ಮೇಘಾಲಯದಲ್ಲಿ (Meghalaya) ನಿರಂತರ ಮಳೆಯ ನಡುವೆ ಸೇತುವೆಯೊಂದು (Bridge) ಕೊಚ್ಚಿಹೋಗಿರುವ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ. ಬುಗಿ ನದಿಯ ಮೇಲಿನ ಸೇತುವೆಯು ದಕ್ಷಿಣ ಗರೋ ಹಿಲ್ಸ್ ಪ್ರದೇಶದಲ್ಲಿ ಜಿಜಿಕಾವನ್ನು ಮೆಗುವಾಗೆ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ. ಇದನ್ನು ಬುಗಿ ಗರೋ ಹಿಲ್ಸ್‌ನಲ್ಲಿ ಮೂರನೇ ಅತಿ ದೊಡ್ಡ ನದಿ ಎಂದು ಹೇಳಲಾಗುತ್ತದೆ. ಮೇಘಾಲಯದಾದ್ಯಂತ ಜೂನ್ 9 ರಿಂದ ಜೂನ್ 13 ರವರೆಗೆ ನಿರಂತರ ಭಾರೀ ಮಳೆಯಾಗುವ ಬಗ್ಗೆ IMD ಎಚ್ಚರಿಕೆ ನೀಡಿದೆ. ಮುಂದಿನ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶ (Arunachala Pradesh) ಮತ್ತು ಅಸ್ಸಾಂನಲ್ಲಿ (Assam) ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 10-11 ರಂದು ಅರುಣಾಚಲ ಪ್ರದೇಶದಲ್ಲಿ 204.5 ಮಿ.ಮೀ ಗಿಂತ ಹೆಚ್ಚು ಮಳೆಯಾಗಲಿದೆ (Rain) ಎಂದು ಐಎಂಡಿ ತಿಳಿಸಿದೆ.
ದೇಶದಲ್ಲಿ ಮಾನ್ಸೂನ್ ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಲ್ಲಿಯೂ ಕಾಣಿಸಿಕೊಂಡಿದೆ. ಮುಂಗಾರು ಮಳೆಯನ್ನು ಕಂಡಿರುವ ರಾಜ್ಯಗಳ ಮಧ್ಯೆ ಅಸ್ಸಾಂ ಸೇರಿ ಮೇಘಾಲಯದಂತಹ ರಾಜ್ಯ ವಿಪರೀತ ಮಳೆಯನ್ನೂ ಕಂಡಿದೆ. ಇನ್ನೆರಡು ದಿನಗಳಲ್ಲಿ ಮಹಾರಾಷ್ಟ್ರದಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಮೊದಲು ಕೇರಳಕ್ಕೆ ಮನ್ಸೂನ್ ಪ್ರೇವೇಶ
ಮೇ 29 ರಂದು ಮಾನ್ಸೂನ್ ಕೇರಳ ಕರಾವಳಿಯನ್ನು ಪ್ರವೇಶಿಸಿತು. ಮೇ 31 ಮತ್ತು ಜೂನ್ 7 ರ ನಡುವೆ ದಕ್ಷಿಣ ಮತ್ತು ಮಧ್ಯ ಅರೇಬಿಯನ್ ಸಮುದ್ರ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳು ಮತ್ತು ಸಂಪೂರ್ಣ ಈಶಾನ್ಯವನ್ನು ಆವರಿಸಿದೆ ಎಂದು ಹಿರಿಯ ಐಎಂಡಿ ವಿಜ್ಞಾನಿ ಆರ್ ಕೆ ಜೆನಮಣಿ ಹೇಳಿದ್ದಾರೆ.
ಇನ್ನೆರಡು ದಿನದಲ್ಲಿ ಮಾಹಾರಷ್ಟ್ರದಲ್ಲಿ ವಿಪರೀತ ಮಳೆ
ಮುಂಗಾರು ಪ್ರವೇಶದಲ್ಲಿ ಯಾವುದೇ ವಿಳಂಬವಿಲ್ಲ. ಇದು ಇನ್ನೆರಡು ದಿನಗಳಲ್ಲಿ ಮಹಾರಾಷ್ಟ್ರವನ್ನು ತಲುಪುವ ಸಾಧ್ಯತೆಯಿದೆ. ನಂತರದ ಎರಡು ದಿನಗಳಲ್ಲಿ ಮುಂಬೈಯನ್ನು ಆವರಿಸುವ ಸಾಧ್ಯತೆಯಿದೆ ಎಂದು ಜೆನಮಣಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Liv-In Partner: ಗರ್ಭಿಣಿ ಪ್ರೇಯಸಿಯ ಆರೈಕೆಗೆ ಖೈದಿಗೆ 3 ವಾರಗಳ ಬೇಲ್ ನೀಡಿದ ಕೋರ್ಟ್
ಕಳೆದ ತಿಂಗಳು ಅಸ್ಸಾಂನಲ್ಲಿ ಉಂಟಾದ ಪ್ರವಾಹದಲ್ಲಿ 30 ಜನರು ಬಲಿಯಾದರು. ಮುಂಗಾರು ಪೂರ್ವ ಮಳೆ ಮತ್ತು ಪ್ರವಾಹವು ಸೇತುವೆಗಳು, ರಸ್ತೆಗಳು ಮತ್ತು ರೈಲ್ವೆ ಹಳಿಗಳು ಸೇರಿದಂತೆ ರಾಜ್ಯದ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ.
Following incessant rainfall which led to river flooding, the bridge connecting Jijika to Megua at South Garo hills washed away today. pic.twitter.com/JhdGtrSYpI
— Meghalaya Legislative Assembly Channel (@MLA_Channel) June 9, 2022
ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆ
ಮುಂದಿನ ಎರಡು ದಿನಗಳ ಕಾಲ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ. ಇಡೀ ಈಶಾನ್ಯ ಪ್ರದೇಶವನ್ನು ಮುಂಗಾರು ಆವರಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Covid-19: ಜನವರಿ ನಂತರ ಅತ್ಯಧಿಕ ಪಾಸಿಟಿವ್ ಪ್ರಕರಣ, ಬೆಂಗಳೂರಲ್ಲೂ ಒಂದೇ ದಿನ 458 ಕೇಸ್
ಹೆಚ್ಚಿನ ಮಳೆಯಿಂದಾಗಿ ಸಂಭವನೀಯ ಘಟನೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ