ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಮದುರೈ ಭಾಗದಲ್ಲಿ ಪ್ರತಿವರ್ಷ ಆಚರಿಸುತ್ತಾರೆ. ಈ ಭಾಗದ ಬಹುತೇಕ ಗೂಳಿಗಳು ಜಲ್ಲಿಕಟ್ಟಿನಲ್ಲಿ ಭಾಗವಹಿಸುತ್ತವೆ.
ಸಾಕಷ್ಟು ಕಾನೂನು ಹೋರಾಟಗಳ ನಂತರ ಸುಪ್ರಿಂ ಕೋರ್ಟ್ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಗೂಳಿಗಳ ಹಬ್ಬಕ್ಕೆ ಒಪ್ಪಿಗೆ ಸಿಕ್ಕಿದೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಗೆ 7 ತಿಂಗಳು ಬಾಕಿ ಇರುವಾಗಲೇ ಗೂಳಿ ಮಾಲೀಕರು ಹಾಗೂ ಪಳಗಿಸುವವರು ಸಜ್ಜಾಗುತ್ತಾರೆ.
ಮದುರೈ ಜಿಲ್ಲೆಯ ಅಲಂಕಾನಲ್ಲೂರು ಬಳಿ ತಾನು ಸಾಕಿದ ಜಲ್ಲಿಕಟ್ಟು ಗೂಳಿಯನ್ನು ಬಿಟ್ಟಿರಲಾಗದೆ ಈಗಷ್ಟೆ ಮದುವೆಯಾಗಿದ್ದ ವಧು, ಆ ಗೂಳಿಯನ್ನು ತನ್ನೊಂದಿಗೆ ಪತಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮಧುರೈ ಜಿಲ್ಲೆ ಅಲಂಕಾನಲ್ಲೂರು ಬಳಿಯ ಅಯ್ಯನ್‌ಕೊಟ್ಟೈನ ವಧು ಶಿವಪಿರಿಯಾ ಮತ್ತು ನಾಗಮಲೈ ಪುದುಕೊಟ್ಟೈನ ವರ ರಾಜಪಾಂಡಿ 22.05.2023 ರಂದು ನಾಗಮಲೈ ಪುದುಕೊಟ್ಟೈ ಪಕ್ಕದಲ್ಲಿರುವ ಖಾಸಗಿ ಮಂಟಪದಲ್ಲಿಇಬ್ಬರ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದರು.
ವಧು ಶಿವಪ್ರಿಯಾ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಚಿಕ್ಕಂದಿನಿಂದ ಜಲ್ಲಿಕಟ್ಟು ಗೂಳಿಗಳನ್ನು ಸಾಕುತ್ತಿದ್ದರು. ಈಗ ಮದುವೆ ಆಗಿದ್ದರಿಂದ ತಾನೂ ಪ್ರೀತಿಯಿಂದ ಸಾಕಿದ ಗೂಳಿಯನ್ನು ಬಿಟ್ಟು ಹೋಗುವ ಸಂದರ್ಭ ಒದಗಿಬಂದಿದೆ.
ವಧು ಶಿವಪ್ರಿಯಾ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಚಿಕ್ಕಂದಿನಿಂದ ಜಲ್ಲಿಕಟ್ಟು ಗೂಳಿಗಳನ್ನು ಸಾಕುತ್ತಿದ್ದರು. ಈಗ ಮದುವೆ ಆಗಿದ್ದರಿಂದ ತಾನೂ ಪ್ರೀತಿಯಿಂದ ಸಾಕಿದ ಗೂಳಿಯನ್ನು ಬಿಟ್ಟು ಹೋಗುವ ಸಂದರ್ಭ ಒದಗಿಬಂದಿದೆ.
ಈ ಜಲ್ಲಿಕಟ್ಟು ಗೂಳಿ ಉತ್ತಮ ಉಡುಗೆ ತೊಟ್ಟು ಮುದ್ದಿನ ಗೂಳಿ ಕೂಡ ಮದುವೆಯಲ್ಲಿ ಭಾಗವಹಿಸಿತ್ತು. ಫೋಟೋ ಸೆಷನ್ ಕೂಡ ನಡೆಯಿತು . ಶಿವಪ್ರಿಯಾ ವಿವಾಹದ ನಂತರ ಗೂಳಿಯನ್ನು ಬಿಟ್ಟು ಹೋಗಲು ಸಾಧ್ಯವಾಗದ ಕಾರಣ ಕುಟುಂಬಸ್ಥರಿಗೆ ಹಾಗೂ ಗಂಡನ ಮನೆಯವರಿಗೆ ತನ್ನೊಂದಿಗೆ ಗೂಳಿ ಕರೆದುಕೊಂಡು ಹೋಗಲು ವಿನಂತಿಯನ್ನು ಮಾಡಿದ್ದಾಳೆ. ಅವಳು ವಿನಂತಿಯನ್ನು ಎರಡೂ ಕುಟುಂಬಸ್ಥರು ಒಪ್ಪಿದ್ದಾರೆ. ನಂತರ ಸಂತೋಷದ ಶಿವಪ್ರಿಯಾ ತನ್ನೊಂದಿಗೆ ಗೂಳಿಯನ್ನು ಕರೆದುಕೊಂಡು ಹೋಗಿದ್ದಾಳೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ