Scholarships: ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಬ್ರಿಟನ್ ಕೊಡುಗೆ! 75 ಸ್ಕಾಲರ್‌ಶಿಪ್ ಘೋಷಿಸಿದ ಯುಕೆ ಸರ್ಕಾರ

ಬ್ರಿಟನ್‌ನಲ್ಲಿ ಅಧ್ಯಯನ ಮಾಡಬೇಕು ಎನ್ನುವುದು ನಿಮ್ಮ ಕನಸಾ? ಹಾಗಿದ್ರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್. ಸೆಪ್ಟೆಂಬರ್‌ನಿಂದ ಯುಕೆಯಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ನೀಡಲು ಬ್ರಿಟನ್ ಸರ್ಕಾರವು ಮುಂದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ (India) 75ನೇ ಸ್ವಾತಂತ್ರ್ಯೋತ್ಸವದ (75th Independence Day) ಸಂಭ್ರಮದಲ್ಲಿದೆ. ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಸರ್ಕಾರ (Central Government) ‘ಆಜಾದಿ ಕಾ ಅಮೃತ್ ಮಹೋತ್ಸವ್’ (Azadi Ka Amrit Mahotsav) ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇದೀಗ ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಬ್ರಿಟನ್ ಸರ್ಕಾರ (Britain Government) ಸಹ ಭರ್ಜರಿ ಗಿಫ್ಟ್ (Gift) ನೀಡುತ್ತಿದೆ. ಸೆಪ್ಟೆಂಬರ್‌ನಿಂದ (September) ಯುಕೆಯಲ್ಲಿ (UK) ಅಧ್ಯಯನ (Study) ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ (Indian Students) 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು (Scholarships) ನೀಡಲು ಬ್ರಿಟನ್ ಸರ್ಕಾರವು ಮುಂದಾಗಿದೆ. ಇದು ಇಲ್ಲಿಯವರೆಗಿನ ಒಂದು ವರ್ಷದ ಸ್ನಾತಕೋತ್ತರ (Master's) ಕಾರ್ಯಕ್ರಮಕ್ಕಾಗಿ ನೀಡಲಾದ ಹೆಚ್ಚಿನ ಸಂಖ್ಯೆಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವಾಗಿದೆ.

ಮಾನ್ಯತೆ ಪಡೆದ ವಿವಿಯಲ್ಲಿ ಅಧ್ಯಯನಕ್ಕೆ ಅವಕಾಶ

ಯಾವುದೇ ಮಾನ್ಯತೆ ಪಡೆದ ಯುಕೆ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯವನ್ನು ಅಧ್ಯಯನ ಮಾಡುವ ಅವಕಾಶದೊಂದಿಗೆ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದಲ್ಲದೆ ಭಾರತದಲ್ಲಿನ ಬ್ರಿಟಿಷ್ ಕೌನ್ಸಿಲ್ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯದಲ್ಲಿ ಮಹಿಳೆಯರಿಗೆ ಕನಿಷ್ಠ 18 ವಿದ್ಯಾರ್ಥಿವೇತನವನ್ನು ನೀಡುತ್ತಿದೆ.

150ಕ್ಕೂ ಹೆಚ್ಚು ವಿವಿಗಳಲ್ಲಿ 12 ಸಾವಿರಕ್ಕೂ ಅಧಿಕ ಕೋರ್ಸ್

150 ಕ್ಕೂ ಹೆಚ್ಚು ಯುಕೆ ವಿಶ್ವವಿದ್ಯಾಲಯಗಳಲ್ಲಿ 12,000 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಒಳಗೊಂಡಿದೆ. ಇವುಗಳೊಂದಿಗೆ ಬ್ರಿಟಿಷ್ ಕೌನ್ಸಿಲ್ ಆರು ಇಂಗ್ಲಿಷ್ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿದೆ. HSBC, ಪಿಯರ್ಸನ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ ಭಾರತದ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಲು ಬೆಂಬಲಿಸುತ್ತಿವೆ.

ಇದನ್ನೂ ಓದಿ: Military School: ದೇಶ ರಕ್ಷಣೆ ನಿಮ್ಮ ಕನಸಾ? ಹಾಗಿದ್ರೆ ಇಲ್ಲಿದೆ ನೋಡಿ ಅತ್ಯುತ್ತಮ ಮಿಲಿಟರಿ ಶಾಲೆ

“ವಿದ್ಯಾರ್ಥಿ ವೇತನ ಘೋಷಿಸಲು ಸಂತಸವಾಗುತ್ತಿದೆ”

ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ ಮಾತನಾಡಿದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತದ 75 ನೇ ವರ್ಷದ ಸಂದರ್ಭದಲ್ಲಿ ಇದೊಂದು ರೀತಿಯ ಮೈಲಿಗಲ್ಲಾಗಿದೆ.  ಬ್ರಿಟನ್‌ನಲ್ಲಿ ಅತ್ಯುತ್ತಮ ಅನುಭವದ ಜೊತೆಗೆ ಅತ್ಯುತ್ತಮ ವಿದ್ಯಾಭ್ಯಾಸ ಪಡೆಯಲು ಭಾರತೀಯ ವಿದ್ಯಾರ್ಥಿಗಳಿಗೆ 75 ವಿದ್ಯಾರ್ಥಿವೇತನವನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ” ಅಂತ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.

“ಸ್ಕಾಲರ್‌ಶಿಪ್‌ ಯೋಜನೆಗೆ ಪ್ರಾಯೋಜಕರಾಗಿರುವ ಹೆಮ್ಮೆ ಇದೆ”

ಇದೇ ಸಂದರ್ಭದಲ್ಲಿ HSBC ಸಿಇಒ ಹಿತೇಂದ್ರ ದೇವ್ ಮಾತನಾಡಿ, "ಚೆವೆನಿಂಗ್ HSBC ಸ್ಕಾಲರ್‌ಶಿಪ್' ಕಾರ್ಯಕ್ರಮಕ್ಕಾಗಿ ಚೆವೆನಿಂಗ್‌ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಈ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುವ ವಿಶ್ವದರ್ಜೆಯ ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ತಮ್ಮ ಕ್ಷೇತ್ರಗಳಲ್ಲಿ ನಾಯಕರು ಮತ್ತು ದೇಶದ ಭವಿಷ್ಯ ರೂಪಿಸುವ ಯುವಜನರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ಭಾರತದಲ್ಲಿ ಮಹತ್ವದ ವಂಶಾವಳಿ ಮತ್ತು ಪರಂಪರೆಯನ್ನು ಹೊಂದಿರುವ ಬ್ರಿಟಿಷ್ ಬ್ಯಾಂಕ್ ಆಗಿ, ದೇಶದಲ್ಲಿ ನಾಯಕತ್ವದ ಪ್ರತಿಭೆಯನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಅರ್ಥಪೂರ್ಣ ಪಾತ್ರವನ್ನು ವಹಿಸುತ್ತೇವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1 ಲಕ್ಷಕ್ಕೂ ಅಧಿಕ ಅಧ್ಯಯನ ವೀಸಾ

ಮಾರ್ಚ್ 2022ಕ್ಕೆ ಕೊನೆಗೊಳ್ಳುವ ಸಮಯದಲ್ಲಿ ಸುಮಾರು 1,08,000 ಅಧ್ಯಯನ ವೀಸಾಗಳನ್ನು ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ದ್ವಿಗುಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಪ್ರಧಾನಿ ಬೋರಿಸ್ ಜಾನ್ಸನ್ ಅವರು 'ಭಾರತ-ಯುಕೆ ಟುಗೆದರ್' ಕಾರ್ಯಕ್ರಮವನ್ನು ಸ್ವಾಗತಿಸಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ ಹಲವು ಸಂಸ್ಥೆಗಳ ಸಹಭಾಗಿತ್ವ

HSBC ಇಂಡಿಯಾ 15 ಸ್ಕಾಲರ್‌ಶಿಪ್‌ಗಳನ್ನು ಪ್ರಾಯೋಜಿಸುತ್ತದೆ, ಪಿಯರ್ಸನ್ ಇಂಡಿಯಾ ಸಂಸ್ಥೆ ಎರಡು, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ 75 ವಿದ್ಯಾರ್ಥಿವೇತನದ ಭಾಗವಾಗಿ ತಲಾ ಒಂದನ್ನು ಪ್ರಾಯೋಜಿಸುತ್ತದೆ.

ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ವೀಸಾ ಸಂದರ್ಶನ ಎದುರಿಸೋಕೆ ಟಿಪ್ಸ್ ಇಲ್ಲಿದೆ

ಏನಿದು ಚೆವೆನಿಂಗ್ ಯುಕೆ ಕಾರ್ಯಕ್ರಮ?

ಚೆವೆನಿಂಗ್ ಯುಕೆ ಸರ್ಕಾರದ ಅಂತರರಾಷ್ಟ್ರೀಯ ಪ್ರಶಸ್ತಿಗಳ ಯೋಜನೆಯಾಗಿದ್ದು, 150 ದೇಶಗಳ ಪ್ರತಿಭಾನ್ವಿತರನ್ನು ಇದು ತಲುಪುತ್ತದೆ. ಭಾರತದ ಚೆವೆನಿಂಗ್ ಕಾರ್ಯಕ್ರಮವು 3500 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕಾರ್ಯಕ್ರಮವಾಗಿದೆ.
Published by:Annappa Achari
First published: