HOME » NEWS » National-international » BRITAIN PRINCESS BEATRICE A NEW MOM TO ROYAL FAMILY STG SESR

ರಾಜಕುಮಾರಿ ಬಿಯಾಟ್ರಿಸ್​​​ ನಿಂದ ಸಂತಸದಲ್ಲಿದೆ ಬ್ರಿಟನ್​ ರಾಜಮನೆತನ; ಈಕೆ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ​​

ರಾಜಕುಮಾರಿ ಬಿಯಾಟ್ರಿಸ್​​ ಬ್ರಿಟಿಷ್​​ ರಾಯಲ್​​ ಫ್ಯಾಮಿಲಿಯ ಸದಸ್ಯೆಯಾಗಿದ್ದಾರೆ.

news18-kannada
Updated:May 31, 2021, 10:08 PM IST
ರಾಜಕುಮಾರಿ ಬಿಯಾಟ್ರಿಸ್​​​ ನಿಂದ ಸಂತಸದಲ್ಲಿದೆ ಬ್ರಿಟನ್​ ರಾಜಮನೆತನ; ಈಕೆ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ​​
ಬಿಯಾಟ್ರಿಸ್
  • Share this:

ರಾಯಲ್​​ ಫ್ಯಾಮಿಲಿಯ ಡ್ಯೂಕ್ ಎಡಿನ್​ಬರ್ಗ್​ ನಿಧನದ ಬಳಿಕ ಸಂತಸದ ಸುದ್ದಿ ಹೊರಬಿದ್ದಿದೆ. ರಾಯಲ್​ ಕುಟುಂಬಕ್ಕೆ ಹೊಸ ಜೀವದ ಆಗಮನದ ಸುದ್ದಿ ಖುಷಿ ತಂದಿದೆ. ಈಗಾಗಲೇ ಎರಡೂ ಕುಟುಂಬಗಳಿಗೂ ರಾಣಿ ಮಾಹಿತಿ ನೀಡಿದ್ದಾರೆ. ಇದರಿಂದ ಎರಡೂ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ.


ರಾಜಕುಮಾರಿ ಬಿಯಾಟ್ರಿಸ್​​ ಬ್ರಿಟಿಷ್​​ ರಾಯಲ್​​ ಫ್ಯಾಮಿಲಿಯ ಸದಸ್ಯೆಯಾಗಿದ್ದಾರೆ. ಪ್ರಿನ್ಸ್​​ ಆಂಡ್ರ್ಯೂ ಮತ್ತು ಸಾರಾ ಅವರಿಗಿಂತ ಹಿರಿಯರಾಗಿದ್ದಾರೆ. ಬ್ರಿಟಿಷ್​ ಸಿಂಹಾಸನದ ಅನುಕ್ರಮದಲ್ಲಿ ಬಿಯಾಟ್ರಿಸ್​​ ಒಂಬತ್ತನೆಯವರು.ಇನ್ನೂ ರಾಜಕುಮಾರಿ ಬೀಟ್​ರೈಸ್​​ ಬಗ್ಗೆ ತಿಳಿದುಕೊಳ್ಳಲೇಬೇಕಾದ ಹತ್ತು ಆಸಕ್ತಿಕರ ಸಂಗತಿಗಳು ಇಲ್ಲಿವೆ.1. ರಾಜಕುಮಾರಿ ಬಿಯಾಟ್ರಿಸ್​​ ಲಂಡನ್​​ನಲ್ಲಿ ಜನಿಸಿದರು. ಅಸ್ಕಾಟ್​​ನಲ್ಲಿ ಸೇಂಟ್​​ ಜಾರ್ಜ್​​ ಶಾಲೆಯಲ್ಲಿ ವ್ಯಾಸಂಗ ಮುಗಿಸಿದ್ದಾರೆ. ಗೋಲ್ಡ್​ಸ್ಮಿತ್​ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.


2. ಬಿಯಾಟ್ರಿಸ್ ಅವರು ಅಫಿನಿಟಿ ಸಾಫ್ಟ್​​ವೇರ್​​ ಕಂಪನಿಯ ಕಾರ್ಯತಂತ್ರದ ಉಪಾಧ್ಯಕ್ಷರು. ಇದಕ್ಕೂ ಮುನ್ನ ವಿದೇಶಾಂಗ ಕಚೇರಿ ಮತ್ತು ಸೋನಿ ಪಿಕ್ಚರ್ಸ್​ನಲ್ಲಿ ಕೆಲಸ ನಿರ್ವಹಿಸಿದ್ದರು. ವೃತ್ತಿ ಜೀವನದಲ್ಲಿ ಬಿಯಾಟ್ರಿಸ್​​ ಯಾರ್ಕ್​ ಎಂದೇ ಖ್ಯಾತಿ ಪಡೆದಿದ್ದಾರೆ.


3. ರಾಜಕುಮಾರಿ ವೈಯಕ್ತಿಕ ಮಟ್ಟದಲ್ಲಿ ಬಹಳಷ್ಟು ಸಾಮಾಜಿಕ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದ್ದಾರೆ. ಟೀನೇಜ್ ಕ್ಯಾನ್ಸರ್ ಟ್ರಸ್ಟ್ ಮತ್ತು ಔಟ್​ವರ್ಡ್​​ ಬೌಂಡ್ ಇನ್ನೂ ಎರಡು ಸಂಸ್ಥೆಯೊಟ್ಟಿಗಿದ್ದಾರೆ. ಜೊತೆಗೆ ಲಾಭರಹಿತ ಸಂಸ್ಥೆ ಕೈರೋಸ್ ಸೊಸೈಟಿಯ ಬೆಂಬಲಿಗರು ಹೌದು.


4. ಬಿಯಾಟ್ರಿಸ್​ 2008 ರಲ್ಲಿ ಸೆಲ್ಫ್‌ ರಿಡ್ಜಸ್‌ನಲ್ಲಿ ಸೇಲ್ಸ್​​​ ಸಹಾಯಕರಾಗಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಅವರು ಫೈನಾನ್ಷಿಯಲ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ಕೆಲಸ ಮಾಡಲು ಬಹಳ ಆಸಕ್ತರಾಗಿದ್ದರು.


5. 2009 ರಲ್ಲಿ, ದಿ ಯಂಗ್ ವಿಕ್ಟೋರಿಯಾ, ಸಾಕ್ಷ್ಯಚಿತ್ರವಲ್ಲದ ಚಲನಚಿತ್ರದಲ್ಲಿ ಕಾಣಿಸಿಕೊಂಡ ರಾಜಮನೆತನದ ಮೊದಲ ಸದಸ್ಯರಾದರು. ಅದೊಂದು ಸಣ್ಣ ಭಾಗವಾಗಿತ್ತು. ಅಲ್ಲದೇ ಅವರಿಗೆ ಸಣ್ಣ ಸಂಭಾಷಣೆಯೂ ಕೂಡ ಅದರಲ್ಲಿ ಅವರಿಗೆ ಸಿಕ್ಕಿರಲಿಲ್ಲ.

6. ಅವರು ಏಪ್ರಿಲ್ 2010 ರಲ್ಲಿ ಮೊದಲ ಬಾರಿಗೆ ಲಂಡನ್ ಮ್ಯಾರಥಾನ್ ಅನ್ನು ಓಡಿದ್ದರು. ಆ ಮೂಲಕ ಈ ಕೆಲಸ ನಿರ್ವಹಿಸಿದ ಕುಟುಂಬದ ಮೊದಲ ಸದಸ್ಯರಾದರು. ಅಭಿವೃದ್ಧಿಯಾಗದ ರಾಷ್ಟ್ರಗಳಲ್ಲಿನ ಬಡ ಮಕ್ಕಳು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸಲು ಮೀಸಲಾಗಿರುವ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಚಿಲ್ಡ್ರನ್ ಇನ್ ಕ್ರೈಸಿಸ್​ಗಾಗಿ ಹಣವನ್ನು ಸಂಗ್ರಹಿಸಲು ಅವರು ಸ್ಪರ್ಧಿಸಿದ್ದರು.


7. ರಾಜಕುಮಾರಿ ಬಿಯಾಟ್ರಿಸ್​ ಅಫಿನಿಟಿಯ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ಇದು ಮಹಿಳಾ ನಾಯಕತ್ವಕ್ಕೆ ಸಹಾಯ ಮಾಡಲು ಜಗತ್ತಿನ ಹಿರಿಯ ಬ್ಯುಸಿನೆಸ್​​​ ಮುಖಂಡರನ್ನು ಒಟ್ಟುಗೂಡಿಸುತ್ತಾರೆ. ಹಲವಾರು ಮಾತುಕತೆ ಮತ್ತು ದತ್ತಿ ಪ್ರಯತ್ನಗಳ ಮೂಲಕ ಕೊಡುಗೆ ನೀಡುತ್ತಾರೆ.


8. ಫರ್ಗೆಟ್ ಮಿ ನಾಟ್ ಚಿಲ್ಡ್ರನ್ಸ್ ಹಾಸ್ಪೈಸ್ ಬಿಯಾಟ್ರಿಸ್ ಅವರ ಪೋಷಣೆಯಲ್ಲಿದೆ. ಇದು ಮಾರಣಾಂತಿಕ ಕಾಯಿಲೆಗಳನ್ನು ಎದುರಿಸುತ್ತಿರುವ ವೆಸ್ಟ್ ಯಾರ್ಕ್‌ಷೈರ್ ಮತ್ತು ನಾರ್ತ್ ಮ್ಯಾಂಚೆಸ್ಟರ್‌ನ ಮಕ್ಕಳಿಗೆ ಸಹಾಯ ಮಾಡುತ್ತದೆ.


9. ರಾಜಕುಮಾರಿಯವರು ನವೆಂಬರ್ 2012 ರಲ್ಲಿ ಯಾರ್ಕ್ ಮ್ಯೂಸಿಕಲ್ ಸೊಸೈಟಿ ಮತ್ತು 2013 ರಲ್ಲಿ ಹೆಲೆನ್ ಅರ್ಕೆಲಿ ಡಿಸ್ಲೆಕ್ಸಿಯಾ ಸೆಂಟರ್​ನ ಪೋಷಕರಾದರು. ತನ್ನದೇ ಆದ ಡಿಸ್ಲೆಕ್ಸಿಯಾ-ಸಂಬಂಧಿತ ಶೈಕ್ಷಣಿಕ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡಿದ ಸಂಸ್ಥೆಗೆ ಧನ್ಯವಾದ ಹೇಳುತ್ತಾರೆ.


10. ಅವರು 2020 ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಎಡೋರ್ಡೊ ಮಾಪೆಲ್ಲಿ ಮೋಝಿ ಅವರನ್ನು ವಿವಾಹವಾದರು. ರಾಜಕುಮಾರಿ ಧರಿಸಿದ್ದ ವಧುವಿನ ಗೌನ್ ಅನ್ನು ರಾಯಲ್ ನಿವಾಸವಾದ ಬರ್ಕ್​ಶೈರ್​​ನ ವಿಂಡ್ಸರ್ ಕ್ಯಾಸಲ್ನಲ್ಲಿ ಪ್ರದರ್ಶಿಸಲಾಯಿತು.
(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by: Seema R
First published: May 31, 2021, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories