Boris Johnson: "ಮೋದಿ ನನ್ನ ಸ್ಪೆಷಲ್ ಫ್ರೆಂಡ್" ಎಂದ ಬ್ರಿಟನ್ ಪ್ರಧಾನಿ, ಭಾರತದ ಕೋವಿಡ್ ಲಸಿಕೆಗೆ ಬೋರಿಸ್ ಜಾನ್ಸನ್ ಮೆಚ್ಚುಗೆ

ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. "ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಖಾಸ್ ದೋಸ್ತ್ (ವಿಶೇಷ ಸ್ನೇಹಿತ)" ಅಂತ ಹೇಳಿದ್ದಾರೆ.

ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್

ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್

  • Share this:
ನವದೆಹಲಿ: ಬ್ರಿಟನ್‌ ಪ್ರಧಾನಿ (Prime Minister of Britain) ಬೋರಿಸ್‌ ಜಾನ್ಸನ್‌ (Boris Johnson) ಭಾರತ (India) ಪ್ರವಾಸದಲ್ಲಿ (Tour) ಇದ್ದಾರೆ. ಬ್ರಿಟನ್ ಪ್ರಧಾನಿಯಾದ ಬಳಿಕ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಭಾರತದೊಂದಿಗಿನ ಸಂಬಂಧ (Relationship) ಉತ್ತಮ ಪಡಿಸಿಕೊಳ್ಳಲು ಬದ್ಧ ಅಂತ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇಂದು ನವದೆಹಲಿಯಲ್ಲಿ (New Delhi) ಸುದೀರ್ಘ ಮಾತುಕತೆ ನಡೆಸಿದರು. ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಬಳಿಕ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೋರಿಸ್ ಜಾನ್ಸನ್, “ನರೇಂದ್ರ ಮೋದಿ ನನ್ನ ಸ್ಪೆಷಲ್ (Special) ಹಾಗೂ ಕ್ಲೋಸ್ ಫ್ರೆಂಡ್ (Close Friend) ” ಅಂತ ಹೇಳಿದ್ರು. ಭಾರತದ ಕೋವಿಡ್ ವ್ಯಾಕ್ಸಿನ್ (Covid Vaccine) ಬಗ್ಗೆಯೂ ಬ್ರಿಟನ್ ಪ್ರಧಾನಿ ಮೆಚ್ಚುಗೆಯ ಮಾತನ್ನಾಡಿದ್ರು.

 ಮೋದಿ ನನ್ನ ಸ್ಪೆಷಲ್ ಫ್ರೆಂಡ್‌ ಎಂದ ಬೋರಿಕ್ ಜಾನ್ಸನ್

ಭಾರತದಲ್ಲಿ ತಮ್ಮ ಎರಡು ದಿನಗಳ ಭೇಟಿಯ ಎರಡನೇ ದಿನವಾದ ಶುಕ್ರವಾರ ಬೋರಿಸ್ ಜಾನ್ಸನ್ ಅವರು ತಮ್ಮ ಗುಜರಾತ್‌ನಲ್ಲಿ ಭವ್ಯ ಸ್ವಾಗತ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. "ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಖಾಸ್ ದೋಸ್ತ್ (ವಿಶೇಷ ಸ್ನೇಹಿತ) ಅಂತ ಹೊಗಳಿದ್ದಾರೆ.

ಸಚಿನ್, ಅಮಿತಾಭ್ ನೆನೆಸಿಕೊಂಡ ಬ್ರಿಟನ್ ಪ್ರಧಾನಿ

ನಾನು ಎರಡು ದಿನ ಭಾರತದಲ್ಲಿ ಅದ್ಭುತ ಅನುಭವ ಪಡೆಯಲಿದ್ದೇನೆ. ಗುಜರಾತ್‌ನಲ್ಲಂತೂ ನನಗೆ ಅದ್ಭುತವಾದ ಸ್ವಾಗತ ಸಿಕ್ಕಿತು. ನನಗೆ ಸಚಿನ್ ತೆಂಡೂಲ್ಕರ್‌ನಂತೆ ಅನಿಸಿತು. ನನ್ನ ಮುಖವು ಅಮಿತಾಭ್ ಬಚ್ಚನ್ ಅವರಂತಹ ದೊಡ್ಡ ಕಟೌಟ್‌ಗಳಲ್ಲಿತ್ತು. ಅದು ಅದ್ಭುತವಾಗಿತ್ತು" ಅಂತ ಬೋರಿಕ್ ಜಾನ್ಸನ್ ಹೇಳಿದ್ದಾರೆ.

ಇದನ್ನೂ ಓದಿ: AYUSH Visa: ವಿದೇಶಿಗರು ಭಾರತದ ಸ್ಥಳೀಯ ಚಿಕಿತ್ಸೆ ಪಡೆಯಲು ಆಯುಷ್ ವೀಸಾ ಘೋಷಿಸಿದ ಪ್ರಧಾನಿ ಮೋದಿ

ಭಾರತದ ಕೋವಿಡ್ ಲಸಿಕೆ ಬಗ್ಗೆ ಬ್ರಿಟನ್ ಪ್ರಧಾನಿ ಶ್ಲಾಘನೆ

ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ COVID-19 ಲಸಿಕೆಯನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಈ ಲಸಿಕೆ ಬಗ್ಗೆಯೂ ಅವರು ಮೆಚ್ಚುಗೆಯ ಮಾತಗಳನ್ನು ಆಡಿದ್ದಾರೆ.

ನನ್ನ ತೋಳುಗಳಲ್ಲಿ ಭಾರತದ ಲಸಿಕೆ ಇದೆ

ಭಾರತವನ್ನು ವಿಶ್ವದ ಫಾರ್ಮಸಿ ಎಂದು ಶ್ಲಾಘಿಸಿದ ಜಾನ್ಸನ್, ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ, “ನನ್ನ ತೋಳುಗಳಲ್ಲಿ ಭಾರತೀಯ ಲಸಿಕೆ ಇದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ ಮತ್ತು ಅದು ಉತ್ತಮವಾಗಿ ಕೆಲಸ ಮಾಡಿದೆ. ಅದರಿಂದಾಗಿಯೇ ನಾನು ಚೆನ್ನಾಗಿದ್ದೇನೆ. ಭಾರತಕ್ಕೆ ಅನೇಕ ಧನ್ಯವಾದಗಳು” ಅಂತ ಬೋರಿಕ್ ಜಾನ್ಸನ್ ಕೃತಜ್ಞತೆ ಸಲ್ಲಿಸಿದರು.

 ಅನೇಕ ಕ್ಷೇತ್ರಗಳಲ್ಲಿ ಬ್ರಿಟನ್-ಭಾರತ ಜಂಟಿ ಸಹಭಾಗಿತ್ವ

ಮೇ 2021 ರಲ್ಲಿ, ಭಾರತ ಮತ್ತು ಯುಕೆ ಆರೋಗ್ಯದಲ್ಲಿ ತಮ್ಮ ಸಹಕಾರವನ್ನು ವಿಸ್ತರಿಸಲು ವಾಗ್ದಾನ ಮಾಡಿದ್ದು, ಇದು ಏಪ್ರಿಲ್ 2022 ರ ವೇಳೆಗೆ ಲಸಿಕೆಯನ್ನು ಖಾತರಿಪಡಿಸಲು ಮತ್ತು ಸಮಾನವಾಗಿ ಪೂರೈಸಲು ಸಹಾಯ ಮಾಡುತ್ತದೆ. ಇದನ್ನು ಭಾರತ-ಯುಕೆ ಶೃಂಗಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: PM ನರೇಂದ್ರ ಮೋದಿ ಅವರಿಗೆ ಪ್ರಥಮ ವರ್ಷದ 'ಲತಾ ದೀನನಾಥ ಮಂಗೇಶ್ಕರ್' ಪ್ರಶಸ್ತಿ; ಇನ್ನೂ ಹಲವು ಸಾಧಕರಿಗೆ ಗೌರವ

ಈ ಬಗ್ಗೆ ಮಾತನಾಡಿದ ಬೋರಿಕ್ ಜಾನ್ಸನ್, "ಹೊಸ ಫೈಟರ್ ಜೆಟ್ ತಂತ್ರಜ್ಞಾನ, ಹೆಲಿಕಾಪ್ಟರ್ ಮತ್ತು ಸಮುದ್ರ ತಳದಲ್ಲಿನ ಯುದ್ಧ ಪ್ರದೇಶಗಳಲ್ಲಿನ ಸಂಯೋಜನೆಗಳು ಸೇರಿದಂತೆ ಇಂಡೋ ಪೆಸಿಫಿಕ್ ಪ್ರದೇಶದಲ್ಲಿನ ಭದ್ರತೆಯನ್ನು ವೃದ್ಧಿಸಲು ಭಾರತದ ಜತೆ ಬ್ರಿಟನ್ ಕೆಲಸ ಮಾಡಲಿದೆ. ಶುದ್ಧ ಮತ್ತು ನವೀಕರಿಸಬಹುದಾದ ಇಂಧನಗಳಲ್ಲಿ ಹೊಸ ಸಹಕಾರದ ಬಗ್ಗೆ ಚರ್ಚೆ ನಡೆದಿದೆ" ಎಂದು ಹೇಳಿದ್ದಾರೆ.
Published by:Annappa Achari
First published: