ನಾನು ಬ್ರಾಹ್ಮಣ, ಚೌಕೀದಾರ ಆಗಲು ಸಾಧ್ಯವಿಲ್ಲ; ಪ್ರಧಾನಿ ಮೋದಿ ಪ್ರಚಾರ ತಂತ್ರಕ್ಕೆ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಈ ದೇಶದ ಚೌಕೀದಾರ (ಕಾವಲುಗಾರ) ಎಂದು ಹೇಳುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದರು. ಅಲ್ಲದೇ, ತಮ್ಮ ಟ್ವಿಟರ್ ಖಾತೆಯ ಹೆಸರಿನಲ್ಲೂ ಚೌಕೀದಾರ್​ ಎಂದು ಸೇರಿಸಿಕೊಂಡಿದ್ದಾರೆ.

HR Ramesh | news18
Updated:March 24, 2019, 5:23 PM IST
ನಾನು ಬ್ರಾಹ್ಮಣ, ಚೌಕೀದಾರ ಆಗಲು ಸಾಧ್ಯವಿಲ್ಲ; ಪ್ರಧಾನಿ ಮೋದಿ ಪ್ರಚಾರ ತಂತ್ರಕ್ಕೆ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ
ಸುಬ್ರಮಣಿಯನ್ ಸ್ವಾಮಿ
HR Ramesh | news18
Updated: March 24, 2019, 5:23 PM IST
ನವದಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಆರಂಭದಿಂದಲೂ ಬಿಸಿತುಪ್ಪವಾಗಿರುವ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಪ್ರಧಾನಿ ಮೋದಿಗೆ ಟಾಂಗ್​ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಆರಂಭಿಸಿರುವ 'ನಾನು ಚೌಕೀದಾರ್'​ ಎಂಬ ಪ್ರಚಾರ ತಂತ್ರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಬ್ರಾಹ್ಮಣ. ಚೌಕೀದಾರ ಆಗಲು ಸಾಧ್ಯವಿಲ್ಲ. ನಾನು ಹೇಳಿದಂತೆ ಚೌಕೀದಾರ ಮಾಡಬೇಕು. ಅವರೇಕೆ ತಮ್ಮ ಹೆಸರನ್ನು ಚೌಕೀದಾರ್​ ಎಂದು ಬದಲಿಸಿಕೊಳ್ಳಬೇಕಿತ್ತು" ಎಂದು ತಮಿಳು ಸ್ಥಳೀಯ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳುವ ಮೂಲಕ ಪ್ರಧಾನಿಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್ ನೀಡಿದ್ದಾರೆ.

Frank ஆ பேசராப்ல. Wish he campaigns for BJP in TN 😂 pic.twitter.com/TkQCqbX66S
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಈ ದೇಶದ ಚೌಕೀದಾರ (ಕಾವಲುಗಾರ) ಎಂದು ಹೇಳುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದರು. ಅಲ್ಲದೇ, ತಮ್ಮ ಟ್ವಿಟರ್ ಖಾತೆಯ ಹೆಸರಿನಲ್ಲೂ ಚೌಕೀದಾರ್​ ಎಂದು ಸೇರಿಸಿಕೊಂಡಿದ್ದಾರೆ. ಇದನ್ನೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರದ ಹಲವು ಮಂತ್ರಿಗಳು, ಬಿಜೆಪಿ ಮುಖ್ಯಮಂತ್ರಿಗಳು ಅನುಸರಿಸಿ, ತಮ್ಮ ಟ್ವಿಟರ್​ ಖಾತೆಯ ಹೆಸರಿನ ಜೊತೆ ಚೌಕೀದಾರ್ ಪದವನ್ನು ಸೇರಿಸಿಕೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 'ನಾನು ಚೌಕಿದಾರ್'​ ಎಂಬ ಅಭಿಯಾನವನ್ನೇ ಆರಂಭಿಸಿದೆ. ಈ ಹೊತ್ತಿನಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಚೌಕೀದಾರ್​ ಪ್ರಚಾರ ತಂತ್ರವನ್ನು ಹೀಗೆ ಟೀಕೆ ಮಾಡಿದ್ದಾರೆ.
Loading...

ಇದನ್ನು ಓದಿ: ಪಾಕಿಸ್ತಾನದ ಅಸ್ತಿತ್ವವನ್ನೇ ಅಂತ್ಯಗೊಳಿಸಬೇಕಿದೆ: ಸುಬ್ರಮಣಿಯನ್ ಸ್ವಾಮಿ

ನೆನ್ನೆ ಕೂಡ ಪ್ರಧಾನಿ ಮತ್ತು ವಿತ್ತ ಸಚಿವ ಇಬ್ಬರನ್ನು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದರು. ಭಾರತವು ವಿಶ್ವದಲ್ಲಿ ಐದನೇ ಬೃಹತ್​ ಅರ್ಥವ್ಯವಸ್ಥೆ ಹೊಂದಿರುವ ದೇಶ ಎಂದು ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್​ ಜೇಟ್ಲಿ ಹೇಳಿದ್ದಾರೆ. ಇವರಿಬ್ಬರಿಗೂ ಅರ್ಥಶಾಸ್ತ್ರವೇ ಗೊತ್ತಿಲ್ಲ. ವೈಜ್ಞಾನಿಕವಾಗಿ ಮಾನ್ಯತೆ ಜಿಡಿಪಿ ಪ್ರಕಾರ ಅಮೆರಿಕ, ಚೀನಾದ ನಂತರ ಭಾರತ ಅರ್ಥವ್ಯವಸ್ಥೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಟೀಕೆ ಮಾಡಿದ್ದರು.

 

First published:March 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...