Princess Anne: ಬ್ರಿಟನ್ ರಾಣಿ ನಿಧನದ ಬಳಿಕ ಎಲ್ಲರ ಗಮನ ಸೆಳೆದ ಪ್ರಿನ್ಸೆಸ್ ಎನ್ನೆ! ಯಾರಿವರು ಗೊತ್ತಾ?

ರಾಣಿಯ ನಿಧನದ ನಂತರ ಇದೇ ಮೊದಲ ಬಾರಿಗೆ ರಾಣಿಯ ಎಲ್ಲ ನಾಲ್ಕು ಸಂತಾನಗಳು ಒಟ್ಟಿಗೆ ಇರುವಿಕೆಯಂತಹ ಸಂದರ್ಭವನ್ನು ನೋಡಲಾಯಿತು ಹಾಗೂ ಈ ಸಂದರ್ಭವನ್ನು ನೂರಾರು ಜನರು ಕ್ಲಿಕ್ಕಿಸಿದರು. ಬ್ರಿಟಿಷ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಣ್ಣೊಬ್ಬಳು ರಾಣಿಯ ಕಾಫಿನ್ ಪಕ್ಕದಲ್ಲಿ ರಕ್ಷಕನಂತೆ ನಿಂತು ಸಹ ದಾಖಲೆ ಬರೆದರು. ಹಾಗಿದ್ರೆ ಯಾರವರು?

ಪ್ರಿನ್ಸೆಸ್ ಎನ್ನೆ

ಪ್ರಿನ್ಸೆಸ್ ಎನ್ನೆ

  • Share this:
ಕೆಲ ದಿನಗಳ ಹಿಂದಷ್ಟೇ ಬ್ರಿಟನ್ ರಾಣಿ ಎಲಿಜಬೆಟ್ II (Queen Elizabeth II) ಅವರು ನಿಧನ ಹೊಂದಿದ್ದಾರೆ. ಪ್ರಸ್ತುತ ಅವರ ನಿಧನವು (Death) ಬಹು ದೀರ್ಘ ಕಾಲದ ನಂತರ ಮತ್ತೆ ಅವರ ಪುತ್ರರು (Sons) ಒಂದೆಡೆ ಬೆರೆಯುವಂತೆ ಮಾಡಿದೆ.  ಹೌದು, ರಾಣಿ ಎಲಿಜಬೆತ್ ನಿಧನದ ನಂತರ ಪ್ರಿನ್ಸ್ ವಿಲಿಯಮ್ ತನ್ನ ಮಡದಿ ಕೇಟ್ ಮಿಡಲ್ಟನ್ ಜೊತೆ ಸೇರಿ ಯುನೈಟೆಡ್ ಫ್ರಂಟ್ (United Front) ಮುಂದೆ ಡ್ಯೂಕ್ ಹಾಗೂ ಡಚೆಸ್ ಆಫ್ ಸಸ್ಸೆಕ್ಸ್ ಆಗಿ ಕಾಣಿಸಿಕೊಂಡರು. ಇನ್ನು, ಕೆಲ ಚಾರಿಟಿ ಕಾರ್ಯಕ್ರಮಕ್ಕೆಂದು ಯುಕೆ ಪ್ರವಾಸಾಲ್ಲಿದ್ದ ಪ್ರಿನ್ಸ್ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್ ಅವರು ಎಲಿಜಬೆತ್ ನಿಧನದ ನಂತರ ತಮ್ಮ ಇರುವಿಕೆಯನ್ನು ಮತ್ತಷ್ಟು ವಿಸ್ತರಿಸಿದರು.

ನಾಲ್ಕು ಸಂತಾನಗಳು ಒಟ್ಟಿಗೆ ಕಾಣಸಿಕ್ಕ ಸಮಯ 
ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಆಸಕ್ತಿದಾಯಕ ವಿಷಯವೆಂದರೆ ರಾಣಿಯ ನಿಧನದ ನಂತರ ಇದೇ ಮೊದಲ ಬಾರಿಗೆ ರಾಣಿಯ ಎಲ್ಲ ನಾಲ್ಕು ಸಂತಾನಗಳು ಒಟ್ಟಿಗೆ ಇರುವಿಕೆಯಂತಹ ಸಂದರ್ಭವನ್ನು ನೋಡಲಾಯಿತು ಹಾಗೂ ಈ ಸಂದರ್ಭವನ್ನು ನೂರಾರು ಜನರು ಕ್ಲಿಕ್ಕಿಸಿದರು.

ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

ಇನ್ನು, ಎಡಿನ್ಬರ್ಗ್ ನಲ್ಲಿ ಎಲಿಜಬೆತ್ ರಾಣಿಯ ಪಾರ್ಥಿವ ಶರೀರವಿದ್ದ ಕಾಫಿನ್ ಅನ್ನು ಕೊಂಡೊಯ್ಯುವಾಗ ಪ್ರಸ್ತುತ ರಾಜನಾಗಿರುವ ಕಿಂಗ್ ಚಾರ್ಲ್ಸ್ ಅವರು ಎನ್ನೆ, ಪ್ರಿನ್ಸೆಸ್ ರಾಯಲ್, ಪ್ರಿನ್ಸ್ ಆಂಡ್ರ್ಯೂ ಹಾಗೂ ಪ್ರಿನ್ಸ್ ಎಡ್ವರ್ಡ್ ಅವರೊಂದಿಗೆ ಇರುವುದು ಕಂಡುಬಂದಿತು. ಇದೇ ಮೊದಲ ಬಾರಿಗೆ ರಾಣಿಯ ನಾಲ್ಕು ಸಂತಾನ ಕಾಫಿನ್ ಹಿಂದೆ ದುಃಖ ತಪ್ತ ಭಾವದಲ್ಲಿ ಒಟ್ಟಾಗಿ ಚಲಿಸುತ್ತಿರುವ ದೃಶ್ಯ ಕ್ಷಣ ಕಾಲ ಜನರನ್ನು ಭಾವನಾತ್ಮಕವಾಗಿ ಬೆಸೆಯುವಂತೆ ಮಾಡಿತ್ತು. ಈ ದೃಶ್ಯವನ್ನು ಬಿಬಿಸಿ ಮಾಧ್ಯಮವು "ಅತ್ಯಂತ ಹೃದಯಸ್ಪರ್ಶಿ  ದೃಶ್ಯ" ಎಂದು ಹೇಳಿದೆ. ಪ್ರಿನ್ಸೆಸ್ ಎನ್ನೆ ಅವರು ತಮ್ಮ ಉಡುಗೆಯಿಂದಾಗಿ ವಿಶೇಷವಾಗಿ ಇಲ್ಲಿ ಎದ್ದು ಕಾಣುತ್ತಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ಎನ್ನೆ
ರಾಣಿ ಎಲಿಜಬೆತ್ ಹಾಗೂ ರಾಜ್ ಫಿಲಿಪ್ ಅವರ ಎರಡನೇ ಹಾಗೂ ಏಕೈಕ ಮಗಳಾಗಿರುವ ಮತ್ತು ಎಡಿನ್ಬರ್ಗ್ ಪ್ರಾಂತ್ಯದ ಡ್ಯೂಕ್ ಆಗಿರುವ ಪ್ರಿನ್ಸೆಸ್ ಎನ್ನೆ ಅವರು ತಮ್ಮ ತಾಯಿಯ ಕಾಫಿನ್ ಜೊತೆ ಚಲಿಸುವಾಗ ರಾಯಲ್ ನೇವಿಯ ಸಮವಸ್ತ್ರವನ್ನು ತೊಟ್ಟು ಎಲ್ಲರೂ ಬೆರಗುಗೊಳ್ಳುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ, 72 ರ ಪ್ರಾಯದ ಎನ್ನೆ ಅವರು ಬ್ರಿಟಿಷ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಣ್ಣೊಬ್ಬಳು ರಾಣಿಯ ಕಾಫಿನ್ ಪಕ್ಕದಲ್ಲಿ ರಕ್ಷಕನಂತೆ ನಿಂತು ಸಹ ದಾಖಲೆ ಬರೆದರು. ಈ ಒಟ್ಟಾರೆ ಅಂತ್ಯಕ್ರಿಯೆ ಕಾರ್ಯಕ್ರಮವು ಸೆಪ್ಟೆಂಬರ್ 12 ರಂದು ಸ್ಕಾಟ್ ಲ್ಯಾಂಡಿನಲ್ಲಿ ನಡೆಯಿತು.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವಿದೆ. ಅದೇನೆಂದರೆ ಪ್ರಿನ್ಸೆಸ್ ಎನ್ನೆ ಅವರು ತಾವು ತಮ್ಮ ರಾಜಮನೆತನಕ್ಕೆ ಅನುಸಾರವಾಗಿ ನಡೆದುಕೊಳ್ಳುವಂತಹ ರೀತಿ. ಕೇವಲ ಈ ಒಂದು ಚಟುವಟಿಕೆ ಅಷ್ಟೇ ಅಲ್ಲ, ಎನ್ನೆ ಅವರು ಪ್ರತಿ ಬಾರಿ ರಾಜಮನೆತನದ ಯಾವುದೇ ಕಾರ್ಯಕ್ರಮಗಳು ನಡೆದಿದ್ದರೂ ಅದರಲ್ಲಿ ಅವರು ಸಮವಸ್ತ್ರಧಾರಿಯಾಗಿಯೇ ಉಪಸ್ಥಿತರಿರುತ್ತಿದ್ದರು. ಬಹುಶಃ ಈ ರೀತಿ ಮಾಡಿರುವ ಬ್ರಿಟಿಷ್ ರಾಜಮನೆತನದ ಏಕೈಕ ಮಹಿಳೆ ಅವರಾಗಿದ್ದಾರೆ ಎನ್ನಲಾಗುತ್ತದೆ.

ಇದನ್ನೂ ಓದಿ:  Diamond Necklace: ನಿಧನದವರೆಗೆ ಹೈದರಾಬಾದ್ ನಿಜಾಮರು ಕೊಟ್ಟಿದ್ದ ನೆಕ್ಲೇಸನ್ನೇ ಧರಿಸುತ್ತಿದ್ದ ರಾಣಿ ಎಲಿಜಬೆತ್, ಏನಿದರ ಸ್ಪೆಷಾಲಿಟಿ?

ರಾಣಿ ನಿಧನಕ್ಕೆ ವಿಶ್ವದಾದ್ಯಂತ ನಾಯಕರಿಂದ ಸಂತಾಪ 
ರಾಣಿ ಎಲಿಜಬೆತ್ ಅವರು, ಸೆಪ್ಟೆಂಬರ್ 8, 2022 ರಂದು ತಮ್ಮ ಬಲ್ಮೋರಲ್ ಅರಮನೆಯಲ್ಲಿ ನಿಧನರಾದರು. 96 ವರ್ಷದವರಾಗಿದ್ದ ಎಲಿಜಬೆತ್ ಅವರು ವಯೋಸಹಜ ಕಾರಣಗಳಿಂದ ಮೃತರಾಗಿದ್ದು ಅವರ ನಿಧನಕ್ಕೆ ವಿಶ್ವದಾದ್ಯಂತ ಎಲ್ಲ ನಾಯಕರಿಂದ ಸಂತಾಪದ ಸಂದೇಶಗಳು ಬಂದಿವೆ. ಇದೀಗ ಅವರ ಸಾವಿನ ನಂತರ ಅವರ ಕುಟುಂಬದ ಎಲ್ಲ ಸದಸ್ಯರು ಒಂದೆಡೆ ಸೇರಿ ಅವರಿಗೆ ಅಂತಿಮ ವಿದಾಯ ಕೊಟ್ಟಿರುವುದು ರಾಜಮನೆತನದ ಅಭಿಮಾನಿ ವರ್ಗದವರಲ್ಲಿ ತೃಪ್ತಿಯ ಭಾವನೆಯನ್ನುಂಟು ಮಾಡಿದೆ.
Published by:Ashwini Prabhu
First published: