ಗಂಟೆಗಟ್ಟಲೆ ವಿಡಿಯೋ ಗೇಮ್ ಆಡಿ ಜವರಾಯನ ಪಾದ ಸೇರಿದ ಬಾಲಕ

ಸತತವಾಗಿ ವಿಡಿಯೋ ಗೇಮ್ ಆಡಿ ಬಾಲಕ ಸಾವನ್ನಪ್ಪಿದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಬಾಲಕ ಸೆರೆಬ್ರಲ್ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆಂದು ಕಾರಣ ಪತ್ತೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಪುದುಚೇರಿ: ಹಲವಾರು ಗಂಟೆಗಳ ಕಾಲ ನಿರಂತರವಾಗಿ ಆನ್‌ಲೈನ್ ಗೇಮ್‌ ಆಡಿದ ನಂತರ 16 ವರ್ಷದ ಬಾಲಕ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪುದುಚೆರಿಯಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ದರ್ಶನ್ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತ ಬಾಲಕ ವಿಲಿಯನೂರ್ ಬಳಿಯ ಖಾಸಗಿ ಶಾಲೆಯಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ.

  ಸೋಮವಾರ ಆನ್‌ಲೈನ್ ಆಟ ‘ಫೈರ್ ವಾಲ್’ ಆಡುವಾಗ ಸಂಜೆ 7 ಗಂಟೆ ಸುಮಾರಿಗೆ ಬಾಲಕ ಕುಸಿದು ಬಿದ್ದಿದ್ದಾನೆ ಎಂದು ಪುದುಚೇರಿಯ ಪೊಲೀಸ್ ವರಿಷ್ಠಾಧಿಕಾರಿ ರಂಗನಾಥನ್ ಅವರು ದಿ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ. “ಹುಡುಗನ ಪೋಷಕರು ನೀಡಿದ ಮಾಹಿತಿಯ ಪ್ರಕಾರ, ದರ್ಶನ್‌ ಸೋಮವಾರ ಬೆಳಗ್ಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದ. ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್‌ನಲ್ಲಿ ಗೇಮ್‌ ಆಡಲು ಪ್ರಾರಂಭಿಸುತ್ತಾನೆ. ಕೆಲ ಹೊತ್ತಿನ ಬಳಿಕ ಕುಸಿದು ಬೀಳುತ್ತಾನೆ. ನಂತರ ವಿದ್ಯಾರ್ಥಿಯನ್ನು ಮೊದಲು ಸ್ಥಳೀಯ ಖಾಸಗಿ ಆಸ್ಪತ್ರೆಗೆ, ಬಳಿಕ ಜಿಪ್ಮರ್‌ಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದರೂ ವಿದ್ಯಾರ್ಥಿಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ'' ಎಂದು ಬಾಲಕನ ಪೋಷಕರು ಮಾಹಿತಿ ನೀಡಿದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

  ಮಿದುಳಿನ ರಕ್ತಸ್ರಾವದಿಂದಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರ ಪ್ರಾಥಮಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ. ಈ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ವರದಿ ಬಂದ ನಂತರವೇ ವಿವರವಾದ ಮೌಲ್ಯಮಾಪನ ಮಾಡಬಹುದು ಎಂದೂ ರಂಗನಾಥನ್‌ ಹೇಳಿದ್ದಾರೆ.

  ಇದನ್ನೂ ಓದಿ: World Cancer Day 2021:ಇಂದು ವಿಶ್ವ ಕ್ಯಾನ್ಸರ್‌ ದಿನಾಚರಣೆ; ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

  ಅತಿಯಾದ ವಿಡಿಯೋ ಗೇಮ್‌ ಆಡಿದ್ದು ಸಾವಿಗೆ ಕಾರಣವಾ..?

  ಆದರೆ, ವೈದ್ಯಕೀಯ ಪರಿಸ್ಥಿತಿಗಳ ಸಾಧ್ಯತೆಯ ಬಗ್ಗೆ ಹೆಚ್ಚು ವಿವರವಾದ ಮಾಹಿತಿಯಿಲ್ಲದೆ ವಿಡಿಯೋ ಗೇಮ್‌ ಆಡುವಲ್ಲಿ ಹೆಚ್ಚು ಸಮಯ ತಲ್ಲೀನರಾಗಿದ್ದು, ವಿದ್ಯಾರ್ಥಿಯ ಸಾವಿನ ಏಕೈಕ ಕಾರಣವೆಂದು ಗುರುತಿಸಲು ಸಾಧ್ಯವಿಲ್ಲ. ಬಾಲಕನನ್ನು ಮಂಗಳವಾರ ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆಗಾಗಲೇ ಆತ ಮೃತಪಟ್ಟಿದ್ದ. ಶವಪರೀಕ್ಷೆಯಲ್ಲಿ ಸೆರೆಬ್ರಲ್ ರಕ್ತಸ್ರಾವವು ಸಾವಿಗೆ ಕಾರಣವೆಂದು ಗುರುತಿಸಲಾಗಿದೆ ಎಂದು ಜಿಪ್ಮರ್‌ ತಜ್ಞರು ತಿಳಿಸಿದ್ದಾರೆ.

  ಲಭ್ಯವಿರುವ ಮಾಹಿತಿಯನ್ನು ಗಮನಿಸಿದರೆ ವಿಡಿಯೋ ಗೇಮ್‌ಗಳನ್ನು ಆಡಿರುವುದು ಮಾತ್ರ ಈ ಪ್ರಕರಣದಲ್ಲಿ ಸಾವಿಗೆ ಕಾರಣವಾಗಿದೆ ಎಂಬುದು ಅಸಂಭವವಾಗಿದೆ ಎಂದು ನರವಿಜ್ಞಾನ ಪ್ರಾಧ್ಯಾಪಕ ಮತ್ತು ಜಿಪ್‍ಮರ್‌ನ ಸ್ಟ್ರೋಕ್ ತಜ್ಞ ಸುನೀಲ್ ನಾರಾಯಣ್ ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಆಟಗಳನ್ನು ಆಡುವುದರಿಂದ ಮಾತ್ರವಲ್ಲ, ಯಾವುದೇ ರೀತಿಯ ಅತಿಯಾದ ಒತ್ತಡವು ಹೃದಯ ಬಡಿತ, ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ಮೂಲಕ ಆಧಾರವಾಗಿರುವ ನಾಳೀಯ ವಿರೂಪತೆಯನ್ನು ಉಲ್ಬಣಗೊಳಿಸುತ್ತದೆ ಎಂದು ತಳ್ಳಿಹಾಕುವಂತಿಲ್ಲ. ಆಟ ಆಡುವುದರಿಂದ ಅಡ್ರಿನಾಲಿನ್ (ಎಂಡಾರ್ಫಿನ್ ಅಥವಾ ಡೋಪಮೈನ್ ನಂತಹ ಹಾರ್ಮೋನುಗಳಂತೆ ವ್ಯಸನಕ್ಕೆ ಹೆಚ್ಚು ಸಂಬಂಧಿಸಿದೆ) ಹೆಚ್ಚಾಗಿರಬಹುದು ಎಂದೂ ಡಾ. ನಾರಾಯಣ್‌ ಹೇಳಿದ್ದಾರೆ.
  Published by:Vijayasarthy SN
  First published: