Love Affair: ಮಗಳನ್ನು ಪ್ರೀತಿಸಿದ್ದಕ್ಕೆ ಹುಡುಗನ ಜನನಾಂಗ ಕಟ್, ಪ್ರಿಯಕರ ಸತ್ತೇ ಹೋದ! ಪ್ರೀತ್ಸೋದ್ ತಪ್ಪಾ?

ಗ್ರಾಮದಲ್ಲಿ ಬಾಲಕಿಯನ್ನು ಪ್ರೇಮಿಸಿದ್ದ ಕಾರಣಕ್ಕೆ ಬಾಲಕನನ್ನು ಮನಬಂದಂತೆ ಥಳಿಸಲಾಗಿತ್ತು ಮತ್ತು ಆತನ ಜನನಾಂಗವನ್ನು ಬಾಲಕಿಯ ಕುಟುಂಬವು ವಿರೂಪಗೊಳಿಸಿದ್ದರು, ಅನಂತರ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಬಾಲಕ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೆಲವು ಪ್ರೀತಿ - ಪ್ರೇಮಗಳ ಸಂಬಂಧವು ಧೀರ್ಘಕಾಲದವರೆಗೆ ನಡೆದು ಮುಂದೆ ವಿವಾಹ ಬಂಧನದಲ್ಲಿ ಸುಖಾಂತ್ಯ ಕಾಣುತ್ತವೆ, ಆದರೆ ಕೆಲವೊಂದು ಸಂಬಂಧಗಳು ತುಂಬಾ ಭಯಾನಕವಾದಂತಹ ತಿರುವನ್ನು ಪಡೆದುಕೊಂಡು ಜೀವವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗುತ್ತದೆ.ಅಂತಹದೇ ಒಂದು ಹೃದಯವಿದ್ರಾವಕ ಘಟನೆಯು ಬಿಹಾರ ರಾಜ್ಯದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಪ್ರೇಮ ಸಂಬಂಧದ ಪ್ರಕರಣದಲ್ಲಿ ಹತ್ಯೆಗೀಡಾದ 17 ವರ್ಷದ ಸೌರಭ್ ಕುಮಾರ್ಕುಟುಂಬವು ಆರೋಪಿಗಳ ಮನೆಯ ಮುಂದೆ ಅಂತ್ಯಕ್ರಿಯೆ ನಡೆಸಿದೆ ಎಂದು ಸುದ್ದಿ ಸಂಸ್ಥೆಯೊಂದು ಭಾನುವಾರ ವರದಿ ಮಾಡಿದೆ. ಕಾಂತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವಂತಹ ರಾಂಪುರ್ ಸಾಹ್ ಗ್ರಾಮದಲ್ಲಿ ಬಾಲಕಿಯನ್ನು ಪ್ರೇಮಿಸಿದ್ದ ಕಾರಣಕ್ಕೆ ಬಾಲಕನನ್ನು ಮನಬಂದಂತೆ ಥಳಿಸಲಾಗಿತ್ತು ಮತ್ತು ಆತನ ಜನನಾಂಗವನ್ನು ಬಾಲಕಿಯ ಕುಟುಂಬವು ವಿರೂಪಗೊಳಿಸಿದ್ದರು, ಅನಂತರ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಬಾಲಕ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ.


ಈ ಘಟನೆಗೆ ಸಂಬಂಧಪಟ್ಟಂತೆ 48 ಸೆಕೆಂಡುಗಳ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಟ್ವಿಟ್ಟರ್ನ‌ಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಬಾಲಕನ ಸಾವಿನ ಸುದ್ದಿ ತಿಳಿದು ನೂರಾರು ಜನರು ಬಾಲಕಿಯ ಮನೆಯ ಮುಂದೆ ನೆರೆದಿದ್ದು, ಬೆಂಕಿಯನ್ನು ಸಹ ಹಚ್ಚಿರುವುದು ಕಾಣಬಹುದಾಗಿದೆ. ಬಾಲಕನ ಅಂತ್ಯಕ್ರಿಯೆಯ ನಂತರ ಯಾವುದೇ ರೀತಿಯ ಗಲಭೆಗಳು ಆಗದಂತೆ ನೋಡಿಕೊಳ್ಳಲು ಹೆಚ್ಚುವರಿ ಪೊಲೀಸರನ್ನು ಆ ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. "ಬಾಲಕನನ್ನು ಮನಬಂದಂತೆ ಥಳಿಸಲಾಯಿತು ಮತ್ತು ಜನನಾಂಗವನ್ನು ಸಹ ಕತ್ತರಿಸಲಾಯಿತು" ಎಂದುಮುಜಾಫರ್‌ಪುರ(ನಗರ) ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸುಶಾಂತ್ ಪಾಂಡೆ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಕುಟುಂಬ ಸದಸ್ಯರು ಶನಿವಾರಮುಜಾಫರ್‌ಪುರನಗರದ ಸುಶಾಂತ್ ಪಾಂಡೆ ಮನೆಯ ಮುಂದೆ ಸೇರಿದ್ದು ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ನಂತರ ತಮ್ಮ ಮಗನ ಅಂತ್ಯಕ್ರಿಯೆಯನ್ನು ಮನೆಯ ಮುಂದೆಯೇ ಮಾಡಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಕೂಡಲೇ ಆಗಮಿಸಿ ಬಾಲಕನನ್ನು ಸಾಯುವಂತೆ ಹೊಡೆದ ಪ್ರಮುಖ ಆರೋಪಿ ಸುಶಾಂತ್ ಪಾಂಡೆರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹತ್ಯೆಗೀಡಾದ ಬಾಲಕನ ತಂದೆ ಸುಶಾಂತ್ ಪಾಂಡೆ ಮತ್ತು ಮಗ ತನ್ನನ್ನು ಮತ್ತು ಕುಟುಂಬದವರನ್ನು ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದರು ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ."ಹುಡುಗಿ ಮತ್ತು ಹುಡುಗ ಇಬ್ಬರೂ ತುಂಬಾ ದಿನಗಳಿಂದ ಪರಸ್ಪರ ಮಾತನಾಡುತ್ತಿದ್ದು, ಅವರ ನಡುವೆ ಪ್ರೇಮ ಇರುವುದನ್ನು ಮನಗೊಂಡ ಕುಟುಂಬಗಳು ಅವರ ಪ್ರೀತಿಗೆ ಸಮ್ಮತಿಯನ್ನು ಸೂಚಿಸದೇ, ಬಾಲಕನ ಮನೆಯವರು ಆತನನ್ನು ಕೆಲಸಕ್ಕಾಗಿ ಬೇರೆ ನಗರಕ್ಕೆ ಕಳುಹಿಸಿರುತ್ತಾರೆ. ಸ್ವಲ್ಪ ದಿನಗಳ ನಂತರ ತನ್ನ ಸಹೋದರಿಯ ಮದುವೆಗೆಂದು ಯುವಕ ಊರಿಗೆ ಬಂದಿರುತ್ತಾನೆ. ಆಗ ನಡೆಯುತ್ತೆ ಘೋರ ಘಟನೆ.

ನಂತರ ತನ್ನ ಮಗನನ್ನು ಹುಡುಗಿ ಮನೆಯವರು ಅವರ ಮನೆಗೆ ಕರೆದು ಮನಬಂದಂತೆ ಥಳಿಸಿದ್ದರು, ಎಂದು ತಂದೆಯು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ತಮ್ಮ ಮಗನನ್ನು ಜೋಪಾನವಾಗಿ ಮನೆಯಿಂದ ಕಳುಹಿಸಿರುವುದಾಗಿ ಬರೆದು ಅದಕ್ಕೆ ಸಹಿ ಹಾಕುವಂತೆ ಬಾಲಕನ ತಂದೆಗೆ ಬಂದೂಕು ತೋರಿಸಿ ಹೆದರಿಸಿದ್ದರು ಎಂದು ಬಾಲಕನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.


Published by:Soumya KN
First published: