Viral News: ಪ್ರೇಯಸಿಗೆ 11 ವಿಚಿತ್ರ ಶರತ್ತುಗಳನ್ನು ಹೇರಿದ ಪ್ರಿಯಕರ..

ಹೌದು ಅಮೆರಿಕದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಯಾರೊಲಿನ್ ವಿಷಯದಲ್ಲೂ ಅದೇ ಸಂಭವಿಸಿತು, ಆಕೆಯ ಗೆಳೆಯ ತನ್ನ ಸಂಬಂಧ ಮುಂದುವರಿಕೆಗಾಗಿ 11 ನಿಯಮಗಳನ್ನು ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಯಾವುದೇ ಸಂಬಂಧಗಳು(Relationship) ಬಹುಕಾಲ ಉಳಿಯಬೇಕೆಂದರೆ ಸಹಕಾರ, ಸಮಾಧಾನ, ತಾಳ್ಮೆ, ಹೊಂದಾಣಿಕೆ ಇವೆಲ್ಲವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋದರೆ ಮಾತ್ರ ಸಂಬಂಧಕ್ಕೊಂದು ಬೆಲೆ ಮತ್ತು ಅರ್ಥ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹೊಂದಾಣಿಕೆ ಕಣ್ಮರೆಯಾಗಿ, ಎಲ್ಲರನ್ನು ನಿಯಂತ್ರಿಸಿ, ಹಿಡಿತದಲ್ಲಿಟ್ಟುಕೊಳ್ಳುವ, ಮೇಲು-ಕೀಳು ಭಾವನೆಗಳು ಯಥೇಚ್ಛವಾಗಿ ಸಂಬಂಧಗಳು ಕಡಿದುಹೋಗುತ್ತಿವೆ.ಅಪ್ಪ, ಅಮ್ಮ-ಮಕ್ಕಳು, ಗಂಡ-ಹೆಂಡತಿ, ಪ್ರಿಯಕರ-ಪ್ರಿಯತಮೆ ಹೀಗೆ ಪ್ರತಿಯೊಂದು ಸಂಬಂಧಕ್ಕೊಂದು ಅದರದೇ ಆದ ಬೆಲೆ ಇದೆ. ಯಾರು ಯಾರನ್ನು ದೂಷಿಸದೆ, ಯಾವುದೇ ಒತ್ತಡ ಹೇರಿದರೆ ಸುಂದರ ಸಂಬಂಧ ಮುಂದುವರೆಯುತ್ತದೆ. ಮತ್ತೆ ಯಾರು ಯಾರಿಗೂ ಇದೇ ರೀತಿ ಬದುಕಬೇಕೆಂಬ ನಿಯಮವೂ ಸಲ್ಲದು. ಆದರೆ ಇಲ್ಲೊಬ್ಬ ಪ್ರಿಯಕರ ತನ್ನ ಪ್ರಿಯತಮೆಗೆ 11 ನಿಯಮಗಳನ್ನು(Rules) ಹೇರಿ ಪಾಲಿಸುವಂತೆ ಹೇಳಿದ್ದಾನೆ.


ಹೌದು ಅಮೆರಿಕದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಯಾರೊಲಿನ್ ವಿಷಯದಲ್ಲೂ ಅದೇ ಸಂಭವಿಸಿತು, ಆಕೆಯ ಗೆಳೆಯ ತನ್ನ ಸಂಬಂಧ ಮುಂದುವರಿಕೆಗಾಗಿ 11 ನಿಯಮಗಳನ್ನು ಮಾಡಿದ್ದಾನೆ.


ಹುಡುಗಿ ತನ್ನ ಗೆಳೆಯ ನೀಡಿದ 11 ನಿಯಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಕ್ಯಾರೋಲಿನ್ ತನ್ನ ಗೆಳೆಯನ 'ನಿಯಂತ್ರಿಸುವ' ಸ್ವಭಾವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಆಕೆ, ಅವಳು ವಿಶ್ವವಿದ್ಯಾನಿಲಯಕ್ಕೆ ಹೋದಾಗ ಅನುಸರಿಸಬೇಕಾದ ನಿಯಮಗಳನ್ನು ಆತ ಪಟ್ಟಿ ಮಾಡಿಕೊಟ್ಟಿದ್ದ ಎಂದು ಮಿರರ್ ಯುಕೆ ವರದಿ ಮಾಡಿದೆ.


ಕ್ಯಾರೋಲಿನ್ ಈ ನಿಯಮಗಳ ಸ್ಕ್ರೀನ್‍ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ನಿಯಮಗಳಲ್ಲಿ ಮಹಿಳೆಯ ಗೆಳೆಯನು ಅಕೆ ಏನು ತಿನ್ನಬೇಕು, ಯಾವುದನ್ನು ಕುಡಿಯಬೇಕು ಮತ್ತು ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದ್ದಾನೆ.. ಆಕೆಯ ಗೆಳೆಯ ಕೂಡ ಮದ್ಯ ಮುಟ್ಟುವುದಿಲ್ಲ ಎಂದು ಹೇಳಿದ್ದಾನೆ.


ಇದನ್ನೂ ಓದಿ: ಮಕ್ಕಳಿಗೆ ಆನ್​ಲೈನ್​ ಕ್ಲಾಸ್ ಸುಲಭ ಮಾಡಲು ವಿನೂತನ ಯಂತ್ರ ಅಭಿವೃದ್ಧಿಪಡಿಸಿದ ಶಿಕ್ಷಕ ..

ಈ ಪೋಸ್ಟ್ ಅನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕ್ಯಾರೋಲಿನ್ ಗೆಳೆಯ ಅವಳನ್ನು ಹುಡುಗರ ಜೊತೆ ಸುತ್ತಾಡುವುದಕ್ಕೂ ಕಡಿವಾಣ ಹಾಕಿದ್ದಾನೆ ಮತ್ತು ಆತನು ನೀಡಿದ ಉಂಗುರವನ್ನು ಅವಳು ಎಂದಿಗೂ ತೆಗೆಯಬಾರದು ಎಂದು ಹೇಳಿದ್ದು, ಅವನ ನಿಯಮದಲ್ಲಿ ಮುಖ್ಯವಾದ ನಿಯಮ ಎಂದೇ ಹೇಳಬಹುದು.


ಗೆಳೆಯ ಮಾಡಿದ ಈ ಎಲ್ಲಾ ನಿಯಮಗಳನ್ನು ಕ್ಯಾರೋಲಿನ್ ಪ್ರತಿದಿನ ಪಾಲಿಸಬೇಕು ಎಂದು ಹೇಳಿದ್ದನು. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ ಕ್ಯಾರೊಲಿನ್  ಆತನೊಂದಿಗೆ ಸಂಬಂಧವನ್ನು ಕೊನೆಗೊಳಿಸಲು ಯೋಚಿಸುತ್ತಿರುವುದಾಗಿ ಹಂಚಿಕೊಂಡಿದ್ದರು.. ಆದರೆ ಅದನ್ನು ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.


ಯಾವುದೇ ನಿಯಮಗಳು ಕಠಿಣವಾದಷ್ಟು ಆ ಸಂಬಂಧದಲ್ಲಿ ಉತ್ಸಾಹಕ್ಕಿಂತ ಉಸಿರುಗಟ್ಟುವುದೇ ಹೆಚ್ಚು. ಅಂತಹ ಸಂಬಂಧಗಳು ನೀರಿನ ಮೇಲಿನ ಗುಳ್ಳೆಯ<ತಿರುತ್ತದೆ. ಯಾವಾಗ ಬೇಕಾದರೂ ಅದು ಒಡೆದು ಹೋಗಬಹುದು. ಹಾಗಾಗಿ ನಿಯಮ, ಕಟ್ಟಪ್ಪಣೆಯಿಂದ ಸಂಬಂಧ ಉಲಿಯುತ್ತವೆ, ನಾವು ಅವರನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತೇವೆ ಎಂದರೆ ಅದು ನಿಜವಾಗಿಯೂ ಮೂರ್ಖತನವಲ್ಲದೇ ಮತ್ತೇನು ಇಲ್ಲ.


ಹಾಗಾಗಿ ಪ್ರತಿಯೊಬ್ಬರು ತಮ್ಮೊಟ್ಟಿಗಿನ ಸ್ನೇಹಿತರು, ಹೆಂಡತಿ, ಪ್ರೇಯಸಿ, ಮಕ್ಕಳಿಗೆ ಕೊಂಚ ಸ್ವಾತಂತ್ರ್ಯ ಕೊಟ್ಟು ನೋಡಿ ಆಗ ಅವರು ಪ್ರತಿಯೊಂದು ನಿಮ್ಮ ಜೊತೆ ಹಂಚಿಕೊಳ್ಳುವುದರಿಂದ ನಂಬಿಕೆ, ಪ್ರೀತಿ ಮತ್ತಷ್ಟು ಹೆಚ್ಚುತ್ತದೆ.


ಸಾಮಾನ್ಯವಾಗಿ ಪ್ರೇಮಿಗಳು ನಮ್ಮ ಸಂಬಂಧ ಗಟ್ಟಿಯಾಗಿರುವ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಹಾಕಿಕೊಳ್ಳುತ್ತಾರೆ. ಇಬ್ಬರ ಸಾಮಾಜಿಕ ಜಾಲಾತಾಣ ಖಾತೆಯ ಪಾಸವರ್ಡ್ ಗಳನ್ನು ಪರಸ್ಪರ ಹಂಚಿಕೊಳ್ಳುವುದು, ಕೆಲ ಸ್ನೇಹಿತರ ಜೊತೆ ಮಾತನಾಡದೇ ಇರುವುದು ಹೀಗೆ. ಆದರೆ ಈ ನಿಯಮಗಳು ಅತಿರೇಕ ಎನ್ನಬಹುದು.

ಇದನ್ನೂ ಓದಿ: ರಾಗಿ ಲಾಡು ತಯಾರಿಸಿ ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತನ ಮಗಳ ಯಶಸ್ಸಿನ ಗುಟ್ಟು..

ಯಾವುದೇ ಸಂಬಂಧವಾಗಲಿ ಪ್ರತಿಯೊಂದು ವಿಚಾರವಾಗಿ ಮಿತಿ ಇರುತ್ತದೆ. ಆ ಮಿತಿ ಮೀರಿದಾಗ ಯಾವುದೇ ಸಂಬಂಧ ಹೆಚ್ಚು ದಿನ ಮುಂದುವರೆಯುವುದಿಲ್ಲ.  ಸಂಬಂಧದಲ್ಲಿ ನಂಬಿಕೆಯೇ ಬುನಾದಿ ಎಂಬುದನ್ನ ಮರೆಯಬಾರದು.
Published by:Sandhya M
First published: