Brain Eating Amoeba: ಮೆದುಳು ತಿನ್ನುವ ಅಮೀಬಾಗೆ ಮಗು ಬಲಿ; ಛೇ! ಇದೇನಿದು ಹೊಸ ಖಾಯಿಲೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರೋವರಗಳು ಮತ್ತು ನದಿಗಳಲ್ಲಿ ಈಜುವಾಗ ಅಥವಾ ಧುಮುಕುವಾಗ ಅಮೀಬಾವನ್ನು ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಸಾಮಾನ್ಯವಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

  • Share this:

ಏನೆಲ್ಲಾ ಹೊಸ ಹೊಸ ಖಾಯಿಲೆಗಳು ಬರುತ್ತವೆ ಎಂದು ಅಂದಾಜು ಮಾಡುವುದೇ ಕಷ್ಟ ಎಂಬ ಮಟ್ಟಿಗೆ ಕಂಡು ಕೇಳರಿಯದ ಖಾಯಿಲೆಗಳು ಪತ್ತೆಯಾಗುತ್ತಿವೆ. ಇದೀಗ ಇಂತಹುದೇ ಇನ್ನೊಂದು ಖಾಯಿಲೆಯ ಸುದ್ದಿ ಹೊರಬಿದ್ದಿದೆ. ಮೆದುಳನ್ನು ಅಮೀಬಾ ತಿಂದು ಮಗುವೊಂದು (Brain Eating Amoeba) ಮೃತಪಟ್ಟಿದೆ. ಈ ಕುರಿತು ಫೆಡರಲ್ ಆರೋಗ್ಯ ಅಧಿಕಾರಿಗಳು (CDC) ಶುಕ್ರವಾರ ದೃಢಪಡಿಸಿದ್ದಾರೆ. ಈ ಸೋಂಕಿನ ಮೊದಲ ಲಕ್ಷಣಗಳೆಂದರೆ ತಲೆನೋವು, ವಾಕರಿಕೆ ಮತ್ತು ವಾಂತಿ. ಕಲುಷಿತ ನೀರಿನಲ್ಲಿ ಈಜುವುದರಿಂದ ದೇಹವನ್ನು ಪ್ರವೇಶಿಸುವ ಈ ಸೋಂಕು ಮೆದುಳನ್ನು ಪ್ರವೇಶಿಸಿ ಮೆದುಳನ್ನು ತಿನ್ನುತ್ತದೆ. ಆದರೆ ಅದೃಷ್ಟವಷಾತ್ ಈ ಸೋಂಕು ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ ಎಂದು ದೃಢಪಟ್ಟಿದೆ.


ಎಲ್ಖೋರ್ನ್ ನದಿಯಲ್ಲಿ ಭಾನುವಾರ ಈಜುತ್ತಿದ್ದಾಗ ಮಗುವಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ. ಇದುವರೆಗೆ ಮಗುವಿನ ಹೆಸರನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ.


ಅಮೀಬಾದಿಂದಲೇ ಸಾವು ಖಚಿತ
ಒಮಾಹಾದಲ್ಲಿನ ಡೌಗ್ಲಾಸ್ ಕೌಂಟಿ ಆರೋಗ್ಯ ಇಲಾಖೆ ಪ್ರಕಾರ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಗು ನೇಗ್ಲೇರಿಯಾ ಫೌಲೆರಿ ಅಮೀಬಾದಿಂದಲೇ ಮೃತಪಟ್ಟಿರುವುದನ್ನು ಖಚಿತಪಡಿಸಿದೆ.


ಇದನ್ನೂ ಓದಿ: Monkeypox: ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತಿದ್ಯಾ ಮಂಕಿಪಾಕ್ಸ್‌ ರೋಗ? ಇದರ ಲಕ್ಷಣಗಳೇನು?


ದೇಹವನ್ನು ಹೇಗೆ ಪ್ರವೇಶಿಸುತ್ತದೆ?
ಸರೋವರಗಳು ಮತ್ತು ನದಿಗಳಲ್ಲಿ ಈಜುವಾಗ ಅಥವಾ ಧುಮುಕುವಾಗ ಅಮೀಬಾವನ್ನು ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಸಾಮಾನ್ಯವಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 2020 ರಲ್ಲಿ ಹೂಸ್ಟನ್-ಪ್ರದೇಶದ ನಗರದಲ್ಲಿ ಕಲುಷಿತ ಟ್ಯಾಪ್ ನೀರು ಸೇರಿದಂತೆ ಕಲುಷಿತ ನೀರಿನ ಇಂತಹ ಹಲವು ಮೂಲಗಳನ್ನು ದಾಖಲಿಸಲಾಗಿದೆ.


ಇದನ್ನೂ ಓದಿ: ಪತ್ತೆಯಾಯ್ತು WNV ಎಂಬ ಸೋಂಕು! ಲಕ್ಷಣ ಏನು? ಚಿಕಿತ್ಸೆ ಇದೆಯೇ?


ಇದು ಮೊದಲ ಸಾವಲ್ಲ ಎಚ್ಚರ
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನಿಂದ ಈ ಬೇಸಿಗೆಯಲ್ಲಿ ಇದು ಎರಡನೇ ಸಾವು ವರದಿಯಾಗಿದೆ. ಇದು ಅಮೀಬಾದಿಂದ ಉಂಟಾದ ಸೋಂಕಿನಿಂದ 97% ನಷ್ಟು ವರದಿಯಾದ ಪ್ರಕರಣಗಳಲ್ಲಿ ಮಾರಕ ಪ್ರಕರಣ ಎನಿಸಿಕೊಂಡಿದೆ. ಮಿಸೌರಿ ನಿವಾಸಿಯೊಬ್ಬರು ಜುಲೈನಲ್ಲಿ ನೈಋತ್ಯ ಅಯೋವಾದ ಲೇಕ್ ಆಫ್ ತ್ರೀ ಫೈರ್ಸ್‌ನಲ್ಲಿ ಈಜಿದ ಕೆಲವು ದಿನಗಳಲ್ಲಿ ಇಂತಹುದೇ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು.


ನ್ಯೂಯಾರ್ಕ್​ನಲ್ಲಿ ಹೊಸ ಸೋಂಕು
ವೆಸ್ಟ್ ನೈಲ್ ವೈರಸ್ (WNV) ಎಂಬ ವೈರಸ್ ಇಬ್ಬರಲ್ಲಿ ಪತ್ತೆಯಾಗಿದ್ದು ನ್ಯೂಯಾರ್ಕ್ ನಗರದಲ್ಲಿ  ಎಲ್ಲಾ ಐದು ಪಟ್ಟಣಗಳಲ್ಲಿ ದಾಖಲೆ ಸಂಖ್ಯೆಯ WNV-ಸೋಂಕಿತ ಸೊಳ್ಳೆಗಳು  ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. WNV ಸೋಂಕಿತ ಸೊಳ್ಳೆಗಳು ಸಾಮಾನ್ಯವಾಗಿ ನ್ಯೂಯಾರ್ಕ್ ನಗರದಲ್ಲಿ ಜುಲೈನಿಂದ ಅಕ್ಟೋಬರ್‌ವರೆಗೆ ಕಂಡುಬರುತ್ತವೆ, ಅಂತೆಯೇ ಆಗಸ್ಟ್ ಹಾಗೂ ಸಪ್ಟೆಂಬರ್ ತಿಂಗಳಲ್ಲಿ ಈ ಸೊಳ್ಳೆಗಳು ಗರಿಷ್ಠ ಚಟುವಟಿಕೆಯೊಂದಿಗೆ ಅಸ್ತಿತ್ವದಲ್ಲಿರುತ್ತವೆ. ಸೋಂಕಿತ ಸೊಳ್ಳೆಗಳು ಜನರಿಗೆ ಕಡಿದಾಗ WNV ಒಬ್ಬರಿಂದ ಒಬ್ಬರಿಗೆ ಹರಡಬಹುದು. ಬ್ರೂಕ್ಲಿನ್ ಮತ್ತು ಕ್ವೀನ್ಸ್‌ನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕಾದಲ್ಲಿ ನಾಲ್ಕು ಮರಣಗಳೊಂದಿಗೆ ಒಟ್ಟು 54 ವರದಿಗಳು ಪತ್ತೆಯಾಗಿವೆ.


ಆರೋಗ್ಯ ಆಯುಕ್ತರು ನೀಡಿರುವ ಸಲಹೆಗಳೇನು?
ನಗರ ವಾಸಿಗಳು ವೆಸ್ಟ್ ನೈಲ್ ವೈರಸ್ ಸೀಸನ್‌ನ ಉತ್ತುಂಗದಲ್ಲಿರುವುದರಿಂದ, ಸೊಳ್ಳೆ ಕಚ್ಚುವುದರಿಂದ ನಮ್ಮನ್ನು ನಾವು ಸಂರಕ್ಷಿಸಲು ಹಲವಾರು ವಿಧಾನಗಳಿವೆ ಎಂದು ಆರೋಗ್ಯ ಆಯುಕ್ತ ಡಾ. ಅಶ್ವಿನ್ ವಾಸನ್ ತಿಳಿಸಿದ್ದಾರೆ. ನಗರವಾಸಿಗಳಿಗೆ ಅಶ್ವಿನ್ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದು ಇಪಿಎ ನೋಂದಾಯಿತ ಕೀಟ ನಿವಾರಕವನ್ನು ಬಳಸಲು ಸೂಚಿಸಿದ್ದಾರೆ, ವಿಶೇಷವಾಗಿ ಉದ್ದನೆಯ ತೋಳುಗಳುಳ್ಳ ದಿರಿಸುಗಳನ್ನು ಧರಿಸಲು ಸೂಚನೆ ನೀಡಿದ್ದಾರೆ.

top videos
    First published: