PUBG Game : ಪಬ್​ಜಿ ಗೇಮ್​ ಆಡುತ್ತಾ ಮೈಮರೆತ ವಿದ್ಯಾರ್ಥಿಗಳು, ರೈಲು ಹರಿದು ಇಬ್ಬರ ದಾರುಣ ಸಾವು!

PUBG Game: ಇದೀಗ ಪಬ್​ಜಿ ಗೇಮ್​​ನಿಂದ ಮತ್ತೊಂದು ದುರತವೊಂದು ನಡೆದುಹೋಗಿದೆ.  ಹೀಗೆ ಪಬ್‌ಜಿ ಆಡುತ್ತಾ ವಾಕಿಂಗ್(Walking) ಮಾಡುತ್ತಿದ್ದ ವಿದ್ಯಾರ್ಥಿಗಳ(Students) ಮೇಲೆ ರೈಲು(Train) ಹರಿದ ಘಟನೆ ಉತ್ತರ ಪ್ರದೇಶ(Uttar Pradesh) ಮಥುರಾದಲ್ಲಿ ನಡೆದಿದೆ. 

ಪಬ್​ಜಿ ಗೇಮ್​

ಪಬ್​ಜಿ ಗೇಮ್​

  • Share this:
ಇಡೀ ಗೇಮಿಂಗ್​ ಲೋಕ(Gaming World)ದಲ್ಲೇ ಪಬ್​ಜಿ(PUBG) ಕ್ರಿಯೆಟ್​ ಮಾಡಿರೋ ಕ್ರೇಜ್​ ಯಾವ ಗೇಮ್​ ಮಾಡಿಲ್ಲ. ಮಾಡೋದು ಇಲ್ಲ. ಯಾರನ್ನು ಕೇಳಿದರು ಪಬ್​ಜಿ ಅಂತಾರೆ. ಅಷ್ಟರ ಮಟ್ಟಿಗೆ ಈ ಗೇಮ್​ ಎಲ್ಲರನ್ನು ಆವರಿಸಿಕೊಂಡುಬಿಟ್ಟಿದೆ. ಕೆಲ ತಿಂಗಳು ಈ ಪಬ್​​ಜಿ ಗೇಮ್​ ಇಂಡಿಯಾದಲ್ಲಿ ಬ್ಯಾನ್(Ban)​ ಮಾಡಲಾಗಿತ್ತು. ಆದರೆ, ಬ್ಯಾನ್​ ತೆಗೆದ ಮೇಲೆ ಮತ್ತೆ ಯುವಜನ(Youths)ತೆ ಈ ಪಬ್​​ಜಿ ಗೇಮ್​ನಲ್ಲಿ ಮುಳುಗಿಹೋಗಿದೆ. ಈ ಹಿಂದೆಯೂ ಪಬ್​ಜಿ ಗೇಮ್​ನಿಂದ ಆದ ಅನಾಹುತ ಒಂದೆರೆಡಲ್ಲ. ಪಬ್​ಜಿ ಆಟವಾಡಲು ಮೊಬೈಲ್(Mobile) ಕೊಡಲಿಲ್ಲ ಅಂತ ತಂದೆಯನ್ನೇ ಕೊಂದ(Murder) ಕಥೆಯನ್ನು ಕೇಳಿದ್ದೇವೆ. ಪಬ್​ಜಿ ಆಡಿ ಹುಚ್ಚಾರಾಗಿ ಆಸ್ಪತ್ರೆ ಸೇರಿರುವುದನ್ನು ನೋಡಿದ್ದೇವೆ. ಈ ಪಬ್​ಜಿ ಆಟದೊಳಗೆ ಮುಳುಗಿದರೆ, ಹೊರಗಿನ ಪ್ರಪಂಚದ ಅರಿವೆ ಇರುವುದಿಲ್ಲ. 100 ಜನರಲ್ಲಿ ಕೊನೆಯದಾಗಿ ಉಳಿದು ವಿನ್ನರ್​.. ವಿನ್ನರ್​..ಚಿಕನ್​ ಡಿನ್ನರ್​(Chicken Dinner).. ಮಾಡುವವರೆಗೂ ಗೇಮ್​ನಿಂದ ಆಚೆ ಬರುವುದಿಲ್ಲ. ಇದೀಗ ಪಬ್​ಜಿ ಗೇಮ್​​ನಿಂದ ಮತ್ತೊಂದು ದುರತವೊಂದು ನಡೆದುಹೋಗಿದೆ.  ಹೀಗೆ ಪಬ್‌ಜಿ ಆಡುತ್ತಾ ವಾಕಿಂಗ್(Walking) ಮಾಡುತ್ತಿದ್ದ ವಿದ್ಯಾರ್ಥಿಗಳ(Students) ಮೇಲೆ ರೈಲು(Train) ಹರಿದ ಘಟನೆ ಉತ್ತರ ಪ್ರದೇಶ(Uttar Pradesh) ಮಥುರಾದಲ್ಲಿ ನಡೆದಿದೆ. 

ಪಬ್​ಜಿ ಆಡುತ್ತಾ ವಾಕಿಂಗ್​ ಮಾಡುತ್ತಿದ್ದ ವಿದ್ಯಾರ್ಥಿಗಳು
 10ನೇ ತರಗತಿ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಹಾಗೂ 16 ವರ್ಷ ರಾಹುಲ್ ಇಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ಪಬ್‌ಜಿ ಆಟದಲ್ಲಿ ಮುಳುಗಿದ್ದಾರೆ. ವಾಕಿಂಗ್ ದಾರಿ ತಪ್ಪಿದೆ. ಗಮನ ಪಬ್‌ಜಿ ಮೇಲೆ ಹೆಚ್ಚಾಗಿತ್ತು. ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಮೇಲೆ ರೈಲು ಹರಿದು ಸ್ಥಳದಲ್ಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನಿನ್ನೆ ಭಾನುವಾರ ಶಾಲೆಗೆ ರಜೆ  ಇದ್ದ ಕಾರಣ ಬೆಳಗ್ಗೆಯಿಂದಲೇ ಆಟ ಆಡಲು ಶುರು ಮಾಡಿಕೊಂಡಿದ್ದರೆ.  ವಾಕಿಂಗ್ ವೇಳೆ ಪಬ್‌ಜಿ ಗೇಮ್ ಆಡುತ್ತಾ ಮುಂದೆ ಸಾಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ದಿನವಿಡಿ ಪಬ್​ಜಿ ಆಡುತ್ತಿರಲಿಲ್ಲ. ಓದುವುದರಲ್ಲೂ ಮುಂದಿದ್ದರು. ಬಿಡುವು ಸಿಕ್ಕಾಗ ಮಾತ್ರ ಪಬ್​ಜಿ ಆಡುತ್ತಿದ್ದರಂತೆ. ಆದರೆ  ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.
ಇವರಿಗೆ ರೈಲು ಬರುತ್ತಿದ್ದ ಶಬ್ದವು ಕೇಳಿಸಿಲ್ಲ!


ಉತ್ತರ ಪ್ರದೇಶದ ಮಥುರಾದಲ್ಲಿನ ಲಕ್ಷಿನಗರ ನಿವಾಸಿಗಳಾಗಿರುವ ಇಬ್ಬರು ವಿದ್ಯಾರ್ಥಿಗಳು, ಕಿವಿಗೆ ಹೆಡ್‌ಫೋನ್ ಹಾಕಿ ಪಬ್‌ಜಿ ಆಡುತ್ತಿದ್ದರು. ಇಬ್ಬರು ವಿದ್ಯಾರ್ಥಿಗಳು ರೈಲು ಹಳಿ ಬಳಿ ಹೋಗಿದ್ದು ಗೊತ್ತೆ ಆಗಿಲ್ಲ. ಅತ್ತ ರೈಲಿನ ಶಬ್ದ ಕೂಡ ಕೇಳಿಸಿಲ್ಲ. ಹೆಡ್‌ಫೋನ್ ಹಾಕಿದ್ದ ಕಾರಣ ಅವರಿಗೆ ಕೇಳಿಸಿ.ಲ್ಲಅತ್ತ ವೇಗವಾಗಿ ಬಂದ ರೈಲು ಕ್ಷಣಾರ್ಧದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಮುನಾಪಾರ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಒಬ್ಬ ವಿದ್ಯಾರ್ಥಿಯ ಮೊಬೈಲ್​ನಲ್ಲಿ ಪಬ್‌ಜಿ ಗೇಮ್ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್​ಜಿ ವಿಚಾರಕ್ಕೆ ಮಂಗಳೂರಿನಲ್ಲಿ ಕೊಲೆ

ಪಬ್‌ಜಿ ಆಟದಿಂದ ಗೆಳೆಯರ ಜಗಳ ಬಳಿಕ ಹೊಡೆದಾಟ, ಜಟಾಪಟಿ, ಪೊಲೀಸ್ ಕೇಸ್ ದಾಖಲಾದ ಹಲವು ಘಟನೆಗಳು ನಮ್ಮ ರಾಜ್ಯದಲ್ಲಿ ನಡೆದಿದೆ. ಪಬ್​ಜಿ ಆಟದಲ್ಲಿ ಸೋಲು ಗೆಲುವಿನ ವಿಚಾರಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಬಾಲಕನೋರ್ವನ ಕೊಲೆ ನಡೆದಿತ್ತು. ಕೆ.ಸಿ.ರೋಡ್ ನಿವಾಸಿ ಹನೀಫ್ ಎಂಬವರ ಪುತ್ರ ಆಕೀಫ್ (12 ವರ್ಷ ) ಎಂಬುವನನ್ನು  ದೀಪಕ್ ಎಂಬಾತ ಕೊಲೆ ಮಾಡಿದ್ದ.

ಇದನ್ನು ಓದಿ : ಆನ್​ಲೈನ್​ನಲ್ಲಿ ಪರಿಚಯವಾದ ಲವರ್​ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆ್ಯಸಿಡ್ ಎರಚಿದ ಮಹಿಳೆ!

ಬಾಲಕ ಹಲವು‌ ಸಮಯಗಳಿಂದಲೂ ದೀಪಕ್ ಎಂಬ ಯುವಕನ ಜೊತೆಯಲ್ಲಿ ಆನ್ ಲೈನ್ ನಲ್ಲಿ ಪಬ್​ಜಿ ಆಡುತ್ತಿದ್ದ. ಪಬ್​​​ಜಿ ಆಡುವಾಗ ಬಾಲಕನೇ ಗೆಲ್ಲುತ್ತಿದ್ದ. ನೀನು ಬೇರೆಯವರ ಸಹಾಯದಿಂದ ಪಬ್ ಜೀ ಅಡಿತ್ತೀಯಾ. ಹೀಗಾಗಿ ಒಂದು ದಿನ ಇಬ್ಬರೂ ಒಟ್ಟಿಗೆ ಕುಳಿತು ಪಬ್ ಜೀ ಆಡೋಣಾ ಎಂದು ಹೇಳಿದ್ದಾನೆ‌. ಅದರಂತೆಯೇ ದೀಪಕ್ ಜೊತೆ ಒಂದು ದಿನ ಪಬ್​​ಜಿ ಆಡಿದ್ದಾನೆ. ಆದರೆ ಆಟದಲ್ಲಿ ಬಾಲಕ ಸೋಲನ್ನು ಕಂಡಿದ್ದಾನೆ. ಹೀಗಾಗಿ ನೀನು ಇಷ್ಟು ದಿನ ಮೋಸ‌ ಮಾಡಿ ಗೆಲುವನ್ನು ಕಂಡಿದ್ದೀಯಾ ಎಂದು ದೀಪಕ್ ಕಿರಿಕ್ ತೆಗೆದಿದ್ದಾನೆ. ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿತ್ತು.
Published by:Vasudeva M
First published: