Britain Queen Elizabeth Death: ಬ್ರಿಟನ್ ರಾಣಿ ಎಲಿಜಬೆತ್ II ನಿಧನ; ಮುಂದಿನ ವಾರಸುದಾರ ಯಾರು?

Queen Elizabeth II Passes Away: ಆರೋಗ್ಯದ ಕಾರಣಗಳಿಂದ ಪ್ರಮುಖ ಸಭೆಗಳನ್ನು ಸಹ ಬ್ರಿಟನ್ ರಾಣಿ ಎಲಿಜಬೆತ್ II ಮುಂದೂಡಿದ್ದರು.

ಎಲಿಜಬೆತ್ II

ಎಲಿಜಬೆತ್ II

 • Share this:
  ಬ್ರಿಟನ್ ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ. ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಖ್ಯಾತಿ ಪಡೆದಿದ್ದ ಅವರು ತಮ್ಮ 96 ನೇ ವಯಸ್ಸಿನಲ್ಲಿ (Britain Queen Elizabeth Death) ನಿಧನರಾಗಿದ್ದಾರೆ.  ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ ಕ್ವೀನ್ ಎಲಿಜಬೆತ್ (Britain Queen Elizabeth ) ಮನ್ನಣೆ ಗಳಿಸಿದ್ದರು. ಅಲ್ಲದೇ 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಮ್ ಆಡಳಿತದ ಪತನ ಮತ್ತು ಅಂತರ್ಜಾಲ ಯುಗದ ಆರಂಭ ಉನ್ನತಿಗಳಂತಹ ಮಹತ್ವದ ಜಾಗತಿಕ ಬದಲಾವಣೆಗಳಿಗೆ ಅವರು ಸಾಕ್ಷಿಯಾಗಿದ್ದರು.  

  ರಾಣಿ ಎಲಿಜಬೆತ್ II 1947 ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಅವರು ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

  ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳ ತುಂಬು ಕುಟುಂಬ
  ರಾಣಿ ಎಲಿಜಬೆತ್ II ಬ್ರಿಟಿಷರ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳಿದ ರಾಣಿ ಎಂಬ ಕಾರಣಕ್ಕೆ ಇನ್ನಷ್ಟು ಮಹತ್ವ ಗಳಿಸಿದ್ದರು. ಅವರಿಗೆ ನಾಲ್ಕು ಮಕ್ಕಳು, ಎಂಟು ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳು ಇದ್ದರು.  ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸೆಸ್ ಅನ್ನಿ, ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್ರಾಣಿ ಎಲಿಜಬೆತ್ ಅವರ ಮಕ್ಕಳು.

  ಯಾರಾಗ್ತಾರೆ ವಾರಸುದಾರ?
  ಕ್ವೀನ್ ಎಲಿಜಬೆತ್ II ರ ನಂತ  ಅವರ ಮೊದಲ ಮಗ ಚಾರ್ಲ್ಸ್ ರಾಜನಾಗುತ್ತಾರೆ. ರಾಜಮನೆತನದ ವೆಬ್‌ಸೈಟ್‌ನ ಪ್ರಕಾರ ರಾಜವಂಶದ ಉತ್ತರಾಧಿಕಾರವು ವಂಶಸ್ಥರ ಮೂಲಕ ಮಾತ್ರವಲ್ಲದೆ ಸಂಸದೀಯ ಶಾಸನದಿಂದಲೂ ನಿಯಂತ್ರಿಸಲ್ಪಡುತ್ತದೆ.

  ಇದನ್ನೂ ಓದಿ: Explained: ಇನ್ಮುಂದೆ ರಾಜಪಥ ಅಲ್ಲ, ಕರ್ತವ್ಯ ಪಥ; ಏನೆಲ್ಲ ಬದಲಾವಣೆ ಆಗಲಿದೆ?

  ಸಂಜೆಯೇ ರಾಣಿಯ ಆರೊಗ್ಯದ ಕುರಿತು ಮಹತ್ವದ ಅಪ್​ಡೇಟ್ ಕೊಟ್ಟಿದ್ದ ಅರಮನೆ
  ಬ್ರಿಟನ್ ರಾಣಿ ಎಲಿಜಬೆತ್ II ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಇಂದು ಸಂಜೆ ವರದಿಯಾಗಿತ್ತು. ವೈದ್ಯರು ಬ್ರಿಟನ್ ರಾಣಿ ಎಲಿಜಬೆತ್ II ಅವರ ಆರೋಗ್ಯದ ಕುರಿತು ಚಿಂತಿತರಾಗಿದ್ದಾರೆ ಎಂದು ಅಧಿಕೃತ ಮಾಹಿತಿಯಲ್ಲಿ ಹೊರಬಿದ್ದಿತ್ತು.  ಇದನ್ನೂ ಓದಿ: Bharat Jodo Yatra: ಕಾಂಗ್ರೆಸ್ ಮತ್ತೆ ಎದ್ದು ಬರಲಿದೆ; ವಿದೇಶದಿಂದ ಸೋನಿಯಾ ಗಾಂಧಿ ವ್ಯಾಖ್ಯಾನ

  ಅವರ ಆರೋಗ್ಯದ (Queen Elizabeth II Health Update) ಕಾರಣಗಳಿಂದ ಪ್ರಮುಖ ಸಭೆಗಳನ್ನು ಸಹ ಬ್ರಿಟನ್ ರಾಣಿ ಎಲಿಜಬೆತ್ II ಮುಂದೂಡಿದ್ದರು. ಆದರೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಅರಮನೆಯ ಮೂಲಗಳು ಖಚಿತಪಡಿಸಿವೆ.

  ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಬ್ರಿಟನ್​ನಲ್ಲಿ 10 ದಿನಗಳ ರಾಷ್ಟ್ರಿಯ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ.
  Published by:guruganesh bhat
  First published: