ನವದೆಹಲಿ (ಮೇ 11): 2008ರ ನವೆಂಬರ್ 26ರಂದು ಮುಂಬೈನ ತಾಜ್ ಮತ್ತು ಒಬೆರಾಯ್ ಹೋಟೆಲ್ ಸೇರಿದಂತೆ ಹಲವೆಡೆ ನಡೆದ ಉಗ್ರರ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಪಾಕಿಸ್ತಾನದ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರ ಗುಂಪು ನಡೆಸಿದ ದಾಳಿಯಲ್ಲಿ 174 ಜನರು ಪ್ರಾಣ ಕಳೆದುಕೊಂಡಿದ್ದರು. ಅದೇ ರೀತಿಯ ಮತ್ತೊಂದು ಭಯೋತ್ಪಾದನಾ ದಾಳಿಗೆ ಇದೀಗ ಎಲ್ಇಟಿ (ಲಷ್ಕರ್ ಇ ತೊಯ್ಬಾ) ಸಜ್ಜಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
ಮುಂಬೈ ದಾಳಿಯ ಮಾದರಿಯಲ್ಲೇ ಭಾರತದಲ್ಲಿ ಮತ್ತೊಂದು ದೊಡ್ಡ ದಾಳಿ ನಡೆಸಲು ಎಲ್ಇಟಿ ಸಜ್ಜಾಗಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ಇದಕ್ಕಾಗಿ ಪಾಕಿಸ್ತಾನ ಮೂಲದ ಡಾನ್ ದಾವೂದ್ ಇಬ್ರಾಹಿಂ ಜೊತೆಗೆ ಎಲ್ಇಟಿ ಕೈಜೋಡಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಭಾನುವಾರ ಇಸ್ಲಮಾಬಾದ್ನಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಮನೆಯ ಪಕ್ಕದಲ್ಲೇ ಇರುವ ತನ್ನ ಫಾರ್ಮ್ಹೌಸ್ನಲ್ಲಿ ದಾವೂದ್ ಇಬ್ರಾಹಿಂ ಕಾಣಿಸಿಕೊಂಡಿದ್ದ. ಈ ವೇಳೆ ದಾವೂದ್ ಎಲ್ಇಟಿ ನಾಯಕರನ್ನು ಭೇಟಿ ಮಾಡಿ, ಈ ಬಗ್ಗೆ ಮಾತುಕತೆ ನಡೆಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Indian Railways: ಇಂದಿನಿಂದ 15 ಪ್ಯಾಸೆಂಜರ್ ರೈಲಿನ ಬುಕ್ಕಿಂಗ್ ಆರಂಭ; ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು
ಮೂಲಗಳ ಪ್ರಕಾರ, ಎಲ್ಇಟಿ ಸಮುದ್ರಮಾರ್ಗದ ಮೂಲಕ ಗುಜರಾತ್ ಅಥವಾ ಮಹಾರಾಷ್ಟ್ರಕ್ಕೆ ಶಸ್ತ್ರಾಸ್ತ್ರಗಳನ್ನು ತಲುಪಿಸಲಿದೆ. ಭಾರತದ ಬಹುತೇಕ ಭದ್ರತಾ ಸಿಬ್ಬಂದಿ ಲಾಕ್ಡೌನ್ ಡ್ಯೂಟಿಯಲ್ಲಿದ್ದಾರೆ. ಹೀಗಾಗಿ, ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡಲು ಇದೇ ಸರಿಯಾದ ಸಮಯ ಎಂದು ಐಎಸ್ಐ ಸಂಸ್ಥೆ ಮತ್ತು ಎಲ್ಇಟಿ ಲೆಕ್ಕಾಚಾರ ಹಾಕಿವೆ. ಪಾಕಿಸ್ತಾನ ಮೂಲದ ಎಲ್ಇಟಿ ಸಂಘಟನೆಯ ನಾಯಕರಲ್ಲಿ ಒಬ್ಬನಾಗಿರುವ ಅಬ್ದುಲ್ ರೆಹಮಾನ್ ಮಕ್ಕಿ ಕೆಲವು ದಿನಗಳ ಹಿಂದಷ್ಟೇ ಕರಾಚಿಗೆ ಭೇಟಿ ನೀಡಿದ್ದನು. ಆ ವೇಳೆ ದಾವೂದ್ನನ್ನು ಭೇಟಿ ಮಾಡಿ ಭಾರತದ ಮೇಲೆ ದಾಳಿ ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದನು ಎನ್ನಲಾಗಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಬರುವ ಶಸ್ತ್ರಾಸ್ತ್ರಗಳನ್ನು ದಾಳಿ ನಡೆಯುವ ಪ್ರಮುಖ ನಗರಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಪಾಕಿಸ್ತಾನದ ಗೂಢಚಾರಿಕಾ ಏಜೆನ್ಸಿ ದಾವೂದ್ ಇಬ್ರಾಹಿಂನ ಡಿ ಕಂಪನಿಗೆ ವಹಿಸಲಿದೆ ಎಂಬ ಮಾಹಿತಿ ಕೂಡ ಭಾರತದ ಗುಪ್ತಚರ ಇಲಾಖೆಗೆ ಸಿಕ್ಕಿದೆ.
ಇದನ್ನೂ ಓದಿ: ಕೊರೋನಾ ಹರಡುವಿಕೆಯಲ್ಲಿ ಶೀಘ್ರವೇ ಚೀನಾವನ್ನು ಹಿಂದಿಕ್ಕಲಿರುವ ಭಾರತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ