Covishield: ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಸಾಕಷ್ಟು ವಿಚಾರಗಳು ಬದಲಾಗಿವೆ. ಮದುವೆಗೆ ಹೆಚ್ಚು ಜನ ಸೇರುವುದು ಕಡಿಮೆಯಾಗುತ್ತಿದೆ. ಮನೆಯಲ್ಲಿ ಸಮಾರಂಭಗಳು, ಪೂಜೆಗಳು ಕಡಿಮೆಯಾಗುತ್ತಿವೆ. ಕೊರೊನಾಗೆ ಲಕ್ಷಾಂತರ ಜೀವಿಗಳು ಬಲಿಯಾಗಿದ್ದು, ಭಾರತ ಸಹ ಎರಡನೇ ಅಲೆಗೆ ತತ್ತರಿಸಿ ಹೋಗಿದೆ. ಸದ್ಯ ಕೋವಿಡ್ - 19 ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕೊರೊನಾ ವಿರುದ್ಧದ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಈ ವಿಚಾರದಲ್ಲೂ ಯಾವ ಲಸಿಕೆ ಹಾಕಿಸಬೇಕು, ಯಾವುದು ಉತ್ತಮ ಅನ್ನೋ ಗೊಂದಲ ಹಲವರಲ್ಲಿದೆ. ಇದಿಷ್ಟೇ ಅಲ್ಲ, ತಾನು ಮದುವೆಯಾಗುವ ಹುಡುಗ ಅಥವಾ ನಮ್ಮ ಅಳಿಯ ಬೆಂಗಳೂರಲ್ಲಿ ಅಥವಾ ದೊಡ್ಡ ಸಿಟಿಯಲ್ಲಿ ಇರಬೇಕು ಅನ್ನೋ ಆಸೆಗಳು ಕೂಡ ಕಡಿಮೆಯಾಗುತ್ತಿದ್ದು, ಮನೆಯಲ್ಲೇ ಇದ್ರೂ ಒಳ್ಳೆ ಹುಡುಗ ಸಿಕ್ಕರೆ ಸಾಕಪ್ಪಾ ಅನ್ನೋ ಹಾಗೆ ಮಾಡಿದೆ ಈ ಕೊರೊನಾ. ಈ ಕೊರೊನಾ ದೂರ ಮಾಡಲು ಲಸಿಕೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ಗಳನ್ನು ಹಾಕಿಕೊಲ್ಳುವುದೇ ಪರಿಣಾಮಕಾರಿ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ಇದೇ ರೀತಿ, ವೈರಲ್ ಆದ ಜಾಹೀರಾತಿನಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಹುಡುಗನನ್ನು ಹುಡುಕಲಾಗುತ್ತಿದೆ.
ಹೌದು! ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಅನ್ನು ಹಾಕಿಸಿಕೊಂಡಿರುವ ವರನನ್ನು ಯುವತಿ ಹುಡುಕುತ್ತಿದ್ದಾಳಂತೆ. ಜೂನ್ 4, 2021 ರಂದು ಪತ್ರಿಕೆಯೊಂದರ ವೈವಾಹಿಕ ಅಂಕಣದಲ್ಲಿ ಕಾಣಿಸಿಕೊಂಡಂತೆ ಇರುವ ಈ ಜಾಹೀರಾತಿನಲ್ಲಿ ಸ್ವಯಂ ಉದ್ಯೋಗಿ ರೋಮನ್ ಕ್ಯಾಥೊಲಿಕ್ ಮಹಿಳೆ ತನ್ನ ಧರ್ಮದ ವ್ಯಕ್ತಿಯೊಂದಿಗೆ ವಿವಾಹವಾಗಲು ಬಯಸಿದ್ದಾಳೆ. ಆದರೆ, ಷರತ್ತು ಮಾತ್ರ ವಿಭಿನ್ನವಾಗಿದೆ. ಅದು, ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ಗಳನ್ನು ತಾನು ಹಾಕಿಸಿಕೊಂಡಿದ್ದೇನೆ. ಅದೇ ರೀತಿ, ತನ್ನನ್ನು ಮದುವೆಯಾಗುವ ಹುಡುಗ ಸಹ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿರುವುದು ವೈರಲ್ ಆಗುತ್ತಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ''ಲಸಿಕೆ ಹಾಕಿಸಿಕೊಂಡ ವಧು ಲಸಿಕೆ ಹಾಕಿಸಿಕೊಂಡ ವರನನ್ನು ಹುಡುಕುತ್ತಿದ್ದಾಳೆ..! ತನ್ನ ಆದ್ಯತೆಯ ಮದುವೆ ಆಕೆಗೆ ಬೂಸ್ಟರ್ ಡೋಸ್ ಆಗುವುದರಲ್ಲಿ ಸಂಶಯವಿಲ್ಲ!? ಇದು ನಮ್ಮ ಹೊಸ ಸಾಧಾರಣವಾಗಲಿದೆಯೇ?'' ಎಂದು ತರೂರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
Vaccinated bride seeks vaccinated groom! No doubt the preferred marriage gift will be a booster shot!? Is this going to be our New Normal? pic.twitter.com/AJXFaSAbYs
— Shashi Tharoor (@ShashiTharoor) June 8, 2021
ಒಬ್ಬ ಬಳಕೆದಾರ '' ಹಾ ಹಾ ಹಾ !! ಕೋವಿಡ್ ಲಸಿಕೆಗಳು ಅಂತಿಮವಾಗಿ ಮ್ಯಾಟ್ರಿಮೋನಿಯಲ್ ಜಾಹೀರಾತು ಪ್ರವೇಶಿಸಿದೆ ! ಬಹುಶ: ಮುಂದಿನದು ಹೀಗಿರಬಹುದು - ''ಕೋವಿಡ್ನಿಂದ ಚೇತರಿಸಿಕೊಂಡಿರುವ ಹಾಗೂ ಆ್ಯಂಟಿಬಾಡಿಯನ್ನು ಅಭಿವೃದ್ಧಿಪಡಿಸಿಕೊಂಡಿರುವ ಹುಡುಗಿಗೆ ಅದೇ ರೀತಿಯ ಹುಡುಗ ಬೇಕಾಗಿದ್ದಾನೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ವ್ಯಂಗ್ಯವಾಗಿ, “ಈಗ ಜಾತಿ ಮತ್ತು ಧರ್ಮದ ಜೊತೆಗೆ ಲಸಿಕೆ ಕಡ್ಡಾಯವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Wedding Cancel: ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಕ್ಕೆ, ಮದುವೆ ಬೇಡ, ಹೋಗು ಎಂದ ಮದುಮಗಳು, ಮದುವೆ ಕ್ಯಾನ್ಸಲ್ !
ಅಂದಹಾಗೆ, ಈ ರೀತಿ ಜಾಹೀರಾತು ಹಾಕಿದ ಹುಡುಗಿ ಯಾರಪ್ಪಾ ಅನ್ನೋ ಡೌಟ್ ನಿಮಗೂ ಬಂದಿದ್ಯಾ.. ಇಲ್ಲಿದೆ ಉತ್ತರ:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಜಾಹೀರಾತು ನಕಲಿ ಎಂದು ತಿಳಿದುಬಂದಿದೆ. ಕೋವಿಡ್ - 19 ಲಸಿಕೆಯ ಡೋಸ್ ಪಡೆಯುವುದನ್ನು ಪ್ರೋತ್ಸಾಹಿಸಲು ಗೋವಾ ನಿವಾಸಿಯ ಅಭಿಯಾನವಾಗಿದೆ. ಗೋವಾದ ಅಲ್ಡೋನಾದಲ್ಲಿ ಸಮುದಾಯ ಫಾರ್ಮಸಿಸ್ಟ್ ಆದ ಸವಿಯೊ ಫಿಗುರೆಡೊ ಈ ಜಾಹೀರಾತನ್ನು ರಚಿಸಿದ್ದು, ತಮ್ಮ ಫೇಸ್ಬುಕ್ನಲ್ಲಿ ಜಾಕಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ