ಸ್ಥೂಲಕಾಯತೆಯ ಸಮಸ್ಯೆಯನ್ನು ಪರಿಹಾರಿಸುವ ಸಲುವಾಗಿ ತನ್ನ ಹೊಸ ಯೋಜನೆಯ ಭಾಗವಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವವರಿಗೆ ಬ್ರಿಟಿಷ್ ಸರ್ಕಾರ ನಗದು ಪ್ರೋತ್ಸಾಹ, ಬೋನಸ್ ಮತ್ತು ರಿಯಾಯಿತಿ ಕೂಪನ್ಗಳನ್ನು ಒದಗಿಸಲು ಮುಂದಾಗಿದೆ ಎಮದು ವರದಿಗಳ ಮೂಲಕ ತಿಳಿದುಬಂದಿದೆ. ಅನಾರೋಗ್ಯಕರ ಆಹಾರವನ್ನು ತಡೆಯುವ ಸಲುವಾಗಿ ಹೆಚ್ಚಿನ ತರಕಾರಿಗಳು ಮತ್ತು ಹಣ್ಣುಗಳನ್ನು ತೆಗೆದುಕೊಳ್ಳುವ ಬ್ರಿಟಿಷ್ ನಾಗರಿಕರಿಗೆ ನಗದು ಪ್ರೋತ್ಸಾಹವನ್ನು ಬ್ರಿಟಿಷ್ ಸರ್ಕಾರವು ನೀಡಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ಆಂದೋಲನದ ಭಾಗವಾಗಿದ್ದಾರೆ ಮತ್ತು ತೂಕ ಇಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. ಸೂಪರ್ ಮಾರ್ಕೆಟ್ನಲ್ಲಿನ ಪ್ರತಿ ಮನೆಯ ಮಾಸಿಕ ವೆಚ್ಚವನ್ನು ಆ್ಯಪ್ ಮೂಲಕ ಸರ್ಕಾರ ವಿಶ್ಲೇಷಿಸುತ್ತದೆ ಮತ್ತು ಹೆಚ್ಚಿನ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವ ಮತ್ತು ಅನಾರೋಗ್ಯಕರ ಆಹಾರವನ್ನು ಕಡಿಮೆ ಮಾಡುವವರಿಗೆ ಬಹುಮಾನ ನೀಡಲಾಗುವುದು ಎಂದು ಸರ್ಕಾರವು ತಿಳಿಸಿದೆ.ಜನರು ಶಾಲೆಗೆ ಹೋಗುವಾಗ ಅಥವಾ ಕೆಲಸ ಸ್ಧಳಕ್ಕೆ ಹೋಗುವಾಗ ಯಾವುದೇ ವಾಹನಗಳನ್ನು ಬಳಸದೆ ನಡಗೆಯಲ್ಲಿ ಹೋಗುವವರನ್ನು ಸರ್ಕಾರವು ಟ್ರ್ಯಾಕ್ ಮಾಡುತ್ತದೆ ಮತ್ತು ಪ್ರತಿಫಲ ನೀಡುತ್ತದೆ.
ಆ್ಯಪ್ ಮೂಲಕ ಪ್ರೋತ್ಸಾಹಕಗಳನ್ನು “ಲಾಯಲ್ಟಿ ಪಾಯಿಂಟ್ಗಳು” ಎಂದು ಹಸ್ತಾಂತರಿಸಲಾಗುವುದು, ನಂತರ ಅದನ್ನು ರಿಯಾಯಿತಿಗಳು, ಉಚಿತ ಟಿಕೆಟ್ಗಳು ಮತ್ತು ಕ್ಯಾಶ್ ಬ್ಯಾಕ್ಗಳಾಗಿ ಪರಿವರ್ತಿಸಲಾಗುತ್ತದೆ. ಮುಂದಿನ ವರ್ಷ ಜನವರಿಯಿಂದ ಈ ಉಪಕ್ರಮವು ಪ್ರಾರಂಭವಾಗುತ್ತದೆ ಎಂದು ಸರ್ಕಾರವು ತಿಳಿಸಿದೆ. ವೈಟ್ಹಾಲ್ ಮೂಲವೊಂದು "ಡೈಲಿ ಟೆಲಿಗ್ರಾಫ್" ಗೆ ಹೀಗೆ ಹೇಳಿದೆ: "ಡೌನಿಂಗ್ ಸ್ಟ್ರೀಟ್ ಇದನ್ನು ಮಾಡುವ ಸಂಪೂರ್ಣ ತಂಡವನ್ನು ಹೊಂದಿದೆ. ನಾವು ಮೊದಲಿನಂತೆ ಮುಂದುವರಿಯಲು ಸಾಧ್ಯವಿಲ್ಲ ನಾವು ಈ ಕ್ರಮವನ್ನು ಕೈಗೊಳ್ಳಬೇಕು ಎಂದು ಬ್ರಿಟನ್ ಪ್ರಧಾನಿ ಹೇಳಿದ್ದಾರೆ. ನಾವು ಈಗ ಈ ಸಮಸ್ಯೆಯನ್ನು ಮುಖ್ಯವಾಗಿ ಪರಿಹರಿಸಬೇಕು."ಎಂದು ಒತ್ತಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಸ್ವತಃ ಅಭಿಯಾನದ ನಾಯಕರಗುವಾ ನಿರೀಕ್ಷೆಯಿದೆ ಏಕೆಂದರೆ ಅವರು ಬಹಳ ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ, ವಿಶೇಷವಾಗಿ ಅವರು ಕರೋನವೈರಸ್ ಸೋಂಕಿಗೆ ಒಳಗಾದ ನಂತರ ಈ ಬದಲಾವಣೆಯಾಗಿದೆ ಎಂದು ಅಲ್ಲಿನ ವರದಿಗಳು ತಿಳಿಸಿವೆ.
ಗ್ರೇಟ್ ಬ್ರಿಟನ್ ಸ್ಥೂಲಕಾಯದಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ, ಅಧ್ಯಯನಗಳು ದೇಶದ ಮೂರು ವಯಸ್ಕರಲ್ಲಿ ಇಬ್ಬರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದಬಂದಿದೆ. 2012 ರಲ್ಲಿ ಲಂಡನ್ ಒಲಿಂಪಿಕ್ಸ್ ನಡೆಸಲು ಸಹಾಯ ಮಾಡಿದ ಕೀತ್ ಮಿಲ್ಸ್ ಅವರನ್ನು ತಮ್ಮ ಹೊಸ ಅಧ್ಯನದ ತಂಡಕ್ಕೆ ಕರೆತಂದಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ. ಸ್ಥೂಲಕಾಯದ ಪ್ರಮಾಣವನ್ನು ಕೆಲವೇ ದಿನಗಳಲ್ಲಿ ತೀವ್ರವಾಗಿ ಕಡಿಮೆ ಮಾಡಬಹುದು ಎಂದು ಸರ್ಕಾರ ಭರವಸೆ ಮತ್ತು ಆಶಾವಾದ ಹೊಂದಿದೆ. ಆರೋಗ್ಯಕರ ಸರ್ಕಾರದ ಕಡೆಗೆ ಇದು ಉತ್ತಮ ಹೆಜ್ಜೆ ಎಂದು ನಾವು ಹೇಳಬಹುದು ಮತ್ತು ಇದನ್ನು ನಾವು ಅನುಸರಿಸಬೇಕು ಬಹಳ ಪ್ರಯೋಜನಕಾರಿ ಹಾಗೂ ಇದು ತುಂಬಾ ಸ್ಫೂರ್ತಿದಾಯಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ