• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral Video: ಮಿಡ್​ನೈಟ್​ನಲ್ಲಿ ಲವರ್​ ಭೇಟಿ ಮಾಡಲು ಹೋದ ಪ್ರೇಮಿ! ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಾಗ ನಡೆದಿದ್ದೇನು?

Viral Video: ಮಿಡ್​ನೈಟ್​ನಲ್ಲಿ ಲವರ್​ ಭೇಟಿ ಮಾಡಲು ಹೋದ ಪ್ರೇಮಿ! ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಾಗ ನಡೆದಿದ್ದೇನು?

ಮಧ್ಯರಾತ್ರಿಯಲ್ಲಿ ಮದುವೆ

ಮಧ್ಯರಾತ್ರಿಯಲ್ಲಿ ಮದುವೆ

ಯುವಕನೊಬ್ಬ ತನ್ನ ಲವರ್​ ಭೇಟಿಯಾಗಲು ಮಧ್ಯರಾತ್ರಿ ಗೌಪ್ಯವಾಗಿ ಆಕೆಯ ಮನಗೆ ಹೋಗಿದ್ದಾನೆ. ಈ ವೇಳೆ ಇಬ್ಬರನ್ನೂ ಯುವತಿಯ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

 • News18 Kannada
 • 5-MIN READ
 • Last Updated :
 • Bihar, India
 • Share this:

ಬಿಹಾರ: ಪ್ರೀತಿಯಲ್ಲಿ (Love) ಬಿದ್ದ ಹದಿಹರೆಯದ ಯುವಕರು ತಮ್ಮ ಪ್ರಿಯತಮೆಯನ್ನು ಭೇಟಿ ಮಾಡಲು ಎಂತಹ ಸಾಹಸವನ್ನಾದರೂ ಮಾಡುತ್ತಾರೆ. ಅದು ಹಗಲಾದರೂ ಅಥವಾ ರಾತ್ರಿಯಾದರೂ ಲೆಕ್ಕಾನೆ ಇರುವುದಿಲ್ಲ. ಇಲ್ಲೊಬ್ಬ ಯುವಕ ರಾತ್ರಿ ವೇಳೆ ತನ್ನ ಗೆಳತಿಯನ್ನು (Lover) ಯಾರಿಗೂ ಕಾಣದಂತೆ   ಭೇಟಿಯಾಗಬೇಕೆಂಬ ಆಸೆಯಿಂದ ಆಕೆಯ ಮನೆಗೆ ಹೋಗಿ  ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಈ ಪ್ರೇಮದಾಟ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆಯೊಂದಿಗೆ (Marriage) ಕೊನೆಗೊಂಡಿದೆ. ಚನ್ಪಾಟಿಯಾ ಬ್ಲಾಕ್ ನಲ್ಲಿರುವ ಗಿಡ್ಡಾ ಪಂಚಾಯತ್​ನ (panchayat) ರಂಜನ್ ಕುಮಾರ್ ಯಾದವ್ (Ranjan Kumar), ಲೌಕರಿಯಾ ಗ್ರಾಮದ ಊರ್ಮಿಳಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಅವನು ತನ್ನ ಲವರ್​ ಭೇಟಿಯಾಗಲು ಗೌಪ್ಯವಾಗಿ ಭೇಟಿಯಾಗಿದ್ದ ವೇಳೆ ದಂಪತಿಯನ್ನು (Couple) ಬಾಲಕಿಯ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೊನೆಗೆ ಗ್ರಾಮಸ್ಥರೊಂದಿಗೆ ಸೇರಿ ಯುವತಿಯ ಕುಟುಂಬಸ್ಥರು ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ.


ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರ ರಂಜನ್​ ತಾನೂ ಯುವತಿಯನ್ನ ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೆ ರಂಜನ್ ಕುಮಾರ್ ಯಾದವ್ ಹೇಗಾದರೂ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಗಲಾಟೆ ಶಬ್ದಕ್ಕೆ ಸಾಕಷ್ಟು ಜನ ಸೇರಿದ್ದಾರೆ. ಕೊನೆಗೆ ಯುವತಿ ಹಾಗೂ ಯುವಕನನ್ನು ಹಿಡಿದು ಚನ್ಪಾಟಿಯಾ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ. ರಂಜನ್ ಕುಮಾರ್ ಯಾದವ್ ಮತ್ತು ಊರ್ಮಿಳಾ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಲು ಬಯಸುವುದಾಗಿ ಪೊಲೀಸರು ಲಿಖಿತ ಭರವಸೆ ಪಡೆದಿದ್ದಾರೆ. ಪ್ರೇಮವಿವಾಹದ ವಿಚಾರವಾಗಿ ಪ್ರಿಯಕರ ಹಾಗೂ ಯುವತಿಗೆ ಪೊಲೀಸರು ಕೌನ್ಸೆಲಿಂಗ್ ನೀಡಿ ಕಳುಹಿಸಿಕೊಟ್ಟಿದ್ದಾರೆ.


ಇದನ್ನೂ ಓದಿ: Marriage: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು! ಇಷ್ಟಕ್ಕೆಲ್ಲ ಹುಡುಗ ಮಾಡಿದ ಎಡವಟ್ಟೇ ಕಾರಣವಂತೆ!

 ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಯುವಕರು


ಬಿಹಾರದ ಗಿಡ್ಡಾ ಪಂಚಾಯತ್ ಚೌರಾಹಿಯಾದ ರಂಜನ್ ಕುಮಾರ್ ಯಾದವ್ ಅವರು ಪ್ರೀತಿಸಿದ ಹುಡುಗಿಯನ್ನು ಭೇಟಿಯಾಗಲೂ ಆಕೆಯ ಮನೆಗೆ ಹೋಗಿದ್ದಾನೆ. ಮಧ್ಯರಾತ್ರಿಯಲ್ಲಿ ಶಬ್ದವಾಗಿದ್ದರಿಂದ ಅನುಮಾನಗೊಂಡ ಸಂಬಂಧಿಕರು ಪರಿಶೀಲಿಸಿದಾಗ ಇಬ್ಬರು ಪ್ರೇಮ ಪಕ್ಷಿಗಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಮನೆಗೆ ಯಾಕೆ ಬಂದೆ ಎಂದು ವಿಚಾರಿಸಿದಾಗ ತಮ್ಮ ಪ್ರೀತಿಯ ವಿಷಯವನ್ನು ಹಿರಿಯರಿಗೆ ತಿಳಿಸಿದ್ದಾರೆ. ನಂತರ ಊರ್ಮಿಳಾ ಕುಟುಂಬಸ್ಥರು ರಂಜನ್​ಗೆ ಈಗಲೇ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ.
ಮಿಡ್​ನೈಟ್​ ಹೈಡ್ರಾಮ


ಇದೇ ವೇಳೆ ಯುವತಿಯನ್ನು ಭೇಟಿಯಾಗಲು ಬಂದ ಯುವಕ ಪ್ರೇಮಾ ಮದುವೆಯಾಗು ಎಂದು ಹೇಳಿದಾಗ ಏನೇನೋ ನಾಟಕ ಮಾಡಲು ಶುರು ಮಾಡಿದ್ದಾನೆ. ಹಾಗಾಗಿ ಯುವತಿಯ ಸಂಬಂಧಿಕರು ಆತನನ್ನು ಚೌರಾಹಿಯಾ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಯುವತಿಯನ್ನು ಮದುವೆಯಾಗುತ್ತೇನೆ ಎಂದು ಯುವಕನಿಂದ ಲಿಖಿತ ವಾಗ್ದಾನ ಪಡೆದಿದ್ದಾರೆ. ಮರುದಿನ, ಗ್ರಾಮಸ್ಥರ ಸಹಾಯದಿಂದ, ಹುಡುಗಿಯ ಕುಟುಂಬ ಸದಸ್ಯರು ರಂಜನ್ ಕುಮಾರ್ ಯಾದವ್ ಮತ್ತು ಊರ್ಮಿಳಾಗೆ ಶಿವ ದೇವಾಲಯದಲ್ಲಿ ವಿವಾಹ ಮಾಡಿದ್ದಾರೆ.


ಇದನ್ನೂ ಓದಿ:  Marriage: 55 ವರ್ಷದ ವ್ಯಕ್ತಿಯನ್ನು ಮದುವೆಯಾದ 25ರ ಯುವತಿ! ಈಕೆಯ ಕಥೆ ಕೇಳಿದ್ರೆ ನಿಮ್ಮ ಮನಸ್ಸೂ ಕರಗುತ್ತೆ


ಮದುವೆ ವಿಡಿಯೋ ವೈರಲ್


ಗೌಪ್ಯವಾಗಿ ಭೇಟಿಯಾಗಿದ್ದ ಜೋಡಿಗೆ ಗ್ರಾಮಸ್ಥರು ಹಾಗೂ ಯುವತಿಯ ಸಂಬಂಧಿಕರು ಮದುವೆ ಮಾಡಿದ್ದಾರೆ. ಪ್ರೇಮ ಜೋಡಿಯ ಮದುವೆಗೆ ಸಂಬಂಧಿಸಿದ ವಿಡಿಯೋವನ್ನು ಗ್ರಾಮಸ್ಥರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ವೈರಲ್ ಆಗಿದೆ. ಅಷ್ಟೇ ಅಲ್ಲ, ಮದುವೆ ಸಮಾರಂಭ ಮುಗಿದ ಮೇಲೆ ಹುಡುಗಿಯ ಮನೆಯವರು ಹುಡುಗನ ಮನೆಯವರಿಗೆ ನಡೆದ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ.

First published: