Boycott Flipkart: ಬಾಯ್​ಕಾಟ್ ಫ್ಲಿಪ್​ಕಾರ್ಟ್ ಕ್ಯಾಂಪೇನ್; ನಟ ಸುಶಾಂತ್ ಸಿಂಗ್ ರಜಪೂತ್​ ಅಭಿಮಾನಿಗಳಿಂದ ಜೋರಾದ ಕೂಗು​

ಈ ಬಾರಿ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಗಳು ಆನ್​ಲೈನ್ ಮಾರಾಟ ವೇದಿಕೆ ಫ್ಲಿಪ್​ಕಾರ್ಟ್ ವಿರುದ್ಧ ತೀವ್ರವಾಗಿ ಅಭಿಯಾನ ಕೈಗೊಂಡಿದ್ದಾರೆ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

 • Share this:
  ಫ್ಲಿಪ್​ಕಾರ್ಟ್ ವಿರುದ್ಧ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಗಳು ತೀವ್ರವಾಗಿ ಮುಗಿಬಿದ್ದಿದ್ದಾರೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತು 'ಖಿನ್ನತೆ'ಯನ್ನು ಉಲ್ಲೇಖಿಸಿದ ಫ್ಲಿಪ್​ಕಾರ್ಟ್​ನಲ್ಲಿ ಟಿ-ಶರ್ಟ್ ಮಾರಾಟ ಮಾಡುತ್ತಿರುವುದನ್ನು ಬೆಳಕಿಗೆ ಬಂದ ಕೆಲವೇ ಹೊತ್ತಲ್ಲೇ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಫ್ಲಿಪ್​ಕಾರ್ಟ್ ಬಾಯ್​ಕಾಟ್ ಅಭಿಯಾನ (Boycott Flipkart) ಆರಂಭಿಸಿದ್ದಾರೆ. ಅಭಿಮಾನಿಯೊಬ್ಬರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋ (Sushant Singh Rajput Photo) ಮತ್ತು ಖಿನ್ನತೆಯನ್ನು ಉಲ್ಲೇಖಿಸಿ ವೆಬ್‌ಸೈಟ್‌ನಲ್ಲಿ ಟೀ ಶರ್ಟ್​ ಮಾರಾಟ ಮಾಡುತ್ತಿರುವುದು ಕಂಡು ಈ ಬಾಯ್​ಕಾಟ್ ಅಭಿಯಾನ ಆರಂಭಿಸಿದ್ದಾರೆ. ಮಂಗಳವಾರ ಸಂಜೆ ಟ್ವಿಟರ್‌ನಲ್ಲಿ ಫ್ಲಿಪ್‌ಕಾರ್ಟ್ ಅನ್ನು ಬಹಿಷ್ಕಾರ ಅಭಿಯಾನ ಆರಂಭವಾಗಿದೆ. 

  ಜನರು ಫ್ಲಿಪ್‌ಕಾರ್ಟ್‌ ಕುರಿತು ಹಲವು ಬಾರಿ ಕುಂದುಕೊರತೆಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಿದ ಉದಾಹರಣೆಗಳಿವೆ. ಆದರೆ ಈ ಬಾರಿ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಗಳು ಆನ್​ಲೈನ್ ಮಾರಾಟ ವೇದಿಕೆ ಫ್ಲಿಪ್​ಕಾರ್ಟ್ ವಿರುದ್ಧ ತೀವ್ರವಾಗಿ ಅಭಿಯಾನ ಕೈಗೊಂಡಿದ್ದಾರೆ.

  ಇಲ್ಲಿವೆ ನೋಡಿ ಈ ಅಭಿಯಾನದ ಕೆಲವು ಟ್ವೀಟ್​ಗಳು  ಮೃತಪಟ್ಟ ವ್ಯಕ್ತಿ ಬಳಸಿ ಮಾರ್ಕೆಟಿಂಗ್?
  "ನಾನು ಸಾಮಾನ್ಯ ಮತ್ತು ಜವಾಬ್ದಾರಿಯುತ ನಾಗರಿಕನಾಗಿ @Flipkart ಗೆ ಇಂದು ರಾತ್ರಿ ಮೃತಪಟ್ಟ ವ್ಯಕ್ತಿಯನ್ನು ಮಾನಹಾನಿ ಮಾಡುವ ಅಂಶವನ್ನು ಅನುಮೋದಿಸಿದಕ್ಕಾಗಿ ನೋಟಿಸ್ ನೀಡುತ್ತೇನೆ" ಎಂದು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ "#flipcart ನೀವು ಮೃತಪಟ್ಟ ವ್ಯಕ್ತಿಯನ್ನು ಬಳಸಿಕೊಂಡು ನಿಮ್ಮ ಉತ್ಪನ್ನದ ಮಾರ್ಕೆಟಿಂಗ್ ಮಾಡಲು ಸಾಧ್ಯವಿಲ್ಲ. ಒಮ್ಮೆ ನಿಮ್ಮ ಮನೆಯವರ ಕುರಿತೇ ಯೋಚಿಸಿ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  ಇದನ್ನೂ ಓದಿ: Scrap Paper: ಮನೆಯಲ್ಲಿ ರದ್ದಿ ಪೇಪರ್ ಇದೆಯೇ? ಈಗಲೇ ಈ ಬೊಂಬಾಟ್ ಬೆಲೆಗೆ ಮಾರಿಬಿಡಿ!

  ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಟಿ-ಶರ್ಟ್ ಅನ್ನು ಫ್ಲಿಪ್​ಕಾರ್ಟ್​ನಿಂದ ಆದಷ್ಟು ಬೇಗ ತೆಗೆದುಹಾಕಬೇಕೆಂದು ಆಗ್ರಹಿಸಿದ್ದಾರೆ.  ಟಿ-ಶರ್ಟ್‌ನ ವೈರಲ್ ಚಿತ್ರಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, "ಯಾರಾದರೂ ಇಂತಹದನ್ನು ಹೇಗೆ ಯೋಚಿಸಬಹುದು?" ಎಂದು ಬರೆದಿದ್ದಾರೆ.

  ಆಘಾತ ತಂದಿದ್ದ ನಟ ಸುಶಾಂತ್  ಸಿಂಗ್ ರಜಪೂತ್ ಸಾವು
  ಕೈ ಪೋ ಚೇ!, ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ, ಚಿಚೋರೆ ಮುಂತಾದ ಚಿತ್ರಗಳ ಮೂಲಕ ಹೆಸರುವಾಸಿಯಾಗಿದ್ದ ನಟ ಸುಶಾಂತ್  ಸಿಂಗ್ ರಜಪೂತ್  ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಚಿತ್ರರಂಗದಲ್ಲಿ ಮತ್ತು ಇತರೆಡೆ ಆಘಾತವನ್ನು ಉಂಟುಮಾಡಿತ್ತು. ಅವರು ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದರು, ಇದು ರಾಷ್ಟ್ರವ್ಯಾಪಿ ಕೋಲಾಹಲವನ್ನು ಸೃಷ್ಟಿಸಿತು. ಆರಂಭದಲ್ಲಿ, ಮುಂಬೈ ಪೊಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದರು. ನಂತರ ಅದನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಯಿತು. ಈ ವಿಷಯದಲ್ಲಿ ಎನ್‌ಸಿಬಿ ಎನ್‌ಡಿಪಿಎಸ್ ಪ್ರಕರಣವನ್ನೂ ದಾಖಲಿಸಿದೆ.

  ಇದನ್ನೂ ಓದಿ: Abdul Kalam: ಅಬ್ದುಲ್ ಕಲಾಂ ಜೀವನ ಸಾಧನೆ ಹೇಗಿತ್ತು ಗೊತ್ತಾ?

  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಇತ್ತೀಚೆಗೆ ಸುಶಾಂತ್ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರಡು ಚಾರ್ಜ್ ಶೀಟ್ ಸಲ್ಲಿಸಿದೆ. ಅವರ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್ ಸಂಗ್ರಹಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ರಿಯಾ ಮತ್ತು ಆಕೆಯ ಸಹೋದರ ಶೋಕ್ ಚಕ್ರವರ್ತಿ ಸೇರಿದಂತೆ 34 ಆರೋಪಿಗಳ ವಿರುದ್ಧ ಕರಡು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸುಶಾಂತ್‌ಗೆ ರಿಯಾ ಗಾಂಜಾ ಖರೀದಿಸಿ ಹಣ ನೀಡುತ್ತಿದ್ದಳು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
  Published by:guruganesh bhat
  First published: