• Home
 • »
 • News
 • »
 • national-international
 • »
 • Boy Murder: ಕಾಪಿ ಚೀಟಿಯನ್ನ ಲವ್ ಲೆಟರ್ ಅಂದುಕೊಂಡಿದ್ದಕ್ಕೆ ದುರಂತ, ಪರೀಕ್ಷೆ ಬರೆಯಬೇಕಿದ್ದ ಹುಡುಗ ಕೊಲೆಯಾದ!

Boy Murder: ಕಾಪಿ ಚೀಟಿಯನ್ನ ಲವ್ ಲೆಟರ್ ಅಂದುಕೊಂಡಿದ್ದಕ್ಕೆ ದುರಂತ, ಪರೀಕ್ಷೆ ಬರೆಯಬೇಕಿದ್ದ ಹುಡುಗ ಕೊಲೆಯಾದ!

ಸ್ಥಳದಲ್ಲಿ ಜಮಾಯಿಸಿರುವ ಜನರು

ಸ್ಥಳದಲ್ಲಿ ಜಮಾಯಿಸಿರುವ ಜನರು

ವಿದ್ಯಾರ್ಥಿನಿಯೊಬ್ಬಳ ಕುಟುಂಬಸ್ಥರು 12 ವರ್ಷದ ಬಾಲಕನನ್ನು ಕಡಿದು ಹತ್ಯೆಗೈದಿದ್ದಾರೆ. ಬಾಲಕ ಪರೀಕ್ಷೆಯಲ್ಲಿ ನಕಲು ಮಾಡುವಾಗ ಆದ ಸಣ್ಣ ತಪ್ಪಿನಿಂದಾಗಿ ಬಾಲಕನ ಜೀವ ಹೋಗಿದೆ. ವಾಸ್ತವದಲ್ಲಿ ಬಾಲಕ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಚೀಟಿಯನ್ನು ಎಸೆದಿದ್ದ. ಆದರೆ ಮುಂದಾಗಿದ್ದು ದುರಂತ!

ಮುಂದೆ ಓದಿ ...
 • Share this:

  ಭೋಜ್‌ಪುರ: ಬಿಹಾರದಲ್ಲಿ (Bihar) ಹೃದಯ ವಿದ್ರಾವಕ ಘಟನೆಯೊಂದು (Heartbreaking Incident) ನಡೆದಿದ್ದು ಜನರನ್ನು (People) ಬೆಚ್ಚಿ ಬೀಳಿಸಿದೆ. ಭೋಜ್‌ ಪುರ ಜಿಲ್ಲೆಯಲ್ಲಿ (Bhojpur District)  ಅರ್ಧ ವಾರ್ಷಿಕ ಪರೀಕ್ಷೆಗೆ (Exam) ಹಾಜರಾಗಿದ್ದ ಬಾಲಕನನ್ನು ವಿದ್ಯಾರ್ಥಿನಿಯೊಬ್ಬಳ ಸಹೋದರರು ಕೊಚ್ಚಿ ಕೊಲೆಗೈದು ಈಗ ಜೈಲು ಪಾಲಾಗಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಕುಟುಂಬಸ್ಥರು, 12 ವರ್ಷದ ಬಾಲಕನನ್ನು ಕಡಿದು ಹತ್ಯೆಗೈದಿದ್ದಾರೆ. ಬಾಲಕ ಪರೀಕ್ಷೆಯಲ್ಲಿ ನಕಲು ಮಾಡುವಾಗ ಆದ ಸಣ್ಣ ತಪ್ಪಿನಿಂದಾಗಿ ಬಾಲಕನ ಹೆಣ ಬಿದ್ದಿದೆ. ವಾಸ್ತವದಲ್ಲಿ ಬಾಲಕ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಚೀಟಿಯನ್ನು ಎಸೆದಿದ್ದ. ಆ ಚೀಟಿ ಆ ವಿದ್ಯಾರ್ಥಿನಿ ಕೈಗೆ ಸಿಕ್ಕಿತ್ತು.


  ಪರೀಕ್ಷೆ ನಕಲು ಚೀಟಿ ಎಸೆದಿದ್ದೇ ಬಾಲಕನ ಬರ್ಬರ ಹತ್ಯೆಗೆ ಕಾರಣವಾಯ್ತು


  ಆಕೆ ಅದನ್ನು ಲವ್ ಲೆಟರ್ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದು ಬಾಲಕನ ಜೀವಕ್ಕೆ ಕುತ್ತು ತಂದಿಟ್ಟಿದೆ. ಪರೀಕ್ಷೆ ವೇಳೆ ಬಾಲಕನೊಬ್ಬ ನಕಲು ಮಾಡುತ್ತಿದ್ದ. ಈ ವೇಳೆ ನಕಲು ಮಾಡುತ್ತಿದ್ದ ಚೀಟಿಯನ್ನು ವಿದ್ಯಾರ್ಥಿನಿಗೆ ಎಸೆದಿದ್ದ.


  ಇದನ್ನು ವಿದ್ಯಾರ್ಥಿನಿ ಲವ್ ಲೆಟರ್ ಎಂದು ತಪ್ಪಾಗಿ ತಿಳಿದಿದ್ದಳು. ಇದೇ ವಿಷಯದಲ್ಲಿ ಆಕೆಯ ಕುಟುಂಬಸ್ಥರು 12 ವರ್ಷದ ಬಾಲಕನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಕಳೆದ ವಾರ ಬಿಹಾರದ ಭೋಜ್‌ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.


  ಇದನ್ನೂ ಓದಿ: ಮತ್ತೆ ಕಳಚಿತು ಪಾಕ್ ಮುಖವಾಡ: ಕರಾಚಿಯಲ್ಲೇ ನೆಲೆಸಿದ್ದಾನೆ ದಾವೂದ್ ಇಬ್ರಾಹಿಂ


  ರೈಲ್ವೆ ಹಳಿಯ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಲಕನ ದೇಹದ ಭಾಗಗಳು


  ಮಹತ್ಬಾನಿಯಾ ಹಾಲ್ಟ್ ಸ್ಟೇಷನ್ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಬಾಲಕನನ್ನು ಬರ್ಬರವಾಗಿ ಹತ್ಯೆಗೈದು ಬಿಸಾಡಲಾಗಿತ್ತು. ಈಗ ಪೊಲೀಸರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಲಕನ ದೇಹದ ಭಾಗಗಳನ್ನು ಸೋಮವಾರ ಪತ್ತೆ ಹಚ್ಚಿದ್ದಾರೆ.


  ಪೊಲೀಸರು ಬಾಲಕಿಯ ಸಹೋದರ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯವನ್ನೂ ಪಡೆದಿದ್ದಾರೆ.


  ಬಾಲಕನ ಕುಟುಂಬ ಹಾಗೂ ಗ್ರಾಮದ ನೆರೆಹೊರೆಯವರ ಆಕ್ರಂದನ


  ಪೊಲೀಸರ ಪ್ರಕಾರ, ಬಾಲಕನ ಶಿರಚ್ಛೇದ ಮಾಡಲಾಗಿದೆ. ಮತ್ತು ಅವನ ಕೈ ಮತ್ತು ಕಾಲುಗಳನ್ನು ಸಹ ಕತ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯ ಗೊತ್ತಾದ ಮೇಲೆ ಬಾಲಕನ ಕುಟುಂಬ ಹಾಗೂ ಗ್ರಾಮದ ನೆರೆಹೊರೆಯವರ ಆಕ್ರಂದನ ಮುಗಿಲು ಮುಟ್ಟಿದೆ.


  ಕಳೆದ ವಾರ 5ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹೋದರಿಯನ್ನು ಅರ್ಧ ವಾರ್ಷಿಕ ಪರೀಕ್ಷೆಗೆಂದು ಶಾಲೆಗೆ ಕರೆದೊಯ್ದಿದ್ದಾನೆ. ಅವರ ಸಹೋದರಿ 6 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪರೀಕ್ಷೆ ವೇಳೆ ವಿದ್ಯಾರ್ಥಿ ತನ್ನ ಸಹೋದರಿಗೆ ಸಹಾಯ ಮಾಡಲು ಪರೀಕ್ಷಾ ಹಾಲ್‌ ನಲ್ಲಿ ಚಿಟ್ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


  ಈ ಕಾಗದದ ತುಂಡು ಆಕಸ್ಮಿಕವಾಗಿ ಇನ್ನೊಬ್ಬ ಹುಡುಗಿಗೆ ತಾಗಿದೆ. ಹುಡುಗ ತನಗೆ ಪ್ರೇಮ ಪತ್ರ ಎಸೆದಿದ್ದಾನೆ ಎಂದು ಹುಡುಗಿ ಭಾವಿಸಿದ್ದಳು. ಶಾಲೆಯ ನಂತರ ಅವಳು ತನ್ನ ಸಹೋದರರಿಗೆ ವಿಷಯ ತಿಳಿಸಿದ್ದಳು. ಹುಡುಗಿಯ ಸಹೋದರರು ಮತ್ತು ಅವರ ಸ್ನೇಹಿತರು ವಿದ್ಯಾರ್ಥಿಗೆ ಚೆನ್ನಾಗಿ ಥಳಿಸಿ, ಕತ್ತರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


  ಸೋಮವಾರ ಬಾಲಕನ ಕೈಯನ್ನು ಸ್ಥಳೀಯ ದೇವಸ್ಥಾನದ ಬಳಿ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶವವಕ್ಕಾಗಿ ಹುಡುಕಾಟ ನಡೆಸಿದ್ದರು.


  ಬಾಲಕನ ಹತ್ಯೆಗೈದಿರುವ ದಾಳಿಕೋರರು ಅಪ್ರಾಪ್ತ ವಯಸ್ಸಿನವರಾಗಿದ್ದು ಪೊಲೀಸರು ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಬಾಲಾಪರಾಧಿಗಳು ಮತ್ತು ಬಾಲಕಿಯ ಕುಟುಂಬದ ಉಳಿದ ವಯಸ್ಕ ಸದಸ್ಯರು ಸೇರಿದ್ದಾರೆ. ಯುವಕರನ್ನು ಜೈಲಿಗೆ ಕಳುಹಿಸಲಾಗಿದೆ.


  ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ! ರಿಷಿ ಸುನಕ್‌ಗೆ ಇದ್ಯಾ ಈ ಬಾರಿ ಅವಕಾಶ?


  ಇನ್ನು ಬಾಲಕಿಯ ಸಹೋದರರು ಸ್ಥಳಕ್ಕಾಗಮಿಸಿ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅಪಹರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆ ನಡೆದ ನಾಲ್ಕು ದಿನಗಳ ನಂತರ ಬಾಲಕನ ದೇಹದ ಭಾಗಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  Published by:renukadariyannavar
  First published: