Boycott China: ಚೀನಾ ಹೂಡಿಕೆ ವಿರೋಧಿಸಿ ಜೊಮ್ಯಾಟೋ ಟಿ-ಶರ್ಟ್​ ಸುಟ್ಟು ಪ್ರತಿಭಟನೆ

2018ರಲ್ಲಿ ಚೀನಾದ ಪ್ರಮುಖ ಸಂಸ್ಥೆಯಾದ ಅಲಿಬಾಬಾ ಗ್ರೂಪ್​ನ ಭಾಗವಾದ ಆಂಟ್ ಫೈನಾನ್ಷಿಯಲ್ ಜೊಮ್ಯಾಟೊ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿತ್ತು.

Sushma Chakre | news18-kannada
Updated:June 28, 2020, 2:07 PM IST
Boycott China: ಚೀನಾ ಹೂಡಿಕೆ ವಿರೋಧಿಸಿ ಜೊಮ್ಯಾಟೋ ಟಿ-ಶರ್ಟ್​ ಸುಟ್ಟು ಪ್ರತಿಭಟನೆ
ಸಾಂದರ್ಭಿಕ ಚಿತ್ರ
  • Share this:
ಕೊಲ್ಕತಾ (ಜೂ. 28): ಲಡಾಖ್ ಗಡಿಯಲ್ಲಿ ಚೀನಾ- ಭಾರತದ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದರು. ಇದರಿಂದಾಗಿ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ನಡೆದ ಬಳಿಕ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕೆಂಬ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿವೆ. ಜೊಮ್ಯಾಟೋ ಕಂಪನಿಯಲ್ಲಿ ಚೀನಾ ದೇಶದ ಹೂಡಿಕೆಯನ್ನು ವಿರೋಧಿಸಿ ಕೊಲ್ಕತ್ತಾದ ಜೊಮ್ಯಾಟೋ ಸಿಬ್ಬಂದಿ ತಮ್ಮ ಕಂಪನಿಯ ಟಿ-ಶರ್ಟ್​ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದರು. ಬಳಿಕ ಚೀನಾ ಗಡಿಯಲ್ಲಿ ಭಾರತೀಯ ಸೇನೆಯನ್ನು ಬಿಗಿಗೊಳಿಸಲಾಗಿತ್ತು. ಬೆಹಾಳದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲ ಪ್ರತಿಭಟನಾಕಾರರು, ಚೀನಾ ಹೂಡಿಕೆ ಮಾಡಿದ್ದರಿಂದ ಜೊಮ್ಯಾಟೋ ಕಂಪನಿಯ ಉದ್ಯೋಗ ತೊರೆದಿರುವುದಾಗಿ ಹೇಳಿದ್ದಾರೆ. ಜಿಮ್ಯಾಟೊ ಮೂಲಕ ಆಹಾರಕ್ಕೆ ಆರ್ಡರ್ ಮಾಡುವುದನ್ನು ಜನರು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ನಿನ್ನೆ ಒಂದೇ ದಿನ 20 ಸಾವಿರ ಕೊರೋನಾ ಕೇಸ್; 5.28 ಲಕ್ಷ ಸೋಂಕಿತರು, 3 ಲಕ್ಷ ರೋಗಿಗಳು ಡಿಸ್ಚಾರ್ಜ್


2018ರಲ್ಲಿ ಚೀನಾದ ಪ್ರಮುಖ ಸಂಸ್ಥೆಯಾದ ಅಲಿಬಾಬಾ ಗ್ರೂಪ್​ನ ಭಾಗವಾದ ಆಂಟ್ ಫೈನಾನ್ಷಿಯಲ್ ಜೊಮ್ಯಾಟೊ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿತ್ತು. ಇತ್ತೀಚಿಗೆ ಆಂಟ್ ಫೈನಾನ್ಷಿಯಲ್ ಕೂಡ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಭಾರತ ದೇಶದಲ್ಲಿ ಲಾಭ ಗಳಿಸುತ್ತಿರುವ ಚೀನಾ ಕಂಪನಿಗಳು ನಮ್ಮ ದೇಶದ ಸೈನಿಕರ ಮೇಲೆ ದಾಳಿ ಮಾಡುತ್ತಿವೆ. ನಮ್ಮ ಭೂಮಿಯನ್ನು
ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಜೊಮ್ಯಾಟೋ ಟೀ-ಶರ್ಟ್​ಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
First published:June 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading