• Home
  • »
  • News
  • »
  • national-international
  • »
  • Gold Fish: ಅಪರೂಪದ ಸುಂದರ ಗೋಲ್ಡ್ ಫಿಶ್ ಕ್ಯಾಚ್ ಮಾಡಿ ವಿಶ್ವದಾಖಲೆ ಬರೆದ ಮೀನುಗಾರ!

Gold Fish: ಅಪರೂಪದ ಸುಂದರ ಗೋಲ್ಡ್ ಫಿಶ್ ಕ್ಯಾಚ್ ಮಾಡಿ ವಿಶ್ವದಾಖಲೆ ಬರೆದ ಮೀನುಗಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ರಿಟಿಷ್ ಮೀನುಗಾರರೊಬ್ಬರು ಅಪರೂಪದ ಕಿತ್ತಳೆ ಗೋಲ್ಡ್ ಮೀನನ್ನು ಹಿಡಿದಿದ್ದಾರೆ. ಈ ಮೀನುಗಾರ ಬಹುಶಃ ವಿಶ್ವದ ಅತಿದೊಡ್ಡ ಗೋಲ್ಡ್ ಫಿಶ್ ನ್ನು ಹಿಡಿದಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ಕಿತ್ತಳೆ ಬಣ್ಣದ ಈ ದೊಡ್ಡ ಮೀನಿಗೆ ಈಗ ದಿ ಕ್ಯಾರಟ್ ಎಂದು ಹೆಸರನ್ನೂ ಸಹ ಇಡಲಾಗಿದೆ.

ಮುಂದೆ ಓದಿ ...
  • Share this:

    ಜಗತ್ತಿನಲ್ಲಿ (World) ಅನೇಕ ಜಾತಿಯ ಮೀನುಗಳನ್ನ (Fish) ನೀವು ನೋಡಿರಬಹುದು. ಅದರಲ್ಲಿ ಗೋಲ್ಡ್ ಫಿಶ್ (Gold Fish) ಅಂದ್ರೆ ನೋಡೋಕೆ ತುಂಬಾ ಸುಂದರ (Beautiful) ಅನ್ನಿಸುತ್ತದೆ. ಅಕ್ವೇರಿಯಂಗಳಲ್ಲಿ (Aquarium) ಚಿಕ್ಕ ಚಿಕ್ಕ ವಿವಿಧ ಮೀನುಗಳ ಜೊತೆಗೆ ಓಡಾಡುವ ಗೋಲ್ಡ್ ಫಿಶ್ ಗಳನ್ನು ನೀವು ಕಂಡಿರಬಹುದು. ಅವುಗಳಿಗೆ ಆಹಾರ ಹಾಕಿ ಖುಷಿ ಪಟ್ಟಿರಬಹುದು. ಗೋಲ್ಡ್ ಫಿಶ್ ನಂತೆ ಹಲವು ವಿಶೇಷ ಮೀನುಗಳಿವೆ. ಆರೋಗ್ಯಕ್ಕೆ ಮೀನು ಸೇವನೆ ಉತ್ತಮ ಆಹಾರ. ಇದು ಹಲವು ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಕೆಲವು ಮೀನುಗಳನ್ನು ಕಂಡಾಗ ಜನರು ಅವುಗಳ ಬಗ್ಗೆ ಮಾತನಾಡುವುದನ್ನು ನೀವು ಕೇಳಿರಬಹುದು. ಹಾಗೆಯೇ ಈಗ ಗೋಲ್ಡ್ ಫಿಶ್ ಒಂದು ಭಾರೀ ಮುನ್ನೆಲೆಗೆ ಬಂದಿದೆ.  


    ಭಾರೀ ಚರ್ಚೆಯಲ್ಲಿದೆ ಅಪರೂಪದ ಗೋಲ್ಡ್ ಫಿಶ್


    ಕೆಲವು ಬಹಳ ವಿಶೇಷವಾದ ಮೀನುಗಳಲ್ಲಿ ಗೋಲ್ಡ್ ಫಿಶ್ ಕೆಲವೊಮ್ಮೆ ಜನರ ಚರ್ಚೆಯ ವಿಷಯವಾಗಿರುತ್ತದೆ. ಜೊತೆಗೆ ಯೆಶಿ ಎಂಬ ಮೀನು ಹೆಚ್ಚು ಚರ್ಚೆಯಾಗುತ್ತದೆ. ವಾಸ್ತವದಲ್ಲಿ ಮೀನುಗಾರರೊಬ್ಬರು ಅಪರೂಪದ ಕಿತ್ತಳೆ ಗೋಲ್ಡ್ ಫಿಷ್ ಅನ್ನು ಹಿಡಿದಿದ್ದಾರೆ.


    ಈ ಅಪರೂಪದ ಕಿತ್ತಳೆ ಗೋಲ್ಡ್ ಫಿಶ್ ನ ವಿಶೇಷತೆ ಅಂದ್ರೆ ಈ ಮೀನನ್ನು 20 ವರ್ಷಗಳ ಹಿಂದೆ ಕೆರೆಯಲ್ಲಿ ಬಿಡಲಾಗಿತ್ತು. ಅಂದಿನಿಂದ ಇದು ಅಪರೂಪದಲ್ಲೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಅದು ಈಗ ಮೀನುಗಾರರೊಬ್ಬರಿಗೆ ಸಿಕ್ಕಿದೆ.


    ಅಪರೂಪದ ಕಿತ್ತಳೆ ಗೋಲ್ಡ್ ಫಿಶ್ ಹಿಡಿದ ಬ್ರಿಟಿಷ್ ಮೀನುಗಾರ


    ಬ್ರಿಟಿಷ್ ಮೀನುಗಾರರೊಬ್ಬರು ಅಪರೂಪದ ಕಿತ್ತಳೆ ಗೋಲ್ಡ್ ಮೀನನ್ನು ಹಿಡಿದಿದ್ದಾರೆ. ಈ ಮೀನುಗಾರ ಬಹುಶಃ ವಿಶ್ವದ ಅತಿದೊಡ್ಡ ಗೋಲ್ಡ್ ಫಿಶ್ ನ್ನು ಹಿಡಿದಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ಕಿತ್ತಳೆ ಬಣ್ಣದ ಈ ದೊಡ್ಡ ಮೀನಿಗೆ ಈಗ ದಿ ಕ್ಯಾರಟ್ ಎಂದು ಹೆಸರನ್ನೂ ಸಹ ಇಡಲಾಗಿದೆ.


    ಇದುವರೆಗೆ ಮಿನ್ನೆಸೋಟಾದಲ್ಲಿ ಹಿಡಿದ ಮೀನುಗಳು ಅತೀ ಹೆಚ್ಚು ತೂಕ ಹೊಂದಿದ್ದವು. ಈಗ ಅಪರೂಪದ ಕಿತ್ತಳೆ ಗೋಲ್ಡ್ ದಿ ಕ್ಯಾರಟ್ ಫಿಶ್ ಸುಮಾರು 30 ಕೆ.ಜಿ ತೂಕ ಹೊಂದಿದೆ. ಇದು 2019 ರಲ್ಲಿ ಯುಎಸ್ಎ ದಲ್ಲಿ ಹಿಡಿದಿದ್ದ ಮೀನಿಗಿಂತ 13.5 ಕೆಜಿ ಹೆಚ್ಚು ತೂಕ ತೂಗಿದೆ. ಹಾಗಾಗಿಯೇ ಅಪರೂಪದ ಕಿತ್ತಳೆ ಗೋಲ್ಡ್ ದಿ ಕ್ಯಾರಟ್ ಫಿಶ್ ವಿಶ್ವದ ಅತಿದೊಡ್ಡ ಮೀನು ಎಂದು ಪರಿಗಣಿಸಲ್ಪಟ್ಟಿದೆ.


    ಈ ಮೀನಿನ ಕುರಿತು ಮಾತನಾಡಿದ ಮೀನುಗಾರಿಕಾ ವ್ಯವಸ್ಥಾಪಕ ಜೇಸನ್ ಕೌಲರ್, ಈ ಮೀನು ಉತ್ತಮ ಆರೋಗ್ಯ ಹೊಂದಿದೆ. ವಾಸ್ತವದಲ್ಲಿ ಇದು ವಿಶ್ವದ ಅತ್ಯಂತ ಹೆಚ್ಚಿನ ತೂಕದ ಗೋಲ್ಡ್ ಫಿಶ್ ಎಂದಾಗಿದೆ. ಆಂಡಿ ಹ್ಯಾಕೆಟ್ ಈ ಮೀನನ್ನು ಹಿಡಿಯಲು ಸುಮಾರು 25 ನಿಮಿಷ ತೆಗೆದುಕೊಂಡಿದ್ದಾರೆ. ದಿ ಕ್ಯಾರೆಟ್ ಎಂಬ ಅಡ್ಡಹೆಸರಿನ ಈ ಮೀನನ್ನು ಹಿಡಿದು ನಂತರ ಮತ್ತೆ ನೀರಿಗೆ ಬಿಡಲಾಗಿದೆ.


    20 ವರ್ಷಗಳ ಹಿಂದೆ ನೀರಿಗೆ ಬಿಡಲಾಗಿದ್ದ ಮೀನಿದು


    ಹೈಬ್ರಿಡ್ ಜಾತಿಯ ದಿ ಕ್ಯಾರಟ್ ಗೋಲ್ಡ್ ಫೀಶ್ ತುಂಬಾ ಆಕರ್ಷಕವಾಗಿದೆ. ಡೈಲಿ ಮೇಲ್ ಪ್ರಕಾರ, ದಿ ಕ್ಯಾರೆಟ್ ಮೀನನ್ನು 20 ವರ್ಷಗಳ ಹಿಂದೆ ನೀರಿನಲ್ಲಿ ಬಿಟ್ಟಿದ್ದರು. ಆಗ ತಾವು ತುಂಬಾ ಚಿಕ್ಕವನಾಗಿದ್ದ ಎಂದು ಮೀನುಗಾರಿಕಾ ವ್ಯವಸ್ಥಾಪಕ ಜೇಸನ್ ಹೇಳಿದ್ದಾರೆ.


    ಈ ಮೀನನ್ನು ಹಿಡಿದ ಮೀನುಗಾರ ಆಂಡಿಯನ್ನು ನಾವು ಅಭಿನಂದಿಸುತ್ತೇವೆ. ಈ ಮೀನು ವಿಭಿನ್ನವಾಗಿದೆ. 42 ವರ್ಷದ ಆಂಡಿ ಹ್ಯಾಕೆಟ್, 31 ಕೆಜಿ ಮೀನು ಹಿಡಿಯಲು 25 ನಿಮಿಷ ತೆಗೆದುಕೊಂಡಿದ್ದಾರೆ. ದಿ ಕ್ಯಾರಟ್ ತೂಕದಲ್ಲಿ ಇತರೆ ಮೀನುಗಳಿಗಿಂತ 13 ಕೆಜಿ ಹೆಚ್ಚು ತೂಕ ತೂಗಿದೆ ಎಂದಿದ್ದಾರೆ.


    ದಿ ಕ್ಯಾರಟ್ ಮೀನು ಹಿಡಿದಿರುವ ಮೀನುಗಾರ, ಉತ್ಸಾಹಿ ಆಂಡಿ ಹ್ಯಾಕೆಟ್, ಯುಕೆ ವೋರ್ಸೆಸ್ಟರ್‌ಶೈರ್ ಮೂಲದ ಕಂಪನಿಯೊಂದರಲ್ಲಿ ನಿರ್ದೇಶಕರಾಗಿದ್ದಾರೆ. ಫ್ರಾನ್ಸ್‌ನ ಬ್ಲೂವಾಟರ್ ಸರೋವರಗಳಲ್ಲಿ ಈ ಮೀನು ಇರುವುದು ಗೊತ್ತಿತ್ತು.


    ಇದನ್ನೂ ಓದಿ: ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ಕೊಟ್ಟ ಮೇಕೆ, ಅಚ್ಚರಿ ಹಿಂದಿನ ಕಾರಣವೂ ಬಹಿರಂಗ!


    ಆದರೆ ಈ ಮೀನು ಹಿಡಿಯಲು ಸಾಧ್ಯವಾಗುತ್ತೆ ಅಂತಾ ಯಾವತ್ತಿಗೂ ಯೋಚನೆ ಮಾಡಿರ್ಲಿಲ್ಲ ಎಂದು ಆಂಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಗೋಲ್ಡ್ ಫಿಶ್ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಬೆಗುಗೊಂಡಿದ್ದಾರೆ.

    Published by:renukadariyannavar
    First published: