Bridge Collapse: 138 ಚಕ್ರದ ಲಾರಿ ಸಂಚರಿಸಿ ಬ್ರಿಟಿಷ್ ಕಾಲದ ಸೇತುವೆ ಕುಸಿತ

ಸುಕ್ತ್ವಾ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಲಾರಿಯೊಂದು ದಾಟುತ್ತಿದ್ದಾಗ ಕುಸಿದಿದ್ದು, ಭೋಪಾಲ್-ನಾಗ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ .

ಸೇತುವೆ ಕುಸಿದು ಕೆಳಗೆ ಬಿದ್ದ ಲಾರಿ

ಸೇತುವೆ ಕುಸಿದು ಕೆಳಗೆ ಬಿದ್ದ ಲಾರಿ

  • Share this:
ನರ್ಮದಾಪುರಂ(ಏ.11): ಮಧ್ಯಪ್ರದೇಶದ ನರ್ಮದಾಪುರಂನಲ್ಲಿ (Narmadapuram) ಸುಕ್ತ್ವಾ ನದಿಗೆ ಬ್ರಿಟಿಷರ (British) ಕಾಲದಲ್ಲಿ ನಿರ್ಮಿಸಲಾಗಿದ್ದ ಸೇತುವೆ (Bridge) ಭಾನುವಾರ ಲಾರಿಯೊಂದು ದಾಟುತ್ತಿದ್ದಾಗ ಕುಸಿದಿದ್ದು, ಭೋಪಾಲ್-ನಾಗ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 138 ಚಕ್ರಗಳ ಲಾರಿ ಕಿರಿದಾದ ಸೇತುವೆಯನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸೇತುವೆ ಕುಸಿದ ಕಾರಣ ಲಾರಿಯು ಬರಡಾಗಿದ್ದ ನದಿಯ ತಳದಲ್ಲಿ ಬಿದ್ದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವಧೇಶ್ ಪ್ರತಾಪ್ ಸಿಂಗ್ ಫೋನ್ ಮೂಲಕ ಪಿಟಿಐಗೆ ತಿಳಿಸಿದ್ದಾರೆ, ಜನರಿಗೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಹೇಳಿದರು.

"ಡ್ರೈವರ್ ಗುಲ್ಮ ಅವರಿಗೆ ಸ್ವಲ್ಪ ಗಾಯವಾಗಿದೆ ಎಂದು ದೂರಿದರು. ಆದರೆ ಅವರು ಶೀಘ್ರದಲ್ಲೇ ಸ್ಥಳವನ್ನು ತೊರೆದಿದ್ದಾರೆ. ವಾಹನ ಸಮೇತ ಬಿದ್ದ ಇನ್ನೂ ಐವರು ಚೇತರಿಸಿಕೊಂಡಿದ್ದಾರೆ. ಮಲ್ಟಿ ಆಕ್ಸಲ್ ಲಾರಿ ಹೈದರಾಬಾದ್‌ನಿಂದ ನರ್ಮದಾಪುರಂನ ಇಟಾರ್ಸಿಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ತರುತ್ತಿತ್ತು ಎಂದು ಸಿಂಗ್ ಹೇಳಿದ್ದಾರೆ.

ಪ್ರತಿದಿನ 5 ಸಾವಿರ ವಾಹನ ಓಡಾಟ

ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸುಕ್ತ್ವಾದಲ್ಲಿ ಅಪಘಾತದ ನಂತರ ಟ್ರಾಫಿಕ್ ಅನ್ನು ಹರ್ದಾ ಮೂಲಕ ಬೇತುಲ್‌ಗೆ ತಿರುಗಿಸಲಾಗಿದೆ ಎಂದು ಅವರು ಹೇಳಿದರು. 25 ಅಡಿ ಎತ್ತರದ ಸೇತುವೆಯಲ್ಲಿ ಪ್ರತಿದಿನ ಸುಮಾರು 5,000 ವಾಹನಗಳು ಓಡಾಡುತ್ತವೆ ಎನ್ನಲಾಗಿದೆ.

ಇದನ್ನೂ ಓದಿ: Dharwad: ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಪ್ರಕರಣ: ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರ ಬಂಧನ

ಹೋಶಂಗಾಬಾದ್, ಅಧಿಕೃತವಾಗಿ ನರ್ಮದಾಪುರಂ ಎಂದು ಕರೆಯಲ್ಪಡುವ ಭಾರತದ ಮಧ್ಯಪ್ರದೇಶದ ಒಂದು ನಗರ ಮತ್ತು ಪುರಸಭೆಯಾಗಿದೆ. ಇದು ಹೋಶಂಗಾಬಾದ್ ಜಿಲ್ಲೆ ಮತ್ತು ನರ್ಮದಾಪುರಂ ವಿಭಾಗ ಎರಡರ ಪ್ರಧಾನ ಕಛೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಧ್ಯ ಭಾರತದಲ್ಲಿ ನರ್ಮದಾ ನದಿಯ ದಕ್ಷಿಣ ದಂಡೆಯಲ್ಲಿದೆ. ಹೋಶಂಗಾಬಾದ್ ರಾಜ್ಯದ ರಾಜಧಾನಿಯಿಂದ 76.7 ಕಿಮೀ ದೂರದಲ್ಲಿದೆ ಮತ್ತು ಭೋಪಾಲ್ ಹತ್ತಿರದ ವಿಮಾನ ನಿಲ್ದಾಣವಾಗಿದೆ.

60 ಅಡಿ ಉದ್ದ, 12 ಅಡಿ ಎತ್ತರದ ಸೇತುವೆ ಕದ್ದ ಕಳ್ಳರು

ಬಿಹಾರದ ರೋಹ್ತಾಸ್ ಜಿಲ್ಲೆಯ ಬಿಕ್ರಮ್‌ಗಂಜ್ ಉಪವಿಭಾಗದ ಪ್ರದೇಶದಲ್ಲಿರುವ 60 ಅಡಿ ಉದ್ದದ ಕಬ್ಬಿಣದ ಸೇತುವೆ(Iron Bridge)ಯನ್ನೇ ಕಳ್ಳರು ಎಗರಿಸಿದ್ದಾರೆ. ಅದು ಸ್ಥಳೀಯ ಇಲಾಖೆಯ ಅಧಿಕಾರಿಗಳ ಸಹಾಯ ಪಡೆದು ಕಳ್ಳತನ ಮಾಡಿರೋದು ಆಶ್ಚರ್ಯಕರ ವಿಷಯ. ಈ ಕಳ್ಳತನ ಶುಕ್ರವಾರ ಬೆಳಕಿಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಳ್ಳರ (Thieves) ಜಾಣತನವನ್ನು ಹೊಗಳುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚೀಮಾರಿ ಹಾಕಿದ್ದಾರೆ.

ಈ ಸೇತುವೆಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಸೇತುವೆಗಾಗಿ ಬಳಸಿದ್ದ ಕಬ್ಬಿಣದ ವಸ್ತುಗಳನ್ನು ದೋಚಿದ್ದಾರೆ. ಎಲ್ಲರ ಮುಂದೆಯೇ ಒಟ್ಟು 3 ದಿನ ಈ ಕಳ್ಳತನ ನಡೆದಿದೆ.

ಇದನ್ನೂ ಓದಿ: Accident: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಭೀಕರ ಕಾರು ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು

ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿ ಭೀಕರ ಅಪಘಾತ: 6 ಮಂದಿ ಬಲಿ

ಕುಂಬಳಗೋಡಿನ ಕಣಿಮಿಣಿಕೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಎರಡು ಕಾರು, ಒಂದು ಬೈಕ್ ಮೇಲೆ ಲಾರಿ ಬಿದ್ದಿದ್ದರಿಂದ ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರೂ ಮೃತಪಟ್ಟಿದ್ದಾರೆ. ಮೃತರನ್ನು ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಎಂದು ಗುರುತಿಸಲಾಗಿದೆ. ಟೊಯೋಟಾ ಕಂಪೆನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್ ಹಾಗೂ ಬೈಕ್ ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Accident in Bengaluru: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕಾರಿನಲ್ಲಿದ್ದ 7 ಮಂದಿ ದಾರುಣ ಸಾವು

ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಲಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಕಂಟ್ರೋಲ್ ತಪ್ಪಿ ಪಲ್ಟಿಯಾಗಿದೆ. ಕುಂಬಳಗೊಡು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಪಘಾತದಿಂದಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ.
Published by:Divya D
First published: