ಗಾಂಧಿನಗರ: ವಿವಾಹದ (Marriage) ಸಂಭ್ರಮದಲ್ಲಿರಬೇಕಾದ ಕಲ್ಯಾಣ ಮಂಠಪ ತಾಳಿ ಕಟ್ಟುವ ಕೆಲವೇ ಕ್ಷಣದಲ್ಲಿ ಸಾವಿನ ಮನೆಯಾಗಿ ಕಣ್ಣೀರ ಕಡಲಲ್ಲಿ ಮುಳುಗಿದೆ. ದುರದೃಷ್ಟಕರ ಘಟನೆಯೊಂದರಲ್ಲಿ, ಹಸಮಣೆ ಏರಿ ಹೊಸ ಜೀವನದ ಕನಸಿನಲ್ಲಿದ್ದ ವಧುವೊಬ್ಬಳು (Bride) ವಿವಾಹದ ವಿಧಿ ವಿದಾನಗಳು ನಡೆಯುತ್ತಿರುವಾಗಲೇ ಹೃದಯಘಾತದಿಂದ (Heart Attack) ಮೃತಪಟ್ಟ ದಾರುಣ ಘಟನೆ ಗುಜರಾತಿನ (Gujarat) ಸುಭಾಷ್‍ನಗರದ ಭಾವನಗರದಲ್ಲಿ ನಡೆದಿದೆ. ವಧು ಹೇತಾಲ್ ಹಾಗೂ ವರ ವಿಶಾಲ್ ಮದುವೆ ಕಾರ್ಯಕ್ರಮದ ಪ್ರಕ್ರಿಯೆಯಲ್ಲಿದ್ದರು. ಮದುವೆಯ ವಿಧಿವಿಧಾನಗಳ ಸಮಯದಲ್ಲಿ, ವಧು ಮೂರ್ಛೆ ಹೋಗಿದ್ದಾಳೆ. ನಂತರ ಆಕೆಯನ್ನು ಹತ್ತಿರದ ಆಸ್ಪತ್ರೆಗೆ (Hospital) ಸಾಗಿಸಲಾಗಿದೆ. ಆದರೆ ವಧು ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ವಧುವಿನ ತಂಗಿಯೊಡನೆ ಮದುವೆ
ಹೇತಾಲ್ ಅವರ ದುರಾದೃಷ್ಟಕರ ಸಾವಿನ ನಡುವೆಯೂ ಸಂಬಂಧಿಕರು ಕುಟುಂಬಸ್ತರು ಮದುವೆಯನ್ನು ಮುಂದುವರಿಸಲು ಯುವತಿಯ ಕುಟುಂಬಸ್ಥರಿಗೆ ಮನವಿ ಮಾಡಿದ್ದಾರೆ. ಹೇತಾಲ್ ಸಾವಿನಿಂದ ಶೋಕತಪ್ತ ಕುಟುಂಬಸ್ಥರು ವಧುವಿನ ತಂಗಿಯನ್ನು ವರನಿಗೆ ಕೊಟ್ಟು ಮದುವೆ ಮಾಡುವಂತೆ ಸೂಚಿಸಿದ್ದಾರೆ. ಶುಭಕಾರ್ಯ ಮುಗಿಯುವವರೆಗೆ ಹೇತಾಲ್ ಮೃತ ದೇಹವನ್ನು ಸಮಾರಂಭ ಮುಗಿಯುವವರೆಗೂ ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ.
ಬಾಲ್ಕನಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ವಿವಾಹದ ವಿಧಿವಿದಾನದ ವೇಳೆ ಹೇತಾಲ್‌ಗೆ ತಲೆಸುತ್ತು ಬಂದಂತಾಗಿದೆ. ಈ ವೇಳೆ ಸ್ವಲ್ಪ ತಾಜಾ ಗಾಳಿಯನ್ನು ಪಡೆಯಲು ಬಾಲ್ಕನಿ ಕಡೆ ಹೋಗಿದ್ದಾರೆ. ಸಮಯವಾದರೂ ಹೇತಾಲ್ ಎಲ್ಲಿಯೂ ಕಾಣದಿದ್ದಾಗ, ಟೆರೇಸ್‌ನಲ್ಲಿ ಜನರು ಹೇತಾಲ್‌ಗಾಗಿ ಹುಡುಕಾಡಿದ್ದಾರೆ. ಕೊನೆಗೆ ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲ್ಕನಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ನಂತರ ಹೇತಾಲ್ ಅವರ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಹೇತಾಲ್ ಮಾರ್ಗಮಧ್ಯೆಯೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಹೇತಾಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Heart Attack: ಬದುಕು ಅನ್ನೋದು ಇಷ್ಟೇ ನೋಡಿ, ಈ ವಿಡಿಯೋ ನೋಡಿದ್ರೆ ನಿಮಗೆ ಅರ್ಥ ಆಗುತ್ತೆ!
ಮಾದರಿಯಾದ ವಧುವಿನ ಕುಟುಂಬ
ಭಾವನಗರ ನಗರದ ಕಾರ್ಪೋರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್ ಮಾತನಾಡಿ, ಘಟನೆ ಅತ್ಯಂತ ದುಃಖಕರವಾಗಿದೆ. ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ಸಮುದಾಯದ ಜನರ ಮಾತಿಗೆ ಬೆಲೆ ಕೊಟ್ಟು, ವಿವಾಹವನ್ನು ಮುಂದುವರಿಸಿ ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಹಳದಿ ಸಮಾರಂಭದ ವೇಳೆ ಸಾವು
ಫೆಬ್ರವರಿ 20 ರಂದು ಹೈದರಾಬಾದ್ ನಗರದ ಕಾಲಾ ಪಥರ್ ಪ್ರದೇಶದಲ್ಲಿ ವರನಿಗೆ ಅರಿಸಿನ ಹಚ್ಚುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಮೊಹಮ್ಮದ್ ರಬ್ಬಾನಿ ಎಂಬ ವ್ಯಕ್ತಿ ಹಳದಿ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಅರಿಸಿನ ಲೇಪಿಸುವಾಗಲೇ ಕೊನೆಯುಸಿರು
ವೈರಲ್ ಆಗುತ್ತಿರುವ ಈ ಹಳದಿ ಸಮಾರಂಭದ ವೀಡಿಯೊದಲ್ಲಿ ರಬ್ಬಾನಿ ವರನ ಪಾದಗಳ ಮೇಲೆ ಅರಿಶಿನವನ್ನು ಲೇಪಿಸುತ್ತಿದ್ದರು. ಸಮಾರಂಭದಲ್ಲಿದ್ದ ಅತಿಥಿಗಳೊಂದಿಗೆ ನಗುತ್ತಾ ಮಾತನಾಡುತ್ತಿದ್ದರು . ಸ್ಥಳದಲ್ಲಿ ಹಾಜರಿದ್ದ ಇತರ ಅತಿಥಿಗಳು ನಗುವುದು ಮತ್ತು ಹಾಸ್ಯ ಚಟಾಕಿ ಹಾರಿಸುವುದು ಈ ವಿಡಿಯೋದಲ್ಲಿ ನೋಡಬಹುದು. ಆದರೆ ನಗು ನಗುತ್ತಲೇ ಅರಿಶಿನ ಹಚ್ಚಲು ಬಾಗಿದಾಗ ಹೃದಯ ಸ್ತಂಭನಕ್ಕೊಳಗಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.
ವರ ಮತ್ತು ಇತರ ಅತಿಥಿಗಳು ತಕ್ಷಣವೇ ಅವರನ್ನು ತಕ್ಷಣ ಕುಸಿದು ಬಿದ್ದಿದ್ದ ರಬ್ಬಾನಿಯವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮರುದಿನ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ತಿಳಿದುಬಂದಿದೆ. ರಬ್ಬಾನಿ ದಿಢೀರ್ ಮರಣದ ನಂತರ ಮದುವೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ