ಉತ್ತರ ಪ್ರದೇಶ: ವಿಚಿತ್ರ ಕಾರಣಗಳಿಗೆ ಮದುವೆಗಳು (Marriage) ನಿಲ್ಲುತ್ತಿರುವುದನ್ನು ನಾವು ಕೇಳುತ್ತಿದ್ದಾರೆ. ವರ ಹೆಚ್ಚು ಓದಿಲ್ಲ ಅಂತಾ, ವರದಕ್ಷಿಣೆ (Dowry) ಕೊಡಲಿಲ್ಲ, ಊಟ ಸರಿಯಿಲ್ಲ ಎಂಬ ಕಾರಣಗಳಿಗೆ ಮದುವೆಗಳೂ ನಿಂತಿವೆ. ಆದರೆ ಇಲ್ಲಿ ಮಧುಮಗಳೊಬ್ಬಳು (Bride) ಮದುವೆಯನ್ನೇ ಮುರಿದುಕೊಂಡಿರುವ ಕಾರಣ ಕೇಳಿದರೆ ಅಚ್ಚರಿ ಪಡುತ್ತೀರ. ಹೌದು, ವರನ ಕಡೆಯವರು ತನಗಾಗಿ ಕಡಿಮೆ ಆಭರಣ ತಂದಿದ್ದಾರೆ ಎಂಬ ಕಾರಣಕ್ಕೆ ವಧು ಮತ್ತು ಆಕೆಯ ಕುಟುಂಬಸ್ಥರು ಜಗಳ ಮಾಡಿ ಮದುವೆಯನ್ನು ರದ್ದುಗೊಳಿಸಿದ್ದಾಳೆ.
ಅದ್ದೂರಿಯಾಗಿ ನಡೆದ ಕಾರ್ಯಕ್ರಮಗಳು
ವರದಿಯ ಪ್ರಕಾರ, ಕಾನ್ಪುರ ದೇಹತ್‌ನ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಮನ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ 30 ರಂದು (ಭಾನುವಾರ) ಮನ್‌ಪುರ ಗ್ರಾಮದ ವರನ ಮದುವೆಯನ್ನು ಬನ್ವಾರಿಪುರ ಗ್ರಾಮದ ಹುಡುಗಿಯೊಂದಿಗೆ ನಿಗದಿಪಡಿಸಲಾಗಿತ್ತು. ವರನು ತನ್ನ ಸಂಬಂಧಿಕರೊಡನೆ ಅದ್ದೂರಿ ಮೆರವಣಿಗೆಯಲ್ಲಿ ವಧುವಿನ ಮನೆಗೆ ತಲುಪಿದನು. ಇತ್ತ ವಧುವಿನ ಕುಟುಂಬ ಕೂಡ ವರನ ಕುಟುಂಬವವನ್ನು ಒಳ್ಳೆಯ ರೀತಿಯಲ್ಲೇ ಸ್ವಾಗತಿಸಿತು. ಆದರೆ ಮದುವೆಯ ವಿಧಿವಿಧಾನವು ವರ್ಮಲಾ ಸಮಾರಂಭದೊಂದಿಗೆ ಪ್ರಾರಂಭವಾಯಿತು, ನಂತರ ವರನ ಕುಟುಂಬವು ವಧುವಿಗೆ ಖರೀದಿಸಿದ ಆಭರಣಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಮದುವೆಯ ಮಂಟಪದಲ್ಲಿ ವಧುವಿನ ಕುಟುಂಬದವರಿಗೆ ನೀಡಿದರು.
ಇದನ್ನೂ ಓದಿ: Brother-Sister: ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ! 5 ವರ್ಷದ ಪ್ರೀತಿ ಬಳಿಕ ಹಸೆಮಣೆ ಏರಿದ ಜೋಡಿ
ಚಿನ್ನ ಕಡಿಮೆ ಆಗಿದ್ದಕ್ಕೆ ಶುರುವಾಯ್ತು ಜಗಳ
ಆದರೆ, ವರನ ಮನೆಯವರು ನೀಡಿದ ಚಿನ್ನಾಭರಣಗಳಿಂದ ವಧು ಮತ್ತು ಆಕೆಯ ಕುಟುಂಬದವರು ಸಂತುಷ್ಟರಾಗಿರಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ಇದರ ಬೆನ್ನಲ್ಲೆ ಎರಡೂ ಕುಟುಂಬದವರ ನಡುವೆ ಜಗಳ ನಡೆದಿದೆ. ನಂತರ ವರ ಮತ್ತು ವಧುವಿನ ಕುಟುಂಬದವರು ಪೊಲೀಸ್ ಠಾಣೆಗೆ ತಲುಪಿದ್ದಾರೆ.
ಪೊಲೀಸ್ ಸ್ಟೇಷನ್ನಲ್ಲೇ ಸೆಟ್ಲ್ಮೆಂಟ್
ಎರಡೂ ಕುಟುಂಬದವರು ಪೊಲೀಸ್ ಠಾಣೆ ತಲುಪಿದ್ದು, ವಧು ಕಡೆಯವರು ವರದಕ್ಷಿಣೆ ದೂರು ನೀಡಿದ್ದಾರೆ. ಆದರೆ ವರನ ಕುಟುಂಬದವರು ವಧುವಿನ ಮನೆಯವರು ತಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ವರನ ತಂದೆ ಆರೋಪಿಸಿದ್ದಾರೆ. ಜೊತೆಗೆ ವಧುವಿನ ಮನೆಯವರು ತಾವು ಕೊಂಡೊಯ್ದ ಚಿನ್ನಾಭರಣ ಮತ್ತು ಉಡುಗೊರೆಗಳನ್ನು ಹಿಂತಿರುಗಿಸುತ್ತಿಲ್ಲ ಎಂದು ಆರೋಪಿಸಿದರು. ಪೊಲೀಸ್ ಠಾಣೆಯಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಸಿದ ಬಳಿಕ ಎರಡೂ ಕಡೆಯವರು ಒಪ್ಪಿಗೆ ಪಡೆದು ತಮ್ಮ ತಮ್ಮ ಮನೆಗೆ ಹಿಂತಿರುಗಿದ್ದಾರೆ.
ಹಳೆಯ ಬೆಡ್ ನೀಡಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್
ಇದೇ ರೀತಿ ಹೈದರಾಬಾದ್ನಲ್ಲಿ ವಿಚಿತ್ರ ಕಾರಣಕ್ಕೆ ಮದುವೆ ನಿಂತಿತ್ತು. ವಧುವಿನ ಕುಟುಂಬಸ್ಥರು ಹಳೆಯ ಬೆಡ್ ನೀಡಿದ್ದಾರೆ ಎಂಬ ಕಾರಣಕ್ಕೆ ಮದುವೆಯನ್ನೇ ನಿಲ್ಲಿಸಿದ್ದ. ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಎರಡನೇ ವಿವಾಹ ಆಗಲಿದ್ದ. ವಧುವಿಗೂ ಇದು 2ನೇ ವಿವಾಹವಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುವುದಾಗಿ ವಧುವಿನ ತಂದೆ ಮೊದಲೇ ಹೇಳಿದ್ದರು. ಆದರೆ ಈ ಎಲ್ಲಾ ಷರತ್ತುಗಳನ್ನು ಮೊದಲು ಒಪ್ಪಿಕೊಂಡಿದ್ದ ವರ ಬೆಡ್ ಮಾತ್ರ ಹೊಸದಾಗಿರಬೇಕು ಎಂದು ಹೇಳಿದ್ದ.
ನಂತರ ಮದುವೆ ದಿನ ವಧುವಿನ ಮನೆಯವರು ಪೀಠೋಪಕರಣಗಳನ್ನು ವರನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಹೊಸ ಬೆಡ್ ಕೂಡ ಕಳುಹಿಸಿದ್ದು, ಆದರೆ ಬೆಡ್ ಸರಿಪಡಿಲು ಹೋದಾಗ ಅದು ಸ್ವಲ್ಪ ಹರಿದು ಹೋಗಿದ್ದು, ಇದು ಹಳೆ ಬೆಡ್ ಎಂದು ಕ್ಯಾತೆ ತೆಗೆದ ವರ ಮದುವೆಯನ್ನೇ ನಿಲ್ಲಿಸಿದ್ದಾನೆ. ನಂತರ ವಧುವಿನ ಪೋಷಕರು ಪೊಲೀಸ್ ಠಾಣೆಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ