Udta Punjab: ಪಂಜಾಬ್ ಡ್ರಗ್ಸ್ ಮಾಫಿಯಾ.. ಕೆಲ್ಸ ಸಿಗದೇ ಡ್ರಗ್ಸ್​ಗೆ ದಾಸರಾಗ್ತಿದ್ದಾರೆ ಯುವಕರು!

ನ್ಯೂಸ್ 18 , 20 ರಿಂದ 25 ರ ವಯೋಮಾನದ ಮೂರು ಮಂದಿ ಯುವಕರನ್ನು ಮಾತನಾಡಿಸಿದಾಗ, ಉದ್ಯೋಗದ ಕೊರತೆ ಬಹಳಷ್ಟು ಮಂದಿ ಯುವಕರು ಈ ವ್ಯಸನಕ್ಕೆ ಮತ್ತು ಬಳಿಕ ಖಿನ್ನತೆಗೆ ಜಾರಲು ಕಾರಣವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಂಜಾಬ್‍(Punjab)ನ ಉಪನಗರಗಳಲ್ಲಿ ಖಿನ್ನತೆ(Depression) ಮತ್ತು ಮಾದಕ ವ್ಯಸನಕ್ಕೆ ಚಿಕಿತ್ಸೆ ನೀಡುವ ಹಲವಾರು ಪುನರ್ವಸತಿ(Rehabilitation) ಮತ್ತು ಡೀ –ಅಡಿಕ್ಷನ್(D-Addiction) ಸೆಂಟರ್‌ಗಳನ್ನು ಕಾಣಬಹುದು. ಅಂತಹ ಕೇಂದ್ರಗಳಲ್ಲಿ ಒಂದಾಗಿರುವ ಹರ್ಮಿಟೇಜ್ ಡೀ ಅಡಿಕ್ಷನ್(Hermitage D Addiction) ಕೇಂದ್ರಕ್ಕೆ ಭೇಟಿ ನೀಡಿ, ಪಂಜಾಬಿನ ಯುವಕರ ಮಾದಕ ವ್ಯಸನದ ಸಮಸ್ಯೆಗಳ ಕುರಿತು ನ್ಯೂಸ್ 18(News18) ಸಂಗ್ರಹಿಸಿರುವ ಮಾಹಿತಿ ಇಲ್ಲಿದೆ. “ನಾನು ಕಳೆದ 15 ವರ್ಷಗಳಿಂದ ನೋಡುತ್ತಲೇ ಇದ್ದೇನೆ, ಏನೂ ಬದಲಾಗಿಲ್ಲ ಮತ್ತು ಮಾದಕ ವ್ಯಸನದ ಪ್ರಕರಣಗಳು ಹೆಚ್ಚಿವೆ. ಯುವಕರಿಗೆ ಕೆಲಸ(Job) ಇಲ್ಲದಿರುವುದು ಮತ್ತು ಅವರು ಖಿನ್ನತೆಗೆ ಒಳಗಾಗುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದೆ” ಎಂದು ಹರ್ಮಿಟೇಜ್ ಡೀ ಅಡಿಕ್ಷನ್ ಕೇಂದ್ರದ ನಿರ್ದೇಶಕ ಡಾ. ಭಾಟಿಯಾ(Dr. Bhatia) ನ್ಯೂಸ್ 18 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೆಲಸ ಸಿಗ್ತಿಲ್ಲ ಡ್ರಗ್ಸ್​ ಮೊರೆ ಹೋಗ್ತಿದ್ದಾರೆ ಯುವಕರು!

ನ್ಯೂಸ್ 18 , 20 ರಿಂದ 25 ರ ವಯೋಮಾನದ ಮೂರು ಮಂದಿ ಯುವಕರನ್ನು ಮಾತನಾಡಿಸಿದಾಗ, ಉದ್ಯೋಗದ ಕೊರತೆ ಬಹಳಷ್ಟು ಮಂದಿ ಯುವಕರು ಈ ವ್ಯಸನಕ್ಕೆ ಮತ್ತು ಬಳಿಕ ಖಿನ್ನತೆಗೆ ಜಾರಲು ಕಾರಣವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಅವರಲ್ಲಿ ಒಬ್ಬ, “ ನಾನು ಮೋಜಿಗಾಗಿ ಆರಂಭಿಸಿದೆ. ನಾನು ಅದನ್ನು ಒಮ್ಮೆ ತೆಗೆದುಕೊಂಡೆ ಮತ್ತು ಯಾವಾಗ ಡ್ರಗ್ಸ್ ಹವ್ಯಾಸಕ್ಕೆ ಒಳಗಾದೆ ಎಂಬುವುದು ಗೊತ್ತಾಗಲೇ ಇಲ್ಲ. ನಾನು ಕೆಲಸದಿಂದ ರಜೆ ತೆಗೆದುಕೊಳ್ಳಬೇಕಾಗಿದೆ ಮತ್ತು ಸಂಬಳವಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.

‘ಕೆಲಸ ಕಳೆದುಕೊಂಡ ಒತ್ತಡಕ್ಕೆ ಡ್ರಗ್ಸ್​ ಸೇವಿಸಿದೆ’

ಮತ್ತೊಬ್ಬ, “ನನಗೆ ಇತ್ತೀಚೆಗೆ ಮದುವೆಯಾಯಿತು ಮತ್ತು ನಂತರ ಕೆಲಸ ಹೋಯಿತು. ಕೆಲಸ ಸಿಗುವುದು ತುಂಬಾ ಕಷ್ಟ ಮತ್ತು ಡ್ರಗ್ಸ್‌ಗೆ ಅಂಟಿಕೊಂಡಿದ್ದೇನೆ. ನನ್ನ ಹೆತ್ತವರು ಬೆಂಬಲ ನೀಡುತ್ತಾರೆ, ಆದರೆ ನಾನೇನೂ ಮಾಡಲಿಕ್ಕಾಗುತ್ತಿಲ್ಲ. ನನಗೆ ಅವರ ಕಣ್ಣೀರನ್ನು ನೋಡಲು ಸಾಧ್ಯವಾಗುತ್ತಿಲ್ಲ, ಆದರೆ ನಾನು ಮಾದಕ ದೃವ್ಯಗಳಿಗೆ ಗುಲಾಮನಾಗಿದ್ದೇನೆ” ಎಂದಿದ್ದಾನೆ. ಮೂರನೆಯಾತ, ಹೇಳುವ ಪ್ರಕಾರ, ರಾಜ್ಯದಲ್ಲಿ ಮಾದಕ ದ್ರವ್ಯಗಳು ಸುಲಭವಾಗಿ ಲಭ್ಯವಿವೆ.

ಪಂಜಾಬ್​ನಲ್ಲಿ ಡ್ರಗ್ಸ್​ ಸುಲಭವಾಗಿ ಸಿಗುತ್ತಿದೆಯಂತೆ!

ಡ್ರಗ್ಸ್ ಮತ್ತು ನಿರುದ್ಯೋಗ ಎರಡೂ ಜೊತೆಯಾಗಿ ಪಂಜಾಬ್‍ಗೆ ಹೊಡೆತ ನೀಡುತ್ತಿವೆ. ಆದರೆ ಈ ವಿಚಾರಗಳು ಚುನಾವಣೆಯ ಸಂದರ್ಭದಲ್ಲಷ್ಟೇ ಚರ್ಚೆಗೆ ಒಳಪಡುತ್ತವೆ. ”ಮಾದಕ ದ್ರವ್ಯ ಮುಕ್ತ ಪಂಜಾಬ್” ಎಂಬ ಕಾಂಗ್ರೆಸ್‌ನ ಚುನಾವಣಾ ಭರವಸೆ ಇನ್ನೂ ಈಡೇರಿಲ್ಲ. ಅಮೃತಸರದ ಪೂರ್ವದಲ್ಲಿ ಅತ್ಯಂತ ಕುತೂಹಲಕಾರಿ ಕದನ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ನವಜೋತ್ ಸಿಂಗ್ ಸಿದ್ದು, ಡ್ರಗ್ ಕಾರ್ಟೆಲ್ ಪ್ರಕರಣದಲ್ಲಿ ಮಜಿಥಿಯಾ ಮತ್ತೊಮ್ಮೆ ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿರುವ, ಡ್ರಗ್ ಕಾರ್ಟೆಲ್ ಆರೋಪಿ ಬಿಕ್ರಮ್ ಮಜಿಥಿಯಾ ವಿರುದ್ಧ ಹೋರಾಡಲಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಯನ್ನೂ ಬಿಡೋದಿಲ್ಲ ಕಾಮುಕರು! ಶ್ವಾನದ ಮೇಲೂ ರೇಪ್ ನಡೆದಿದ್ದು ಎಲ್ಲಿ ಗೊತ್ತಾ?

ಪಾಕಿಸ್ತಾನದಿಂದ ಪಂಜಾಬ್​ಗೆ ಬರ್ತಿದೆಯಂತೆ ಡ್ರಗ್ಸ್​!

ರಾಜಕೀಯ ತಜ್ಞರ ಪ್ರಕಾರ, ಡಗ್ಸ್ ಹಲವಾರು ರಾಜಕೀಯ ಪಕ್ಷಗಳಿಗೆ ಧನದ ಪ್ರಮುಖ ಮೂಲವಾಗಿದೆ. ಆಗಾಗಿ ಅವರು ಡ್ರಗ್ಸ್ ವಿರುದ್ಧ ಹೋರಾಟದ ಮಾತುಗಳನ್ನಾಡುತ್ತಾರೆಯೇ ಹೊರತು , ವ್ಯಾಪಾರವನ್ನು ನಿಲ್ಲಿಸುವುದಿಲ್ಲ.“ನೀವು ನನ್ನನ್ನು ಕೇಳಿ ಮತ್ತು ನಾನು ನಿಮಗೆ ಡ್ರಗ್ಸ್ ತಂದು ಕೊಡಬಲ್ಲೆ. ಅದು ಪಾಕಿಸ್ತಾನದಿಂದ ಬರುತ್ತದೆ ಮತ್ತು ರಾಜಕಾರಣಿಗಳು ಈ ಬಗ್ಗೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಯುವಕರು ಬಳಲುತ್ತಿರುವುದನ್ನು ನೋಡುತ್ತಾ ಸಹಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಡ್ರಗ್ಸ್ ಮತ್ತು ರಾಜಕಾರಣಿಗಳ ನಡುವಿನ ನಂಟಿನ ಬಗ್ಗೆ “ಫೇಡಿಂಗ್ ಗ್ಲೋರಿ” ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿರುವ ಸಾಧ್ವಿ ಖೋಸ್ಲಾ.

ಇದನ್ನೂ ಓದಿ: ಕೋಳಿ ಕಾಳಗದಲ್ಲಿ ಹರಿದ ನೆತ್ತರು.. ಹುಂಜದ ಕಾಲಿಗೆ ಕಟ್ಟಿದ್ದ ಚಾಕು ಚುಚ್ಚಿ ವ್ಯಕ್ತಿ ಸಾವು!

ಪಂಜಾಬ್​ನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ

ಡ್ರಗ್ಸ್ ಸಮಸ್ಯೆಯ ಜೊತೆ ಜೊತೆಗೆ ನಿರುದ್ಯೋಗ ಸಮಸ್ಯೆ ಕೂಡ ಪಂಜಾಬನ್ನು ಪೆಡಂಭೂತವಾಗಿ ಕಾಡುತ್ತಿದೆ. ಜಲಂಧರ್, ಲೂಧಿಯಾನ ಮತ್ತು ಚಂಢೀಗಡದ ದಾರಿಯಲ್ಲಿ ಪ್ರಯಾಣಿಸಿದರೆ, ಸುಲಭವಾಗಿ ವಲಸೆಯ ವ್ಯವಸ್ಥೆಯನ್ನು ಮಾಡಿಕೊಡಬಲ್ಲ ಹಲವಾರು ಕಚೇರಿಗಳನ್ನು ಕಾಣಬಹುದು. ವಿದೇಶಕ್ಕೆ ವಲಸೆ ಹೋಗಬೇಕೆಂದು ಬಯಸುವ , ದಿನಕ್ಕೆ ಕನಿಷ್ಟ ನೂರು ಮಂದಿಯಾದರೂ ತನ್ನನ್ನು ಭೇಟಿ ಆಗುತ್ತಾರೆ ಎಂದು ಹೇಳುತ್ತಾರೆ ಇಎಸ್‍ಎಸ್ ಗ್ಲೋಬಲ್ ಎಂಬ ಕಚೇರಿಯ ರೋಹಿತ್ ಸಿಂಗ್.
Published by:Vasudeva M
First published: