ಹುಡುಗಿಯರ ಅಶ್ಲೀಲ ಫೋಟೋ ಹಂಚಲು ಇನ್​ಸ್ಟಾಗ್ರಾಂನಲ್ಲಿ ಚಾಟ್ ಗ್ರೂಪ್​; ದೆಹಲಿ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು

Boys Locker Room: ಬಾಯ್ಸ್​ ಲಾಕರ್ಸ್​ ರೂಂ​ ಗ್ರೂಪ್​ನಲ್ಲಿರುವ ಎಲ್ಲ ಸದಸ್ಯರನ್ನೂ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಒತ್ತಾಯಿಸಿದ್ದಾರೆ.

ಇನ್​​​ಸ್ಟಾಗ್ರಾಂ

ಇನ್​​​ಸ್ಟಾಗ್ರಾಂ

  • Share this:
ನವದೆಹಲಿ (ಮೇ 5): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿತ್ತು. ಆದರೂ ಜನರಿಗೆ ಇನ್ನೂ ಪಾಠ ಕಲಿತಿಲ್ಲ. ನಿರ್ಭಯಾ ಪ್ರಕರಣ ನಡೆದಿದ್ದ ನವದೆಹಲಿಯಲ್ಲೇ ವಿದ್ಯಾರ್ಥಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರಕ್ಕೆ ಸ್ಕೆಚ್ ಹಾಕುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಸಾಮೂಹಿಕ ಅತ್ಯಾಚಾರವನ್ನು ಪ್ರೇರೇಪಿಸಲು ಇನ್​​ಸ್ಟಾಗ್ರಾಂನಲ್ಲಿ ಚಾಟ್​ ಗ್ರೂಪ್ ತೆರೆದಿದ್ದ ಪಿಯುಸಿ ವಿದ್ಯಾರ್ಥಿಗಳ ವಿರುದ್ಧ ದೆಹಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಪ್ರಥಮ ಮತ್ತು ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಅತ್ಯಾಚಾರ, ಲೈಂಗಿಕ ಸಂಬಂಧ, ತಮ್ಮ ಜೊತೆ ಓದುತ್ತಿರುವ ಹುಡುಗಿಯರ ಬಗ್ಗೆ ಚರ್ಚಿಸುತ್ತಿದ್ದರು. ಅಲ್ಲದೆ, ಲೈಂಗಿಕವಾಗಿ ಪ್ರಚೋದಿಸುವ ಮತ್ತು ಅತ್ಯಾಚಾರವನ್ನು ಪ್ರೇರೇಪಿಸುವಂತಹ ಫೋಟೋಗಳನ್ನು ಬಾಯ್ಸ್​ ಲಾಕರ್ ರೂಂ ಎಂಬ ಆನ್​ಲೈನ್​ ಗ್ರೂಪ್​ ಮೂಲಕ ಇನ್​​ಸ್ಟಾಗ್ರಾಂ ಮತ್ತು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡುತ್ತಿದ್ದರು.ಇದನ್ನೂ ಓದಿ: ಚಿತ್ರದುರ್ಗದ ಮಮತಾ ನೇರ್ಲಿಗೆ NSUI ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ

ಈ ಬಾಯ್ಸ್​ ಲಾಕರ್ ರೂಂ ಎಂಬ ಗ್ರೂಪಿನ ರೂವಾರಿಗಳು ಯಾರೆಂಬುದು ತಿಳಿಯದೆ, ಎಷ್ಟೋ ಪಾಲಕರು ತಮ್ಮ ಹೆಣ್ಣುಮಕ್ಕಳ ಫೋಟೋಗಳನ್ನು ಹಾಕದಂತೆ ತಡೆಯಲು ಪೊಲೀಸರ ಮೊರೆಹೋಗಿದ್ದರು. ಈ ಬಗ್ಗೆ ಮಾಹಿತಿ ನೀಡುವಂತೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ಇನ್​​ಸ್ಟಾಗ್ರಾಂಗೆ ಪತ್ರ ಬರೆದಿದ್ದರು. ಆಗ ಸಿಕ್ಕ ಮಾಹಿತಿಯಿಂದ ಸ್ವತಃ ಪೊಲೀಸರೇ ಶಾಕ್ ಆಗಿದ್ದರು.ಈ ಬಾಯ್ಸ್​ ಲಾಕರ್ ರೂಂ ಎಂಬ ಗ್ರೂಪ್​ನಲ್ಲಿರುವವರು ದೆಹಲಿಯ ಪ್ರಸಿದ್ಧ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ 17ರಿಂದ 18 ವರ್ಷದ ವಿದ್ಯಾರ್ಥಿಗಳು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ತಮ್ಮದೇ ತರಗತಿಯ ಹುಡುಗಿಯರ ಅಶ್ಲೀಲ ಫೋಟೋಗಳನ್ನು ಹಾಕಿ ಅತ್ಯಾಚಾರದ ಬಗ್ಗೆ ಗ್ರೂಪ್​ನಲ್ಲಿ ಕಮೆಂಟ್​ಗಳನ್ನು ಹಾಕುತ್ತಿದ್ದರು. ಅವರ ದೇಹದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ನಾವೆಲ್ಲರೂ ಸೇರಿ ಈ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ಮಾಡೋಣ ಎಂಬ ಕಮೆಂಟ್​ಗಳೆಲ್ಲ ಬರುತ್ತಿದ್ದವು. ಇದರಿಂದ ಬಾಲಕಿಯರ ಪಾಲಕರು ಕಂಗಾಲಾಗಿದ್ದರು.

ಇದನ್ನೂ ಓದಿ: ಪ್ರಾಣ ತೆಗೆದ ಅಕ್ರಮ ಸಂಬಂಧ; ಬ್ಯೂಟಿಷಿಯನ್ ಕಾಲು ಕತ್ತರಿಸಿ, ಬೆಂಕಿ ಹಚ್ಚಿ ಕೊಂದ ಪ್ರಿಯಕರಈ ಆನ್​ಲೈನ್​ ಗ್ರೂಪ್​ನಲ್ಲಿರುವ ಎಲ್ಲ ಸದಸ್ಯರನ್ನೂ ಬಂಧಿಸುವಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಒತ್ತಾಯಿಸಿದ್ದಾರೆ. ಈಗಾಗಲೇ ಆಯೋಗದಿಂದ ಇನ್​​ಸ್ಟಾಗ್ರಾಂ ಮತ್ತು ದೆಹಲಿ ಪೊಲೀಸ್​ಗೆ ನೋಟಿಸ್ ನೀಡಲಾಗಿದೆ. ಆ ಬಾಲಕರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.ಬಾಯ್ಸ್​ ಲಾಕರ್ಸ್​ ರೂಂನ ಚಾಟಿಂಗ್​ ಸ್ಕ್ರೀನ್​ಶಾಟ್​ಗಳು ವೈರಲ್ ಆಗುತ್ತಿದ್ದಂತೆ ಬಾಲಕರು ತಮ್ಮ ಗ್ರೂಪ್​​ನ ಹೆಸರು ಬದಲಾಯಿಸಿಕೊಂಡಿದ್ದಾರೆ. ಫೋಟೋಗಳನ್ನು ಮಾರ್ಫಿಂಗ್ ಮಾಡುವುದು ಮತ್ತು ಗುಪ್ತಾಂಗಗಳ ಫೊಟೋ ಹಂಚಿಕೊಳ್ಳುವುದು ಅಪರಾಧ. ಐಟಿ ಕಾಯ್ದೆಯ ಸೆಕ್ಷನ್ 66E, ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354Cಯ ಉಲ್ಲಂಘನೆ ಮಾಡಿರುವ ಇವರಿಗೆ ಶಿಕ್ಷೆ ವಿಧಿಸಬೇಕು ಎಂದು ಟ್ವಿಟ್ಟರ್​ನಲ್ಲಿ ಒತ್ತಾಯಗಳು ಕೇಳಿಬಂದಿವೆ.

 
First published: