Boys Locker Room: ಇನ್​ಸ್ಟಾಗ್ರಾಂನಲ್ಲಿ ಗ್ಯಾಂಗ್ ರೇಪ್​ಗೆ ಪ್ರೇರೇಪಿಸಿದ ಪ್ರಕರಣ; ದೆಹಲಿ ಪೊಲೀಸರಿಂದ ಹುಡುಗರ ವಿಚಾರಣೆ

Boys Locker Room: ದಕ್ಷಿಣ ದೆಹಲಿಯ ಬಾಲಕಿಯೇ 'ಬಾಯ್ಸ್ ಲಾಕರ್ ರೂಮ್' ಗ್ರೂಪಿನ ಈ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಳು. 'ನಮ್ಮ ಶಾಲೆ ಹುಡುಗರಿಂದಲೇ ಇಂಥ ಕೃತ್ಯಕ್ಕೆ ಸ್ಕೆಚ್ ಹಾಕಲಾಗುತ್ತಿದೆ' ಎಂದು ಆತಂಕದ ಟ್ವೀಟ್ ಮಾಡಿದ್ದಳು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ (ಮೇ 6): ಇತ್ತೀಚೆಗಷ್ಟೇ ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ.‌ ಆದರೂ ಪಾತಕಿಗಳು ಮಾತ್ರ ಪಾಠ ಕಲಿತಿಲ್ಲ. ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಪ್ರಕರಣ ನಡೆದಿದ್ದ ಅದೇ ದೆಹಲಿಯಲ್ಲಿ ಮತ್ತೆ ಅಂಥದೇ ಗ್ಯಾಂಗ್ ರೇಪ್ ಮಾಡಲು ಸ್ಕೆಚ್ ಹಾಕಿರುವ ಭಾರೀ ಆತಂಕಕಾರಿ ಹೊರಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ದಕ್ಷಿಣ ದೆಹಲಿಯ ನೂರಾರು ಯುವಕರು 'ಬಾಯ್ಸ್ ಲಾಕರ್ ರೂಮ್' ಎಂಬ ಇನ್‌ಸ್ಟಾಗ್ರಾಮ್ ಚಾಟ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಗ್ಯಾಂಗ್ ರೇಪ್ ಅನ್ನು ಪ್ರೇರೇಪಿಸುವಂತಹ ಚಾಟ್ ಮಾಡುತ್ತಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಉತ್ತೇಜನ ನೀಡಲು ಬಾಲಕಿಯ ಮಾರ್ಫಡ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇವರೆಲ್ಲರೂ ಎಲ್ಲರೂ 10ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಎನ್ನುವುದು ಆತಂಕಕಾರಿ ಸಂಗತಿ.

ಫೋಟೋಗಳನ್ನು ಮಾರ್ಫಿಂಗ್ ಮಾಡುವುದು ಮತ್ತು ಗುಪ್ತಾಂಗಗಳ ಫೋಟೋ ಹಂಚಿಕೊಳ್ಳುವುದು ಐಟಿ ಕಾಯ್ದೆಯ ಸೆಕ್ಷನ್ 66E, ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354Cಗಳ ಪ್ರಕಾರ ಅಪರಾಧ‌. ಇದೇ ಹಿನ್ನೆಲೆಯಲ್ಲಿ ಬಾಲಕಿಯ ಮಾರ್ಪೆಡ್ ಫೋಟೋ ಶೇರ್ ಮಾಡಿದ್ದ ಹುಡುಗನೊಬ್ಬನ್ನು ವಶಕ್ಕೆ ಪಡೆದಿರುವ ದೆಹಲಿಯ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ಅವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವನ ಹೇಳಿಕೆ ಆಧರಿಸಿ ಮತ್ತೆ ಐವರು ಯುವಕರನ್ನು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಹುಡುಗಿಯರ ಅಶ್ಲೀಲ ಫೋಟೋ ಹಂಚಲು ಇನ್​ಸ್ಟಾಗ್ರಾಂನಲ್ಲಿ ಚಾಟ್ ಗ್ರೂಪ್​; ದೆಹಲಿ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು

ಸೋಮವಾರ ಐವರು ಯುವಕರನ್ನು ಅವರ ಪೋಷಕರೆದುರೇ 6 ಗಂಟೆ ವಿಚಾರಣೆ ನಡೆಸಿರುವ ದೆಹಲಿಯ ಸೈಬರ್ ಕ್ರೈಂ ಸೆಲ್ ಪೊಲೀಸರು, ಅವರುಗಳು ಅವರುಗಳು ನೀಡಿದ ಹೇಳಿಕೆ ಆಧರಿಸಿ‌ ಇನ್ನೂ 21 ಹುಡುಗರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ಹೀಗೆ ಗ್ಯಾಂಗ್ ರೇಪ್ ಮಾಡಲು ಸ್ಕೆಚ್ ಹಾಕಿದ್ದವರ ಜಾಲ ಬಿಚ್ಚಿಕೊಳ್ಳುತ್ತಲೆ ಇದೆ.ದೆಹಲಿಯಲ್ಲಿ ಈ ರೀತಿ ಗ್ಯಾಂಗ್ ರೇಪ್ ಗೆ ಪ್ರೇರಿಪಿಸಲು 'ಬಾಯ್ಸ್ ಲಾಕರ್ ರೂಮ್' ಎಂಬ ಇನ್‌ಸ್ಟಾಗ್ರಾಮ್ ಚಾಟ್ ಗ್ರೂಪ್ ಮಾಡಿಕೊಂಡಿರುವವರ ವಯಸ್ಸು ಬಹುತೇಕ 17 ರಿಂದ 18. ಈ ಚಾಟ್ ಗ್ರೂಪ್​ನಲ್ಲಿ ಅತ್ಯಾಚಾರ ಮಾಡಲು ಹುರಿದುಂಬಿಸುತ್ತಿದ್ದಾರೆ ಎಂಬುದು ಟ್ವಿಟರ್‌ ಬಳಕೆದಾರರೊಬ್ಬರಿಂದ ಬಹಿರಂಗಗೊಂಡಿತು. ಬಳಿಕ ದೆಹಲಿಯ ಸೈಬರ್ ಕ್ರೈಮ್ ಸೆಲ್ ಪೊಲೀಸರು ಐಟಿ ಕಾಯ್ದೆಯಡಿ ಬಾಲಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು ಪ್ರತ್ಯೇಕ ಘಟನೆಯೊಂದರಲ್ಲಿ 'ಬಾಯ್ಸ್ ಲಾಕರ್ ರೂಮ್' ಇನ್ಸ್ಟಾಗ್ರಾಂ ಚಾಟ್ ಗ್ರೂಪಿನ ಒಂದು ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ಅದರಲ್ಲಿ 'ನಾವು ಅವಳನ್ನು ಸುಲಭವಾಗಿ ಅತ್ಯಾಚಾರ ಮಾಡಬಹುದು', 'ನೀವು ಹೇಳಿದಾಗ ಬರುತ್ತೇನೆ. ನಾವು ಅವಳನ್ನು ಸಾಮೂಹಿಕ ಅತ್ಯಾಚಾರ ಮಾಡಬಹುದು' ಎಂಬಿತ್ಯಾದಿ ನೇರವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಪ್ರೇರೇಪಿಸುವಂತಹ ಸಂಭಾಷಣೆಗಳಿದ್ದವು.

ಇದನ್ನೂ ಓದಿ: 12 ದೇಶ, 64 ವಿಮಾನ, 14,800 ಭಾರತೀಯರು; ಮೇ 7ರಿಂದ ಸರ್ಕಾರದಿಂದ ಅನಿವಾಸಿಗಳ ರಕ್ಷಣಾ ಕಾರ್ಯಾಚರಣೆ

ದಕ್ಷಿಣ ದೆಹಲಿಯ ಬಾಲಕಿಯೇ 'ಬಾಯ್ಸ್ ಲಾಕರ್ ರೂಮ್' ಗ್ರೂಪಿನ ಈ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಳು. 'ನಮ್ಮ ಶಾಲೆ ಹುಡುಗರಿಂದಲೇ ಇಂಥ ಕೃತ್ಯಕ್ಕೆ ಸ್ಕೆಚ್ ಹಾಕಲಾಗುತ್ತಿದೆ' ಎಂದು ಆತಂಕದ ಟ್ವೀಟ್ ಮಾಡಿದ್ದಳು. ಇದೇ ಕಾರಣಕ್ಕೆ ತಮ್ಮ ತಾಯಿ ಶಾಲೆ ಬಿಡುವಂತೆ ಒತ್ತಾಯಿಸುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಳು.

ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದ್ದಂತೆ ಪಾತಕಿಗಳು 'ಬಾಸ್ ಲಾಕರ್ ರೂಮ್ 2.0’ ಎಂದು ಗ್ರೂಪ್ ಹೆಸರನ್ನು ಬದಲಿಸಿಕೊಂಡು ಹಳೆಯ ಚಾಳಿ ಮುಂದುವರೆಸಿದರು. ಲಾಕ್ ಡೌನ್ ವೇಳೆ ಮಹಿಳೆಯರ ಮೇಲಿನ ಸೈಬರ್ ಕ್ರೈಂ ಹೆಚ್ಚಾಗಿವೆ ಎಂದು ಮಹಿಳಾ ಕಾಂಗ್ರೆಸ್ ಕೂಡ ದೆಹಲಿ ಪೊಲೀಸರ ಗಮನ ಸೆಳೆದಿತ್ತು.

ಗ್ಯಾಂಗ್ ರೇಪ್ ಗೆ ಪ್ರೇರೇಪಿಸಿದ ಇಂಥ ಪ್ರಕರಣ ಇದೇ ಮೊದಲಲ್ಲ. ಮುಂಬೈ ಪ್ರತಿಷ್ಠಿತ ಶಾಲೆಯಲ್ಲೂ ವಾಟ್ಸಾಪ್ ಗುಂಪಿನಲ್ಲಿ ಸಹಪಾಠಿಗಳ ಬಗ್ಗೆ ಲೈಂಗಿಕವಾಗಿ ಚರ್ಚೆ ನಡೆದಿತ್ತು. ಬಳಿಕ ಶಾಲೆಯು 13 ಮತ್ತು 14ನೇ ವಯಸ್ಸಿನ 8 ಹುಡುಗರನ್ನು ಅಮಾನತುಗೊಳಿಸಿತ್ತು. 'ಗ್ಯಾಂಗ್ ಬ್ಯಾಂಗ್' ಮತ್ತು 'ಅತ್ಯಾಚಾರ' ಎಂಬ ಪದಗಳನ್ನು ಚಾಟಿಂಗ್ ವೇಳೆ ಬಳಸಲಾಗಿತ್ತು ಎಂದು ಪತ್ರಿಕೆಯೊಂದು ವರದಿಯಾಗಿತ್ತು. ಆ ವಾಟ್ಸ್ ಅಪ್ ಚರ್ಚೆಯಲ್ಲಿ ಸಲಿಂಗಕಾಮವನ್ನು ಅಪಹಾಸ್ಯ ಮಾಡಲಾಗಿತ್ತು. ಚಾಟಿಂಗ್ ಉದ್ದಕ್ಕೂ ವಿದ್ಯಾರ್ಥಿನಿಯರನ್ನು ‘ಅನುಪಯುಕ್ತ’ ಎಂದು ಕರೆಯಲಾಗಿತ್ತು. ತಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ನಿರಾಕರಿಸಿದ ನಂತರ ಇಬ್ಬರು ತಾಯಂದಿರು ಈ ಗ್ಯಾಂಗ್ ರೇಪ್ ಸ್ಕೆಚ್ ವಿಷಯವನ್ನು ಬಹಿರಂಗಪಡಿಸಿದ್ದರು.
First published: