Miraculously Survives: ಫ್ರಿಡ್ಜ್​​​ನಲ್ಲಿ 20 ಗಂಟೆಗಳ ಕಾಲ ಕುಳಿತು ಪಾರಾದ ಬಾಲಕ, ಏನಿದು ರೋಚಕ ಘಟನೆ?

ಭೂಕುಸಿತ ಕಡಿಮೆ ಆಗಬಹುದೆಂದು ತಿಳಿದು ರೆಫ್ರಿಜರೇಟರ್ ನಲ್ಲಿ ಅಡಗಿದ್ದ ಸಿಜೆನನ್ನು ಬಂದು ಕಾಪಾಡುವವರೆಗೆ ಅದಾಗಲೇ 20 ಗಂಟೆಗಳು ಕಳೆದಿದ್ದವು.

ಬಚಾವ್​ ಆದ ಬಾಲಕ

ಬಚಾವ್​ ಆದ ಬಾಲಕ

 • Share this:
  ಈ ನೈಸರ್ಗಿಕ ವಿಕೋಪಗಳೇ ಹೀಗೆ ನೋಡಿ ಯಾವ ಸಂದರ್ಭದಲ್ಲಿ, ಹೇಗೆ ಸಂಭವಿಸುತ್ತವೆ ಎಂದು ಯಾರಿಂದಲೂ ಊಹೆ ಮಾಡಲು ಸಹ ಸಾಧ್ಯವಾಗುವುದಿಲ್ಲ. ಭೂಕುಸಿತವಾದಾಗ (Landslide), ಪ್ರವಾಹ ಬಂದಾಗ  (Flood) ಮತ್ತು ಭೂಕಂಪವಾದಾಗ (Earthquake) ನಾವು ಆ ಸಮಯದಲ್ಲಿ ‘ಬದುಕುಳಿದರೆ ಸಾಕಪ್ಪಾ ದೇವರೇ’ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಇಂತಹ ನೈಸರ್ಗಿಕ ವಿಕೋಪಗಳಲ್ಲಿ ಯಾರಾದರೂ ಬದುಕುಳಿದಿದ್ದಾರೆ ಎಂದರೆ ಅದು ಅವರ ಪುಣ್ಯ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೆಲವೊಬ್ಬರು ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಆ ಸಮಯಕ್ಕೆ ಅವರಿಗೆ ತೋಚಿದ್ದನ್ನು ಮಾಡುತ್ತಾರೆ. ಇದು ಕೆಲವರ ಪ್ರಾಣವನ್ನು ಉಳಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

  ರೆಫ್ರಿಜರೇಟರ್ ನಲ್ಲಿ ಅಡಗಿ ಕುಳಿತ ಬಾಲಕ 

  ಇಲ್ಲಿಯೂ ಅಂತಹದೇ ಒಂದು ಘಟನೆ ನಡೆದಿದ್ದು, 11 ವರ್ಷದ ಬಾಲಕನೊಬ್ಬನು ಹೇಗೆ ಚಾಣಾಕ್ಷತನದಿಂದ ಭೂಕುಸಿತದ ಅಪಾಯದಿಂದ ಪಾರಾಗಿದ್ದಾನೆ ನೋಡಿ. ಈ ಫಿಲಿಪಿನೋ ಮೂಲದ ಬಾಲಕ ಭೂಕುಸಿತವಾದಾಗ ತಕ್ಷಣಕ್ಕೆ ಆಲೋಚನೆ ಮಾಡಿ ಅದರಿಂದ ಪಾರಾಗಲು ಒಂದು ರೆಫ್ರಿಜರೇಟರ್ ನಲ್ಲಿ ಹೋಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 20 ಗಂಟೆಗಳ ಕಾಲ ಅದರಲ್ಲಿಯೇ ಅಡಗಿ ಕೊಂಡಿದ್ದಾನೆ. ಈ ಘಟನೆಯು ಶುಕ್ರವಾರದಂದು ನಡೆದಿದ್ದು, ಸಿಜೆ ಜಾಸ್ಮೆ ತನ್ನ ಮನೆಯಲ್ಲಿ ಕುಟುಂಬದವರೊಡನೆ ಇರುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

  20 ಗಂಟೆಗಳು ಕಳೆದಿದ್ದವು

  ಉಷ್ಣವಲಯದ ಚಂಡಮಾರುತ ಮೆಗಿಯಿಂದ ಭೂಕುಸಿತ ಸಂಭವಿಸಿದ್ದು, ಫಿಲಿಫೈನ್ಸ್ ನಲ್ಲಿರುವ ಬೇಬೇ ಸಿಟಿಯಲ್ಲಿರುವ ಅವರ ಮನೆಯೂ ಸಂಪೂರ್ಣವಾಗಿ ಭೂಕುಸಿತದ ಹೊಡೆತದಿಂದಾಗಿ ಕೊಚ್ಚಿಕೊಂಡು ಹೋಯಿತು ಎಂದು ಹೇಳಲಾಗುತ್ತಿದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಸಿಜೆ ತಮ್ಮ ಮನೆಯಲ್ಲಿರುವ ಒಂದು ರೆಫ್ರಿಜರೇಟರ್ ನಲ್ಲಿ ಅಡಗಿ ಕುಳಿತುಕೊಂಡನು. ತಕ್ಷಣಕ್ಕೆ ಭೂಕುಸಿತ ಕಡಿಮೆ ಆಗಬಹುದೆಂದು ತಿಳಿದು ರೆಫ್ರಿಜರೇಟರ್ ನಲ್ಲಿ ಅಡಗಿದ್ದ ಸಿಜೆನನ್ನು ಬಂದು ಕಾಪಾಡುವವರೆಗೆ ಅದಾಗಲೇ 20 ಗಂಟೆಗಳು ಕಳೆದಿದ್ದವು ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Crime News: ಮನೆಯ ಹತ್ತಿರ ಉಗುಳಿದ್ದಕ್ಕೆ ನೆರೆ ಮನೆಯ ಬಾಲಕನ ಉಸಿರುಕಟ್ಟಿಸಿ ಕೊಂದ

  ಸಿಜೆ ಕುಳಿತ ರೆಫ್ರಿಜರೇಟರ್ ಹೇಗೋ ಭೂಕುಸಿತದಲ್ಲಿ ನದಿಯ ದಡಕ್ಕೆ ಬಂದು ಸೇರಿದೆ ಮತ್ತು ಆಗ ಪೊಲೀಸ್ ಅಧಿಕಾರಿಯಾದ ಜೋನಾಸ್ ಏಟೀಸ್ ಅವರು ಲೇಯ್ಟೆ ಪ್ರೋವಿಯನ್ಸ್ ನಲ್ಲಿ ರಕ್ಷಣಾ ಕಾರ್ಯದಲ್ಲಿ ಇದ್ದಾಗ ಅವರ ಕಣ್ಣಿಗೆ ಈ ರೆಫ್ರಿಜರೇಟರ್ ಬಿದ್ದಿದೆ. ಅದರ ಬಳಿ ಹೋಗಿ ಅದನ್ನು ತೆಗೆದು ನೋಡಿದಾಗ 11 ವರ್ಷದ ಬಾಲಕ ಇರುವುದು ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.

  ಬಾಲಕನ ಕಾಲು ಮುರಿದಿದೆ

  ಈ ರಕ್ಷಣಾ ಕಾರ್ಯಾಚರಣೆಯ ವೀಡಿಯೋದಲ್ಲಿ ಆ ಪುಟ್ಟ ಬಾಲಕನನ್ನು ಆ ರೆಫ್ರಿಜರೇಟರ್ ನಿಂದ ಹೊರ ತೆಗೆಯುವುದನ್ನು ನೋಡಬಹುದು. ಆ ರೆಫ್ರಿಜರೇಟರ್ ಬಾಗಿಲನ್ನು ತೆರೆದು ಆ ಪುಟ್ಟ ಬಾಲಕನನ್ನು ಒಂದು ಸ್ಟ್ರೆಚರ್ ಮೇಲೆ ತಂದು ಮಲಗಿಸಲಾಯಿತು. ಈ ಹೃದಯ ವಿದ್ರಾವಕ ಭೂಕುಸಿತದಲ್ಲಿ ಆ ಬಾಲಕನ ಕಾಲು ಮುರಿದಿದೆ ಮತ್ತು ಪೊಲೀಸರು ಆತನನ್ನು ಎಚ್ಚರ ಗೊಳಿಸಿದಾಗ ಅವರಿಗೆ ತನಗೆ ತುಂಬಾನೇ ಹಸಿವಾಗುತ್ತಿದೆ ಎಂದು ತಿಳಿಸಿದ್ದಾನೆ. ನಂತರ ಆ ಪುಟ್ಟ ಬಾಲಕನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಆತನ ಮುರಿದಂತಹ ಕಾಲಿಗೆ ಚಿಕಿತ್ಸೆಯನ್ನು ನೀಡಲಾಯಿತು. ಈಗ ಆತನ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

  ಇದನ್ನೂ ಓದಿ: Encounter In Jammu: ಪ್ರಧಾನಿ ಮೋದಿ ಭೇಟಿಗೂ 2 ದಿನಗಳ ಮುನ್ನ ಭಯೋತ್ಪಾದಕ ಚಟುವಟಿಕೆ; ಭದ್ರತಾ ಸಿಬ್ಬಂದಿ ಹುತಾತ್ಮ

  ಅದೇ ದಿನ ಸಿಜೆಯ ಇನ್ನೊಬ್ಬ 13 ವರ್ಷ ವಯಸ್ಸಿನ ಅಣ್ಣ ಸಹ ಈ ಭೂಕುಸಿತದಿಂದ ಪಾರಾಗಿದ್ದಾನೆ. ಆದರೆ ಆತನ ತಾಯಿ ಮತ್ತು ತಮ್ಮ ಇನ್ನೂ ಎಲ್ಲಿ ಇರುವರೋ ಎಂದು ತಿಳಿದಿಲ್ಲ. ಇವರ ತಂದೆ ಇನ್ನೊಂದು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  ಏಷಿಯನ್ ರಾಷ್ಟ್ರದಲ್ಲಿ ಸಂಭವಿಸಿದ ಈ ಭೂಕುಸಿತದಲ್ಲಿ ಸುಮಾರು 172 ಜನರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದು, 2 ಮಿಲಿಯನ್ ಜನರ ಜನಜೀವನ ಅಸ್ತವ್ಯಸ್ತವಾಗಿದೆ. ಪೊಲೀಸರು, ಸೈನ್ಯದ ಅಧಿಕಾರಿಗಳು ಮತ್ತು ರಕ್ಷಣಾ ಕಾರ್ಯದ ಸಿಬ್ಬಂದಿಗಳು ರಕ್ಷಣಾ ಕಾರ್ಯವನ್ನು ಮುಂದುವರೆಸಿದ್ದು, ಭೂಕುಸಿತ ತುಂಬಾನೇ ಜೋರಾಗಿರುವುದರಿಂದ ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡಿರುವುದರಿಂದ ತುಂಬಾ ಜನರನ್ನು ಇನ್ನೂ ಇವರು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
  Published by:Kavya V
  First published: