ವಧು ವಾಟ್ಸಪ್​ನಲ್ಲೇ ಕಾಲ ಕಳೆಯುತ್ತಾಳೆಂದು ಮದುವೆ ರದ್ದುಪಡಿಸಿದ ವರ !

news18
Updated:September 9, 2018, 1:25 PM IST
ವಧು ವಾಟ್ಸಪ್​ನಲ್ಲೇ ಕಾಲ ಕಳೆಯುತ್ತಾಳೆಂದು ಮದುವೆ ರದ್ದುಪಡಿಸಿದ ವರ !
news18
Updated: September 9, 2018, 1:25 PM IST
-ನ್ಯೂಸ್ 18 ಕನ್ನಡ

ಲಕ್ನೋ(ಸೆ.9): ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂಬ ಗಾದೆ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಈಗೇನಿದ್ದರೂ ಮೊಬೈಲ್​ ಇಲ್ಲದ ಮನೆಯಿಂದ ಹೆಣ್ಣು ತಾ ಎಂಬ ಹಾಸ್ಯ ಪ್ರಚಲಿತದಲ್ಲಿದೆ. ಈ  ಹಾಸ್ಯ ಕೂಡ ಗಂಭೀರ ಸ್ವರೂಪ ಪಡೆಯಬಹುದು ಎಂಬುದಕ್ಕೆ ಲಕ್ನೋನಲ್ಲಿ ಮುರಿದು ಬಿದ್ದಿರುವ ಮದುವೆಯ ಘಟನೆಯೇ ಸಾಕ್ಷಿ.

ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಮದುವೆ ಸಂಬಂಧ ಮುರಿದು ಬೀಳಲು ವಧು ವಾಟ್ಸಪ್ ಬಳಸುತ್ತಿರುವುದೇ ಕಾರಣವಂತೆ. ಮದುವೆ ನಿಶ್ಚಯಿಸಿದ ವಧು ಹೆಚ್ಚಾಗಿ ವಾಟ್ಸಪ್​​ನಲ್ಲೇ ಕಾಲ ಕಳೆಯುತ್ತಾಳೆಂದು ಆರೋಪಿಸಿ ಮದುವೆಯನ್ನು ರದ್ದುಗೊಳಿಸಿದ್ದಾರೆ.

ಬುಧವಾರ ನಡೆಯಬೇಕಿದ್ದ ವಿವಾಹ ಸಮಾರಂಭದ ಪಾರ್ಟಿಗಾಗಿ ವರನ ಕಡೆಯವರನ್ನು ವಧು ಕುಟುಂಬದವರು ಆಹ್ವಾನಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಯಾರೂ ಬರದೇ ಇದ್ದಿದ್ದರಿಂದ ವಧುವಿನ ಕಡೆಯವರು ವಿಚಾರಿಸಿದ್ದಾರೆ. ಈ ವೇಳೆ ಸಂಬಂಧವನ್ನು ಮುಂದೆ ಕೊಂಡೊಯ್ಯಲು ಬಯಸುವುದಿಲ್ಲ ಎಂದು ವರ ಕುಟುಂಬ ತಿಳಿಸಿದೆ. ಈ ಬಗ್ಗೆ ಕಾರಣ ಕೇಳಿದಾಗ ವಧು ಹೆಚ್ಚು ಸಮಯ ವಾಟ್ಸಪ್ ಬಳಸುತ್ತಿರುತ್ತಾಳೆ ಎಂದು ಹೇಳಿದ್ದಾರೆ.

ಆದರೆ ಇದನ್ನು ನಿರಾಕರಿಸಿರುವ ವಧುವಿನ ಕುಟುಂಬ, ಹುಡುಗನ ಕಡೆಯವರು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ಆ ಕಾರಣಕ್ಕಾಗಿ ಮದುವೆಯನ್ನು ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಧುವಿನ ತಂದೆ ಉರೊಜ್ ಮೆಹಂದಿ, ವರನ ಕುಟುಂಬ ವಿವಾಹ ನಡೆಯಬೇಕಿದ್ದರೆ 65 ಲಕ್ಷ ರೂ. ವರದಕ್ಷಿಣೆ ಕೇಳಿದ್ದಾರೆ ಎಂದು ಆಪಾದಿಸಿ ಕೇಸು ದಾಖಲಿಸಿದ್ದಾರೆ.

ಈ ಕುರಿತು ವಧು ಖಮರ್ ಹೈದರ್​ನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ವಧು ಸದಾಕಾಲ ವಾಟ್ಸಪ್​ನಲ್ಲೇ ಕಾಲ ಕಳೆಯುತ್ತಾಳೆ ಎಂದು ಮದುವೆ ನಿರ್ಧಾರವನ್ನು ಬದಲಿಸಿರುವುದಾಗಿ ವರ ತಿಳಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಒಟ್ಟಿನಲ್ಲಿ ವಾಟ್ಸಪ್​ನಲ್ಲೇ ವಿಚ್ಛೇಧನ ಸುದ್ದಿ ಕೇಳಿ ಬರುತ್ತಿರುವ ಕಾಲದಲ್ಲಿ 'ವಾಟ್ಸಪ್' ಆನ್​ಲೈನ್ ಸಿಗ್ನಲ್​ ಕೂಡ ಮದುವೆ ಮುರಿದು ಬೀಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...