HOME » NEWS » National-international » BRAZILIAN PRESIDENT JAIR BOLSONARO CHIEF GUEST AT REPUBLIC DAY PARADE LG

Republic Day 2020: ಬ್ರೆಜಿಲ್​ ಅಧ್ಯಕ್ಷ ಜೈರ್ ಬೊಲ್ಸೊನಾರೋ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬೊಲ್ಸೊನಾರೋ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

news18-kannada
Updated:January 24, 2020, 12:40 PM IST
Republic Day 2020: ಬ್ರೆಜಿಲ್​ ಅಧ್ಯಕ್ಷ ಜೈರ್ ಬೊಲ್ಸೊನಾರೋ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ
ಪ್ರಧಾನಿ ಮೋದಿ ಜೊತೆ ಬ್ರೆಜಿಲ್​ ಅಧ್ಯಕ್ಷ
  • Share this:
ನವದೆಹಲಿ(ಜ.24): ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೈರ್ ಇಂದು ಭಾರತಕ್ಕೆ ಆಗಮಿಸಲಿರುವ ​ 4 ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಜನವರಿ 26ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬ್ರೆಜಿಲ್​ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬೊಲ್ಸೊನಾರೋ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ವಿದೇಶಾಂಗ ವ್ಯವಹಾರಗಳು, ವ್ಯಾಪಾರ ಮತ್ತು ಹೂಡಿಕೆ ಇನ್ನಿತರ ವಿಷಯಗಳ ಬಗ್ಗೆ ಗಂಭೀರ ಪ್ರಧಾನಿ ಮೋದಿ ಹಾಗೂ ಜೈರ್ ಸುದೀರ್ಘ ಚರ್ಚೆ ನಡೆಸಲಿದ್ದಾರೆ.  ಬೊಲ್ಸೊನಾರೋ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, 71ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಜೊತೆ ಚರ್ಚೆ ನಡೆಸಲಿದ್ದಾರೆ.

ನಳಿನಿ ಪರ ಬ್ಯಾಟಿಂಗ್ ಮಾಡೋ ಬದಲು ವಾದ ಮಂಡಿಸಿ; ಸಿದ್ದರಾಮಯ್ಯಗೆ ಮೈಸೂರು ವಕೀಲರ ಬಹಿರಂಗ ಸವಾಲು

ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾದ ಬ್ರೆಜಿಲ್ ಅಧ್ಯಕ್ಷರಿಗೆ ನಾವು ಆದರದ ಸ್ವಾಗತ ಕೋರುತ್ತೇವೆ. ಅವರ ಭೇಟಿ ಎರಡು ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಬೆಳೆಸಲು ಸಹಕಾರಿಯಾಗಿದೆ ಎಂದು ಕಾರ್ಯದರ್ಶಿ ವಿಜಯ್​ ಕುಮಾರ್​ ಸಿಂಗ್​​ ಹೇಳಿದ್ದಾರೆ.

ಇಂದು ದೆಹಲಿಗೆ ಆಗಮಿಸಲಿರುವ ಬ್ರೆಜಿಲ್​ ಅಧ್ಯಕ್ಷ ನಾಳೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಮತ್ತು ವಿದೇಶಾಂಗ ಸಚಿವ ಜೈಶಂಕರ್ ಜೊತೆ ಚರ್ಚೆ ನಡೆಸಲಿದ್ದಾರೆ. ಜನವರಿ 26 ಭಾನುವಾರ ದೆಹಲಿ ಕೆಂಪುಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಪ್ರಧಾನಿ ಮೋದಿ ಜೊತೆ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಭಾರತ-ಬ್ರೆಜಿಲ್​ ಉದ್ಯಮ ವೇದಿಕೆಯಲ್ಲಿ ಭಾಗಿಯಾಗಿ ಉದ್ಯಮಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬ್ರೆಜಿಲ್​ ಅಧ್ಯಕ್ಷರ ಜೊತೆ ಅಲ್ಲಿನ ಯಶಸ್ವಿ ಉದ್ಯಮಿಗಳ ನಿಯೋಗವೂ ಅವರೊಂದಿಗೆ ಭಾರತಕ್ಕೆ ಆಗಮಿಸಲಿದೆ.
Youtube Video
First published: January 24, 2020, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories