ಚೀನಾ: ಮದುವೆ (Marriage) ಎಂಬುವುದು ಒಂದು ಪವಿತ್ರ ಬಂಧ. ಈ ಪವಿತ್ರ ಬಂಧದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರು ಜೀವನ ಪರ್ಯಂತ ಒಟ್ಟಿಗೆ ಇರುತ್ತಾರೆ. ಆದ್ದರಿಂದ ಈ ವಿಶೇಷ ದಿನವನ್ನು ಮತ್ತಷ್ಟು ಸುಮಧುರಗೊಳಿಸಲು ಜನರು ಮದುವೆ ದಿನ ಅನೇಕ ವಿಭಿನ್ನ ಆಚರಣೆಗಳನ್ನು ಮಾಡುತ್ತಾರೆ. ಹೊಸ ಜೀವನ ಆರಂಭಿಸುವ ಮುನ್ನ ಜನ ಹಿಂದೆ ನಡೆದ ಕೆಟ್ಟ ವಿಚಾರಗಳನ್ನು ಅಥವಾ ಅವರು ಅನುಭವಿಸಿದ ಕೆಟ್ಟ ಅನುಭವಗಳನ್ನು ಮರೆಯುವುದು ತುಂಬಾ ಅಗತ್ಯ. ಆದರೆ ಮದುವೆ ಮನೆಯಲ್ಲಿ ಇದ್ದಕ್ಕಿದ್ದಂತೆ ಮಾಜಿ ಗೆಳೆಯ (Ex BoyFriend) ಅಥವಾ ಮಾಜಿ ಗೆಳತಿ (Ex GirlFriend) ನಿಮ್ಮ ಕಣ್ಣೇದುರು ಬಂದರೆ ಏನಾಗಬಹುದು? ನೀವು ಎಂದಾದರೂ ಅದರ ಬಗ್ಗೆ ಯೋಚಿಸಿದ್ದೀರಾ? ಹೌದು ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಚೀನಾದಲ್ಲಿ (China) ನಡೆದ ವಿವಾಹ ಸಮಾರಂಭವೊಂದರಲ್ಲಿ ವಧು (Bride) ಒಬ್ಬಳು ತನ್ನ ಐವರು ಮಾಜಿ ಗೆಳೆಯರನ್ನು ಮದುವೆಗೆ ಆಹ್ವಾನಿಸಿದ ಘಟನೆ ನಡೆದಿದೆ. ಅಷ್ಟೇ ಅಲ್ಲದೇ ಸಮಾರಂಭದುದ್ದಕ್ಕೂ ಅವರಿಗೆ ವಿಶೇಷ ಉಪಚಾರ ನೀಡಲಾಗಿದ್ದು, ಊಟಕ್ಕೆ ವಿಶೇಷ ಟೇಬಲ್ ಕೂಡ ಹಾಕಲಾಗಿತ್ತು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಊಟದ ಮೇಜಿನ ಮೇಲೆ 'ಮಾಜಿ ಗೆಳೆಯರ ಟೇಬಲ್' ಪೋಸ್ಟ್
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಈ ಮದುವೆ ಜನವರಿ 8ರಂದು ನಡೆದಿದ್ದು, ಮದುವೆಯಲ್ಲಿ ವಧುವಿನ 5 ಜನ ಬಾಯ್ಫ್ರೆಂಡ್ ಡೈನಿಂಗ್ ಟೇಬಲ್ ಮೇಲೆ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಎಲ್ಲರನ್ನು ವಿಶೇಷವಾಗಿ ಮದುವೆಗೆ ಆಹ್ವಾನಿಸಲಾಗಿತ್ತು. ಮದುವೆಯಲ್ಲಿ ಊಟದ ಟೇಬಲ್ ಮೇಲೆ ಅವರಿಗಾಗಿ ಒಂದು ನೇಮ್ ಬೋರ್ಡ್ ಕೂಡ ಹಾಕಲಾಗಿತ್ತು. ಅದರಲ್ಲಿ 'ಮಾಜಿ ಗೆಳೆಯರ ಟೇಬಲ್' ಎಂದು ಬರೆಯಲಾಗಿತ್ತು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ವಿಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರಿಂದ ಭಿನ್ನ ಭಿನ್ನವಾದ ಕಾಮೆಂಟ್
ಮತ್ತೊಬ್ಬರು ಮಾಜಿ ಗೆಳೆಯರನ್ನು ಮದುವೆಗೆ ಕರೆಯಲು ತುಂಬಾ ಧೈರ್ಯಬೇಕು. ನೀವು ಗಟ್ಟಿಗಿತ್ತಿ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ಇದರಿಂದ ನಿಮ್ಮ ಗಂಡನ ಜೊತೆಗಿರುವ ಸಂಬಂಧ ಹಾಳಾಗಬಹುದು ಎಂದಿದ್ದಾರೆ. ಮತ್ತೋರ್ವ ಇದರಿಂದ ವಧು ಏನು ಸಾಬೀತು ಪಡಿಸಲು ಹೊರಟಿದ್ದಾರೆ? ನಿಜವಾಗಿಯೂ ಇದರಿಂದ ನನಗೆ ಆಶ್ಚರ್ಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಮದುವೆ ಸಮಾರಂಭದ ವೇದಿಕೆ ಮೇಲೆಯೇ ವಧು-ವರನ ಫೈಟ್
ಮತ್ತೊಂದು ಮದುವೆ ಸಮಾರಂಭದಲ್ಲಿ ವಧು ಮತ್ತು ವರ ಇಬ್ಬರು ಕೂಡ ವೇದಿಕೆ ಮೇಲೆ ಬೂಟಿನಿಂದ ಹೊಡೆದಾಡಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಧು-ವರ ಒಬ್ಬರಿಗೊಬ್ಬರು ಎದುರು-ಬದರು ನಿಂತು ಮಾತಿನ ಚಕಮಕಿಯಲ್ಲಿ ತೊಡಗಿರುತ್ತಾರೆ. ಇದರಿಂದ ತೀವ್ರ ಕೋಪಗೊಂಡ ವರ ಕಾಲಿನಿಂದ ಬೂಟನ್ನು ತೆಗೆದು ವಧುವಿನ ಮೇಲೆ ಹಲ್ಲೆ ನಡೆಸುತ್ತಾನೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ