• Home
  • »
  • News
  • »
  • national-international
  • »
  • Rishi Sunak: ಟೆಕ್ ಪ್ರತಿಭೆಗಳೇ ನಮ್ಮ ದೇಶಕ್ಕೆ ಬನ್ನಿ; ಅಭಿಯಾನ ಘೋಷಿಸಿದ ರಿಷಿ ಸುನಕ್​

Rishi Sunak: ಟೆಕ್ ಪ್ರತಿಭೆಗಳೇ ನಮ್ಮ ದೇಶಕ್ಕೆ ಬನ್ನಿ; ಅಭಿಯಾನ ಘೋಷಿಸಿದ ರಿಷಿ ಸುನಕ್​

ರಿಷಿ ಸುನಕ್​

ರಿಷಿ ಸುನಕ್​

ಯುಕೆ ಪ್ರಸ್ತುತ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಮಾತುಕತೆ ನಡೆಸುತ್ತಿದೆ. ಅದನ್ನು ಸಂಸತ್ತಿನ ಮುಂದೆ ಆದಷ್ಟು ಬೇಗ ಒಪ್ಪಿಸುವುದಾಗಿ ಹೇಳಿದ್ದಾರೆ.

  • Share this:

ಲಂಡನ್: ಪ್ರಪಂಚದಾದ್ಯಂತ ಯುಕೆಯನ್ನು ಟೆಕ್‌ ದೈತ್ಯನನ್ನಾಗಿ ಮಾಡಲು ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಕೆಲಸ ಮಾಡುವ ವಿಶ್ವದ 100 ಅತ್ಯುತ್ತಮ ಯುವ ವೃತ್ತಿಪರರಿಗೆ ಹೊಸ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿ (CBI) ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸುನಕ್ (Rishi Sunak) AI ನಲ್ಲಿ ವಿಶ್ವದ ಅಗ್ರ 100 ಯುವ ಪ್ರತಿಭೆಗಳನ್ನು ಅನ್ವೇಷಿಸಲು ಮತ್ತು ನೇಮಕ ಮಾಡಿಕೊಳ್ಳಲು ಯುಕೆ (United Kingdom) ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದ್ದಾರೆ.


ಸಮ್ಮೇಳನದಲ್ಲಿ ಮಾತನಾಡಿದ ಸುನಕ್‌ ಬ್ರೆಕ್ಸಿಟ್ ನಂತರದ ವಲಸೆ ನೀತಿಯ ಮೇಲೆ ನಿಯಂತ್ರಣವು ನಿರ್ಣಾಯಕವಾಗಿದೆ ಎಂದು ತಿಳಿಸಿದರು. ವ್ಯಾಪಾರ ಮಾಲೀಕರು ಮತ್ತು ಹೆಚ್ಚು ಪ್ರತಿಭಾವಂತ ವ್ಯಕ್ತಿಗಳಿಗಾಗಿ ವಿಶ್ವದ ಅತ್ಯಂತ ಆಕರ್ಷಕ ವಲಸೆ ಕಾರ್ಯಕ್ರಮಗಳಲ್ಲಿ ಒಂದನ್ನು ಸ್ಥಾಪಿಸುವುದಾಗಿ ಸುನಕ್ ಭರವಸೆ ನೀಡಿದ್ದಾರೆ.


ಬ್ರೆಕ್ಸಿಟ್ ಸ್ವಾತಂತ್ರ್ಯಗಳನ್ನು"ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾತುಕತೆ ಮಾಡಲು ಬಳಸುವುದಾಗಿ ಭರವಸೆ ನೀಡಿದ್ದಾರೆ. ಯುಕೆ ಪ್ರಸ್ತುತ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಮಾತುಕತೆ ನಡೆಸುತ್ತಿದೆ. ಅದನ್ನು ಸಂಸತ್ತಿನ ಮುಂದೆ ಆದಷ್ಟು ಬೇಗ ಒಪ್ಪಿಸುವುದಾಗಿ ಹೇಳಿದ್ದಾರೆ.


ಉನ್ನತ ಪ್ರತಿಭೆಗಳನ್ನು ಸೆಳೆಯಲು ಅವಕಾಶ ನೀಡುವುದಿಲ್ಲ"
ಪ್ರತಿಭೆ ವಲಸೆ ಕುರಿತು ಮಾತಾನಾಡಿದ ರಿಷಿ ಸುನಕ್ "ವಿಶ್ವದ ಉನ್ನತ AI ಪ್ರತಿಭೆಗಳನ್ನು ಅಮೆರಿಕ ಅಥವಾ ಚೀನಾಕ್ಕೆ ಸೆಳೆಯಲು ನಾವು ಅನುಮತಿಸುವುದಿಲ್ಲ. ಅದಕ್ಕಾಗಿಯೇ AI ಸ್ಕಾಲರ್‌ಶಿಪ್‌ಗಳು ಮತ್ತು ಸ್ನಾತಕೋತ್ತರ ಪರಿವರ್ತನೆ ಕೋರ್ಸ್‌ಗಳನ್ನು ನಿರ್ಮಿಸಿ, AI ನಲ್ಲಿ ವಿಶ್ವದ ಅಗ್ರ 100 ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಆಕರ್ಷಿಸಲು ನಾವು ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಅವರು ಹೇಳಿದರು.


ಕಾರ್ಮಿಕರ ಕೊರತೆಯನ್ನು ಪರಿಹರಿಸಲು ಕ್ರಮ
ಬ್ರೆಕ್ಸಿಟ್ ನಂತರ ಯುಕೆ ವಲಸೆ ನೀತಿಯ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಸುನಕ್ ಒತ್ತಿ ಹೇಳಿದರು. ಅಕ್ರಮ ವಲಸೆಯನ್ನು ನಿಭಾಯಿಸಲು ನಾನು ನಿರ್ಧಾರ ಮಾಡಿದ್ದೇನೆ ಎಂದು ಸುನಕ್ ಹೇಳಿದರು. ‌ ಯುನೈಟೆಡ್‌ ಕಿಂಗ್ಡಮ್ ಆರ್ಥಿಕತೆಯ ಕೆಲವು ವಲಯಗಳಲ್ಲಿ ಕಾರ್ಮಿಕರ ಕೊರತೆಯನ್ನು ಪರಿಹರಿಸಲು ಹೆಚ್ಚಿನ ವಲಸೆಗೆ ಅವಕಾಶ ನೀಡುವಂತೆ CBI ಸರ್ಕಾರಕ್ಕೆ ಕರೆ ನೀಡಿದ ಬೆನ್ನಲೇ ಸುನಕ್‌ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: Dalit Family Marriage: ದಲಿತ ಜೋಡಿಯ ಅದ್ಧೂರಿ ಮದುವೆ ಮೆರವಣಿಗೆ ಮಾಡೋಕೆ ಪೊಲೀಸರೇ ಬರಬೇಕಾಯ್ತು!


ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಾವೀನ್ಯತೆಯನ್ನು ಬಳಸಿಕೊಳ್ಳುವುದು, ಸಾರ್ವಜನಿಕ ಸೇವೆಗಳಲ್ಲಿ ನಾವೀನ್ಯತೆಯನ್ನು ಅಳವಡಿಸುವುದು ಮತ್ತು ಉತ್ತಮ ನಾವೀನ್ಯಕಾರರು ಆಗಲು ಜನರಿಗೆ ಕೌಶಲ್ಯಗಳನ್ನು ಕಲಿಸುವುದು ಸಮಸ್ಯೆಗಳನ್ನು ನಿವಾರಿಸಬಹುದಾದ ವಿಧಾನ ಎಂದು ನಾನು ನಂಬುತ್ತೇನೆ ಎಂದು ಸುನಕ್ ಸಮ್ಮೇಳನದಲ್ಲಿ ಹೇಳಿದರು.


ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುವ ಭರವಸೆ
ಪ್ರಧಾನ ಮಂತ್ರಿಯಾಗಿ ಮೊಟ್ಟ ಮೊದಲು ಪ್ರಮುಖ ವ್ಯವಹಾರ ನೀತಿ ಭಾಷಣವನ್ನು ಮಾಡಿದ ಸುನಕ್‌ "ಇನ್ನೂ ಆವಿಷ್ಕರಿಸಬೇಕಾದ ಹಲವು ದೊಡ್ಡ ವಿಚಾರಗಳಿವೆ, ಯುನೈಟೆಡ್ ಕಿಂಗ್‌ಡಮ್ ಕಲಿಕೆ, ಆವಿಷ್ಕಾರ ಮತ್ತು ಕಲ್ಪನೆಯ, ಸಂಭಾವ್ಯ ಅರಿತುಕೊಂಡ ಮತ್ತು ಮಹತ್ವಾಕಾಂಕ್ಷೆಯ ಸ್ಥಳವಾಗಬೇಕೆಂದು ನಾನು ಬಯಸುತ್ತೇನೆ. ನಾನು ಸಾಮಾನ್ಯ ಜನರ ಜೀವನ ಸುಧಾರಿಸುವತ್ತ ಕೆಲಸ ಮಾಡುತ್ತೇನೆ. ದೇಶದ ಉಳಿತಿಗಾಗಿ ನಿಮ್ಮ ಪ್ರಧಾನ ಮಂತ್ರಿಯಾಗಿ ನಾನು ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇನೆ" ಎಂದು ಅವರು ಹೇಳಿದರು.


ಇದನ್ನೂ ಓದಿ: Helicopter Car: ಮಾರುತಿ ವ್ಯಾಗನಾರ್‌ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?


ಕೊನೆಯದಾಗಿ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದ ಸುನಕ್‌ ಈ ಎಲ್ಲಾ ನಾವೀನ್ಯತೆಯನ್ನು ಯುಕೆಯ "ಗೋಲ್ಡನ್ ಥ್ರೆಡ್" ಎಂದು ಹೇಳಿದರು. ಹೊಸದಾಗಿ ಆಡಳಿತ ಚುಕ್ಕಾಣಿ ಹಿಡಿದಿರುವ ರಿಷಿ ಸುನಕ್‌ ದೇಶವನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿಡುವತ್ತ ಕಾರ್ಯ ರೂಪಿಸುತ್ತಿದ್ದಾರೆ. ಹಾಗೆಯೇ ಆರ್ಥಿಕತೆ ಸಮಸ್ಯೆಯಿಂದ ರಾಷ್ಟ್ರವನ್ನು ಪುನಃಶ್ಚೇತನಗೊಳಿಸಲು ಸಹ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: