Amazon: ರಾಧಾ-ಕೃಷ್ಣರ 'ಅಶ್ಲೀಲ' ಪೇಂಟಿಂಗ್, ಅಮೆಜಾನ್ ವಿರುದ್ಧ ದೂರು!

ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಪೊಲೀಸ್ ಮೆಮೊರಾಂಡಮ್ ಅನ್ನು ಸಲ್ಲಿಸಲಾಗಿದೆ. ಸದ್ಯ ಟ್ವಿಟರ್​ನಲ್ಲಿ #Boycott_Amazon ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದೆ.

ಅಮೆಜಾನ್ ಬಹಿಷ್ಕರಿಸುವಂತೆ ಟ್ವೀಟ್​

ಅಮೆಜಾನ್ ಬಹಿಷ್ಕರಿಸುವಂತೆ ಟ್ವೀಟ್​

  • Share this:
ಬೆಂಗಳೂರು(ಆ.20): ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್​ (Amazon) ರಾಧಾ-ಕೃಷ್ಣರ 'ಅಶ್ಲೀಲ' ಪೇಂಟಿಂಗ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಶುಕ್ರವಾರ ಹೇಳಿಕೊಂಡಿದ್ದರಿಂದ ಅಮೆಜಾನ್ ಬಹಿಷ್ಕರಿಸುವಂತೆ (Boycott Amazon) ಮಾಡಲಾಗುತ್ತಿರುವ ಟ್ವೀಟ್​ಗಳು ಟ್ವಿಟರ್‌ನಲ್ಲಿ ಟ್ರೆಂಡ್​ ಆಗುತ್ತಿವೆ. ಇ-ಕಾಮರ್ಸ್ ದೈತ್ಯ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಜನ್ಮಾಷ್ಟಮಿ (Krishna Janmashtami) ಸಂದರ್ಭದಲ್ಲಿ ಎಕ್ಸೋಟಿಕ್ ಇಂಡಿಯಾದ ವೆಬ್‌ಸೈಟ್‌ನಲ್ಲೂ ಪೇಂಟಿಂಗ್ ಮಾರಾಟ ಮಾಡಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಆಗಸ್ಟ್ 18 ಮತ್ತು 19 ರಂದು ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಈ ಬಹಿಷ್ಕಾರದ ಬಳಿಕ ಪೇಂಟಿಂಗ್ ಅನ್ನು ಸೈಟ್‌ಗಳಿಂದ 'ಸದ್ದಿಲ್ಲದೆ' ತೆಗೆದು ಹಾಕಲಾಗಿದೆ ಎಂದು ಹಿಂದೂ ಸಂಘಟನೆಯು ಹೇಳಿಕೊಂಡಿದೆ. ಅಲ್ಲದೇ ಕಂಪನಿ ಇಷ್ಟು ಮಾಡಿದರೆ ಸಾಕಾಗುವುದಿಲ್ಲ ಎಂದಿರುವ ಸಂಘಟನೆ ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಎರಡೂ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಹಿಂದೂಗಳ ಭಾವನೆಗಳನ್ನು ಎಂದಿಗೂ ನೋಯಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದಿದೆ.‘

ಇದನ್ನೂ ಓದಿ: Krishna Janmashtami 2022: ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದ್ರೆ ಎಷ್ಟೆಲ್ಲಾ ಲಾಭ ಇದೆ ನೋಡಿ


“ಅಪ್ರಾಮಾಣಿಕ ಅಮೆಜಾನ್ ಭಾರತದ ರಾಷ್ಟ್ರೀಯ ಮತ್ತು ಧಾರ್ಮಿಕ ಚಿಹ್ನೆಗಳು ಮತ್ತು ದೇವತೆಗಳನ್ನು ಅಗೌರವಗೊಳಿಸುವುದನ್ನು ಮುಂದುವರೆಸಿದೆ. ಅಮೆಜಾನ್ ಇನ್ಮುಂದೆ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭಾರತವು ಆಕ್ರಮಣಕಾರಿ ವಿಧಾನವನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಮುಖಂಡರೊಬ್ಬರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  Krishna Janmashtami 2022: ಕೃಷ್ಣ ಜನ್ಮಾಷ್ಟಮಿಯಂದು ಈ ಸ್ಪೆಷಲ್​ ರೆಸಿಪಿಗಳನ್ನು ಟ್ರೈ ಮಾಡಿ

ಈ ಸುದ್ದಿಯನ್ನು ಬರೆಯುವ ತನಕ ಪೋಸ್ಟ್ 4,600 ಲೈಕ್‌ಗಳನ್ನು ಮತ್ತು 3500 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ. ಹಲವಾರು ಜನರು ತಮ್ಮ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಅಮೆಜಾನ್ ಕಸ್ಟಮರ್ ಕೇರ್‌ನೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಪೇಂಟಿಂಗ್​ನ್ನು ತೆಗೆದುಹಾಕುವಂತೆ ಕೇಳಿದ್ದಾರೆ.


ವಿವಾದಕ್ಕೆ ಸಂಬಂಧಿಸಿದಂತೆ ಅಮೆಜಾನ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಈ ಹಿಂದೆ ಹಲವಾರು ಸಂದರ್ಭಗಳಲ್ಲಿ, ಅಮೆಜಾನ್ ಭಾರತೀಯರ ಭಾವನೆಗಳನ್ನು ಘಾಸಿಗೊಳಿಸಿದ ಆರೋಪವನ್ನೆದುರಿಸಿ ಟೀಕೆಗೆ ಒಳಗಾಗಿತ್ತು. 2019 ರಲ್ಲಿ, ಯುಎಸ್ ವೆಬ್‌ಸೈಟ್ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವಂತೆ ರಗ್ಗುಗಳು ಮತ್ತು ಟಾಯ್ಲೆಟ್ ಸೀಟ್ ಕವರ್‌ಗಳನ್ನು ಮಾರಾಟ ಮಾಡುತ್ತಿದ್ದರಿಂದ ಅದರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಕಳೆದ ವರ್ಷ, ಕೆನಡಾದ ಸೈಟ್‌ನ ಕರ್ನಾಟಕ ಧ್ವಜ ಮತ್ತು ಲಾಂಛನದ ಬಣ್ಣಗಳಲ್ಲಿ ಬಿಕಿನಿಗಳನ್ನು ಮಾರಾಟ ಮಾಡಿದ್ದಕ್ಕಾಗಿ ಟೀಕೆಗೊಳಗಾಗಿತ್ತು.
Published by:Precilla Olivia Dias
First published: