• Home
 • »
 • News
 • »
 • national-international
 • »
 • Britain Economy: ದೇಶದ ಆರ್ಥಿಕತೆಗೆ ಪೆಟ್ಟು ನೀಡಿದ ಬ್ರಿಟನ್‌ ತೆರಿಗೆ ಕಡಿತ ನೀತಿ ರದ್ದು

Britain Economy: ದೇಶದ ಆರ್ಥಿಕತೆಗೆ ಪೆಟ್ಟು ನೀಡಿದ ಬ್ರಿಟನ್‌ ತೆರಿಗೆ ಕಡಿತ ನೀತಿ ರದ್ದು

ಈ ನೀತಿ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ವಿರೋಧಗಳು ಕೇಳಿ ಬಂದವು. ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆ ಇದೀಗ ತಮ್ಮ ಪ್ರಸ್ತಾವವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ.

ಈ ನೀತಿ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ವಿರೋಧಗಳು ಕೇಳಿ ಬಂದವು. ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆ ಇದೀಗ ತಮ್ಮ ಪ್ರಸ್ತಾವವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ.

ಈ ನೀತಿ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ವಿರೋಧಗಳು ಕೇಳಿ ಬಂದವು. ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆ ಇದೀಗ ತಮ್ಮ ಪ್ರಸ್ತಾವವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ.

 • Share this:

  ಯುಕೆಯಲ್ಲಿ ಭಾರಿ ವಿವಾದಕ್ಕೆ ಎಡೆಮಾಡಿದ್ದ ತೆರಿಗೆ ಪದ್ಧತಿಯನ್ನು, ಪರಿಚಯಿಸಿದ ಕೆಲವೇ ದಿನಗಳಲ್ಲಿ ರದ್ದು ಮಾಡಲಾಗಿದೆ. ಖಜಾನೆಯ ಕುಲಪತಿ ಕ್ವಾಸಿ ಕ್ವಾರ್ಟೆಂಗ್ ಸೋಮವಾರದಂದು ಹೊಸದಾಗಿ ಪರಿಚಯಿಸಿದ ತೆರಿಗೆ ನೀತಿಯನ್ನು ವಾಪಸ್‌ ಪಡೆಯುವುದರ ಬಗ್ಗೆ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.


  ಇತ್ತೀಚಿಗಷ್ಟೇ ಯುಕೆಯ ನೂತನ ಪ್ರಧಾನಿಯಾಗಿ ಲೀಜ್ ಟ್ರಸ್ ಅವರು ಅಧಿಕಾರವಹಿಸಿಕೊಂಡರು. ಇವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶ್ರೀಮಂತರ ತೆರಿಗೆಗಳಲ್ಲಿ ಭಾರಿ ಕಡಿತ ಘೋಷಿಸಿದರು. ಈ ನೀತಿ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ವಿರೋಧಗಳು ಕೇಳಿ ಬಂದವು. ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆ ಇದೀಗ ತಮ್ಮ ಪ್ರಸ್ತಾವವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ.


  ಹೊಸ ತೆರಿಗೆ ಕಡಿತ ನೀತಿ ಏನಾಗಿತ್ತು?
  ವರ್ಷಕ್ಕೆ 1,50,000 ಪೌಂಡ್ಸ್‌ ಗಿಂತ(1.46 ಕೋಟಿ ರೂ.) ಹೆಚ್ಚು ಆದಾಯವಿರುವವರ ತೆರಿಗೆಯನ್ನು ಕಡಿತಗೊಳಿಸುವುದಾಗಿ ಲಿಜ್‌ ಟ್ರಸ್‌ ಸರಕಾರ ಸೆ.23ರಂದು ಘೋಷಿಸಿತ್ತು. ಮಿನಿ ಬಜೆಟ್ ಎಂದು ಕರೆಯಲ್ಪಟ್ಟ ಈ ನೀತಿ ನಂತರ ದೇಶದಲ್ಲಿ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಿತು. ಸರಕಾರದ ಈ ನಡೆಯಿಂದಾಗಿಯೇ ಯುಕೆ ಮಾರುಕಟ್ಟೆ ತನ್ನ ಸ್ಥಿರತೆಯನ್ನು ಕಳೆದುಕೊಂಡಿತಲ್ಲದೆ ದೇಶದ ಕರೆನ್ಸಿ ಪೌಂಡ್ ಅಸಾಧಾರಣವಾಗಿ ಕುಸಿಯಿತು. ಪೌಂಡುಗಳು ಲೆಕ್ಕವಿಲ್ಲದಂತೆ ಕುಸಿಯುತ್ತಿದ್ದರೆ ದೀರ್ಘಾವಧಿಯಲ್ಲಿ ಲಾಭ ನೀಡುವ ಆರ್ಥಿಕ ಬಾಂಡ್ ಗಳು ಸಾಕಷ್ಟು ಕುಸಿದಿದ್ದು ಯುಕೆ ಸರ್ಕಾರಕ್ಕೆ ಈ ಬೆಳವಣಿಗೆ ತಲೆನೋವಾಗಿ ಪರಿಣಮಿಸಿತ್ತು.


  ಇದನ್ನು ಓದಿ:  ಸಲ್ಲು ಭಾಯ್​ ಕಥೆ ಮುಗಿಸೋಕೆ ಬಂದಿದ್ದ ಅಪ್ರಾಪ್ತ, ಬಾಲಾಪರಾಧಿ ಬಾಯ್ಬಿಟ್ಟ ಸತ್ಯ ಕಂಡು ಖಾಕಿ ಶಾಕ್​!


  ಅತ್ತ ದೇಶದಲ್ಲಿ ನಡೆದ ರಾಜಕೀಯ ಅಲ್ಲೋಲ-ಕಲ್ಲೋಲಗಳು, ಹಣದುಬ್ಬರ ಹಾಗೂ ಹೆಚ್ಚಾಗುತ್ತಿರುವ ಬಡ್ಡಿದರಗಳು ಬ್ರಿಟನ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದ್ದರೆ, ಇತ್ತ ಶ್ರೀಮಂತರ ತೆರಿಗೆಗಳಲ್ಲಿ ಭಾರಿ ಕಡಿತದಂತ ಮಿನಿ ಬಜೆಟ್‌ ಬ್ರಿಟನ್‌ ಅನ್ನು ಜರ್ಜರಿತವಾಗಿಸಿತು. ಹೀಗಾಗಿ ಎಲ್ಲಾ ಅಹವಾಲು, ವಿರೋಧ, ಆರ್ಥಿಕ ಸಮಸ್ಯೆ ಎದುರಿಸಿದ ನಂತರ ಬ್ರಿಟನ್‌ನಲ್ಲಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ಲಿಜ್‌ ಟ್ರಸ್‌ ನೇತೃತ್ವದ ಸರಕಾರ ತೆರಿಗೆ ಕಡಿತ ಯೋಜನೆಯನ್ನು ಪರಿಚಯಿಸಿದ ಕೆಲವೇ ದಿನಗಳಲ್ಲಿ ಅದನ್ನು ವಾಪಸು ಪಡೆದುಕೊಂಡಿತು.


  45% ಆದಾಯ ತೆರಿಗೆಯನ್ನು ರದ್ದುಗೊಳಿಸಿ ಟ್ವೀಟ್
  ಈ ಬಗ್ಗೆ ಟ್ವೀಟ್‌ ಮಾಡಿದ ಖಜಾನೆಯ ಕುಲಪತಿ ಕ್ವಾಸಿ ಕ್ವಾರ್ಟೆಂಗ್ "ನಾವು ಈ ಮಿನಿ ಬಜೆಟ್‌ ಗೆ ವಿರೋಧಗಳನ್ನು ಪಡೆದುಕೊಂಡಿದ್ದೇವೆ ಮತ್ತು ನಾವು ಆಲಿಸಿದ್ದೇವೆ" ಎಂದು ತಮ್ಮ ಟ್ವೀಟ್‌ನೊಂದಿಗೆ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಅವರು 45% ಆದಾಯ ತೆರಿಗೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ‌


  ಈ ಪ್ರಕಟಣೆಯ ಮೂಲಕ ಬ್ರಿಟಿಷ್ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರ ಆಡಳಿತದ ಮೊದಲ ಯು-ಟರ್ನ್ ಆಗಿದೆ.ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಗ್ರಾಂಟ್ ಶಾಪ್ಸ್ ಮತ್ತು ಮೈಕೆಲ್ ಗೊವ್ ಅವರು ಸೆಪ್ಟೆಂಬರ್ 23 ರಂದು ಕ್ವಾರ್ಟೆಂಗ್ ಅವರ ವಿವಾದಾತ್ಮಕ ಮಿನಿ-ಬಜೆಟ್‌ನಲ್ಲಿ ಅನಾವರಣಗೊಳಿಸಿದ ನಿಧಿಯಿಲ್ಲದ ತೆರಿಗೆ ಕಡಿತದ ಬಗ್ಗೆ ವಿರೋಧ ವ್ಯಕ್ತಪಡಿಸಿದ ನಂತರವೂ ಈ ನೀತಿಯನ್ನು ಜಾರಿಗೊಳಿಸಲಾಗಿತ್ತು. ಕೇವಲ ಒಂದು ತಿಂಗಳ ಕಾಲ ಅಧಿಕಾರದಲ್ಲಿರುವ ಸರ್ಕಾರಕ್ಕೆ ಇದು ಪ್ರಮುಖ ಹಿಮ್ಮುಖವಾಗಿದೆ ಎನ್ನಬಹುದು.


  ಇದನ್ನು ಓದಿ: ಭಾರತ ಪ್ರವಾಸ ರದ್ದುಗೊಳಿಸಿದ ಬ್ರಿಟಿಷ್ ಹಾಲಿಡೇ ಮೇಕರ್‌ಗಳು, ಕಾರಣ ಇಲ್ಲಿದೆ ನೋಡಿ


  "ಆರ್ಥಿಕತೆ ಹೆಚ್ಚಿಸಿಸುವುದೇ ನಮ್ಮ ಸರ್ಕಾರದ ಗುರಿ"
  ಬ್ರಿಟೀಷ್ ಪ್ರಧಾನ ಮಂತ್ರಿ ಲಿಜ್ ಟ್ರಸ್ ಸೋಮವಾರದಂದು, ತನ್ನ ಹಣಕಾಸು ಸಚಿವರು ಅತ್ಯಧಿಕ ಆದಾಯ ತೆರಿಗೆಯನ್ನು ಕಡಿತಗೊಳಿಸುವ ಯೋಜನೆಗಳನ್ನು ರದ್ದು ಮಾಡಿದ ನಂತರ “ಆರ್ಥಿಕತೆ ಹೆಚ್ಚಿಸಿ, ಜನತೆಗೆ ಉತ್ತಮ ಮಟ್ಟದ ಸಾರ್ವಜನಿಕ ಸೇವೆ ಕೊಡುವುದು, ವೇತನ ಹೆಚ್ಚಿಸುವುದು ಮತ್ತು ರಾಷ್ಟ್ರಾದ್ಯಂತ ಉದ್ಯೋಗ ಅವಕಾಶ ಸೃಷ್ಟಿ ಸರಕಾರದ ಗುರಿ’ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತು ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರ ತೆರಿಗೆ ನೀತಿಯನ್ನು ರದ್ದುಪಡಿಸಿ ಮಾಡಿದ ಟ್ವೀಟ್‌ ಅನ್ನು ಸಹ ಮರುಹಂಚಿಕೊಂಡಿದ್ದಾರೆ.


  ದೇಶಕ್ಕೆ ಪೆಟ್ಟು ನೀಡಿದ್ದ ತೆರಿಗೆ ಕಡಿತ
  ಯುಕೆಯ ತೆರಿಗೆ ಕಡಿತದ ಯೋಜನೆಗಳು ಕಳೆದ ವಾರ ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿದೆ. ದೇಶದ ಆರ್ಥಿಕ ಸ್ಥಿತಿಯು ಹೀನಾಯವಾಗುತ್ತಿರುವುದನ್ನು ಕಂಡು ಯುಕೆ ಅದನ್ನು ಹೇಗಾದರೂ ಮಾಡಿ ನಿಯಂತ್ರಿಸುವ ಪ್ರಯತ್ನದಲ್ಲಿ ಕೆಲ ಅಸಾಧಾರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಈ ಬೆಳವಣಿಗೆಯು ಯುಎಸ್ ಡಾಲರ್ ಹೆಚ್ಚಳಕ್ಕೆ ಕಾರಣವಾಗಿದೆ. ಲಂಡನ್ ಮುಂಚೆಯಿಂದಲೂ ತನ್ನ ವ್ಯಾಪಾರ ವ್ಯವಹಾರಗಳನ್ನು ಯುಎಸ್ ಡಾಲರ್-ಸ್ಟರ್ಲಿಂಗ್ ಜೊತೆ ನಡೆಸುತ್ತ ಬಂದಿದೆ ಹಾಗೂ ಈ ಜೊತೆಯನ್ನು ಜಗತ್ತಿನ ಮೂರನೇ ಪ್ರಭಾವಿ ಕರೆನ್ಸಿ ಜೊತೆ ಎನ್ನಲಾಗುತ್ತದೆ. ಆದರೆ, ಈಗ ಪರಿಸ್ಥಿತಿ ಸಾಕಷ್ಟು ದುರ್ಬಲವಾಗಿದೆ. ಸ್ಟರ್ಲಿಂಗ್ ಸಾರ್ವಕಾಲಿಕ ಕನಿಷ್ಠ $1.0327 ಅನ್ನು ತಲುಪಿದೆ.

  Published by:Seema R
  First published: