಿಸುವ ಮನಸುಗಳಿಗೆ ಮಾದರಿಯಾಗಿದ್ದಾರೆ. ಕೃಷಿಯ ಬಗ್ಗೆ ಕನಸ್ಸು ಕಾಣುವುದಷ್ಟೇ ಅಲ್ಲದೇ ಅದಕ್ಕೆ ಅಗತ್ಯವಾದ ಜ್ಞಾನ ಮತ್ತು ಶ್ರಮವನ್ನು ಹೊಂದಿಸಿಕೊಳ್ಳುವುದು ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ