ಇಸ್ರೋ ಸಾಧನೆಗೆ ವಿಶ್ವವೇ ಬೆರಗು; ಭಾರತದ ಚಂದ್ರಯಾನದ ರೋಚಕ ಕಥನ

ತಡವಾಗಿ ಈ ಬಾಹ್ಯಾಕಾಶ ಪೈಪೋಟಿಯ ಮೈದಾನಕ್ಕೆ ಭಾರತ ನುಗ್ಗಿತ್ತಾದರೂ, ಕಣದಲ್ಲಿ ಮಾತ್ರ ಎಲ್ಲಾ ರಾಷ್ಟ್ರಗಳನ್ನು ಒಂದು ಕ್ಷಣ ತಬ್ಬಿಬ್ಬುಗೊಳ್ಳುವಂತೆ ಮಾಡಿತ್ತು.

Ganesh Nachikethu | news18
Updated:July 14, 2019, 7:10 PM IST
ಇಸ್ರೋ ಸಾಧನೆಗೆ ವಿಶ್ವವೇ ಬೆರಗು; ಭಾರತದ ಚಂದ್ರಯಾನದ ರೋಚಕ ಕಥನ
ಚಂದ್ರಯಾನ-2
Ganesh Nachikethu | news18
Updated: July 14, 2019, 7:10 PM IST
ಬೆಂಗಳೂರು(ಜುಲೈ.14): ಒಂದನೇ ಚಂದ್ರಯಾನದ ಮೂಲಕ ಅಗಾಧ ಸಾಧನೆ ಮಾಡಿದ್ದ ಭಾರತ ತನ್ನ ಎರಡನೇ ಚಂದ್ರಯಾನಕ್ಕೆ ಸಜ್ಜಾಗಿದೆ. ಜಗತ್ತಿನಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಭಾರತದ ಚಂದ್ರಯಾನ-2, ಇದೇ ಸೋಮವಾರ ಬೆಳಿಗ್ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಆರಂಭವಾಗಲಿದೆ. ಈ ಯಶಸ್ವಿ ಯಾತ್ರೆ ಮೂಲಕ ಭಾರತವೂ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಮಹತ್ತರ ಸಾಧನೆ ಮಾಡಿರುವ ಅಮೆರಿಕ, ರಷ್ಯಾ ಮತ್ತು ಚೀನಾದಂತಹ ದೇಶಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಈ ಹೊತ್ತಲ್ಲೇ ಭಾರತದ ಚಂದ್ರಯಾನ ಯೋಜನೆಯ ಹಿಂದಿನ ರೋಚಕ ಕಥೆಗಳ ಹಿನ್ನೋಟ ನೋಡಬೇಕಿದೆ.

ನೀರಿನ ಸುಳಿವು ನೀಡಿದ್ದ ಒಂದನೇ ಚಂದ್ರಯಾನ:

ಚಂದ್ರಯಾನ-1ರ ಪ್ರಮುಖ ಸಾಧನೆಯೇ ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಹಚ್ಚಿದ್ದು. ಭಾರತದ ಇಸ್ರೋ ವಿಜ್ಞಾನಿಗಳು ಮೊದಲ ಬಾರಿಗೆ, ಮಾನವರಹಿತ ಚಂದ್ರಯಾನ-1 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ್ದು 2008ರ ಅಕ್ಟೋಬರ್‌ನಲ್ಲಿ. ಈ ಚಂದ್ರಯಾನ ಅದೇ ವರ್ಷದ ನವೆಂಬರ್‌ 14ರಂದು ಚಂದ್ರನ ಮೇಲೆ ಇಳಿದಿತ್ತು. ಈ ಮೂಲಕ ಭಾರತ ಚಂದ್ರನ ಮೇಲೆ ಧ್ವಜ ನೆಟ್ಟ ನಾಲ್ಕನೇ ದೇಶ ಎನಿಸಿಕೊಂಡಿತ್ತು.

ಭಾರತದ ಒಂದನೇ ಚಂದ್ರಯಾನ 2009 ಆಗಸ್ವ್‌ ತನಕವೂ ಕಾರ್ಯ ನಿರ್ವಹಿಸಿತ್ತು. ಇದಕ್ಕಾಗಿ ಸುಮಾರು 386 ಕೋಟಿ ರೂಪಾಯಿ ವ್ಯಯಿಸಬೇಕಾಗಿತ್ತು. ನಮ್ಮ ಚಂದ್ರಯಾನ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಭಾರತ ಭಾವಿಸಿತ್ತಾದರೂ, ಅದು ಕೇವಲ 312 ದಿನಗಳ ಮಾತ್ರ ಕಾರ್ಯನಿರ್ವಹಿಸಿತ್ತು. ಆದರೂ, ನಾವು ಉದ್ದೇಶಿಸಿದಂತೇ ಶೇ.95ರಷ್ಟು ಕಾರ್ಯವನ್ನು ಸಾಧಿಸಿತ್ತು.

ಇದನ್ನೂ ಓದಿ: ಚಂದ್ರನ ಮೇಲ್ಮೈ ಕುರಿತ ಹೆಚ್ಚಿನ ಅಧ್ಯಯನಕ್ಕೆ ಚಂದ್ರಯಾನ-2 ಹೇಗೆ ಸಹಕಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದ ಸಾಧನೆಗೆ ವಿಶ್ವವೇ ಬೆರಗು: ನಾವು ಚಂದ್ರನ ಮೇಲೆ ಹೋಗುವ ಹಲವು ವರ್ಷಗಳ ಮುನ್ನವೇ ವಿವಿಧ ರಾಷ್ಟ್ರಗಳು ಚಂದ್ರನ ಮೇಲೆ ತಮ್ಮ ಉಪಗ್ರಹಗಳನ್ನು ಹಾರಿಬಿಟ್ಟಿದ್ದವು. ಅಮೆರಿಕ ಮಾತ್ರ ಆಗಲೇ ಮಾನವನನ್ನು ಚಂದ್ರನ ಮೇಲೆ ಕಳುಹಿಸಿಬಿಟ್ಟಿತ್ತು. ಹೀಗೆ ರಷ್ಯಾ, ಅಮೆರಿಕ, ಐರೋಪ್ಯ ರಾಷ್ಟ್ರಗಳು ಚಂದ್ರನ ಮೇಲೆ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಾ ಹೋದವು. ಈ ಸಂದರ್ಭದಲ್ಲಿ, ಭಾರತ ಚಂದ್ರನ ಮೇಲೆ ಹೋಗುವ ಕನಸು ಕಾಣಲು ಶುರು ಮಾಡಿತ್ತು.
Loading...

ತಡವಾಗಿ ಈ ಬಾಹ್ಯಾಕಾಶ ಪೈಪೋಟಿಯ ಮೈದಾನಕ್ಕೆ ಭಾರತ ನುಗ್ಗಿತ್ತಾದರೂ, ಕಣದಲ್ಲಿ ಮಾತ್ರ ಎಲ್ಲಾ ರಾಷ್ಟ್ರಗಳನ್ನು ಒಂದು ಕ್ಷಣ ತಬ್ಬಿಬ್ಬುಗೊಳ್ಳುವಂತೆ ಮಾಡಿತ್ತು. ತನ್ನ ಚೊಚ್ಚಲ ಪ್ರಯತ್ನದಲ್ಲಿಯೇ ಭಾರತ ಚಂದ್ರನ ಮೇಲೆ ಉಪಗ್ರಹವನ್ನು ಯಶಸ್ವಿಯಾಗಿ ಹಾರಿಬಿಟ್ಟಿತ್ತು. ಅಲ್ಲದೇ ಇದುವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದ ಚಂದ್ರನ ಮೇಲ್ಮೆಯಲ್ಲಿ ನೀರಿನ ಅಂಶವಿರುವುದನ್ನು ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದಿತ್ತು. ಜತೆಗೆ ಮನುಕುಲದ ಕುತೂಹಲವನ್ನು ಮತ್ತಷ್ಟು ತಣಿಯುವಂತೆ ಮಾಡಿತ್ತು.

ಇದನ್ನೂ ಓದಿ: ಚಂದ್ರಯಾನ-2 ಯಶಸ್ವಿಗಾಗಿ ತಿರುಪತಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ ಇಸ್ರೋ ಮುಖ್ಯಸ್ಥ ಕೆ.ಶಿವನ್​

ಚಂದ್ರಯಾನ ನೌಕೆಯ ಪ್ರಮುಖ ಅಂಶಗಳು

  • ಚಂದ್ರಯಾನ ನೌಕೆಯ ಒಟ್ಟು ತೂಕ- 3.8 ಟನ್‌

  • ಚಂದ್ರನ ನೆಲ ಸ್ಪರ್ಶಿಸುವ ದಿನ- ಸೆಪ್ಟೆಂಬರ್​​.6

  • ಚಂದ್ರಯಾನ-2ರ ಒಟ್ಟು ವೆಚ್ಚ- 978 ಕೋಟಿ ರೂ.

  • ಚಂದ್ರಯಾನ-1ರ ಒಟ್ಟು ವೆಚ್ಚ- 386 ಕೋಟಿ ರೂ.


-------------
First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...