ದೆಹಲಿಯಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ

ನಿರ್ಭಯಾ ಪ್ರಕರಣದ ನಂತರ ನವದೆಹಲಿಯಲ್ಲಿ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಕ್ರೂರಿಗಳು ಗುಪ್ತಾಂಗಕ್ಕೆ ಮರದ ತುಂಡನ್ನು ತೂರಿಸಿ, ಮುಖವನ್ನು ಪ್ಲಾಸ್ಟಿಕ್​ ಬ್ಯಾಗ್​ನಿಂದ ಕಟ್ಟಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

Sushma Chakre | news18
Updated:November 13, 2018, 1:31 PM IST
ದೆಹಲಿಯಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ
ಸಾಂದರ್ಭಿಕ ಚಿತ್ರ
  • News18
  • Last Updated: November 13, 2018, 1:31 PM IST
  • Share this:
ನ್ಯೂಸ್​18 ಕನ್ನಡ

ನವದೆಹಲಿ (ನ. 13): ನವದೆಹಲಿಯಲ್ಲಿ ನಿರ್ಭಯಾ ಪ್ರಕರಣ ಬೆಳಕಿಗೆ ಬಂದ ನಂತರ ದೆಹಲಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಅತ್ಯಾಚಾರ ಪ್ರಕರಣಗಳ ಪ್ರಮಾಣವಂತೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದೀಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, 3 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದೆಹಲಿಯ ಗುರುಗ್ರಾಮದಲ್ಲಿ 3 ವರ್ಷದ ಬಾಲಕಿಯನ್ನು ಇಟ್ಟಿಗೆಗಳಿಂದ ಹೊಡೆಯಲಾಗಿದ್ದು, 10 ಸೆ.ಮೀ. ಉದ್ದದ ಮರದ ತುಂಡನ್ನು ಆಕೆಯ ಗುಪ್ತಾಂಗದೊಳಗೆ ಹಾಕಲಾಗಿದೆ. ಪಾಲೆಥೀನ್​ ಬ್ಯಾಗ್​ನಿಂದ ಮುಖವನ್ನು ಕಟ್ಟಿ ಕೊಲೆ ಮಾಡಲಾಗಿದೆ.

ಮೊನ್ನೆ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಅವರ ಕುಟುಂಬಸ್ಥರು ಎಲ್ಲ ಕಡೆ ಹುಡುಕುತ್ತಿದ್ದರು. ಪೊಲೀಸರಿಗೆ ದೂರು ನೀಡದೆ ತಮ್ಮಷ್ಟಕ್ಕೆ ತಾವೇ ಹುಡುಕಾಡುತ್ತಿದ್ದ ಕುಟುಂಬದವರಿಗೆ ಮಗುವಿನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಆದರೆ, ನಿನ್ನೆ ಪಾಳು ಬಿದ್ದಿದ್ದ ಅಂಗಡಿಯೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಒಂಭತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​!: ಇದು ನಿಜನಾ? ಇಲ್ಲಿದೆ ಸತ್ಯ!

ಬಾಲಕಿಯ ಪಕ್ಕದ ಮನೆಯವರು ಪಾಳು ಬಿದ್ದಿದ್ದ ಅಂಗಡಿಯೊಳಗೆ ಅನುಮಾನದಿಂದ ಹೋದಾಗ ಒಂದು ರೂಮಿನಲ್ಲಿ ಇಟ್ಟಿಗೆಗಳನ್ನು ಹೇರಿಟ್ಟಿದ್ದು ಕಾಣಿಸಿತು. ಅದನ್ನು ತೆಗೆದು ನೋಡಿದಾಗ ಅರೆ ನಗ್ನಾವಸ್ಥೆಯಲ್ಲಿದ್ದ ಮಗುವಿನ ಮೃತದೇಹ ಪತ್ತೆಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಇಟ್ಟಿಗೆಗಳಿಂದ ಹೊಡೆದು ಸಾಯಿಸಲಾಗಿತ್ತು. ಆ ಇಟ್ಟಿಗೆಗಳನ್ನು ಆಕೆಯ ದೇಹದ ಮೇಲಿಟ್ಟು ಹಂತಕರು ಪರಾರಿಯಾಗಿದ್ದಾರೆ.

ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಾಲಕಿಯ ಭುಜ, ಸೊಂಟ, ಎದೆ, ಬೆನ್ನು ಮತ್ತು ಗುಪ್ತಾಂಗಗಳಿಗೆ ಆಗಿರುವ ಗಾಯಗಳನ್ನು ಗಮನಿಸಿದರೆ ಆಕೆಯ ತೀವ್ರ ಕಿರುಕುಳ ನೀಡಿ, ಅತ್ಯಾಚಾರ ನಡೆಸಿ ಸಾಯಿಸಿರುವುದು ಸ್ಪಷ್ಟವಾಗುತ್ತಿದೆ. ಆಕೆಯ ಗುಪ್ತಾಂಗದೊಳಗೆ ಮರದ ತುಂಡನ್ನು ತೂರಿಸಿರುವುದರಿಂದ ಹಲವು ಅಂಗಗಳಿಗೆ ಹಾನಿಯಾಗಿರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಬಾಲಕಿಯ ತಲೆಗೆ ಬಲವಾಗಿ ಹೊಡೆದಿರುವುದರಿಂದ ಮತ್ತು ಆಂತರಿಕ ರಕ್ತಸ್ರಾವವಾಗಿ ಸಾವನ್ನಪ್ಪಿರುವುದು ವರದಿಯಿಂದ ತಿಳಿದುಬಂದಿದೆ. ಯಾವುದೋ ಗಟ್ಟಿಯಾದ ವಸ್ತುವಿನಿಂದ ಆಕೆಯ ತಲೆಗೆ ಹೊಡೆದು ಸಾಯಿಸಿರುವುದರಿಂದ ತಲೆಬುರುಡೆ ಒಡೆದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ: ಆತ್ಮಹತ್ಯೆ ಮಾಡಿಕೊಂಡ ಯುವತಿ

ಭಾನುವಾರ ಬೆಳಗ್ಗೆ ಇಬ್ಬರು ಹುಡುಗಿಯರ ಜೊತೆಗೆ ಆಡುತ್ತಿದ್ದ ಬಾಲಕಿಗೆ ಚಾಕೊಲೇಟ್​ ಕೊಡಿಸುವುದಾಗಿ ಆರೋಪಿಗಳು ಕರೆದೊಯ್ದಿದ್ದಾರೆ. ಈ ವೇಳೆ ಇನ್ನಿಬ್ಬರು ಹುಡುಗಿಯರು ಈ ವಿಷಯವನ್ನು ಬಾಲಕಿಯ ಮನೆಯವರಿಗೆ ತಿಳಿಸಿದ್ದಾರೆ. ಆದರೆ, ಬಹಳ ಹೊತ್ತಾದರೂ ಆಕೆ ವಾಪಾಸ್​ ಬಾರದ ಕಾರಣ ಮನೆಯವರು ಸುತ್ತಮುತ್ತ ಹುಡುಕತೊಡಗಿದ್ದಾರೆ.

ಇದನ್ನೂ ಓದಿ: ಎಂಟು ತಿಂಗಳ ಗರ್ಭಿಣಿ ಮೇಲೆ 8 ಜನ ಕಾಮುಕರಿಂದ ಸಾಮೂಹಿಕ ಅತ್ಯಾಚಾರ!

ಆಕೆಯನ್ನು ಕರೆಯೊಯ್ದ ಆರೋಪಿಯನ್ನು 20 ವರ್ಷದ ಸುನಿಲ್​ ಕುಮಾರ್​ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದಿಂದ ಕೆಲಸಕ್ಕಾಗು ಗುರುಗ್ರಾಮಕ್ಕೆ ವಸಲೆ ಬಂದಿದ್ದ ಕೂಲಿ ಕಾರ್ಮಿಕ ಈತ ಎಂದು ಪತ್ತೆ ಹಚ್ಚಲಾಗಿದೆ. ಘಟನೆ ನಡೆದ ದಿನದಿಂದ ಆತ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

First published:November 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading