ಮುನಿಸಿಕೊಂಡ ಗೆಳತಿ ಒಲಿಸಿಕೊಳ್ಳಲು ಊರೆಲ್ಲಾ ಬ್ಯಾನರ್​ ಹಾಕಿದ ರೊಮಿಯೋ!

news18
Updated:August 19, 2018, 1:40 PM IST
ಮುನಿಸಿಕೊಂಡ ಗೆಳತಿ ಒಲಿಸಿಕೊಳ್ಳಲು ಊರೆಲ್ಲಾ ಬ್ಯಾನರ್​ ಹಾಕಿದ ರೊಮಿಯೋ!
news18
Updated: August 19, 2018, 1:40 PM IST
ನ್ಯೂಸ್ 18 ಕನ್ನಡ

ಪುಣೆ (ಆ.19): ಪ್ರೀತಿ ಕುರುಡು ಎಂಬುದು ನಿಜ. ಆದರೆ, ಅದೇ ಕುರುಡು ಒಮ್ಮೊಮ್ಮೆ ಅವಾಂತರವನ್ನೂ ಸೃಷ್ಟಿಸಿಬಿಡುತ್ತದೆ ಎಂಬುದಕ್ಕೆ ಪುಣೆಯ ಪ್ರೇಮಿಯೊಬ್ಬ ಮಾಡಿದ ಕೆಲಸ ಸಾಕ್ಷಿಯಾಗಿದೆ.

ಅಸಲಿಗೆ ಈತ ಮಾಡಿದ ಕೆಲಸ ಏನೆಂದರೆ, ಮುನಿಸಿಕೊಂಡಿದ್ದ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು ಪುಣೆಯ ರಸ್ತೆ ತುಂಬೆಲ್ಲಾ 300 ಬ್ಯಾನರ್​ ಮತ್ತು ಹೋಲ್ಡಿಂಗ್ಸ್​​ಗಳನ್ನು ಹಾಕಿ, ಗೆಳತಿಯ ಕ್ಷಮಾಪಣೆ ಕೇಳಿದ್ದಾನೆ. ಇದಕ್ಕಾಗಿ ಆತ ಬರೋಬ್ಬರಿ 72 ಸಾವಿರ ರೂಪಾಯಿ ವ್ಯಯಿಸಿದ್ದಾನೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ ಪ್ರದೇಶದ 25 ವರ್ಷದ ನಿಲೇಶ್‌ ಖೇಡ್ಕರ್‌ ಅವರು ಎಂಬಾತನೇ ಬ್ಯಾನರ್ ಹಾಕಿ ಇದೀಗ ಬಂಧನ ಭೀತಿಯಲ್ಲಿ ಇದ್ದಾನೆ.

ಪ್ರೀತಿಯ ಸಂಕೇತವಾದ ಹೃದಯದ ಚಿತ್ರ ಬಿಡಿಸಿ, ಅದರಲ್ಲಿ  "ಶಿವ್ದೆ, ಐ ಯಾಮ್ ಸಾರಿ," ಎಂದು ಬರೆದು, ತನ್ನ ಗೆಳತಿಯ ಕ್ಷಮಾಪಣೆ ಕೇಳಿದ್ದಾನೆ. ವಿಶೇಷ ಅಂದರೆ, ತನ್ನ ಗೆಳತಿ ಪ್ರತಿನಿತ್ಯ ಓಡಾಡುವ ರಸ್ತೆಯ ನಡುವೆ ಈ 300 ಬ್ಯಾನರ್ ಮತ್ತು ಹೋಲ್ಡಿಂಗ್ಸ್​​ಗಳನ್ನು ಹಾಕಿದ್ದಾನೆ.

ಸಾರ್ವಜನಿಕ ಪ್ರದೇಶದಲ್ಲಿ ವಿಶೇಷ ರೀತಿಯಲ್ಲಿದ್ದ ಬ್ಯಾನರ್​ ಇರುವುದನ್ನು ಕಂಡ ಅಲ್ಲಿನ ಸ್ಥಳೀಯ ನಿವಾಸಿಗಳು ಪಿಂಪ್ರಿ ಚಿಂಚವಾಡ್ ನಗರಸಭೆಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ ಹೋಲ್ಡಿಂಗ್​ ಮತ್ತು ಬ್ಯಾನರ್​ಗಳನ್ನು ಹಾಕಿದ ಯುವ ಪ್ರೇಮಿಯ ಮೇಲೆ ಈಗ ದೂರು ದಾಖಲಾಗಿದೆ.
Loading...

ಎಂಬಿಎ ಪದವೀಧರನಾಗಿರುವ ಖೇಡ್ಕರ್ ಮತ್ತು ಆತನ ಪ್ರಿಯತಮೆ ನಡುವೆ ಗಲಾಟೆ ನಡೆದು, ಆತನ ಮೇಲೆ ಪ್ರೇಯಸಿ ಮುನಿಸಿಕೊಂಡಿದ್ದಳು. ಗಲಾಟೆ ನಡೆದ ಮರುಬೆಳಗ್ಗೆ ಈ ಪ್ರೇಮಿ 72 ಸಾವಿರ ರೂಪಾಯಿ ವೆಚ್ಚ ಮಾಡಿ, 300 ಬ್ಯಾನರ್, ಹೋಲ್ಡಿಂಗ್​ಗಳನ್ನು ಮುದ್ರಿಸಿ, ಆಕೆ ಪ್ರತಿನಿತ್ಯ ಸಂಚರಿಸುವ ರಸ್ತೆಯಲ್ಲಿ ಹಾಕಿದ್ದಾನೆ.

ಒಟ್ಟಿನಲ್ಲಿ ಪ್ರಿಯತಮೆಗೆ ಕ್ಷಮೆ ಕೇಳಲು, ಹಣದ ಬಗ್ಗೆ ಚಿಂತಿಸದೇ ಇಂತಹ ಉಪಾಯ ಮಾಡಿದ್ದು ಆತನ ಉತ್ಕಟ ಪ್ರೀತಿಗೆ ಸಾಕ್ಷಿ ಎನ್ನ ಬಹುದು.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...