• Home
  • »
  • News
  • »
  • national-international
  • »
  • Video: ಹುಟ್ಟೋ ಮಗು ಗಂಡೋ ಹೆಣ್ಣೋ ತಿಳ್ಕೊಳೋಕೆ ಇಡೀ ಜಲಪಾತವನ್ನೇ ಹಾಳುಮಾಡಿಬಿಟ್ರು!

Video: ಹುಟ್ಟೋ ಮಗು ಗಂಡೋ ಹೆಣ್ಣೋ ತಿಳ್ಕೊಳೋಕೆ ಇಡೀ ಜಲಪಾತವನ್ನೇ ಹಾಳುಮಾಡಿಬಿಟ್ರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೆಪ್ಪೆಂಬರ್ 25ರಂದು ಮ್ಯಾಟೊ ಗ್ರಾಸೋದಲ್ಲಿ ಈ ಘಟನೆ ನಡೆದಿದೆ​. ಅಪರಿತ ದಂಪತಿಗಳು ಕ್ವಿಮಾ ಪೆ ನದಿಯನ್ನು ಕಲುಷಿತಗೊಳಿಸಿದ್ದಾರೆ ಎಂದು ಬ್ರೆಜಿಲ್​​ನ ಪರಿಸರ ಸಚಿವಾಲಯ ಹೇಳಿದೆ.

  • Share this:

    ಕೆಲವರು ಸಾರ್ವಜನಿಕ (Public) ಅಥವಾ ಪ್ರವಾಸಿ ತಾಣಗಳಿಗೆ (tourist destinations) ಭೇಟಿ ನೀಡಿದಾಗ ಅಸಭ್ಯವಾಗಿ ವರ್ತಿಸುತ್ತಾರೆ. ಅದರಲ್ಲೂ ಕೆಲವರು ಸಾರ್ವಜನಿಕ ಸ್ಥಳವನ್ನು ಹಾಳು ಮಾಡಲು ಮುಂದಾಗುತ್ತಾರೆ. ತಿಳಿದೋ ಅಥವಾ ತಿಳಿಯದೆಯೋ ಈ ರೀತಿ ಮಾಡುವವರಿದ್ದಾರೆ. ಆದರೆ ಕೆಲವೊಮ್ಮೆ ಇಂತಹ ಕೆಲಸ ಮಾಡಿ ಶಿಕ್ಷೆ (punishment) ಅನುಭವಿಸುವ ಘಟನೆಯು ಸಂಭವಿಸುತ್ತದೆ. ಅದರಂತೆಯೇ ಇಲ್ಲಿಯೊಂದು ಅಂತಹದೇ ಘಟನೆ ನಡೆದಿದೆ. ಅದೇನೆಂದರೆ ದಂಪತಿಗಳು  ಜಲಪಾತದ (Falls) ನೀರನ್ನು ಕಲುಷಿತಗೊಳಿಸಿದ್ದಾರೆ. ನೀರಿನ ಬಣ್ಣವನ್ನು (Water Color) ಬದಲಾಯಿಸುವ ಮೂಲಕ ಪರಿಸರ ಸಚಿವಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ.


    ಸಾರ್ವಜನಿಕ ಸ್ವತ್ತು ನಮ್ಮೆಲ್ಲರ ಆಸ್ತಿ ಎಂಬುದು ತಿಳಿದಿದ್ದರೆ, ಬೇರೆಡೆ ತೆರಳಿದಾಗ ಅಸಭ್ಯವಾಗಿ ವರ್ತಿಸುವುದು ಮತ್ತು ಅಲ್ಲಿನ ವಸ್ತುಗಳನ್ನು ಹಾಳು ಮಾಡುವುದಿಲ್ಲ. ಅದರಲ್ಲೂ ಪ್ರಜ್ನಾವಂತರಂತೂ ಇಂತಹ ಕೆಲಸ ಮಾಡಲು ಮುಂದಾಗುದಿಲ್ಲ. ಆದರೆ ಬ್ರೆಜಿಲ್​ ಮೂಲದ ದಂಪತಿಗಳು ಮಗುವಿನ ಲಿಂಗವನ್ನು ಕುಟುಂಬಸ್ಥರು ಮತ್ತು ಸ್ನೇಹಿತರ ಬಳಿ ಹೇಳಲು ಜಲಪಾತದ ಬಳಿ ಪಾರ್ಟಿ ಆಯೋಜಿಸಿದ್ದಾರೆ. ಇದೇ  ಸಂತೋಷದಲ್ಲಿ ಜಲಪಾತದ ನೀರನ್ನು ಕಲುಷಿತಗೊಳಿಸಿದ್ದಾರೆ. ಸದ್ಯ ಈ ದಂಪತಿಯನ್ನು ಪರಿಸರ ಸಚಿವಾಲಯ ತನಿಖೆ ನಡೆಸುತ್ತಿದೆ.


    ಸೆಪ್ಪೆಂಬರ್ 25ರಂದು ಮ್ಯಾಟೊ ಗ್ರಾಸೋದಲ್ಲಿ ಈ ಘಟನೆ ನಡೆದಿದೆ​. ಅಪರಿತ ದಂಪತಿಗಳು ಕ್ವಿಮಾ ಪೆ ನದಿಯನ್ನು ಕಲುಷಿತಗೊಳಿಸಿದ್ದಾರೆ ಎಂದು ಬ್ರೆಜಿಲ್​​ನ ಪರಿಸರ ಸಚಿವಾಲಯ ಹೇಳಿದೆ. ಅಂದಹಾಗೆಯೇ ಕ್ವಿಮಾ ಪೇ ನದಿ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ತಂಗರಾ ಡ ಸೆರ್ರಾಗೆ ಈ ನದಿ ನೀರು ನೀಡುತ್ತದೆ.


    ಇದನ್ನೂ ಓದಿ: Raw Coconut Benefits: ರಾತ್ರಿ ಮಲಗುವ ಮುನ್ನ ಸ್ವಲ್ಪ ತೆಂಗಿನಕಾಯಿ ತಿಂದ್ರೆ ನಿದ್ರೆ ಸಖತ್ ಆಗಿ ಬರುತ್ತಂತೆ


    ಲಿಂಗ ಬಹಿರಂಗದ ಪಾರ್ಟಿ ಅಂದ್ರೆ ಏನು?


    ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳು ಕುಟುಂಬಸ್ಥರಿಗೆ ಮತ್ತು ತನ್ನ ಸ್ನೇಹಿತರೊಂದಿಗೆ, ಮಗು ಜನಿಸುವುದಕ್ಕೂ ಮೊದಲೇ ಮಗುವಿನ ಲಿಂಗವನ್ನು ಹೇಳುವ ಮೂಲಕ ನಡೆಸುವ ಪಾರ್ಟಿ ಇದಾಗಿದೆ. ವಿದೇಶದಲ್ಲಿ ಅದರಲ್ಲೂ ಕೆಲವೊಂದು ದೇಶದಲ್ಲಿ ಈ ಪಾರ್ಟಿ ಜನಪ್ರಿಯತೆ ಪಡೆದಿದೆ. ಆದರೆ ಭಾರತದಲ್ಲಂತೂ ಮಗುವಿನ ಲಿಂಗ ಪತ್ತೆ ಕಾನೂನು ಬಾಹಿರ.


    ಪರಿಸರ ಸಚಿವಾಲಯವು ಜಲಪಾತದಲ್ಲಿ ಹರಿಯುವ ನೀರಿಗೆ ಯಾವ ಬಣ್ಣವನ್ನು ಹಾಕಿದ್ದಾರೆ ಮತ್ತು ಇದರಿಂದ ಪರಿಸಕ್ಕೆ ಹಾನಿ ಇದೆಯಾ ಎಂದು ಇಲಾಖೆಯು ದ.ಪತಿಯನ್ನು ತನಿಖೆ ಮಾಡುತ್ತಿದೆ. ಅದರಲ್ಲೂ ಬ್ರೆಜಿಲ್​ನ ಫೆಡರ್​​​ ಪರಿಸರ ಕಾನೂನಿನ ಉಲ್ಲಂಘನೆಯಾಗಿದ್ದು, ದಂಪತಿಗಳ ಮೇಲೆ ಪರಿಸಕ್ಕೆ ಹಾನಿ ಮಾಡಿದ ಅರೋಪ ಹೊರಿಸಲಾಗಿದೆ. ಈ ತನಿಖೆಯಿಂದ ದಂಡ ಮತ್ತು ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಅಂದಹಾಗೆಯೇ ದಂಪತಿಗಳು ಲಿಂಗ ಬಹಿರಂಗ ಪಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಬ್ರೆಜಿಲ್​ನಲ್ಲಿ ಫೆಡರರ್​ ಪ್ರಕಾರ ಇದು ಕಾನೂನಿನ ಉಲ್ಲಂಘನೆ. ಕಳೆದ ವರ್ಷ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ದಂಪತಿಗಳು ಲಿಂಗ ಬಹಿರಂಗಪಡಿಸುವ ಪಾರ್ಟಿಯಲ್ಲಿ ಸ್ಮೋಕ್ ಬಾಂಬ್ ಬಳಸಿದ್ದರು. ಇದರಿಂದಾಗಿ ಕಾಳ್ಗಿಚ್ಚು ಹಬ್ಬಿತ್ತು. ನಂತರ ಅವರ ಮೇಲೆ ನರಹತ್ಯೆಯ ಆರೋಪ ಹೊರಿಸಲಾಯಿತು.



    ಇದನ್ನೂ ಓದಿ: Indian Vineyards: ಭಾರತದ ಪ್ರಸಿದ್ಧ ವೈನ್ ಉತ್ಪಾದಿಸುವ ದ್ರಾಕ್ಷಿತೋಟಗಳಿವು! ಒಮ್ಮೆಯಾದರೂ ಭೇಟಿ ನೀಡಿ


    ಇತ್ತೀಚೆಗೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಿಗೆ ಹೋಗಿ ಅಸಭ್ಯವಾಗಿ ವರ್ತಿಸುವ ಘಟನೆಯೊಂದು ಬೆಳಕಿಗೆ ಬಂದಿತ್ತು. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಜಲಪಾತದ ಮೇಲಿಂದ ಕೇಸರಿ ಮತ್ತು ಹಸಿರು ಬಣ್ಣವನ್ನು ಚೆಲ್ಲುವ ಮೂಲಕ ನದಿಯ ನೀರನ್ನು ತಿರಂಗದ ಬಣ್ಣದಂತೆ ಗೋಚರಿಸುವಂತೆ ಮಾಡುವ ಸಾಹಸ ಮಾಡಿದ್ದರು ಯುವಕರು. ಆದರೆ ಇದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ನೀರು ಕಲುಷಿತಗೊಳಿಸಬೇಡಿ ಎಂದು ಅನೇಕರು ಕಾಮೆಂಟ್​ ಮಾಡಿದ್ದರು.

    Published by:Harshith AS
    First published: