• Home
  • »
  • News
  • »
  • national-international
  • »
  • Uttarakhand: ಡ್ಯಾನ್ಸ್​ ಮಾಡುತ್ತಾ ಕುಸಿದು ಬಿದ್ದ ತಂದೆ, ಮಗಳ ಮದುವೆಯ ಹಿಂದಿನ ದಿನವೇ ದಾರುಣ ಸಾವು!

Uttarakhand: ಡ್ಯಾನ್ಸ್​ ಮಾಡುತ್ತಾ ಕುಸಿದು ಬಿದ್ದ ತಂದೆ, ಮಗಳ ಮದುವೆಯ ಹಿಂದಿನ ದಿನವೇ ದಾರುಣ ಸಾವು!

ಉತ್ತರಾಖಂಡ ಮದುವೆ

ಉತ್ತರಾಖಂಡ ಮದುವೆ

ಭಾನುವಾರ ಮದುವೆ ನಡೆಯಬೇಕಿತ್ತು. ಆದರೆ ವಧುವಿನ ತಂದೆ ಶನಿವಾರವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಅಲ್ಮೋರಾದಲ್ಲಿರುವ ವಧುವಿನ ಮನೆಯಲ್ಲಿಈ ಘಟನೆ ನಡೆದಿದ್ದು, ವಧುವಿನ ತಂದೆ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಡ್ಯಾನ್ಸ್ ಫ್ಲೋರ್ ಮೇಲೆ ಬಿದ್ದಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಒಬ್ಬ ತಂದೆಗೆ ಮಗಳ ಮದುವೆ (Marriage) ಮಾಡುವುದು ಅಂದರೆ ಒಂದು ದೊಡ್ಡ ಕನಸೇ ಆಗಿರುತ್ತದೆ. ಹೆಣ್ಣು ಮಗು ಹುಟ್ಟಿದಾಗಲಿಂದಲೇ ತಂದೆ- ಮಗಳ ಬಾಂಧವ್ಯ ಶುರುವಾಗುತ್ತದೆ. ಹೆತ್ತು, ಹೊತ್ತು ಸಾಕಿ ಸಲುಹುವುದು ತಾಯಿಯೇ ಆದರೂ, ಮಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದೇ ಅಪ್ಪ. ಪುಟ್ಟ ಮಗುವಿದ್ದಾಗಲಿನಿಂದಲೂ ತಂದೆಯ ಎದೆಗೆ ಒದ್ದು, ಹೆಗಲ ಮೇಲೆ ಕೂಸು ಮರಿ ಮಾಡಿಸಿಕೊಂಡು ಬೆಳೆದು ನಂತರ ಮದುವೆ ವಯಸ್ಸಿಗೆ ಬಂದಾಗ ನನ್ನ ಮಗಳು ಇಷ್ಟು ಬೇಗ ದೊಡ್ಡವಳಾಗಿಬಿಟ್ಟಳಾ ಎಂದು ಎಷ್ಟೋ ತಂದೆ (Father) ಆಶ್ಚರ್ಯ ಪಡುತ್ತಾರೆ. ತಾಯಿಯಷ್ಟೇ ಮಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ತಂದೆಗೆ, ತನ್ನ ಮಗಳ ಮದುವೆ ಮಾಡುತ್ತಿದ್ದೇನೆ ಎಂದು ಅದು ಒಂದು ರೀತಿ ಹೆಮ್ಮೆಯ ವಿಚಾರ. ಮಗಳ ಸಂತೋಷಕ್ಕಿಂತ ತಂದೆ ಏನನ್ನು ಹೆಚ್ಚಾಗಿ ಬಯಸುವುದಿಲ್ಲ. ಆದರೆ ಉತ್ತರಾಖಂಡದಲ್ಲಿ (Uttarakhand) ವ್ಯಕ್ತಿಯೊಬ್ಬರು  ಮಗಳಿಗೆ ಮದುವೆ ಮಾಡುವ ಭರದಲ್ಲಿ ಸಂತಸದಿಂದ ಕುಣಿದು (Dance) ಸಾವನ್ನಪ್ಪಿದ್ದಾರೆ. ಅದರಲ್ಲೂ ದುರದೃಷ್ಟವಶಾತ್ ಅಂದರೆ ಮಗಳ ಮದುವೆಯ ಹಿಂದಿನ ದಿನವೇ ತಂದೆ ಸಾವನ್ನಪ್ಪಿದ್ದಾರೆ.


ವಧುವಿನ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದ ತಂದೆ


ಹೌದು, ಭಾನುವಾರ ಮದುವೆ ನಡೆಯಬೇಕಿತ್ತು. ಆದರೆ ವಧುವಿನ ತಂದೆ ಶನಿವಾರವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಅಲ್ಮೋರಾದಲ್ಲಿರುವ ವಧುವಿನ ಮನೆಯಲ್ಲಿಈ ಘಟನೆ ನಡೆದಿದ್ದು, ವಧುವಿನ ತಂದೆ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಡ್ಯಾನ್ಸ್ ಫ್ಲೋರ್ ಮೇಲೆ ಬಿದ್ದಿದ್ದಾರೆ.


ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆಯೇ ವ್ಯಕ್ತಿ ಸಾವನ್ನಪ್ಪಿರುವುದಾಗಿ  ವೈದ್ಯರು ಘೋಷಿಸಿದ್ದಾರೆ. ಅಲ್ಲದೇ ವಧುವಿನ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದೀಗ ಪೊಲೀಸರು ವ್ಯಕ್ತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


ಭಾನುವಾರ ಸರಳವಾಗಿ ಮದುವೆಯಾದ ವಧು


ಮದುವೆ ವೇಳೆ ನಡೆಸಲಾಗುವ ಅರಿಶಿನ ಶಾಸ್ತ್ರ ಮುಗಿಸಿದ ಬಳಿಕ ಕೆಲವು ಕುಟುಂಬಸ್ಥರು ಮನೆಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ. ತಂದೆ ಸಾವನ್ನಪ್ಪಿದ ಹಿನ್ನೆಲೆ ಭಾನುವಾರ ವಧು ಸರಳವಾಗಿ ವಿವಾಹವಾಗಿದ್ದಾರೆ. ಇನ್ನೂ ವಧುವಿನ ಕನ್ಯಾದಾನವನ್ನು ಆಕೆಯ ತಾಯಿಯ ಚಿಕ್ಕಪ್ಪ ಮಾಡಿದರು.


ಒಬ್ಬ ಮಗಳಿಗೆ ತಂದೆಯೇ ಮೊದಲ ಹೀರೋ. ತಂದೆಯೊಬ್ಬನ ಬೆಂಬಲಿವಿದ್ದರೆ ಆಕೆ ಏನು ಬೇಕಾದರೂ ಸಾಧಿಸುತ್ತಾಳೆ.  ಆತ್ಮವಿಶ್ವಾಸವಲ್ಲದೇ, ಬದುಕಿನಲ್ಲಿ ಏನು ಸಾಧಿಸಬೇಕು ಎಂಬುದರ ಕುರಿತೂ ಗಟ್ಟಿಯಾದ ನಿಲುವು ತಾಳುವಂತಹ ಶಕ್ತಿಯನ್ನು ಆಕೆಗೆ ನೀಡುವುದು ಅಪ್ಪನೆಂಬ ಭದ್ರತೆಯ ಭಾವ. ಆದರೆ ಮಗಳ ಮದುವೆ ನೋಡಬೇಕೆಂದು ಸಾಕಷ್ಟು ಕನಸ್ಸು ಹೊಂದಿದ್ದ ತಂದೆಯೇ ಇನ್ನೇನೂ ಮದುವೆಗೆ ಕೇವಲ ಒಂದು ದಿನ ಇರುವಾಗಲೇ ಸಾವನ್ನಪ್ಪಿದ್ದು, ನಿಜಕ್ಕೂ ವಿಧಿ ಎಂದೇ ಹೇಳಬಹುದು.


ಗರ್ಬಾ ನೃತ್ಯ ವೇಳೆ ಕುಸಿದು ಬಿದ್ದಿದ್ದ ಮಗ


ಇದೇ ರೀತಿ ಕೆಲವು ತಿಂಗಳ ಹಿಂದೆಯಷ್ಟೇ  ನವರಾತ್ರಿ ವೇಳೆ ಗರ್ಬಾ ನೃತ್ಯ ಮಾಡುತ್ತಲೇ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದನು. ಈ ಸುದ್ದಿ ಕೇಳಿ ಆತನ ತಂದೆ ಕೂಡ ಕುಸಿದು ಸಾವನ್ನಪ್ಪಿದ್ದ ಘಟನೆ ಮುಂಬೈ​ನಲ್ಲಿ ನಡೆದಿತ್ತು.


ಪುತ್ರನ ಸಾವಿನ ಸುದ್ದಿ ಕೇಳಿ ತಂದೆಯೂ ಮೃತ


ಮುಂಬೈನ ಪಲ್ಗಾರ್ ಜಿಲ್ಲೆಯ ವಿರಾರ್‌ನಲ್ಲಿ ರಾತ್ರಿ ಆಯೋಜಿಸಿದ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ 35 ಹರೆಯದ ಮನೀಶ್ ನರಾಪ್ಜಿ ಸೋನಗ್ರ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದನು. ತಕ್ಷಣೆ ಕಾರ್ಯಪ್ರವೃತ್ತರಾದ ಮನೀಶ್ ತಂದೆ, ಮಗನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಕೆಲ ಹೊತ್ತಿನ ಬಳಿಕ ನಿಮ್ಮ ಮಗ ಬದುಕುಳಿದಿಲ್ಲ ಎಂದು ತಂದೆಗೆ ಹೇಳಿದ್ದಾರೆ. ಈ ಸುದ್ದಿ ಕೇಳಿದ ತಂದೆ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದರು.

Published by:Monika N
First published: