ಕೇರಳದಲ್ಲೊಂದು ದುರಂತ ಘಟನೆ; ಮದುವೆಗೆ ಒಪ್ಪದ ಪ್ರೇಯಸಿಗೆ ಬೆಂಕಿ ಹಚ್ಚಿದ ಯುವಕ ತಾನೂ ಶವವಾದ

ಬುಧವಾರ ರಾತ್ರಿ ಯುವತಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದ ಮಿಥುನ್​ನನ್ನು ಆಕೆಯ ತಂದೆ ಅಡ್ಡಗಟ್ಟಿದ್ದರು. ಇಬ್ಬರ ನಡುವೆ ಇದೇ ವಿಷಯಕ್ಕೆ ಗಲಾಟೆಯಾಗಿತ್ತು. ಜಗಳ ಕೇಳಿ ಹೊರಬಂದ ಯುವತಿಯ ಮೇಲೆ ಪೆಟ್ರೋಲ್ ಸುರಿದ ಮಿಥುನ್ ಆಕೆಗೆ ಬೆಂಕಿ ಹಚ್ಚಿದ ನಂತರ ತನಗೂ ಬೆಂಕಿ ಹಚ್ಚಿಕೊಂಡಿದ್ದ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:October 10, 2019, 11:48 AM IST
ಕೇರಳದಲ್ಲೊಂದು ದುರಂತ ಘಟನೆ; ಮದುವೆಗೆ ಒಪ್ಪದ ಪ್ರೇಯಸಿಗೆ ಬೆಂಕಿ ಹಚ್ಚಿದ ಯುವಕ ತಾನೂ ಶವವಾದ
ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು
  • Share this:
ಕೊಚ್ಚಿ (ಅ.10): ತಾನು ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಆಕೆಗೆ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಕೇರಳದ ಕೊಚ್ಚಿಯ 17 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ 24 ವರ್ಷದ ಮಿಥುನ್ ಎಂಬ ಯುವಕ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆ ಯುವತಿಯ ಸಂಬಂಧಿಕನಾಗಿದ್ದ ಮಿಥುನ್ ಆಗಾಗ ಆಕೆಯ ಮನೆಗೆ ಹೋಗುತ್ತಿದ್ದ. ಈ ವೇಳೆ ಯುವತಿಯ ಮೇಲೆ ಆತನಿಗೆ ಪ್ರೇಮಾಂಕುರವಾಗಿತ್ತು. ಆಕೆಯೂ ಆತನನ್ನು ಪ್ರೀತಿಸುತ್ತಿದ್ದಳು. ಆದರೆ, ತನ್ನನ್ನು ಮದುವೆಯಾಗಲು ಆಕೆ ಒಪ್ಪಲಿಲ್ಲ ಎಂದು ಕೋಪಗೊಂಡಿದ್ದ ಮಿಥುನ್ ನಿನ್ನೆ ಆಕೆಯ ಮನೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತನಗೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ.

ಈ ವೇಳೆ ಮಗಳನ್ನು ಕಾಪಾಡಲು ಹೋದ ಯುವತಿಯ ಅಪ್ಪನಿಗೂ ಸುಟ್ಟ ಗಾಯಗಳಾಗಿವೆ. ಸಾವನ್ನಪ್ಪಿದ ಯುವತಿಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ ಮಿಥುನ್ ಆಕೆಯ ಸಂಬಂಧಿಯೂ ಹೌದು. ಯುವತಿ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಗ ಅಲ್ಲಿ ಮಿಥುನ್ ಪರಿಚಯವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ರಿಲೇಷನ್​ಶಿಪ್​ನಲ್ಲಿದ್ದರು. ಆದರೆ, ಆತ ಆಕೆಯನ್ನು ಮದುವೆಯಾಗುವ ಬಗ್ಗೆ ಕೇಳಿದಾಗ ಆಕೆ ನಿರಾಕರಿಸಿದ್ದಳು. ತಾನಿನ್ನೂ ಓದಬೇಕೆಂದು ಹೇಳಿದ ಯುವತಿ ಈಗಲೇ ಮದುವೆಯಾಗಲು ಇಷ್ಟವಿಲ್ಲ ಎಂದು ಆತನನ್ನು ಅವಾಯ್ಡ್​ ಮಾಡುತ್ತಿದ್ದಳು.

ರೈಲ್ವೆ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಇದರಿಂದ ಕೋಪಗೊಂಡಿದ್ದ ಮಿಥುನ್ ಗಲಾಟೆಯೆಬ್ಬಿಸಿದ್ದ. ಅ. 7ರಂದು ಈ ಬಗ್ಗೆ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದರು. ಅದಾದ ನಂತರ ನಿನ್ನೆ ಯುವತಿ ಟ್ಯೂಷನ್​ಗೆ ಹೋಗಿದ್ದಾಗ ಮಿಥುನ್ ಆಕೆಯನ್ನು ಭೇಟಿಯಾಗಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ, ನಿನ್ನೆ ರಾತ್ರಿ ಆಕೆಯನ್ನು ಭೇಟಿಯಾಗಲು ಮಿಥುನ್ ಪ್ರಯತ್ನಿಸಿದ್ದ. ಆಗ ಆಕೆಯ ತಂದೆ ಮಿಥುನ್​ನನ್ನು ತಡೆದು ಬುದ್ಧಿ ಹೇಳಿದ್ದರು. ಇದರಿಂದ ಇನ್ನಷ್ಟು ಕೋಪಗೊಂಡ ಮಿಥುನ್ ಮತ್ತು ಯುವತಿಯ ತಂದೆ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಕೇಳಿ ಮನೆಯಿಂದ ಹೊರಗೆ ಬಂದ ಯುವತಿಯ ಮೇಲೆ ಪೆಟ್ರೋಲ್ ಸುರಿದ ಮಿಥುನ್ ತಾನೂ ಸುರಿದುಕೊಂಡು ಬೆಂಕಿ ಹಚ್ಚಿದ್ದ. ಇಬ್ಬರನ್ನೂ ತಕ್ಷಣ ಎರ್ನಾಕುಲಂನ ಮೆಡಿಕಲ್ ಕಾಲೇಜಿಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದರು.

(ವರದಿ: ನೀತು ರಘುಕುಮಾರ್)

First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ