ಹನಿಮೂನ್​ಗಾಗಿ ಶ್ರೀಲಂಕಾ ತಲುಪಿದ ಬ್ರಿಟಿಷ್​ ದಂಪತಿ: ಕುಡಿದ ಮತ್ತಿನಲ್ಲಿ ಮಾಡಿದ್ದೇನು ಗೊತ್ತಾ?

Precilla Olivia Dias | news18
Updated:October 12, 2018, 7:45 PM IST
ಹನಿಮೂನ್​ಗಾಗಿ ಶ್ರೀಲಂಕಾ ತಲುಪಿದ ಬ್ರಿಟಿಷ್​ ದಂಪತಿ: ಕುಡಿದ ಮತ್ತಿನಲ್ಲಿ ಮಾಡಿದ್ದೇನು ಗೊತ್ತಾ?
Precilla Olivia Dias | news18
Updated: October 12, 2018, 7:45 PM IST
ನ್ಯೂಸ್​ 18 ಕನ್ನಡ

ಕೊಲಂಬೋ(ಅ.12): ಮದ್ಯದ ಸೇವಿಸಿದ ಬಳಿಕ ಜನರಿಗೆ ನಶೆ ಎಷ್ಟು ಏರುತ್ತದೆ ಎಂದರರೆ ತಾವೇನು ಮಾಡುತ್ತಿದ್ದೇವೆ ಎಂಬುವುದೂ ತಿಳಿದಿರುವುದಿಲ್ಲ. ಅಮಲಿನಲ್ಲಿ ಜನರು ಕೆಲ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮದ್ಯದ ನಶೆಯಲ್ಲಿ ಜನರು ವಿಚಿತ್ರವಾಗಿ ನಡೆದುಕೊಳ್ಳುವುದು ಹೊಸದೇನಲ್ಲ. ಆದರೆ ಕುಡಿದ ಮತ್ತಿನಲ್ಲಿ ಬರೋಬ್ಬರಿ 29 ಲಕ್ಷದ ಹೊಟೇಲ್​ ಖರೀದಿಸಿದ್ದು ಎಂದಾದರೂ ಕೇಳಿದ್ದೀರಾ? ಅಬ್ಬಾ....! ಎನ್ನಬೇಡಿ ಯಾಕೆಂದರೆ ಹನಿಮೂನ್​ಗೆಂದು ಶ್ರೀಲಂಕಅಗೆ ಆಗಮಿಸಿದ ಬ್ರಿಟಿಷ್​ ದಂಪತಿಯೊಂದು ಇದನ್ನೇ ಮಾಡಿದ್ದಾರೆ.

ಹೌದು ದ ಮಿರರ್​ ಪತ್ರಿಕೆ ಈ ಕುರಿತಾಗಿ ವರದಿಯೊಂದನ್ನು ಪ್ರಕಟಿಸಿದೆ. ಈ ವರದಿಯನ್ವಯ 2017ರ ಡಿಸೇಂಬರ್​ನಲ್ಲಿ ಬ್ರಿಟಿಷ್​ ದಂಪತಿಯೊಂದು ಹನಿಮೂನ್​ ಮಾಡಲು 3 ವಾರಲಕ್ಕಾಗಿ ಶ್ರೀಲಂಕಾಗೆ ಬಂದಿದ್ದರು. ಅಲ್ಲಿಗೆ ತಲುಪುತ್ತಿದ ಬಳಿಕ, ಮೊದಲ ರಾತ್ರಿಯೇ 12 ಗ್ಲಾಸ್​ ರಂ ಸೇವಿಸಿದ್ದರು. ಇದೇ ಸಂದರ್ಭದಲ್ಲಿ ತಾವು ಉಳಿದುಕೊಂಡಿರುವ ಹೊಟೇಲ್​ನ ಲೀಜ್​ ಮುಗಿಯುತ್ತಿದೆ ಎಂಬ ವಿಚಾರ ತಿಳಿದಿದೆ. ಇನ್ನು ಈ ಹೊಟೇಲನ್ನು ಒಂದು ವರ್ಷ ಲೀಜ್​ ಪಡೆಯಲು 1 ಸಾವಿರ ಪೌಂಡ್​ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ, ಬರೋಬ್ಬರಿ ಮೂರು ವರ್ಷಗಳ ಲೀಜ್​ ಮೊತ್ತ 3 ಸಾವಿರ ಪೌಂಡ್​ ಮೊತ್ತ(29 ಲಕ್ಷ) ಪಾವತಿಸಿದ್ದಾರೆ.

ಮರುದಿನ ಈ ಗಂಡ ಹೆಂಡತಿ ಲೀಜ್​ ನವೀಕರಣ ಮಾಡಲು ಓರ್ವ ವೃದ್ಧ ದಂಪತಿಯನ್ನು ಭೇಟಿಯಾಗಿದ್ದಾರೆ. ಮಾತುಕತೆ ಹೆಚ್ಚು ಅರ್ಥವಾಗದಿದ್ದಾಗ ಮತ್ತೆ ಮದ್ಯ ಸೇವಿಸಿದ್ದಾರೆ. ಇದೇ ನಶೆಯಲ್ಲಿ ಒಂದು ವರ್ಷದ ಲೀಜ್​ ಮೊತ್ತವನ್ನು ನೀಡಿದ್ದಾರೆ ಹಾಗೂ ಉಳಿದ ಎರಡು ವರ್ಷದ ಮೊತ್ತವನ್ನು 2019ರ ಮಾರ್ಚ್​ನಲ್ಲಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವರ್ಷ ಆ ಹೊಟೇಲ್​ ಅಧಿಕೃತವಾಗಿ ಈ ದಂಪತಿಗೆ ಸಿಕ್ಕಿದೆ. ಇಬ್ಬರೂ ಈ ಹೊಟೇಲ್​ಗೆ 'ಲಕ್ಕಿ ಬೀಚ್​ ಟ್ಯಾಂಗಲ್​' ಎಂದು ಹೆಸರಿಟ್ಟಿದ್ದಾರೆ.
 
Loading...

View this post on Instagram
 

How #luckybeachtangalle was born! ❤️


A post shared by Lucky Beach (@luckybeachtangalle) on

ಆದರೆ ಈ ದಂಪತಿಯ ಕುಟುಂಬಸ್ಥರು ಹಾಗೂ ಗೆಳೆಯರಿಗೆ ಮಾತ್ರ ಅವರಿಬ್ಬರು ತೆಗೆದುಕೊಂಡ ನಿರ್ಧಾರ ಮೂರ್ಖತನದಿಂದ ಕೂಡಿದೆ ಎಂದು ಅನಿಸಿತ್ತು ಹಾಗೂ ಅವರಿಗೆ ನಷ್ಟವಾಗುತ್ತದೆ ಅಂತಂದುಕೊಂಡಿದ್ದರು. ಆದರೆ ಈ ಹೊಟೇಲ್​ ಈ ಮೊದಲಿಗಿಂತಲೂ ಚೆನ್ನಾಗಿ ನಡೆಯುತ್ತಿದೆ ಹಾಗೂ ಉತ್ತಮ ಆದಾಯ ಕೂಡಾ ಬರುತ್ತಿದೆ.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ