19 ವರ್ಷದ ಯುವತಿಯೋರ್ವಳು ಅವಳಿ ಮಕ್ಕಳಿಗೆ (Twin Children) ಜನ್ಮ ನೀಡಿದ್ದಾಳೆ. ಅವಳಿ ಮಕ್ಕಳು ಹುಟ್ಟಿದ್ದೊಂದೇ ಆದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಎರಡೂ ಮಕ್ಕಳ ತಂದೆ (Different Biological Dads) ಒಬ್ಬರೇ ಅಲ್ಲ, ಬೇರೆ ಬೇರೆ! ಹೌದು, ಅವಳಿ ಮಕ್ಕಳ ತಂದೆ ಬೇರೆ ಬೇರೆಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ನಂಬಲು ಸಾಧ್ಯವಿಲ್ಲದಿದ್ದರೂ ಈ ಸುದ್ದಿಯನ್ನು ನಂಬಲೇಬೇಕು. ಇಂತಹ ವಿರಳ ಪ್ರಸಂಗ ಹೆಟೆರೊಪಟರ್ನಲ್ ಸೂಪರ್‌ಫೆಕಂಡೇಶನ್ (Heteropaternal Superfecundation) ಎಂದು ಕರೆಯಲಾಗುತ್ತದೆ. ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ.
ಋತುಚಕ್ರದ ಸಮಯದಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣ ಈ ವಿರಳ ವಿದ್ಯಮಾನ ಘಟಿಸಿದೆ ಎಂದು ಎಂದು ಜರ್ನಲ್ ಬಯೋಮೆಡಿಕಾ ತಿಳಿಸಿದೆ.
ಪಿತೃತ್ವ ಪರೀಕ್ಷೆಯಲ್ಲಿ ವಿಷಯ ಬಹಿರಂಗ
ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದ್ದರಿಂದ ಅಪರೂಪದ ವಿದ್ಯಮಾನ ಸಂಭವಿಸಿದೆ. ಹೀಗೆ ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದ ಒಂಬತ್ತು ತಿಂಗಳ ನಂತರ ಈ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಕ್ಕಳ ಮೊದಲ ಹುಟ್ಟುಹಬ್ಬದಂದು ಪಿತೃತ್ವ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಈ ಮಹಿಳೆ ಲೈಂಗಿಕ ಸಂಪರ್ಕ ಬೆಳೆಸಿದ ಓರ್ವ ಪುರುಷನ ಜೊತೆ ಒಂದು ಮಗುವಿನ ಡಿಎನ್ಎ ಹೊಂದಿಕೆಯಾಗಿಲ್ಲ.
ಇನ್ನೋರ್ವ ಪುರುಷನ ಜೊತೆಗಿನ ಸಂಬಂಧ ನೆನಪಾಯ್ತು
ಆಗಲೇ ಈ ಮಹಿಳೆಗೆ ತಾನು ಅದೇ ದಿನ ಇನ್ನೋರ್ವ ಪುರುಷನ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದು ನೆನಪಾಗಿದೆ. ಆ ವ್ಯಕ್ತಿಯ ಜೊತೆ ಮಗುವಿನ ಡಿಎನ್ಎ ಪರೀಕ್ಷೆ ನಡೆಸಿದಾಗ ಫಲಿತಾಂಶ ಮ್ಯಾಚ್ ಆಗಿದೆ. ಎರಡೂ ಮಕ್ಕಳಲ್ಲೂ ತುಂಬಾ ಹೋಲಿಕೆ ಇದ್ದು ತನಗು ಆಶ್ಚರ್ಯವಾಗಿದೆ ಎಮದು ಮಹಿಳೆ ತಿಳಿಸಿದ್ದಾರೆ.
ಇದನ್ನೂ ಓದಿ: Car Thief: ಬರೋಬ್ಬರಿ 5,000 ಕಾರುಗಳನ್ನು ಕದ್ದ ಆರೋಪಿ ಈಗ ಪೊಲೀಸರ ಅತಿಥಿ; ಹೀಗಿತ್ತು ಈತನ ಐಷಾರಾಮಿ ಜೀವನ
ಪ್ರಪಂಚದಲ್ಲಿ ಇಂತಹ 20 ಪ್ರಕರಣಗಳು
ಈ ಪ್ರಕರಣ ಅತ್ಯಂತ ಅಪರೂಪವಾಗಿದ್ದು, ಪ್ರಪಂಚದಲ್ಲಿ ಕೇವಲ 20 ಹೆಟೆರೊಪರೆಂಟಲ್ ಸೂಪರ್ ಫೆಕಂಡೇಶನ್ ಪ್ರಕರಣಗಳಿವೆ ಎಂದು ವರದಿಯಾಗಿದೆ.
ನೀರಿನಿಂದ ಮೇಲೆದ್ದ ಮಸೀದಿ! ಕುತೂಹಲದಲ್ಲಿ ಮುಸ್ಲಿಂ ಸಮುದಾಯ
ಹಲವು ವರ್ಷಗಳಿಂದ ನೀರಿನಲ್ಲಿ ಮುಳುಗಿದ್ದ ಬಿಹಾರದ ಚಿರೈಲಾ ಗ್ರಾಮದ ಮಸೀದಿಯೊಂದು ಇದೀಗ ಸಂಪೂರ್ಣ ಗೋಚರಿಸಿದೆ. ಈ ಸುದ್ದಿ ಶುಕ್ರವಾರ ಇಡೀ ಪ್ರದೇಶದಲ್ಲಿ ಹಬ್ಬಿದ್ದು, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 120 ವರ್ಷಗಳಷ್ಟು ಹಳೆಯದು ಎಂದು ಹೇಳಲಾದ ಈ ಮಸೀದಿಯು ಬಿಹಾರದ ನವಾಡ ಜಿಲ್ಲೆಯ ರಜೌಲಿ ಬ್ಲಾಕ್‌ನ ಫುಲ್ವಾರಿಯಾ ಅಣೆಕಟ್ಟಿನ ದಕ್ಷಿಣ ಭಾಗದಲ್ಲಿ ಪತ್ತೆಯಾಗಿದೆ. ಈ ಮಸೀದಿಯು ಮೂರು ದಶಕಗಳ ಕಾಲ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಬಳಿಕವೂ ಕಿಂಚಿತ್ತೂ ಹಾನಿಯಾಗಿಲ್ಲ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಲ್ಲದೇ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Queen Elizabeth II: ಪಾಸ್ಪೋರ್ಟ್ ಇರಲಿಲ್ಲ, ವೀಸಾ ಇಲ್ಲದೇ ವಿಶ್ವಾದ್ಯಂತ ಟ್ರಾವೆಲ್ ಮಾಡ್ತಿದ್ದ ರಾಣಿ ಎಜಿಜಬೆತ್!
ನೀರಿನಲ್ಲಿ ಮುಳುಗಿದ್ದ ಈ ಮಸೀದಿ ನೀರಿನಿಂದ ಹೊರಬಂದು ಸಂಪೂರ್ಣ ಕಾಣುತ್ತಿದ್ದಂತೆ ಅನೇಕ ಮುಸ್ಲಿಂ ಯುವಕರು ಕೈಯಲ್ಲಿ ಗುದ್ದಲಿ ಹಿಡಿದು ಕೆಸರು ಪ್ರವೇಶಿಸಿ ಮಸೀದಿ ಬಳಿ ತಲುಪಿದ್ದಾರೆ. ಅನೇಕ ಮುಸ್ಲಿಂ ಕುಟುಂಬಗಳ ಮಹಿಳೆಯರು ಸಹ ಮಸೀದಿಯನ್ನು ನೋಡಲು ಕುತೂಹಲದಿಂದ ಸ್ಥಳಕ್ಕೆ ಆಗಮಿಸಿದ್ದಾರೆ. ಮಸೀದಿಯ ಬಳಿ ತೆರಳಲು ಪ್ರಯತ್ನಿಸಿದರೂ ಕೆಸರು ಮತ್ತು ನೀರಿನಿಂದ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ