ದೆಹಲಿ: ಬ್ರೆಜಿಲ್ನಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ (Deeply Concerned) ವ್ಯಕ್ತಪಡಿಸಿದ್ದಾರೆ. "ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು" ಎಂದು ಪಿಎಂ ಮೋದಿ (PM Narendra Modi On Brazil Riots) ಒತ್ತಿಹೇಳಿದ್ದಾರೆ. ಅಲ್ಲದೇ ಬ್ರೆಜಿಲ್ನ ಸರ್ಕಾರದ ಅಧಿಕಾರಿಗಳಿಗೆ ಬೆಂಬಲ ನೀಡಿದ್ದಾರೆ. "ಬ್ರೆಸಿಲಿಯಾದಲ್ಲಿ ಸರ್ಕಾರಿ ಸಂಸ್ಥೆಗಳ ವಿರುದ್ಧ ಗಲಭೆ ಮತ್ತು ವಿಧ್ವಂಸಕ ಕೃತ್ಯ (Brazil Riots) ನಡೆಯುತ್ತಿರುವ ಸುದ್ದಿಗಳ ಬಗ್ಗೆ ತೀವ್ರ ಕಳವಳ ಉಂಟಾಗುತ್ತಿದೆ. ಪ್ರಜಾಪ್ರಭುತ್ವ ಪದ್ಧತಿಯ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು. ಬ್ರೆಜಿಲ್ ಅಧಿಕಾರಿಗಳಿಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ" ಎಂದು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಟ್ಯಾಗ್ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಬ್ರೆಜಿಲ್ನ ಬಲಪಂಥೀಯ ಗುಂಪಿನ ನಾಯಕ, ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ನೂರಾರು ಬೆಂಬಲಿಗರು ರಾಷ್ಟ್ರೀಯ ಕಾಂಗ್ರೆಸ್, ಅಧ್ಯಕ್ಷೀಯ ಅರಮನೆ ಮತ್ತು ಸುಪ್ರೀಂ ಕೋರ್ಟ್ನ ಮೇಲೆ ದಾಳಿ ಮಾಡಿದ್ದಾರೆ.
ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ
ಈ ದಾಳಿ ನಡೆದು ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗಳ ಬಗ್ಗೆಬ್ರೆಜಿಲ್ ಅಧ್ಯಕ್ಷ ಲುಲಾ "ಫ್ಯಾಸಿಸ್ಟ್" ದಾಳಿ ಎಂದು ಖಂಡಿಸಿದ್ದಾರೆ. ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಈ ಹಿಂಸಾಚಾರದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಆರೋಪಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ಈ ಆಕ್ರಮಣಕಾರಿ ದಾಳಿಯನ್ನು ಖಂಡಿಸಿದ್ದಾರೆ.
ಏನಿದು ಬ್ರೆಜಿಲ್ ಗಲಭೆ?
ಬ್ರೆಜಿಲ್ನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬೋಲ್ಸನಾರೊ ಅವರನ್ನು ಸೋಲಿಸಿದ ಎಡಪಂಥೀಯ ನಾಯಕ 77 ವರ್ಷದ ಲುಲಾ ಅವರು ಒಂದು ವಾರದ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಲೂಲಾ ಅವರು ಬೋಲ್ಸನಾರೊ ಅವರನ್ನು ಸೋಲಿಸಿ ಅಧಿಕಾರ ವಹಿಸಿಕೊಳ್ಳುವುದನ್ನು ತಡೆಯಲು ಮಿಲಿಟರಿ ಮಧ್ಯಸ್ಥಿಕೆ ಜಾರಿಗೊಳಿಸುವಂತೆ ಹೋರಾಟಗಳು ನಡೆಯುತ್ತಲೇ ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ