Hyundai ಆಯ್ತು, ಈಗ Pizza Hut, KFC ಬ್ಯಾನ್ ಮಾಡಿ ಅಂತಿದ್ದಾರೆ ಜನ.. ಏನು ಕಾರಣ?

Pizza hut: ಪಿಜ್ಜಾ ಹಟ್ ಜನಪ್ರಿಯ ಫಾಸ್ಟ್​ಫುಡ್​ ಕಂಪನಿಗಳಲ್ಲಿ ಒಂದು. ವಿದೇಶಿ ಕಂಪನಿಯಾದರು ಭಾರತದಲ್ಲೂ ತನ್ನ ಅನೇಕ ಮಳಿಗೆಯನ್ನು ಹೊಂದಿದೆ. ಇತ್ತೀಚೆಗೆ ಪಿಜ್ಜಾ ಹಟ್​ ಫೆಬ್ರವರಿ 5, ‘ಕಾಶ್ಮೀರಿ ಒಗ್ಗಟ್ಟಿನ ದಿನದಂದು‘ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್​ವೊಂದನ್ನು ಮಾಡಿರುವುದು ಭಾರತೀಯರ ಕೋಪಕ್ಕೆ ಕಾರಣವಾಗಿದೆ.

Pizza hut- KFC

Pizza hut- KFC

  • Share this:
    ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ (Hyundai) ಮತ್ತು ಕಿಯಾ (Kia) ನಂತರ, ಟ್ವಿಟರ್ (Twitter) ಬಳಕೆದಾರರು ಫಾಸ್ಟ್ ಫುಡ್ (Fast food) ದೈತ್ಯ ಪಿಜ್ಜಾ ಹಟ್ (Pizza Hut) ಮತ್ತು ಕೆಎಫ್‌ಸಿಯನ್ನು (KFC) ಭಾರತದಲ್ಲಿ ಬ್ಯಾನ್​ (Ban) ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಟ್ಬಿಟ್ಟರ್​ನಲ್ಲಿ ಈ ಬಗ್ಗೆ ಬರೆದುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿರುವುದಲ್ಲದೆ, ಈ ಎಲ್ಲಾ ದೈತ್ಯ ಕಂಪನಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

    ಪಿಜ್ಜಾ ಹಟ್ ಜನಪ್ರಿಯ ಫಾಸ್ಟ್​ಫುಡ್​ ಕಂಪನಿಗಳಲ್ಲಿ ಒಂದು, ವಿದೇಶಿ ಕಂಪನಿಯಾದರು ಭಾರತದಲ್ಲೂ ತನ್ನ ಅನೇಕ ಮಳಿಗೆಯನ್ನು ಹೊಂದಿದೆ. ಇತ್ತೀಚೆಗೆ ಪಿಜ್ಜಾ ಹಟ್​ ಫೆಬ್ರವರಿ 5, ‘ಕಾಶ್ಮೀರಿ ಒಗ್ಗಟ್ಟಿನ ದಿನದಂದು‘ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್​ವೊಂದನ್ನು ಮಾಡಿರುವುದು ಭಾರತೀಯರ ಕೋಪಕ್ಕೆ ಕಾರಣವಾಗಿದೆ. ಪೋಸ್ಟ್​ನಲ್ಲಿ 'ಕಾಶ್ಮೀರ ಒಗ್ಗಟ್ಟಿನ ದಿನದಂದು, ನಾವು ಎಲ್ಲಾ ಕಾಶ್ಮೀರಿ ಸಹೋದರ ಸಹೋದರಿಯರ ಸ್ವಾತಂತ್ರ್ಯಕ್ಕಾಗಿ ಒಟ್ಟಿಗೆ ನಿಲ್ಲುತ್ತೇವೆ' ಎಂದು ಬರೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರೂ ಈ ಕಂಪನಿ ವಿರುದ್ಧ ಧ್ವನಿ ಎತ್ತಿದ್ದಾರೆ.

    ಟ್ವಿಟ್ಟರ್ ಬಳಕೆದಾರರಾದ ಗುಜ್ಜು ಗಿರಿ ಅವರು ಟ್ವೀಟ್ ಮಾಡಿದ್ದು, 'ಕಂಪನಿಗಳು ವ್ಯಾಪಾರ ಮಾಡುವುದನ್ನು ನಿರೀಕ್ಷಿಸುತ್ತೇವೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಲ್ಲ. ಆದರೆ ನಾಗರಿಕರು ಇವರಿಗೆ ತಮ್ಮ ಸ್ಥಾನವನ್ನು ತೋರಿಸುವ ಸಮಯ ಬಂದಿದೆ’ಎಂದು ಬರೆದುಕೊಂಡಿದ್ದಾರೆ.

    ಅದೇ ಸಮಯದಲ್ಲಿ ಮತ್ತೊಂದು ಫಾಸ್ಟ್​ಪುಡ್​ ಕಂಪನಿಯಾದ KFC ಸಹ ಇಂದು ಭಾರತ ವಿರೋಧಿ ಪೋಸ್ಟ್ ಮಾಡಿದೆ. ಫೆಬ್ರವರಿ 5 ಕಾಶ್ಮೀರ ದಿನದಂದು ತನ್ನ ಪಾಕಿಸ್ತಾನಿ ಫೇಸ್‌ಬುಕ್ ಪುಟದಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದೆ.  ಅದರಲ್ಲಿ 'ಕಾಶ್ಮೀರ ಕಾಶ್ಮೀರಿಗಳಿಗೆ ಸೇರಿದೆ!' ಎಂದು ಬರೆದುಕೊಂಡಿದೆ. ಜೊತೆಗೆ ಪಾಕಿಸ್ತಾನದ ಕೆಎಫ್‌ಸಿ ಕಾಶ್ಮೀರಿಗಳನ್ನು ಉದ್ದೇಶಿಸಿ, 'ನೀವು ನಮ್ಮ ಕಲ್ಪನೆಯನ್ನು ಎಂದಿಗೂ ಬಿಡಲಿಲ್ಲ ಮತ್ತು ಮುಂಬರುವ ವರ್ಷವು ನಿಮಗೆ ಶಾಂತಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ!' ಎಂದು ಹೇಳಿದೆ.

    ಇದನ್ನು ಓದಿ: ಕಾಶ್ಮೀರ ವಿವಾದ: Hyundai ಬುಕ್ಕಿಂಗ್​ ರದ್ದು ಮಾಡಲು ಮುಂದಾದ ಗ್ರಾಹಕರು





    ಕೆಎಫ್​ಸಿ ಇದೇ ಮೊದಲಲ್ಲ, ಕಳೆದ ವರ್ಷವೂ ಇಂತಹ ಭಾರತ ವಿರೋಧಿ ಪ್ರಚಾರ ನಡೆಸಿದೆ. ಆಗ ಕೆಎಫ್‌ಸಿ ತನ್ನ ಪೋಸ್ಟರ್‌ನಲ್ಲಿ, 'ಕಾಶ್ಮೀರ ಒಗ್ಗಟ್ಟಿನ ದಿನದಂದು ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ, ಸ್ವಾತಂತ್ರ್ಯ ನಿಮ್ಮ ಹಕ್ಕು ಎಂದು ಭಾವಿಸಲು' ಎಂದು ಬರೆದಿಕೊಂಡಿತ್ತು.

    ಇದನ್ನು ಓದಿ: Safer Internet Day 2022: ಇಂಟರ್​ನೆಟ್​​ನ್ನು ಜೋಪಾನವಾಗಿ ಬಳಸುವುದು ಹೇಗೆ ತಿಳಿಯಿರಿ

    ಫೆಬ್ರವರಿ 5ರಂದು ಕಾರ್ಶಮೀರಿ ಒಗ್ಗಟ್ಟಿನ ದಿನವಾಗಿದ್ದು, ಈ ಸಮಯದಲ್ಲಿ ವಿಶೇದಿ ಕಂಪನಿಗಳು ಪಾಕಿಸ್ತಾನಿಯರ ಬೆಂಬಲಕ್ಕೆ ನಿಂತಿರುವುದು ಭಾರತೀಯರ ಕೋಪಕ್ಕೆ ಕಾರಣವಾಗಿದೆ. ಜೊತೆಗೆ ಪಾಕಿಸ್ತಾನವನ್ನು ಹೋಲಿಸಿದರೆ ಭಾರತ ವಿಸ್ತೀರ್ಣದಲ್ಲೂ ದೊಡ್ಡದಾಗಿದೆ. ಮಾತ್ರವಲ್ಲದೆ ಜನಸಂಖ್ಯೆಯನ್ನು ಹೊಂದಿದೆ. ಅಂದಹಾಗೆಯೇ ಕೆಎಫ್​ಸಿ ಮತ್ತು ಪಿಜ್ಜಾ ಹಟ್​ ಎಂಬ ವಿದೇಶಿ ಕಂಪನಿಗಳು ಭಾರತದಲ್ಲೂ ತನ್ನ ಪ್ರಚಾರದ ಜೊತೆಗೆ ಮಾರುಕಟ್ಟೆಯನ್ನು ವೃದ್ಧಿಸಿಕೊಂಡಿದೆ.





    ಪಿಜ್ಜಾ ಹಟ್​, ಕೆಎಫ್​ಸಿ ಭಾರತದಲ್ಲಿ ಸಾಕಷ್ಟು ಮಳಿಗೆಯನ್ನು ತೆಗೆಯುವುದರ ಜೊತೆಗೆ ಪ್ರತಿದಿನ ಭರ್ಜರಿ ವ್ಯಾಪಾರ ಮಾಡುತ್ತಾ ಬಂದಿದೆ. ಆದರೆ ಇಷ್ಟೇಲ್ಲಾ ಭಾರತದ ಪ್ರಯೋಜನವನ್ನು ಪಡೆಯುತ್ತಿರುವ ಈ ಕಂಪನಿಗಳು ಇದೀಗ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿರುವುದು ಭಾರತೀಯರ ಕೆಂಗಣ್ಣಿಗೆ ಗುರಿಯಾದ ವಿಷಯವಾಗಿದೆ.

    ಅನೇಕ ಭಾರತೀಯರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಹಾಕುತ್ತಿದ್ದಾರೆ. ಹುಂಡೈ, ಪಿಜ್ಜಾ ಹಟ್​, ಕೆಎಫ್​ಸಿಯನ್ನು ಬಹುಷ್ಕಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಟ್ಬಿಟ್ಟರ್​ನಲ್ಲಿ ಈ ವಿಚಾರ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಭಾರತೀಯರ ಈ ಆಕ್ರೋಶದಿಂದಾಗಿ ಮತ್ತು ಬಹಿಷ್ಕಾರದ ಒತ್ತಾಯವು ವಿದೇಶಿ ಕಂಪನಿಗಳಿ ಭಯ ಹುಟ್ಟಿಸಿದೆ. ಮಾತ್ರವಲ್ಲದೆ, ಒಂದು ವೇಳೆ ಭಾರತದಿಂದ ಬಹಿಷ್ಕಾರವಾದರೆ ಈ ಎಲ್ಲಾ ಕಂಪನಿಗಳು ನಷ್ಟವನ್ನು ಅನುಭವಿಸುವುದರಲ್ಲಿ ಅನುಮಾನವೇ ಇಲ್ಲ.
    Published by:Harshith AS
    First published: