ಇನ್ಮುಂದೆ ಮಕ್ಕಳೇ ಬೇಡ ಎಂದು ನಿರ್ಧರಿಸಿದ ಬ್ರಿಟಿಷ್​ ತಾಯಂದಿರು; ಕಾರಣ ಗೊತ್ತಾ?

ಬ್ರಿಟನ್​ನ ತಾಯಂದಿರು ಇನ್ಮುಂದೆ ಮಕ್ಕಳನ್ನೇ ಮಾಡಿಕೊಳ್ಳುವುದಿಲ್ಲವಂತೆ. ಅವರಿಗೆ ತಾಯ್ತನದ ಭಾಗ್ಯವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೆ ಕಾರಣ ಕೇಳಿದರೆ, ಆಶ್ಚರ್ಯದ ಜತೆಗೆ ಈ ನಿರ್ಧಾರ ಕೆಲವರಿಗೆ ಸರಿ ಎನಿಸುತ್ತಿದೆ.

Seema.R | news18
Updated:June 26, 2019, 1:49 PM IST
ಇನ್ಮುಂದೆ ಮಕ್ಕಳೇ ಬೇಡ ಎಂದು ನಿರ್ಧರಿಸಿದ ಬ್ರಿಟಿಷ್​ ತಾಯಂದಿರು; ಕಾರಣ ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: June 26, 2019, 1:49 PM IST
  • Share this:
ತಾಯ್ತಾನ... ಪ್ರತಿಯೊಬ್ಬ ಹೆಣ್ಣು ಮಗಳ ಕನಸು. ಆದರೆ, ಈ ತಾಯ್ತಾನವೇ ನಮಗೆ ಬೇಡ ಎಂಬ ನಿರ್ಧಾರಕ್ಕೆ ಬ್ರಿಟನ್​ನ ತಾಯಂದಿರು ಬಂದಿದ್ದಾರೆ. ಆಶ್ಚರ್ಯ..! ಆದರೂ ಸತ್ಯ. ಬ್ರಿಟನ್​ನ ಅನೇಕ ತಾಯಂದಿರು ಸಾಮೂಹಿಕ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.

ಹೌದು, ಆಶ್ಚರ್ಯ ಎನಿಸಿದರೂ ಇದು ಸತ್ಯ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯ. ದಿನೇ ದಿನೇ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಬ್ರಿಟನ್​ನ​ ತಾಯಂದಿರು ಈ ನಿರ್ಧಾರಕ್ಕೆ ಬಂದಿದ್ದಾರೆ.

Blythe Pepino
ಬ್ಲೆಥ್ ಪೆಪಿನೊ


'ಬ್ರಿಟಿಷ್​ ಕ್ಲೈಮೆಟ್​ ಚೇಂಜಿಂಗ್'​ ಹೋರಾಟಗಾರರ ಗುಂಪು ಈ ನಿರ್ಧಾರಕ್ಕ ಬಂದಿದೆ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಹವಾಮಾನದಲ್ಲಿನ ವೈಪರೀತ್ಯ ವಿಶ್ವದ ಗಂಭೀರ ಸಮಸ್ಯೆಯಾಗಿದೆ. ವಿಶ್ವದೆಲ್ಲೆಡೆ ಬರ, ಕ್ಷಾಮ, ಪ್ರವಾಹ ಹಾಗೂ ಅತಿ ಹೆಚ್ಚು ಶಾಖದಿಂದಾಗಿ ಜನರು ಬಳಲುತ್ತಿದ್ದಾರೆ.

ಈಗಾಗಲೇ ಜಾಗತಿಕ ತಾಪಮಾನದ ವೈಪರೀತ್ಯದಿಂದ ಕೋಟ್ಯಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ನಮಗೆ ಮಕ್ಕಳು ಹುಟ್ಟಿದರೆ ಅವರು ಭವಿಷ್ಯದಲ್ಲಿ ಹೇಗೆ ತಾನೇ ಸಂತೋಷದಿಂದ ಬದಕಲು ಸಾಧ್ಯ ಎಂದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೋರಾಟನಡೆಸುತ್ತಿರುವ  ಮಹಿಳೆಯರು ತಿಳಿಸಿದ್ದಾರೆ.

ಕ್ಲೈಮೆಟ್​ ಚೇಂಜಿಂಗ್​ ಎಂಬ ಸಂಘಟನೆ ಮುಖ್ಯಸ್ಥೆ ಬ್ಲೆಥ್​ ಪೆಪಿನೊ ಮೊದಲ ಬಾರಿ ಈ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿದರು. 'ಇನ್ಮುಂದೆ ಮಕ್ಕಳು ಬೇಡ ಎಂದು ನಾನು ನಿರ್ಧರಿಸಿದ್ದೇನೆ, ಈ ಜಗತ್ತು ಮಕ್ಕಳು ಜೀವಿಸಲು ಯೋಗ್ಯವಲ್ಲ'  ಎಂದು 2018ರಲ್ಲಿ ಈಕೆ ತೆಗೆದುಕೊಂಡ ನಿರ್ಧಾರ ಎಲ್ಲರ ಗಮನ ಸೆಳೆದಿತ್ತು.

ಜಾಗತಿಕ ತಾಪಮಾನದ ಅಭಿಯಾನದಲ್ಲಿ ಭಾಗಿಯಾದ ಶಾಲಾ ಮಕ್ಕಳು
ಅಲ್ಲದೇ 'ಪೆಪಿನೊ ಬರ್ತ್​ ಸ್ಟ್ರೈಕ್'​ ಎಂಬ ಸಂಸ್ಥೆಯನ್ನು ಕೂಡ 2018ರಲ್ಲಿ ಹುಟ್ಟುಹಾಕಿದಳು. ಈ ಸಂಘಟನೆಗೆ ನಿಧಾನವಾಗಿ ಜನರು ಕೂಡ ಸೇರಿ ಈ ರೀತಿ ನಿರ್ಧಾರ ಕೈಗೊಳ್ಳಲು ಮುಂದಾದರು. ಇಲ್ಲಿವರೆಗೆ ಈ ಸಂಘಟನೆಯಲ್ಲಿ 330 ಜನರಿದ್ದು, ಇದರಲ್ಲಿ ಶೇ.80ರಷ್ಟು ಮಹಿಳೆಯರಿದ್ದಾರೆ.

ಕರುಗುತ್ತಿದೆ ಹಿಮಾಲಯ

2000ದಿಂದ ಜಾಗತಿಕ ತಾಪಮಾನ ಎಂಬುದು ವಿಶ್ವದ ಗಮನಸೆಳೆಯುತ್ತಿರುವ ವಿಚಾರ. 2000ರಿಂದ 2016ರವರೆಗೆ ಜಾಗತಿಕ ತಾಪಮಾನದಿಂದಾಗಿ ಪ್ರತಿ ವರ್ಷ ಸರಿಸುಮಾರು 400 ಟನ್​ ಹಿಮಾಲಯ ಕರಗುತ್ತಿದೆ. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರದೆ ಹೀಗೆ ಪರಿಸ್ಥಿತಿ ಮುಂದುವರೆದರೆ ಜಗತ್ತು ಅಪಾಯದ ಅಂಚು ತಲುಪಲಿದೆ ಎಂಬ ಕಳವಳ ಕೂಡ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ 16 ವರ್ಷಗಳಲ್ಲಿ ಹಿಮಕರುಗುವಿಕೆ ದುಪಟ್ಟು ಪ್ರಮಾಣದಲ್ಲಿ ಆಗಲಿದೆ ಎಂದೂ ಅಂದಾಜಿಸಲಾಗಿದೆ.

ಈ ನಿರ್ಧಾರ ಸಮಸ್ಯೆಗೆ ಪರಿಹಾರವಲ್ಲ:

2014ರಲ್ಲಿ ಅಮೆರಿಕದ 'ನ್ಯಾಷನಲ್​ ಅಕಾಡೆಮಿ ಆಫ್​ ಸೈನ್ಸ್'​ ಪ್ರಕಟಿಸಿದ ವರದಿ ಪ್ರಕಾರ, ಜಾಗತಿಕ ತಾಪಮಾನ ಸಮಸ್ಯೆ ಜನಸಂಖ್ಯಾ ನಿಯಂತ್ರಣದಿಂದ ಸಾಧ್ಯವಿಲ್ಲ ಎನ್ನಲಾಗಿದೆ.

ಇದನ್ನು ಓದಿ: Miss India 2019: ಮೊದಲ ರನ್ನರ್​ ಅಪ್​ ಸಂಜನಾ ವಿಜ್​ರ ಕ್ಯೂಟ್​ ಫೋಟೊಗಳು

2017ರಲ್ಲಿ ಬ್ರಿಟಿಷ್​ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ, ಮಕ್ಕಳ ಸಂಖ್ಯೆ ಕಡಿಮೆ ಆದಂತೆ ಸಸ್ಯಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಅಲ್ಲದೇ ವಿಮಾನ ಹಾಗೂ ವಾಹನಗಳ ಬಳಕೆ ಕಡಿಮೆಯಾಗಲಿದೆ.

First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ