News18 India World Cup 2019

ಅತ್ತಿಗೆಯ ಪ್ರೀತಿಗಾಗಿ ಅಣ್ಣನನ್ನೇ ಸಾಯಿಸಿದ ತಮ್ಮ!: ಬೆಚ್ಚಿ ಬೀಳಿಸಿದೆ ಮೈದುನನ ಕಥೆ!

Precilla Olivia Dias | news18
Updated:October 12, 2018, 11:48 PM IST
ಅತ್ತಿಗೆಯ ಪ್ರೀತಿಗಾಗಿ ಅಣ್ಣನನ್ನೇ ಸಾಯಿಸಿದ ತಮ್ಮ!: ಬೆಚ್ಚಿ ಬೀಳಿಸಿದೆ ಮೈದುನನ ಕಥೆ!
Precilla Olivia Dias | news18
Updated: October 12, 2018, 11:48 PM IST
ನ್ಯೂಸ್​ 18 ಕನ್ನಡ

ಅಹಮದಾಬಾದ್​(ಅ.12): ಪ್ರೀತಿ ಎಂಬ ಮಾಯೆ ಎಲ್ಲಾ ಸಂಬಂಧಗಳನ್ನು ಮರೆಯುವಂತೆ ಮಾಡುತ್ತದೆ. ಇಂತಹುದೇ ಒಂದು ಪ್ರಕರಣ ಗುಜರಾತ್​ನ ರಾಜ್​ಕೋಟ್​ನಲ್ಲಿ ಬೆಳಕಿಗೆ ಬಂದಿದೆ. ನ್ಯೂ ಥೋರ್​ಲಾ ಎಂಬ ಪ್ರದೇಶದಲ್ಲಿ ಮಾಮತಾ ಹಾಗೂ ಸುನಿಲ್​ ದಂಪತಿಯ ಮನೆ ಇತ್ತು, ಈ ಸ್ಥಳ ಬಹಳಷ್ಟು ಸುಂದರವಾಗಿತ್ತು. ಯಾಕೆಂದರೆ ಈ ಕಾಲೋನಿಯ ಸುತ್ತ ಮುತ್ತಲೂ ಹಸಿರು ಗಿಡ-ಮರಗಳಿದ್ದವು. ಸಾಲದು ಎಂಬಂತೆ ಇವರ ಮನೆಯ ಸಮೀಪದಲ್ಲೇ ನದಿಯೊಂದು ಹರಿಯುತ್ತಿತ್ತು. ಮನೆ ಹಿಂದಿನ ಬಾಗಿಲಿನಿಂದ ಕೆಲ ಹೊತ್ತು ನಡೆದುಕೊಂಡು ಹೋದರೆ ಆ ನದಿಯ ಬಳಿ ತಲುಪಬಹುದಿತ್ತು. ಎಲ್ಲವೂ ಚೆನ್ನಾಗಿದೆ, ಸುಂದರವಾಗಿದೆ ಎಂದಾಗ ಅಲ್ಲಿ ಅಪಾಯವೂ ಹುಟ್ಟಿಕೊಳ್ಳಲಾರಂಭಿಸುತ್ತದೆ. ಇದು ಅಕ್ಟೋಬರ್​ 6 ರಂದು ನದಿಯ ಬಳಿ ಸುನಿಲ್​ ಶವ ಪತ್ತೆಯಾದಾಗ ಅರಿವಿಗೆ ಬಂದಿತ್ತು.

ಸುನಿಲ್​ ಮೃತದೇಹ ಅವರದ್ದೇ ಮನೆ ಹಿಂದೆ ಇದ್ದ ನದಿಯಲ್ಲಿ ಏಕೆ ಅನಾಥವಾಗಿ ಬಿದ್ದಿತ್ತು? ಹತ್ಯೆ ನಡೆದಿತ್ತಾದರೆ ಕೊಲೆಗಾರ ಯಾರು? ಇವೆಲ್ಲಕ್ಕಿಂತಲೂ ಪ್ರಮುಖ ಪ್ರಶ್ನೆ ಎಂದರೆ ಇದ್ದಕ್ಕಿದ್ದಂತೆ ಸುನಿಲ್​ ಹತ್ಯೆ ಯಾಕಾಯಿತು? ಈ ಎಲ್ಲಾ ಪ್ರಶ್ನೆಗಳ ಹಿಂದೆ ಲವ್​, ಸೆಕ್ಸ್​ ಹಾಗೂ ಧೋಖಾದ ಒಂದು ಕಥೆ ಇದೆ. ಒಂದೂವರೆ ವರ್ಷದ ಹಿಂದೆ 25 ವರ್ಷದ ಸುನಿಲ್​ ಮಮತಾರನ್ನು ಮದುವೆಯಾಗಿದ್ದರು. ಮದುವೆಯಾದ ಕೆಲ ದಿನಗಳಲ್ಲೇ ಮಮತಾ ಸುನಿಲ್​ರವರ ತಮ್ಮ ಅಜಯ್​ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು. ಇತ್ತ ಅಜಯ್​ ಕೂಡಾ ತನ್ನ ಅತ್ತಿಗೆಯ ಕಡೆಗೆ ಹೆಚ್ಚು ಆಕರ್ಷಣೆಗೊಳ್ಳಲಾರಂಭಿಸಿದ್ದ.

ಈ ಮಧ್ಯೆ ಸುನಿಲ್​ ಆಫೀಸ್​ಗೆಂದು ಮನೆಯಿಂದ ಹೊರಟಾಗೆಲ್ಲಾ, ಅಜಯ್​ ಅಣ್ಣನ ಮನೆಗೆ ಹೋಗಿ ತನ್ನ ಅತ್ತಿಗೆ ಮಮತಾ ಜೊತೆ ಸಮಯ ಕಳೆಯಲಾರಂಭಿಸಿದ್ದ. ನಿಧಾನವಾಗಿ ಇಬ್ಬರೂ ಹತ್ತಿರ ಬರಲಾರಂಭಿಸಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಮಮತಾ ಬೇರೊಬ್ಬ ವ್ಯಕ್ತಿಯೆಡೆ ಆಕರ್ಷಿತಳಾಗಲು ಕಾರಣವೇನು? ಆಕೆಯ ವ್ಯಕ್ತಿತ್ವವೇ ಅಂತಹುದ್ದಾ ಅಥವಾ ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಗೆ ಸುನಿಲ್​ ಜೀವನದ ಯಾವುದೋ ಬಹುದೊಡ್ಡ ವಿಚಾರ ತಿಳಿಯಿತೇ? ಅಜಯ್​ ಈ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬಯಸಲಿಲ್ಲ.


ಅಜಯ್​ ಕೇವಲ ಮಮತಾಳ ಪ್ರೀತಿಯಲ್ಲಿ ಬಂಧಿತನಾಗುತ್ತಾ ಹೋದ ಹಾಗೂ ಆತನಿಗೆ ಇದರಲ್ಲೇ ಖುಷಿ ಸಿಗುತ್ತಿತ್ತು. ಮಮತಾ ಯಾವ ವಿಚಾರವನ್ನೂ ತಿಳಿಸದೆ ಕೇವಲ ನೀನು ನನಗೆ ತುಂಬಾ ಇಷ್ಟ ಆಗಿದ್ದೀ ಎಂದು ಅಜಯ್​ಗೆ ಹೇಳಿದ್ದಳು. ದಿನಗಳೆಯುತ್ತಿದ್ದಂತೆ ಈ ವಿಚಾರ ಅದೆಷ್ಟು ಗಂಭೀರವಾಯಿತೆಂದರೆ ಮಮತಾ ಅಜಯ್​ ಬಳಿ ತನಗೆ ನಿನ್ನೊಂದಿಗಿರಲು ಇಷ್ಟ, ಇದಕ್ಕಾಗಿ ತಾನು ಸುನಿಲ್​ನನ್ನೇ ಬಿಡಲು ತಯಾರಿದ್ದೇನೆ ಎಂದು ಹೇಳಲಾರಂಭಿಸಿದ್ದಳು. ಇದು ಸುಖಾಂತ್ಯ ಕಾಣುವ ವಿಚಾರವಾಗಿದ್ದರೆ ಮಮತಾ ಯಾವುದೇ ತಕರಾರಿಲ್ಲದೇ ಸುನಿಲ್​ನನ್ನು ಬಿಟ್ಟು ಅಜಯ್​ ಜೊತೆಗಿರುತ್ತಿದ್ದಳು. ಆದರೆ ಅಜಯ್​ ಸುನಿಲ್​ನ ತಮ್ಮನಾಗಿದ್ದುದೇ ಸಮಸ್ಯೆಯಾಗಿತ್ತು.

ಅವರಿಬ್ಬರ ಪ್ರೀತಿಯನ್ನು ಸಮಾಜ ಒಪ್ಪುತ್ತಿರಲಿಲ್ಲ, ಹೀಗಾಗಿ ಕೆಲ ದಿನಗಳವರೆಗೆ ಇಬ್ಬರೂ ಕದ್ದು ಮುಚ್ಚಿ ಪರಸ್ಪರ ಭೇಟಿಯಾಗುತ್ತಿದ್ದರು. ಅತ್ತಿಗೆ ಹಾಗೂ ಮೈದುನನ ನಡುವಿನ ಪ್ರೀತಿ ಎಷ್ಟರ ಮಟ್ಟಿಗೆ ಬೆಳೆದಿತ್ತೆಂದರೆ, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಬಾಳಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪಿತ್ತು. ಹೀಗಾಗಿ ತಾವಿಬ್ಬರೂ ಒಂದಾಗಬೇಕೆಂದರೆ ಸುನಿಲ್​ನನ್ನು ಸಾಯಿಸುವುದೇ ಏಕಮಾತ್ರ ಉಪಾಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಆರಂಭದಲ್ಲಿ ಇಬ್ಬರೂ ಭಯಗೊಂಡಿದ್ದರಾದರೂ, ಬಳಿಕ ಧೈರ್ಯ ಮಾಡಿ ಸುನಿಲ್​ನನ್ನು ಸಾಯಿಸುವ ಪ್ಲಾನ್​ ಮಾಡಿದ್ದರು.
Loading...ಇಬ್ಬರೂ ಸುನಿಲ್​ನನ್ನು ಸಾಯಿಸಲು ಷಡ್ಯಂತ್ರ ಹೂಡಲಾರಂಭಿಸಿದ್ದರು. ಎಲ್ಲಿ ಸಾಯಿಸುವುದು? ಹೇಗೆ ಸಾಯಿಸುವುದು ಹಾಗೂ ಹತ್ಯೆಗೈದ ಬಳಿಕ ಮೃತದೇಹವನ್ನು ಏನು ಮಾಡುವುದು? ಇವೆಲ್ಲದರ ಕುರಿತಾಗಿ ಯೋಚಿಸಲಾರಂಭಿಸಿದರು. ಇಬ್ಬರಿಗೂ ಕೊಲೆ ಮಾಡಿದ ಅನುಭವ ಇಲ್ಲದಿದ್ದರೂ ತಮಗನಿಸಿದಂತೆ ಪ್ಲಾನ್​ ಫೈನಲ್​ ಮಾಡುತ್ತಾ ಸಾಗಿದರು. ಪ್ಲಾನ್​ ಮಾಡಿಯಾದ ಬಳಿಕ ಅಜಯ್​ ತಾನು ಅಕ್ಟೋಬರ್​ 5 ರಂದು ರಾತ್ರಿ ಬರುತ್ತೇನೆ. ಅದಕ್ಕೂ ಮೊದಲು ಪ್ಲಾನ್​ನಂತೆ ಎಲ್ಲಾ ತಯಾರಿ ಮಾಡಿಟ್ಟುಕೊಳ್ಳುವಂತೆ ಮಮತಾಗೆ ತಿಳಿಸಿದ್ದ.

ಅಂದು ಸುನಿಲ್​ ಮನೆಗೆ ಬರುತ್ತಿದ್ದಂತೆಯೇ ಮಮತಾ ಗಂಡನನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಳು. ಅಲ್ಲದೇ ತನ್ನ ಕೈಯಾರೆ ಊಟವನ್ನೂ ಮಾಡಿಸಿದ್ದಳು. ಪ್ಲಾನ್​ನಂತೆ ಆಕೆ ಊಟದಲ್ಲಿ ಮತ್ತು ಬರಿಸುವ ಮಾತ್ರೆಗಳನ್ನು ಸೇರಿಸಿದ್ದಳು, ಸುನಿಲ್​ಗೆ ಏನಾಗುತ್ತಿದೆ ಎಂದು ತಿಳಿಯಬಾರದೆಂಬ ನಿಟ್ಟಿನಲ್ಲಿ ಹೀಗೆ ಮಾಡಿದ್ದಳು. ಹೀಗಿರುವಾಗ ಸುನಿಲ್​ ಯಾವಗಾ ತಾನು ಮಮತಾಳೊಂದಿಗೆ ಬೆಡ್​ ರೂಂಗೆ ಸೇರುತ್ತೇನೆ ಎಂಬ ಯೋಚನೆಯಲ್ಲಿದ್ದರೆ, ಅತ್ತ ಮಮತಾ ಅಜಯ್​ ಯಾವಾಗ ಬರುತ್ತಾನೆ ಎಂಬ ಕಾತುರದಲ್ಲಿದ್ದಳು. ಅಜಯ್​ನನ್ನು ಕಾಯುತ್ತಿದ್ದ ಮಮತಾ ಬೆಡ್​ ರೂಂಗೆ ಹೋಗಲು ತಡ ಮಾಡುತ್ತಿದ್ದಳು.

ಸುನಿಲ್​ಗೆ ಯಾವುದೇ ಅನುಮಾನ ಅಥವಾ ಕೋಪ ಬರುವುದಕ್ಕೂ ಮೊದಲು ಡೋರ್​ ಬೆಲ್​ ಮೊಳಗಿತ್ತು. ಆ ಕೂಡಲೇ ಬಾಗಿಲು ತೆಗೆದ ಮಮತಾ ಅಜಯ್​ ಬಳಿ ತಡವಾಗಲು ಕಾರಣವೇನು ಎಂದು ಕೇಳಿದಳು. ಈ ವೇಳೆ ಅಜಯ್​ ಸುಮ್ಮನಿರುವಂತೆ ಹೇಳಿದ್ದ. ಅತ್ತ ಸುನಿಲ್​ ಯಾರು ಬಂದಿದ್ದಾರೆ ಎಂದು ಕೇಳಿದಾಗ, ಮಮತಾ ಅಜಯ್​ ಬಂದಿರುವುದಾಗಿ ತಿಳಿಸಿದ್ದಾಳೆ. ಮರುಕ್ಷಣವೇ ಸುನಿಲ್​ ಬಳಿ ತೆರಳಿದ ಅಜಯ್​ ಸುಮ್ಮನೆ ಮಾತನಾಡಲಾರಂಭಿಸಿದ್ದಾನೆ. ಬೆಡ್​ ಮೇಲೆ ಮಲಗಿಕೊಂಡಿದ್ದ ಸುನಿಲ್​ ತನಗೆ ಆಯಾಸವಾಗುತ್ತದೆ ಎಂದು ಅಜಯ್​ ಬಳಿ ಹೇಳಿಕೊಂಡಿದ್ದ. ಹೀಗಿರುವಾಗ ಅಜಯ್​ ಮನಸ್ಸಿಲ್ಲದ ಮನಸ್ಸಿನಿಂದ ಸರಿಯಾದ ಸಮಯಕ್ಕೆ ಕಾಯುತ್ತಿದ್ದ.


ಇತ್ತ ಬೇರೆ ಕೋಣೆಯಲ್ಲಿದ್ದ ಮಮತಾ, ಅಜಯ್​ ಸಿಗ್ನಲ್​ ನೀಡುತ್ತಿದ್ದಂತೆಯೇ ಅಲ್ಲಿಗೆ ತಲುಪಿ, ಸುನಿಲ್​ ಬಳಿ ಕುಳಿತುಕೊಂಡಳು. ಮಾತುಕತೆಯ ನಡುವೆ ಸುನಿಲ್​ಗೆ ನಿದ್ದೆ ಆವರಿಸಲು ಆರಂಭವಾಗುತ್ತಿದ್ದಂತೆಯೇ, ಅಜಯ್​ ತನ್ನ ಜೇಬಿನಲ್ಲಿದ್ದ ಹಗ್ಗವನ್ನು ತೆಗೆದು ಸುನಿಲ್​ ಹಿಂಬದಿಗೆ ಹೋಗಿ ತನ್ನೆಲ್ಲಾ ಬಲ ಪ್ರದರ್ಶನ ನಡೆಸಿ ಹಗ್ಗದ ಮೂಲಕ ಅಣ್ಣನ ಕತ್ತು ಹಿಸುಕಲಾರಂಭಿಸಿದ್ದ. ಇತ್ತ ಮಮತಾ ಸುನಿಲ್​ ಕಾಲನ್ನು ಗಟ್ಟಿಯಾಗಿ ಹಿಡಿದಿದ್ದಳು. ಸುನಿಲ್​ಗೆ ಚೀರಾಡಲೂ ಸಾಧ್ಯವಾಗಲಿಲ್ಲ, ಹಾಗೂ ತನ್ನ ಕಣ್ಣು ಗುಡ್ಡೆಗಳನ್ನು ಹೊರಹಾಕಿ ಆತ ಮಮತಾಳನ್ನೇ ದಿಟ್ಟಿಸಲಾರಂಭಿಸಿದ್ದ.ಕೆಲವೇ ಕ್ಷಣಗಳಲ್ಲಿ ಸುನಿಲ್​ ಉಸಿರಾಟ ನಿಂತಿತ್ತು ಹಾಗೂ ಆತನ ದೇಹ ನಿಷ್ಕ್ರಿಯಗೊಂಡಿತ್ತು. ಹೀಗಿರುವಾಗ ಅಜಯ್​ ಹಗ್ಗವನ್ನು ಸಡಿಲಿಸಿ, ಸುನಿಲ್​ ಸಾವನ್ನಪ್ಪಿದ್ದಾನೋ ಇಲ್ಲವೋ ಎಂದು ಕನ್ಫರ್ಮ್​​ ಮಾಡಿಕೊಂಡ. ಅಷ್ಟರಲ್ಲೇ ಅಜಯ್​ ಸಂಪೂರ್ಣವಾಗಿ ಇಳಿದು ಹೋಗಿದ್ದ. ಹೀಗಾಗಿ ಸುನಿಲ್​ ಮೃತದೇಹದ ಬಳಿ ಕುಳಿತುಕೊಂಡ ಆತ ಕ್ಷಮೆ ಯಾಚಿಸಿದ್ದ. ಆಗ ಹತ್ತಿರದಲ್ಲೇ ಇದ್ದ ಮಮತಾ ಆತನಿಗೆ ಧೈರ್ಯ ತುಂಬಿ ಕೆಲಸವಿನ್ನೂ ಮುಗಿದಿಲ್ಲ, ಹೆಣಕ್ಕೊಂದು ಗತಿ ಕಾಣಿಸಬೇಕಿದೆ ಎಂದು ಎಚ್ಚರಿಸಿದ್ದಳು. ನೀರು ಕುಡಿದ ಅಜಯ್​ ಮನೆ ಹಿಂದೆ ಹೋಗಿ ಪರೀಕ್ಷಿಸಿದ್ದ. ಕತ್ತಲಾಗಿತ್ತು ಹಾಗೂ ಅಲ್ಲಿ ಯಾರೂ ಇರಲಿಲ್ಲ. ಆದರೆ ದೂರದಲ್ಲಿ ಅಂಗಡಿಯೊಂದರ ಲೈಟ್​ ಬೆಳಕು ಕಾಣುತ್ತಿತ್ತು.

ಸ್ವಲ್ಪ ಹೊತ್ತು ಕಾಯುವುದೇ ಒಳಿತೆಂದು ಯೋಚಿಸಿದ ಅಜಯ್​, ಅಲ್ಲಿಯವರೆಗೆ ಮಮತಾಳಿಗೆ ಮುಂದಿನ ತಯಾರಿ ನಡೆಸಲು ಸೂಚಿಸಿದ. ಅತ್ತ ಮಮತಾ ತನ್ನ ಬ್ಯಾಗ್​ ಪ್ಯಾಕ್​ ಮಾಡುತ್ತಿದ್ದರೆ, ಇತ್ತ ಅಜಯ್​ ಹೊರಗೆ ಯಾರಾದರೂ ಬರುತ್ತಿದ್ದಾರಾ ಎಂದು ಗಮನಿಸುತ್ತಿದ್ದ. ಕೆಲವೇ ಸಮಯದಲ್ಲಿ ಅಜಯ್​ ತನ್ನ ಅಣ್ಣನ ಮೃತದೇಹವನ್ನು ಮನೆಯ ಹಿಂಬದಿಯಲ್ಲಿದ್ದ ನದಿಯಲ್ಲಿ ಎಸೆದು ಬಂದಿದ್ದ. ಯಾವ ಹಗ್ಗದಿಂದ ಸುನಿಲ್​ ಕತ್ತು ಹಿಸುಕಿದ್ದನೋ ಅದನ್ನು ಮತ್ತೆ ಜೇಬಿನಲ್ಲಿಟ್ಟುಕೊಂಡಿದ್ದ, ಬಳಿಕ ಮಮತಾ ಹಾಗೂ ಅಜಯ್​ ಅಲ್ಲಿಂದ ತೆರಳಿದ್ದರು.

ಅಜಯ್​ ಮೊದಲೇ ಟಿಕೆಟ್​ ಬುಕ್​ ಮಾಡಿದ್ದ ಹೀಗಾಗಿ ಇಬ್ಬರೂ ನೇರವಾಗಿ ರೈಲ್ವೇ ಸ್ಟೇಷನ್​​ಗೆ ತೆರಳಿ, ಅಹಮದಾಬಾದ್​ಗೆ ತೆರಳುವ ರೈಲನ್ನೇರಿದ್ದರು. ಅಹಮದಾಬಾದ್​ನಲ್ಲಿ ಎರಡು ದಿನ ಕಳೆದ ಬಳಿಕ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದ ಅಜಯ್​ ಮಮತಾಳೊಂದಿಗೆ ವಡೋದರಾಗೆ ತೆರಳಿದ್ದ. ಅಜಯ್​ ತನಗೆ ಹಾಗೂ ಮಮತಾಳಿಗೆ ಉಳಿದುಕೊಳ್ಳಲು ಸುರಕ್ಷಿತ ಸ್ಥಳದ ಹುಡುಕಾಟದಲ್ಲಿದ್ದ ಹೀಗಾಗಿ ತನ್ನ ಆತ್ಮೀಯರ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದ. ವಡೋದರದಲ್ಲಿ ಇಬ್ಬರು ಕೆಲ ದಿನಗಳವರೆಗೆ ಉಳಿದುಕೊಳ್ಳಬೇಕಾಯಿತು. ಹೀಗಿರುವಾಗ ಅಜಯ್​ ಉತ್ತರ ಪ್ರದೇಶದಲ್ಲಿ ತಮಗೊಂದು ಸುರಕ್ಷಿತ ಸ್ಥಳದ ಹುಡುಕಾಟ ನಡೆಸುತ್ತಿದ್ದ.


ಎಲ್ಲಾ ತಯಾರಿಯಾಗಿತ್ತು. ಇಬ್ಬರೂ ವಡೋದರಾದಿಂದ ರೈಲು ಹತ್ತಿ ತೆರಳುವವರಿದ್ದರು. ಅಕ್ಟೋಬರ್​ 10ರಂದು ಅಜಯ್​ ಹಾಗೂ ಮಮತಾ ಇಬ್ಬರೂ ರೈಲಿಗಾಗಿ ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿಗೆ ತಲುಪಿದ ಪೊಲೀಸರು ಇಬ್ಬರನ್ನೂ ಬಂಧಿಸಿ ಠಾಣೆಗೊಯ್ದಿದ್ದರು. ಪೊಲೀಸರು ತಮ್ಮ ಬಳಿ ಹೇಗೆ ತಲುಪಿದರು ಎಂಬುವುದು ಇಬ್ಬರಿಗೂ ಆ ಕ್ಷಣದಲ್ಲಿ ತಿಳಿಯಲಿಲ್ಲ. ವಾಸ್ತವವಾಗಿ ಸುನಿಲ್​ ತಂದೆ, ಹತ್ಯೆ ನಡೆದ ಮರುದಿನವೇ ತನ್ನ ಸೊಸೆ ಹಾಗೂ ಮಗ ನಾಪತ್ತೆಯಾಗಿದ್ದಾರೆಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಸುನಿಲ್​ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಅಜಯ್​ ಹಾಗೂ ಮಮತಾಳ ಹುಡುಕಾಟ ಆರಮಭವಾಗಿತ್ತು.

ಮೊಬೈಲ್​ ಫೋನ್​ ಪೊಲೀಸರಿಗೆ ಈ ನಿಟ್ಟಿನಲ್ಲಿ ಬಹಳಷ್ಟು ಸಹಾಯ ಮಾಡಿತ್ತು. ಇಬ್ಬರ ಮೊಬೈಲ್​ ಫೋನ್​ ನೆಟ್ವರ್ಕ್​ ಟ್ರ್ಯಾಕ್​ ಮಾಡುತ್ತಾ ಪೊಲೀಸರು ಅವರ ಬಳಿ ತಲುಪಿದ್ದರು. ಬಳಿಕ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಇಬ್ಬರೂ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...