• Home
 • »
 • News
 • »
 • national-international
 • »
 • Twitter Account: ಉಲ್ಕಾಪಾತದ ವಿಡಿಯೋ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಖಗೋಳಶಾಸ್ತ್ರಜ್ಞೆಗೆ ರಿಲೀಫ್!

Twitter Account: ಉಲ್ಕಾಪಾತದ ವಿಡಿಯೋ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಖಗೋಳಶಾಸ್ತ್ರಜ್ಞೆಗೆ ರಿಲೀಫ್!

ಉಲ್ಕಾಪಾತದ ವೀಡಿಯೋ ಪೋಸ್ಟ್ ಮಾಡಿ ಸಂಕಷ್ಟ

ಉಲ್ಕಾಪಾತದ ವೀಡಿಯೋ ಪೋಸ್ಟ್ ಮಾಡಿ ಸಂಕಷ್ಟ

ಖಗೋಳಶಾಸ್ತ್ರಜ್ಞರಾದ ಮೇರಿ ಮ್ಯಾಕ್‌ಇಂಟೈರ್ ಅವರು ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಕಂಡುಬರುವ ಪರ್ಸಿಡ್ ಉಲ್ಕಾಪಾತದ ಉಲ್ಕೆಯಿಂದ ಜಾಡಿನ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ವಿಡಿಯೋ ತುಣುಕಿನಲ್ಲಿ ಉಲ್ಕೆಗಳ ಪೈಕಿ ಒಂದು ರಾತ್ರಿಯ ಆಕಾಶದಾದ್ಯಂತ ಪಟ್ಟೆಗಳನ್ನು ತೋರಿಸಿತ್ತು.

 • Trending Desk
 • Last Updated :
 • New Delhi, India
 • Share this:

  ಉಲ್ಕಾಪಾತದ (Meteor) ವೀಡಿಯೋವನ್ನು ಒಪ್ಪಿಗೆಯಿಲ್ಲದೇ ಟ್ವೀಟ್ ಮಾಡಿದ ನಂತರ ಮೂರು ತಿಂಗಳು ಟ್ವಿಟರ್‌ನಿಂದ ಹೊರಗುಳಿದಿದ್ದ ಖಗೋಳಶಾಸ್ತ್ರಜ್ಞರಾದ (British Astronomer) ಮೇರಿ ಮ್ಯಾಕ್‌ಇಂಟೈರ್ (Mary McIntyre) ಮತ್ತೆ ಟ್ವಿಟರ್‌ಗೆ (Twitter) ಎಂಟ್ರಿ ನೀಡಿದ್ದಾರೆ. ಆಕ್ಸ್‌ಫರ್ಡ್‌ಶೈರ್‌ನ ಖಗೋಳಶಾಸ್ತ್ರಜ್ಞರಾದ ಮೇರಿ ಮ್ಯಾಕ್‌ಇಂಟೈರ್ ಅವರು ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಕಂಡುಬರುವ ಪರ್ಸಿಡ್ ಉಲ್ಕಾಪಾತದ ಉಲ್ಕೆಯಿಂದ ಜಾಡಿನ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ವಿಡಿಯೋ ತುಣುಕಿನಲ್ಲಿ ಉಲ್ಕೆಗಳ ಪೈಕಿ ಒಂದು ರಾತ್ರಿಯ ಆಕಾಶದಾದ್ಯಂತ ಪಟ್ಟೆಗಳನ್ನು ತೋರಿಸಿತ್ತು.


  ನಿಯಮ ಉಲ್ಲಂಘನೆ.. ಟ್ವಿಟರ್‌ ಖಾತೆ ಲಾಕ್


  ಸೋಷಿಯಲ್ ಮೀಡಿಯಾ ನೆಟ್‌ವರ್ಕ್‌ನಲ್ಲಿನ ಕಂಟೆಂಟ್ ಮಾಡರೇಶನ್ ಸಿಬ್ಬಂದಿ ಉಲ್ಕೆಯ ಆರು-ಸೆಕೆಂಡ್ ಅನಿಮೇಟೆಡ್ ವೀಡಿಯೋವನ್ನು ಅನುಮತಿಯಿಲ್ಲದೆ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಾದ ನಂತರವೂ ಮೇರಿ ಮ್ಯಾಕ್‌ಇಂಟೈರ್ ಟ್ವೀಟ್‌ ಅನ್ನು ತೆಗೆದುಹಾಕಿರಲಿಲ್ಲ. ಹೀಗಾಗಿ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾಳೆಂದು ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ದುರದೃಷ್ಟವಶಾತ್, ಖಗೋಳಶಾಸ್ತ್ರಜ್ಞರು ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರಿಂದ ಆಕೆಯ ಆರಂಭಿಕ 12-ಗಂಟೆಗಳ ನಿಷೇಧವನ್ನು ತಿಂಗಳುಗಳವರೆಗೆ ವಿಸ್ತರಿಸಲಾಯಿತು.


  ಇದನ್ನೂ ಓದಿ: ಪಾಸ್ ಆದರೂ ಮೆಡಿಕಲ್ ಓದಲು ಹಣವಿಲ್ಲದೆ ವಿದ್ಯಾರ್ಥಿನಿಯ ಪರದಾಟ


  ದಿ ಗಾರ್ಡಿಯನ್‌ನ ವರದಿ ಮಾಡಿದ್ದ ಪ್ರಕಾರ, ತಂಡದ ಒಪ್ಪಿಗೆಯಿಲ್ಲದೆ ಅವರು ಹಂಚಿಕೊಂಡಿದ್ದಲ್ಲದೇ ವೀಡಿಯೋ ಕ್ಲಿಪ್ ಕೆಲವು ಗೌಪ್ಯ ವಿಷಯಗಳನ್ನು ಹೊಂದಿದೆ ಎಂದು ಟ್ವಿಟರ್ ಅವರಿಗೆ ತಿಳಿಸುವುದರೊಂದಿಗೆ ಆಕೆಯ ಖಾತೆಯನ್ನು ಬ್ಲಾಕ್‌ ಮಾಡಿತ್ತು. ಉಲ್ಕಾಪಾತದ ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಖಗೋಳಶಾಸ್ತ್ರಜ್ಞನನ್ನು ಟ್ವಿಟರ್ ನಿಷೇಧಿಸಿ ಅದನ್ನು 'ಆಪ್ತ ವಿಷಯ' ಎಂದು ವರ್ಗೀಕರಿಸಿತ್ತು. ಎಲಾನ್ ಮಸ್ಕ್ ಟ್ವಿಟರ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಮುಂಚೆಯೇ ಮತ್ತು ಮಾಡರೇಟರ್‌ಗಳನ್ನು ವಜಾ ಮಾಡುವ ಮೊದಲು ಸಾಮಾಜಿಕ ಮಾಧ್ಯಮ ಸಂಸ್ಥೆಯು ಪೋಸ್ಟ್ ಅನ್ನು ನಿಷೇಧಿಸಿತ್ತು.


  ಖಾತೆ ಮರಳಿದ್ದಾಗಿ ಬಹಿರಂಗಪಡಿಸಿದ ಮೇರಿ ಮ್ಯಾಕ್‌ಇಂಟೈರ್


  ‌ಉಲ್ಕಾಪಾತದ ವೀಡಿಯೋ ಹಂಚಿಕೊಂಡ ನಂತರ ಮೇರಿ ಮ್ಯಾಕ್‌ಇಂಟೈರ್ ಟ್ವಿಟರ್‌ ಖಾತೆ ಮೂರು ತಿಂಗಳು ಸ್ಥಗಿತಗೊಂಡಿತ್ತು. ಪ್ರಸ್ತುತ ಟ್ವಿಟರ್‌ ಈಗ ಅವರ ಖಾತೆಯನ್ನು ಪುನಃ ನೀಡಿದೆ. ಈ ಬಗ್ಗೆ ಗುರುವಾರ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. "ನಾನು ಹಿಂತಿರುಗಿದ್ದೇನೆ" ಎಂದು ಪೋಸ್ಟ್‌ ಮಾಡುವ ಮೂಲಕ ಟ್ವಿಟರ್‌ ಖಾತೆ ಮರಳಿ ಬಂದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. "ನಾನು ಪೋಸ್ಟ್‌ ಮಾಡಿದ್ದ ಪರ್ಸಿಡ್ ಉಲ್ಕಾಪಾತದ ವಿಡಿಯೋವನ್ನು ಅಪರಾಧ ಎಂದು ನಿರ್ಬಂಧಿಸಲಾದ 3 ತಿಂಗಳ ನಂತರ, ನಾನು ನಿಯಮವನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಳ್ಳದ ಹೊರತು ನನ್ನ ಖಾತೆಯನ್ನು ಮರಳಿ ಪಡೆದಿದ್ದೇನೆ" ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
  ಅಂತರಾಷ್ಟ್ರೀಯ ಸುದ್ದಿವಾಹಿನಿ ಬಿಬಿಸಿ ಮಹಿಳಾ ಖಗೋಳಶಾಸ್ತ್ರಜ್ಞರ ಪರಿಸ್ಥಿತಿಯನ್ನು ಹೈಲೈಟ್ ಮಾಡಿದ ನಂತರ ಮೇರಿ ಮ್ಯಾಕ್‌ಇಂಟೈರ್ ಖಾತೆಯನ್ನು ಅನ್‌ಲಾಕ್‌ ಮಾಡಲಾಗಿದೆ.


  "ಟ್ವಿಟರ್‌ ಖಾತೆ ಇಲ್ಲದೇ ಖಗೋಳ ಪ್ರಪಂಚದಿಂದ ದೂರವಾಗಿಬಿಟ್ಟಿದ್ದೆ"


  ತನ್ನ ಸಾಮಾಜಿಕ ಮಾಧ್ಯಮವನ್ನು ಅಮಾನತುಗೊಳಿಸಿದ ನಂತರ ಬ್ರಿಟಿಷ್ ಖಗೋಳಶಾಸ್ತ್ರಜ್ಞರ ಖಾತೆಯು ಗೋಚರಿಸುತ್ತಿತ್ತಾದರೂ ಅವರಿಗೆ ಖಾತೆಯನ್ನು ಬಳಸಲು ಅಥವಾ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮಹಿಳೆಗೆ ತಾನು "ಖಗೋಳ ಪ್ರಪಂಚದಿಂದ ದೂರವಿದ್ದೇನೆ" ಎಂದು ಭಾಸವಾಗುತ್ತಿತ್ತು ಎಂದು BBC ವರದಿ ಮಾಡಿದೆ. ಆದರೆ ಅದೃಷ್ಟವಶಾತ್, ಮೂರು ತಿಂಗಳ ನಂತರ, ಆಕೆಯ ಖಾತೆಯನ್ನು ಗುರುವಾರ ಮರುಸ್ಥಾಪಿಸಲಾಗಿದೆ.


  ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವವೇನು? ಆಚರಣೆ ಹಿಂದಿನ ಕಾರಣ ಹೀಗಿದೆ


  ಈ ರೀತಿಯಾದ ಗೌಪ್ಯತೆ ಹೊಂದಿರುವ ಕೆಲವು ವಿಷಯಗಳನ್ನು ಹಂಚಿಕೊಳ್ಳಲಾಗುತ್ತದೆ. ಇಂತಹ ಸಾಮಾಜಿಕ ಮಾಧ್ಯಮ ಬಹಿಷ್ಕಾರಗಳ ಉಲ್ಬಣಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಬಳಸುವ ಕೃತಕ ಬುದ್ಧಿಮತ್ತೆ (AI) ಮಾಡರೇಶನ್ ಪರಿಕರಗಳ ಮಿತಿಗಳಿಂದ ಇದು ಉಂಟಾಗಿದೆ ಎಂದು ತಂತ್ರಜ್ಞರು ಹೇಳುತ್ತಾರೆ.


  ಉಲ್ಕಾಪಾತ


  ಉಲ್ಕೆಗಳು ಮೂಲತಃ ಉಲ್ಕಾಶಿಲೆಗಳ ಭಾಗವಾಗಿದ್ದು, ಅವು ಧೂಳು ಮತ್ತು ವಿವಿಧ ಗಾತ್ರಗಳಲ್ಲಿರುವ ಬಾಹ್ಯಾಕಾಶ ವಸ್ತುಗಳಾಗಿವೆ. ಈ ಉಲ್ಕಾಶಿಲೆಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದ ಮೇಲೆ ಹೊತ್ತಿ ಉರಿಯುತ್ತವೆ. ಈ ಕಾರಣಕ್ಕೆ ಇವುಗಳನ್ನುಉಲ್ಕೆಗಳು ಎಂದು ಕರೆಯಲಾಗುತ್ತದೆ. ಪರ್ಸೀಡ್ ಉಲ್ಕಾಪಾತವು ಸ್ವಿಫ್ಟ್ ಟಟಲ್‌ ಎಂಬ ಧೂಮಕೇತುವಿನ ಅವಶೇಷಗಳಿಂದ ಸಂಭವಿಸಲಿದ್ದು, ಇದರ ಅವಶೇಷಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವಾಗ ಸುಮಾರು 130,000 ಮೈಲುಗಳಷ್ಟು ವೇಗದಲ್ಲಿ ಚಲಿಸಬಹುದು ಎಂದು ಅಂದಾಜಿಸಲಾಗಿದೆ.

  Published by:Precilla Olivia Dias
  First published: