Viral News: ಮದುವೆ ಮೆರವಣಿಗೆಯಲ್ಲಿ ಕುದುರೆ ಮೇಲೆ ಕುಳಿತ ವರ ಓಟ, ಸ್ವಾಗತಕ್ಕೆ ಬಂದ ದಿಬ್ಬಣ ಗಾಬರಿ !

ಇತ್ತೀಚೆಗೆ ಮದುವೆಗಳು ಸಡಗರಕ್ಕೆ ಹೆಚ್ಚು ಮನಸ್ಸಿನಲ್ಲಿ ಉಳಿಯುವುದಕ್ಕಿಂತಲೂ ವಿಚಿತ್ರವಾದ ಘಟನೆಗಳು ನಡೆದು ಅಂತಹ ಸಂದರ್ಭದ ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದು ಇಂತಹ ಕಾರಣಗಳಿಗೆ ಮದುವೆ ಸಮಾರಂಭಗಳು ನೆನಪಿನಲ್ಲಿ ಉಳಿಯುತ್ತಿವೆ. ಇಲ್ಲೊಂದು ಅಂತಹದೇ ವಿಚಿತ್ರ ಘಟನೆಯು ರಾಜಸ್ಥಾನದ ಅಜ್ಮೇರ್ ಬಳಿಯ ರಾಮಪುರ ಹಳ್ಳಿಯಲ್ಲಿ ನಡೆದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಮ್ಮ ಮದುವೆಗಳು ಸಾಂಪ್ರದಾಯಿಕವಾಗಿ ಮತ್ತು ಸಡಗರದಿಂದ ನಡೆಯುತ್ತವೆ. ಮದುವೆಗೂ ಮುಂಚೆ ನವ ವರನನ್ನು ಕುದುರೆ ಮೇಲೆ ಕೂರಿಸಿಕೊಂಡು ದೇವಸ್ಥಾನದಿಂದ ಮದುವೆ ಮನೆಯವರೆಗೆ ಅಥವಾ ಮದುವೆ ನಡೆಯುವ ಮಂಟಪಕ್ಕೆ ಹಾಡು, ನೃತ್ಯ ಮಾಡುತ್ತ ಮತ್ತು ಪಟಾಕಿ ಹಚ್ಚುತ್ತಾ ಮದುವೆ ಮನೆಯ ಜನರು ತುಂಬಾ ಸಡಗರದಿಂದ ಬರಮಾಡಿಕೊಳ್ಳುವುದು ಸಂಪ್ರದಾಯ.ಆದರೆ ಇತ್ತೀಚೆಗೆ ಮದುವೆಗಳು ಸಡಗರಕ್ಕೆ ಹೆಚ್ಚು ಮನಸ್ಸಿನಲ್ಲಿ ಉಳಿಯುವುದಕ್ಕಿಂತಲೂ ವಿಚಿತ್ರವಾದ ಘಟನೆಗಳು ನಡೆದು ಅಂತಹ ಸಂದರ್ಭದ ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದು ಇಂತಹ ಕಾರಣಗಳಿಗೆ ಮದುವೆ ಸಮಾರಂಭಗಳು ನೆನಪಿನಲ್ಲಿ ಉಳಿಯುತ್ತಿವೆ. ಇಲ್ಲೊಂದು ಅಂತಹದೇ ವಿಚಿತ್ರ ಘಟನೆಯು ರಾಜಸ್ಥಾನದ ಅಜ್ಮೇರ್ ಬಳಿಯ ರಾಮಪುರ ಹಳ್ಳಿಯಲ್ಲಿ ನಡೆದಿದೆ. ನವ ವರನನ್ನು ಕೂರಿಸಿಕೊಂಡ ಕುದುರೆಯೊಂದು ಸ್ವಾಗತಕ್ಕೆ ಬಾಗಿಲ ಬಳಿ ಬಂದು ನಿಂತಾಗ ಯಾರೋ ಪಟಾಕಿ ಹಚ್ಚಿದ್ದಾರೆ.


ಆ ಪಟಾಕಿ ಶಬ್ದಕ್ಕೆ ಕುದುರೆ ಭಯಭೀತವಾಗಿ ವರನು ತನ್ನ ಮೇಲೆ ಕುಳಿತುಕೊಂಡಿದ್ದಾನೆ ಎಂದು ಸಹ ಅರಿಯದೆ ಮದುವೆ ಮನೆಯಿಂದ ಓಡಿಹೋಗಿದೆ. ಅಲ್ಲಿದ್ದವರಿಗಂತೂ ಒಂದು ಕ್ಷಣ ಏನು ಮಾಡಬೇಕು, ಕುದುರೆಯನ್ನು ಹೇಗೆ ತಡೆದು ನಿಲ್ಲಿಸಬೇಕು ಎಂಬುದು ಅರ್ಥವಾಗದೆ ಈ ಘಟನೆ ಹಾಸ್ಯಸ್ಪದವಾಗಿ ಕಂಡಿದೆ ಮತ್ತು ನವ ವರನಿಗೆ ಬಿದ್ದು ಗಾಯವಾಗಬಹುದೇನೊ ಎನ್ನುವ ಭಯ ಆಗಿರುವುದಂತೂ ನಿಜವಾದ ಸಂಗತಿಯಾಗಿದೆ.




ನವ ವರನನ್ನು ಮದುವೆ ಮನೆಗೆ ಸ್ವಾಗತಿಸಲು ಜನರು ಸಿದ್ಧತೆ ಮಾಡಿಕೊಂಡು ಇನ್ನೇನು ಹೊರಗೆ ಬಂದು ನವ ವರನನ್ನು ಸ್ವಾಗತಿಸಬೇಕು, ಅಲ್ಲೇ ಇದ್ದವರು ಸಡಗರಕ್ಕಾಗಿ ಪಟಾಕಿಯನ್ನು ಹಚ್ಚುತ್ತಾರೆ. ಆ ಪಟಾಕಿ ಶಬ್ದಕ್ಕೆ ಕುದುರೆ ಬೆಚ್ಚಿಬಿದ್ದು ಅಲ್ಲಿಂದ ಕೂಡಲೇ ಎಲ್ಲರ ಮಧ್ಯೆಯೇ ವೇಗವಾಗಿ ಮದುವೆ ಮನೆಯಿಂದ ಓಡಿಹೋಗುತ್ತದೆ. ಕುದುರೆಯ ಜೊತೆಗೆ ಒಬ್ಬನು ನಿಲ್ಲಿಸಲು ಓಡಿದರೂ ಅದು ನಿಲ್ಲುವುದೇ ಇಲ್ಲ.


ನಂತರ ಅದನ್ನು ಹಿಂಬಾಲಿಸಿಕೊಂಡು ಜನರು ತಮ್ಮ ಬೈಕ್ ಮತ್ತು ಕಾರ್ಗಳಲ್ಲಿ ಸುಮಾರು 4 ಕಿ.ಮೀ. ಹೋಗಿ ತಡೆದು ನಿಲ್ಲಿಸಿ ನವ ವರನಿಗೆ ಯಾವುದೇ ಗಾಯವಾಗದಂತೆ ಮದುವೆ ಮನೆಗೆ ಕರೆತರುತ್ತಾರೆ. ಕುದುರೆ ಓಡಲು ಆರಂಭಿಸಿದಾಗ ವರನು ಅದರಿಂದ ಕೆಳಗಿಳಿಯಲು ತುಂಬಾ ಪ್ರಯತ್ನ ಮಾಡಿದರೂ ಕುದುರೆಯ ವೇಗಕ್ಕೆ ಅವರಿಗೆ ಕೆಳಗಿಳಿಯಲು ಆಗುವುದಿಲ್ಲ. ಅದೃಷ್ಟವಶಾತ್ ವರನು ಕುದುರೆಯು ಓಡಿಹೋದ ರಭಸಕ್ಕೆ ಕೆಳಕ್ಕೆ ಬಿದ್ದು ಏನು ಗಾಯವಾಗಿಲ್ಲ ಎಂದು ಜನರು ಸಮಾಧಾನಗೊಂಡಿದ್ದಾರೆ.





ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕುದುರೆ ವರನನ್ನು ಪಟಾಕಿ ಶಬ್ದಕ್ಕೆ ಮದುವೆ ಮನೆಯಿಂದ ಓಡಿಸಿಕೊಂಡು ಹೋಗಿದ್ದು ಅಲ್ಲಿದ್ದ ಜನರು ಕುದುರೆಯತ್ತ ಕೈ ಮಾಡುತ್ತ ಅದರ ಹಿಂದೆ ಓಡಿಹೋಗಿರುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ಇಂತಹ ಅನೇಕ ತರಹದ ಘಟನೆಗಳು ಮದುವೆ ಸಮಾರಂಭದಲ್ಲಿ ನಡೆಯುತ್ತಿದ್ದು, ಈ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ ಮತ್ತು ಇಂತಹ ಸಂದರ್ಭ ಬರಬಹುದು ಎಂದು ಜನರಿಗೆ ಒಂದು ಎಚ್ಚರಿಕೆಯಾಗಿರುವುದು ಸಹ ಅಷ್ಟೇ ಸತ್ಯ.
Published by:Soumya KN
First published: